ಪ್ರೀತಿಯ ಪುಸ್ತಕ : ಸಂಚಿಕೆ - 105
Friday, April 5, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 105
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಅನೇಕ ಹುಡುಗಿಯರಿಗೆ ಚಿಕ್ಕದಿರುವಾಗ ಉದ್ದ ಕೂದಲು ಅಂದರೆ ಬಹಳ ಇಷ್ಟ. ಈ ಕಥೆಯಲ್ಲಿ ಮಿನೂಗೆ ಅವಳ ಕೂದಲೇ ಮಹಾ ಕಷ್ಟ.. ಇಷ್ಟವೇ ಇಲ್ಲ.. ಯಾಕಪ್ಪಾ ಇಷ್ಟವಿಲ್ಲ. ಅದು ಹಕ್ಕಿಯ ಗೂಡಾ? ಹಸುವಿನ ಕೊಂಬಾ? ಒಟ್ಟಾರೆ ಕಿರಿಕಿರಿ. ಅವಳ ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ಅವಳ ಕೂದಲು ಸರಿ ಮಾಡಲು ಪ್ರಯತ್ನ ಮಾಡುವವರೇ...? ಅಂತಹಾ ಗುಂಗುರು ಕೂದಲು ಅವಳದು. ಅವಳ ಕೂದಲಿನ ಕಥೆ ಮತ್ತು ಕೂದಲಿನ ಚಿತ್ರಗಳು ಎಲ್ಲವೂ ಚೆನ್ನಾಗಿವೆ. ಓದಿ ನೋಡಿ. ಪುಟ ತುಂಬಾ ಮಿನೂಳ ಗುಂಗುರು ಕೂದಲು ಹಬ್ಬಿಕೊಂಡಿದೆ. ನೀವು ಕೂಡಾ ನಿಮ್ಮ ಕೂದಲಿನ ಚಿತ್ರ ಬರೆಯಿರಿ. ಕೂದಲಿನ ಕಥೆ ಬರೆಯಿರಿ.
ಲೇಖಕರು: ಗಾಯತ್ರಿ ಬಾಶೀ
ಅನುವಾದ: ಬಾಗೇಶ್ರೀ
ಚಿತ್ರಗಳು: ಗಾಯತ್ರಿ ಬಾಶೀ
ಪ್ರಕಾಶಕರು: ತುಲಿಕಾ
ಬೆಲೆ: ರೂ.150/
3+ ವಯಸ್ಸಿನವರಿಗಾಗಿ ಇದೆ; ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: www.tulikabooks.com ; email: tulikabooks@vsnl.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************