ಮಕ್ಕಳ ಕವನಗಳು : ಸಂಚಿಕೆ - 08 - ರಚನೆ : ಪ್ರೇಮಾ ಶಿವಪ್ಪ ಶಿರಹಟ್ಟಿ
Sunday, March 31, 2024
Edit
ಮಕ್ಕಳ ಕವನಗಳು : ಸಂಚಿಕೆ - 08
ಕವನ ರಚನೆ : ಪ್ರೇಮಾ ಶಿವಪ್ಪ ಶಿರಹಟ್ಟಿ
ಪ್ರಥಮ ಪಿಯುಸಿ
ಯಲಿಶಿರೂರ
ಗದಗ ತಾಲೂಕು ಮತ್ತು ಜಿಲ್ಲೆ
ಭಾಷೆ ಇದು ಕನ್ನಡ
ನಾಡು ನುಡಿ ಕನ್ನಡ
ಹಸಿರು ಸುಂದರ
ಭಾಷೆ ಮಧುರ
ಕನ್ನಡವೆಂದು ಹೊಸ ತರ...!
ಕನ್ನಡ ನಾಡಿನ ಜನರು ನಾವು
ಕನ್ನಡಕ್ಕಾಗಿ ಹೋರಾಡುವೆವು
ಮುಗ್ಧ ಮನಸ್ಸಿನ ಮನುಜರು
ಕನ್ನಡವೇ ನಮಗೆಲ್ಲ ಉಸಿರು
ಹಾಡು ನುಡಿ ಕುಣಿದು ನಡಿ
ಎಂದೆಂದಿಗೂ ಕನ್ನಡವೆಂದು ನುಡಿ..!
........................... ಪ್ರೇಮಾ ಶಿವಪ್ಪ ಶಿರಹಟ್ಟಿ
ಪ್ರಥಮ ಪಿಯುಸಿ
ಯಲಿಶಿರೂರ
ಗದಗ ತಾಲೂಕು ಮತ್ತು ಜಿಲ್ಲೆ
********************************************
ಕನ್ನಡಕ್ಕಾಗಿ ಚೇತನ ಆಗು
ಇಲ್ಲಿ ಇರುವ ಕಲೆ - ಸಾಹಿತ್ಯಗಳು
ಎಲ್ಲೆಲ್ಲೂ ಕಾಣುವ ಪ್ರತಿಭೆಗಳು
ಕನ್ನಡವೆಂದು ಕರುನಾಡು
ಇಲ್ಲಿದೆ ಸುಂದರ ಗಂಧದ ಬೀಡು
ಇಲ್ಲಿ ಇಲ್ಲದ ಶಿಲ್ಪವಿಲ್ಲ
ಇಲ್ಲಿರುವ ಸಂಸ್ಕೃತಿ ಬೇರೆಲ್ಲೂ ಇಲ್ಲ
ಚಿನ್ನ- ರನ್ನದ ಈ ನಾಡು
ನಮ್ಮ ಈ ಕರುನಾಡು
ಎಂದೆಂದಿಗೂ ಇದು ಕನ್ನಡಿಗರ
ಹೆಮ್ಮೆಯ ನೆಲೆವೀಡು
........................... ಪ್ರೇಮಾ ಶಿವಪ್ಪ ಶಿರಹಟ್ಟಿ
ಪ್ರಥಮ ಪಿಯುಸಿ
ಯಲಿಶಿರೂರ
ಗದಗ ತಾಲೂಕು ಮತ್ತು ಜಿಲ್ಲೆ
********************************************
ನಂಬಿಕೆಯಿಂದ ಜೀವನ ಕಟ್ಟು
ನಂಬಿಕೆ ಎಂಬ ಪದವು ಸಾಕು
ಮೋಸದ ನಂಬಿಕೆ ದೂರವಾಗಬೇಕು
ನಂಬಿಕೆ ನಿನ್ನಲ್ಲಿ ಇದ್ದರೆ ಸಾಕು
ಆಗುವೆನಿ ದೇಶದ ಬೆಳಕು
ನಂಬಿಕೆ ಎಂಬ ಹೆಸರಿನಲ್ಲಿ
ಯಾರಿಗೂ ಮೋಸ ಮಾಡದಿರು
ನಂಬಿಕೆಯ ಬೆಲೆ ತಿಳಿದಿರಲಿ
ತಿಳಿದ ಬೆಲೆಗೆ ಗೌರವವಿರಲಿ
ನಂಬಿಕೆಯಿಂದ ಜೀವನ ಮುಟ್ಟು
ನಂಬಿಕೆಯಿಂದ ಜೀವನ ಕಟ್ಟು
........................... ಪ್ರೇಮಾ ಶಿವಪ್ಪ ಶಿರಹಟ್ಟಿ
ಪ್ರಥಮ ಪಿಯುಸಿ
ಯಲಿಶಿರೂರ
ಗದಗ ತಾಲೂಕು ಮತ್ತು ಜಿಲ್ಲೆ
********************************************
ಸಾವು ನಮ್ಮ ಕೈಲಿ ಇಲ್ಲ
ಎಲ್ಲಾ ದೇವರ ಆಟ
ಇದು ಭಗವಂತನ ಪಾಠ
ಇರುವವರಿಗೂ ಬದುಕು ನೀ
ಎಲ್ಲರಿಗೂ ಬೇಕಾಗು
ಎಲ್ಲರ ಮನಸ್ಸಲ್ಲೂ ನೆಲೆಯಾಗು
ಒಳ್ಳೆಯ ಮಾನವನಾಗು
ಒಳ್ಳೆಯದು ಮಾಡದಿದ್ದರೂ
ಕೆಟ್ಟದ್ದನ್ನು ಬಯಸದಿರು
ಆಗ ಎಲ್ಲರೂ ನಿನ್ನವರು
ಇರಲಿ ಬಂಧು ಬಾಂಧವರು
ಆಸೆಯನ್ನು ಕೊಲ್ಲದಿರು
ಪ್ರೀತಿಯನ್ನು ಹಂಚುತ್ತಿರು
ಎಲ್ಲರ ಜೊತೆ ಖುಷಿಯಾಗಿರು
ಒಳ್ಳೆಯ ದಾರಿಯಲ್ಲಿ ಮುನ್ನಡೆಯುತಿರು
ಎಲ್ಲಾ ದೇವರ ಆಟ
ಇದು ಭಗವಂತನ ಪಾಠ
ಪ್ರಥಮ ಪಿಯುಸಿ
ಯಲಿಶಿರೂರ
ಗದಗ ತಾಲೂಕು ಮತ್ತು ಜಿಲ್ಲೆ
********************************************