ಪ್ರೀತಿಯ ಪುಸ್ತಕ : ಸಂಚಿಕೆ - 101
Friday, March 8, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 101
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ..... ಗಾಂಧೀಜಿ ಬಗ್ಗೆ ನಿಮಗೆ ಗೊತ್ತೇ ಇದೆ. ಅವರು ಹೇಳಿದ ಅದೆಷ್ಟೋ ಮಾತುಗಳನ್ನು ನೆನಪು ಮಾಡಿಕೊಳ್ಳುತ್ತಾ ಇರುತ್ತೇವೆ. “ನೀವು ಬಯಸುವ ಬದಲಾವಣೆ ನಿಮ್ಮಿಂದಲೇ ಶುರುವಾಗಲಿ” ಅಂದವರು ಅವರು. ಅಷ್ಟೇ ಅಲ್ಲ, ತಾವು ಹೇಳಿದ್ದನ್ನು ತಾವೇ ಮಾಡಿ ತೋರಿಸಿದವರು. ಈ ಪುಸ್ತಕದಲ್ಲಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ ಅನೇಕಾನೇಕ ಮಾತುಗಳಿವೆ. ಅವರ ಚಿಂತನೆಗಳು ಇವೆ. ಸರಳವಾದ ಭಾಷೆಯಲ್ಲಿ ಇವೆ. ಇದನ್ನು ಒಂದು ಸಾರಿ ಓದಿ ಮುಗಿಸಬೇಕಾಗಿಲ್ಲ. ಆಗಾಗ ಎತ್ತಿಕೊಂಡು ಯಾವುದೋ ಪುಟ ತೆರೆದು ಓದಬಹುದು. ಒಂದೊಂದು ವಿಚಾರಗಳನ್ನು ಜೊತೆಸೇರಿ ಚರ್ಚಿಸಬಹುದು. ಇದರ ಚಿತ್ರಗಳಂತು ಬಹೋ ಸುಂದರವಾಗಿವೆ. ಗುಜ್ಜಾರ್ ಅವರು ಪುಸ್ತಕಕ್ಕೆ ಜೀವ ತುಂಬಿದ್ದಾರೆ. ಓದುವಿರಿ ತಾನೇ? “ನನ್ನ ಜೀವನವೇ ನನ್ನ ಸಂದೇಶ” ಎಂದವರು ಗಾಂಧೀಜಿ. ಇದರ ಬಗ್ಗೆಯೂ ನೀವು ಯೋಚಿಸಿ ನೋಡಿ.
ಲೇಖಕರು: ಇದು ಗುಜ್ಜಾರ್ ರೂಪಿಸಿದ ಪುಸ್ತಕ
ಅನುವಾದ: ಜಿ.ಡಬ್ಲ್ಯು ಕಾರ್ಲೋ
ಪ್ರಕಾಶಕರು: ಬಹುಲಿಪಿ,
ಬೆಲೆ: ರೂ.200/
6-7-8ನೇ ತರಗತಿಯವರು ಓದಿಕೊಳ್ಳಬಹುದು. ಎಲ್ಲರಿಗೂ ಉಪಯೋಗ ಆಗುವ ಹಾಗೆ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: Bahulipi: 7019182729/ 9535015489; contact.bahulipi@gmail.com
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************