ಪ್ರೀತಿಯ ಪುಸ್ತಕ : ಸಂಚಿಕೆ - 97
Friday, February 9, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 97
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಯಾರಿದು ಚಂಪು? ಎಲ್ಲಿಂದ ಇದು ಮತ್ತೆ ಬಂತು.. ಹೆಸರು ಕೇಳುವಾಗಲೇ ಕುತೂಹಲ ಅನಿಸುತ್ತದೆ ಅಲ್ಲವೇ..? ಚಂಪು ಒಂದು ನಾಯಿ. ಮೀನೂನ ಪ್ರೀತಿಯ ನಾಯಿ. ಮೀನೂ ಜೊತೆಗೆ ಸಾಕಷ್ಟು ಹೊತ್ತು ಆಟ ಆಡುತ್ತಿತ್ತು. ಅಪ್ಪನ ಜೊತೆಗೆ ವಾಕಿಂಗ್ ಹೋಗುತ್ತಿತ್ತು.. ಮೀನೂ ದಿನಾ ಶಾಲೆಗೆ ಹೋಗುವಾಗ ಒಂದಿಷ್ಟು ದೂರ ಬಿಡಲು ಬರುತ್ತಿತ್ತು. ಅಜ್ಜಿಯ ಹಾಸಿಗೆಯಲ್ಲಿ ಬೆಚ್ಚಗೆ ಮಲಗಿ ಅಜ್ಜಿ ಕೈಯಲ್ಲಿ ಹೊಡೆಸಿಕೊಳ್ಳುತ್ತಿತ್ತು. ಇಂತಹಾ ಪ್ರೀತಿಯ ಚಂಪು ಎಲ್ಲಿ ಹೋಯಿತು...? ಯಾಕೆ ಹೋಯಿತು..? ಪುನಃ ಹೇಗೆ ಬಂತು...? ಮೀನೂ ಏನು ಮಾಡಿದಳು...? – ಎಲ್ಲಾ ತಿಳಿದುಕೊಳ್ಳಬೇಕಾದರೆ ಪುಸ್ತಕ ಓದಬೇಕಲ್ಲವೇ? ಬಣ್ಣ ಬಣ್ಣದ ದೊಡ್ಡ ದೊಡ್ಡ ಚಿತ್ರಗಳೂ ಇವೆ. ನಿಮಗೆ ನಾಯಿ ಬೆಕ್ಕು ಮೇಲೆ ಪ್ರೀತಿ ಇದ್ದರೆ ಬಹಳ ಖುಶಿಕೊಡುತ್ತದೆ, ಇಲ್ಲದಿದ್ದರೆ ಪ್ರೀತಿ ಹುಟ್ಟುತ್ತದೆ.
ಲೇಖಕರು: ಆನಂದ ಪಾಟೀಲ
ಚಿತ್ರಗಳು: ಕೊಲ್ಲೋಲ್ ಮಜಂದಾರ್
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.85/-
5-7ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************