ಮಕ್ಕಳ ಕವನಗಳು : ಸಂಚಿಕೆ - 07
Saturday, March 30, 2024
Edit
ಮಕ್ಕಳ ಕವನಗಳು : ಸಂಚಿಕೆ - 07
ಕವನ ರಚನೆ : ಶರ್ಮಿಳಾ ಕೆ ಎಸ್
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ
ನಡೆದನು ಪಂಪಾ ತೀರದಲಿ
ಕಂಡನು ನಗುವ ಮಧುರ ಮೊಗವ
ಕರೆತಂದನು ಬೊಗಸೆಯ ಅಂಗಳದಲಿ
ಹರಿಹರರ ಶಕ್ತಿಯ ಸುತನೀತ
ಅವನ ನಂಬಲು ನಾನು ನಿರ್ಭೀತ
ಅರಮನೆಯೆಂಬ ಆಕಾಶದಲಿ
ಬೆಳೆದನು ನಮ್ಮ ಅಯ್ಯಪ್ಪಾ
ಅನಾರೋಗ್ಯದಿ ತಾಯಿ ನರಳುತಿರಲು
ಹುಲಿ ಹಾಲೇ ಪರಿಹಾರ ಎನುತಿರಲು
ಹೊರಟನು ಕಾಡಿಗೆ ಹುಲಿಯಮೊರೆಗೆ
ಹುಲಿಯ ಹಾಲನು ತಂದನು ಕಾದಾಡಿ
ಅರಮನೆಗೆ ಬಂದು ಹುಲಿಯೇರಿ
ಹುಲಿ ಹಾಲನು ಕುಡಿಸಿದ ಅಮ್ಮನಿಗೆ
ಮರುಕ್ಷಣವೇ ರಾಜ್ಯವನು ತೊರೆದವನು
ಕಾನನದಿ ನಡುರಾತ್ರಿ ನಡೆದವನು
ಹದಿನೆಂಟು ಬೆಟ್ಟವನೇರುತ್ತಾ
ಶಬರಿಮಲೆಯ ತಲುಪಿದ ಅಯ್ಯಪ್ಪಾ
ತನ್ನ ಮನೆಯಿದೆಯೆಂದು ಸ್ಥಿರನಾದ
ಅಲ್ಲಿಯೇ ಮೊಳಗಿತು ಸ್ವರನಾದ
ಬೇಡಿ ಬರುವ ಭಕ್ತರುಗಳ
ಅಳು ಆಲಿಸುವೆಂದನು ಅಯ್ಯಪ್ಪಾ
ಮಕರ ಜ್ಯೋತಿಯ ರೂಪದಲಿ
ಶಬರಿಮಲೆಯ ಬೆಟ್ಟದಲಿ
ಕಾಣುವೆಯೆಂದನು ಅಯ್ಯಪ್ಪಾ
ಪ್ರತಿ ವರುಷದ ಮಕರ ಮಾಸದಲಿ
ಇರುಮುಡಿ ಹೊತ್ತು ಬರುವರು ಅವನ ಬಳಿ
ಮಣಿಕಂಠನು ಹರಿಹರಸುತ ಅಯ್ಯಪ್ಪಾ
ಅಷ್ಟದಶ ಗಿರಿಗಳ ಒಡೆಯ ನಮ್ಮ ಅಯ್ಯಪ್ಪಾ
ಪಂಪಾವಾಸನೇ ಅಯ್ಯಪ್ಪಾ
ಶಬರಿಗಿರೀಶನೇ ಅಯ್ಯಪ್ಪಾ
ಜ್ಯೋತಿ ಸ್ವರೂಪನೇ ಅಯ್ಯಪ್ಪಾ
ಸ್ವಾಮಿಯೇ ಶರಣಂ ಅಯ್ಯಪ್ಪಾ.......
...................................... ಶರ್ಮಿಳಾ ಕೆ ಎಸ್
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************
ನನ್ನ ಸಂತಸದಿ ಜೊತೆ ನೀನಾದೆ
ನಾ ಬೇಡಿದನು ನೀ ಕೊಟ್ಟಿರುವೆ
ಇನ್ನೇನು ನಾ ಹೇಳಲಿ ತನಿಯಜ್ಜ
ನಿನ್ನ ಕಾಣಲು ಬಂದೆನಾ ಕುತ್ತಾರಿಗೆ
ಅಂದೇ ಶುರುವಾಯ್ತು ಈ ಮನಸಿಗೆ
ಸಾಧಿಸಿದ ಸಂತೃಪ್ತಿಯೂ
ಕಾಲಿಡುವಾಗಲೇ ಕಾಡಿದ ಭಯವೂ
ಎಷ್ಟು ಶಾಂತತೆಯಿದೆ ನಿನ್ನಲ್ಲಿ
ನಿಸರ್ಗದ ಹಾಗಿದೆ ನಿನ್ನರಮನೆ
ಒಂದು ಕ್ಷಣ ಇದೇನೆಂದು ಅರಿಯದೆಯೇ
ಮರುಕ್ಷಣವೇ ತಿಳಿಯಿತು ತನಿಯಜ್ಜ
ನಾ ತಂದೆ ನಿನಗಾಗಿ ಪೂಜಾ ಸಾಮಗ್ರಿ
ನಿನ್ನ ಪ್ರಿಯವಾದ ಕೆಂಪುಹೂವು
ನಿನ್ನ ಪೀಠದಮೊರೆ ಯಾರಿಗೂ ಬಿಡಲಿಲ್ಲ
ಆದರೆ ಆ ಅವಕಾಶ ನೀಡಿದೆ ನೀ ನನಗೆ
ನಿನ್ನ ಪೀಠ ಮುಟ್ಟಲು ಸಂತೃಪ್ತಿ
ನಿನ್ನ ಅಲಂಕರಿಸಿದಾಗಲೇ ಎನಗೆ ಶುಭಪ್ರಾಪ್ತಿ
ನಿನ್ನ ಪೂಜಾ ಪ್ರಸಾದವನು ನಾ ಪಡೆದು
ನಿನ್ನ ಮನೆಯಂಗಳದಲಿ ನಾ ನಡೆದು
ಬಂದೆನು ತಾನೇ ತನಿಯಜ್ಜ.......
