ಪ್ರೀತಿಯ ಪುಸ್ತಕ : ಸಂಚಿಕೆ - 100
Friday, March 1, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 100
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಇದು ಒಂದು ಕಾದಂಬರಿ. ಕಾದಂಬರಿ ಅಂದರೆ ಸಾಧಾರಣ ಕಥೆಗಳಿಗಿಂತ ಸ್ವಲ್ಪ ಹೆಚ್ಚು ಉದ್ದವಾಗಿರುವ ಕಥೆ. ಈ ಕಾದಂಬರಿಯಲ್ಲಿ ಮಕ್ಕಳ ಸಾಹಸ ಗುಣವನ್ನು ಪ್ರಚೋದಿಸುವ ಕಥೆ ಇದೆ. ಲೇಖಕರಾದ ಸುಬ್ಬಣ್ಣ ಅವರು ತಮ್ಮ ಬಾಲ್ಯದಲ್ಲಿ ತಮ್ಮ ಊರಿನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡು ಇದನ್ನು ಬರೆದಿದ್ದಾರೆ. ರಾಮಮಂದಿರದಿಂದ ವಿಗ್ರಹಗಳನ್ನು ದರೋಡೆ ಮಾಡಿದ್ದರಂತೆ. ಈ ಕಾದಂಬರಿಯ ಹೀರೋ ಒಂದು ‘ಮಂಗ’. ಸಾಹಸಪ್ರಿಯ ಮಕ್ಕಳೊಂದಿಗೆ ಈ ಮಂಗವೂ ಸೇರಿ ತನ್ನ ಜಾಣತನ ತೋರಿಸುತ್ತದೆ. ಮಂಗ ಮತ್ತು ಮಕ್ಕಳ ಸ್ನೇಹವೂ ಚೆನ್ನಾಗಿದೆ. ಶುರುವಾಗುವುದು ‘ಮುತ್ತಳ್ಳಿಯ ಮಂಗನಾಟದೊಂದಿಗೆ ಮತ್ತು ‘ಆಪರೇಷನ್ ಹನುಮ– ಸಕ್ಸಸ್’ ಅನ್ನುವುದು ಈ ಕಾದಂಬರಿಯ ಕೊನೆಯ ಭಾಗ.. ಓದಿ, ಹನುಮನ ವಿಜಯ ಖುಶಿಕೊಟ್ಟರೆ ಬರೆದವರಿಗೆ ಸಂತೋಷ. ನೀವು ಮಾಡುವ ಸಾಹಸಗಳನ್ನೂ ಹಾಗೆಯೇ ಬರೆದಿಡಲೂ ತಯಾರಾಗಿ.
ಲೇಖಕರು: ಮತ್ತೂರು ಸುಬ್ಬಣ್ಣ
ಚಿತ್ರಗಳು: ಡಿ.ವಿ ವಿಜಯೇಂದ್ರ
ಪ್ರಕಾಶಕರು: ಅನು ಪ್ರಕಾಶನ, ಬೆಂಗಳೂರು
ಬೆಲೆ: ರೂ.80/-
7-8ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************