ಮಕ್ಕಳ ಕವನಗಳು : ಸಂಚಿಕೆ - 05- ರಚನೆ : ಭವಿತ 8ನೇ ತರಗತಿ
Tuesday, March 12, 2024
Edit
ಮಕ್ಕಳ ಕವನಗಳು : ಸಂಚಿಕೆ - 05
ಕವನ ರಚನೆ : ಭವಿತ
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರಪಂಚವು ಮುಗ್ದತೆಯಂತಿದೆ.
ಅವಳ ಹಸಿರನು ಕಂಡರೆ
ಕಂಗಳಲಿ ತಂಗಾಳಿ ತಂಪಿದೆ
ಕಣ್ಣಿನ ಖುಷಿಯ ನೋಟವು ನೋಡಿದೆ
ಇಂದಿನ ಕಥೆಯು ಬೇರೆಯಿದೆ
ಹಸಿರಿನ ಬದಲು ಕಪ್ಪು ತುಂಬಿದೆ
ಕೆರೆಗೆ ಹೋದರೆ ನೀರಲ್ಲಿ ಮೀನಿಲ್ಲದೆ
ಮೀನಿನ ಜಾಗವು ಕಸವಿಂದ ತುಂಬಿದೆ
ಮನುಷ್ಯನು ಕ್ರೂರಿ ಎಂದು ನನಗೂ ಹೇಳಿದೆ
ಪರಿಸರವು ಕೈಯ ಮೀರಿದೆ.....
ಪರಿಸರದ ಜೀವವು ನಮ್ಮ ಕೈಯಲ್ಲಿದೆ.....
ಮುಂದಿನ ಪೀಳಿಗೆಯವರ
ಜೀವನವು ನಮ್ಮ ಕೈಯಲ್ಲಿದೆ.......
.................................................. ಭವಿತ
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಎತ್ತಿ ಮುದ್ದಾಡಿದವಳು
ಲಾಲಿ ಹಾಡಿ ಮಲಗಿಸಿದವಳು
ಮನೆಯನ್ನೇ ಶಾಲೆ ಮಾಡಿದವಳು
ವಾತ್ಯಲ್ಯವ ತೋರುವವಳು
ಅವಳೇ.......
ನನ್ನ ಪ್ರೀತಿಯ ಮಾತೆಯವಳು.
.................................................. ಭವಿತ
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಮನೆಯನು ಬೆಳಗಿಸುವವಳು
ಅವಳೇ ಮನೆಯವರೆಲ್ಲರ ಕಣ್ಣು
ಅಮ್ಮನಾಗಿ, ಮನೆಮಗಳಾಗಿ,
ಸೊಸೆಯಾಗಿ, ಅತ್ತೆಯಾಗಿ, ಅಜ್ಜಿಯಾಗಿ
ತನ್ನನ್ನು ಯಾರು ಪ್ರೀತಿಸಲ್ಲ
ಎನಿಸಿಕೊಳ್ಳಬೇಡ......
ಬೇಸರಪಡಬೇಡ.......
ನಿನ್ನ ಭಾವ ಬಂಧಗಳಿಂದ
ಹೊರಗೆ ಬಾ.....
ನಿನ್ನೊಡನಿರುವರು ನಿನ್ನ ಒಡಹುಟ್ಟುಗಳು
ಇನ್ನೂ ಚಿಕ್ಕವರವರು
ನೀನು ಮನೆಯ ಹಿರಿಮಗಳು
ನೀನೇ ಮನೆಯ ಮಹಾಶಕ್ತಿ
ಕಣ್ಣೀರು ಹಾಕದಿರು
ಮನೆಯ ಮುಳುಗಿಸದಿರು
ನೋವಿದ್ದರೂ ನಗುನಗುತಾ ಅನುಭವಿಸು
ಸುತ್ತ ಇರುವವರಿಗೆ ಖುಷಿಯ ಉಣಿಸು
ನೋವು, ನಲಿವು, ಕೋಪ, ಹತಾಷೆ
ದುಃಖ ದುಮ್ಮಾನ
ಮನುಷ್ಯನ ಜೀವನ ಸಂಗಾತಿಗಳು
ಅಳು ಅಳುತಾ ನೀ ಬಂದಿಳಿದಿ ಈ ಧರೆಗೆ
ನಗುನಗುತ ಸೇರು ನೀ ನಾಕದೆಡೆಗೆ
ಇದುವೆ ನಿನ್ನ ಒಲುಮೆ
ಹಂಚಿದ ಜೀವನ ಪಯಾಣ
.................................................. ಭವಿತ
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************