...................................... ಶರ್ಮಿಳಾ ಕೆ ಎಸ್
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************
ಕೌಸಲ್ಯೆಯ ಸುತನು ಶ್ರೀರಾಮ
ಭರತಗೆ ಅನುಜನು ಶ್ರೀರಾಮ
ಲಕ್ಷ್ಮಣನ ಪ್ರಿಯಅಗ್ರಜ ಶ್ರೀರಾಮ
ಸೀತೆಯ ಮನವ ಕದ್ದವನು
ಶಿವಧನಸ್ಸ ಮುರಿದವನು
ಸೀತಾಪತಿಯೀತನೆ ಆದವನು
ತಿಳಿಪ್ರೀತಿಯ ಸೀತೆಗೆ ನೀಡಿದನು
ಕುತಂತ್ರದಿ ನಡೆಯಲು ಮಂಥರೆಯು
ವಿಷಬೀಜವನಿತ್ತಳು ಕೈಕೇಯಿಯಲಿ
ಪತಿಯಿಂದ ಪಡೆದ ಶಪಥವನು
ಈಡೇರಿಸೋ ಸಮಯವು ಇದೆ ತಾನೇ
ಬಳಿ ಬರಲು ದಶರಥನಿರುವೆಡೆಗೆ
ಕೇಳಿಯೇ ಬಿಟ್ಟಳು ಶಪಥವನು
ವನವಾಸದಿ ಇರಬೇಕೆನಲು ರಾಘವ
ಮರುಕ್ಷಣವೇ ಹೊರಟನು ನಾರುಮಡಿಯಲಿ
ತಾನು ಬರುವೆನೆನಲು ಲಕ್ಷ್ಮಣನು
ಜೊತೆಗೂಡಿ ಹೊರಟಳು ಸೀತಾಮಾತೆಯು
ಕಳೆಯಲು ಕಾನನವಾಸವನು
ಅಡೆತಡೆಯಿಲ್ಲದೆ ಪ್ರೀತಿಯಲಿ
ಮಾಯಾಜಿಂಕೆಯ ಕಾಣಲು ಮಿಥಿಲಾಸುತೆ
ಅದ ಬಯಸಿದೆಯೆನ್ನಲು ಶ್ರೀರಾಮನಲಿ
ಹೊರಟರು ಅಗ್ರಜಾನುಜರು
ಎಳೆದರು ಒಂದು ರೇಖೆಯನು
ರೇಖೆಯು ನಿಮ್ಮ ಒಳಿತಿಗಾಗಿ
ತಲೆಬಾಗಿ ನಡೆದನು ಅಗ್ರಜನೊಡಗೂಡಿ
ಸೀತೆಯ ಬಯಸಿದ ರಾವಣನು
ಧರಿಸುತ ಬಂದನು ಸನ್ಯಾಸಿವೇಷವನು
ಭಿಕ್ಷೆಯ ನೀಡಲು ದಾಟಲು ರೇಖೆಯ
ಅಪಹರಿಸಿದ ರಾವಣ ಸೀತೆಯನು
ಅಶೋಕವನದಲಿ ಕಾಯುತಿರಲು ಶ್ರೀರಾಮಗೆ
ನೆರವಾದನು ಸೀತೆಗೆ ಅಂಜನಸುತ
ತನ್ನ ಬಾಲವ ಬೆಂಕಿಯ ಚೆಂಡಾಗಿಸಿ
ಸುಟ್ಟು ಪೂರ್ತಿ ಲಂಕೆಯನೆ
ಸೀತೆಗೆ ರಾಮನ ಬಳೆಯು
ರಾಮಗೆ ಸೀತೆಯ ಉಂಗುರವು
ನೋಡಿದರೊಮ್ಮೆಗೆ ತಿಳಿಯಲು
ಸೀತಾಗೆ ರಾಮನು ರಾಮಾಗೆ ಸೀತೆಯು
ವಾಲಿ ಸುಗ್ರೀವರ ಜೊತೆಗೂಡಿ
ಕಟ್ಟಿದರು ಶ್ರೀ ರಾಮಸೇತು
ಹೊರಟರು ಲಂಕೆಗೆ ಸೀತೆಯನರಸಿ
ಕರೆತಂದರು ಸೀತೆಯ ರಾವಣನ ಕೊಂದು
ಸ್ಥಾಪನೆಯಾಗಲು ಅಯೋಧ್ಯರಾಜ್ಯ
ಪಟ್ಟಕೇರಿಸಿ ರಾಜ್ಯವಾಳಲು
......ಸೀತೆಯ ರಾಮ.....
ರಾಮ ರಾಮ ಸೀತಾ ರಾಮ
ಸೀತಾಪತಿಯೇ ರಾಜರಾಮ
ರಾಮ ರಾಮ ಸೀತಾ ರಾಮ
ಅಯೋಧ್ಯಾಧಿಪತಿ ರಾಜರಾಮ......
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************