-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 104

ಸ್ಫೂರ್ತಿಯ ಮಾತುಗಳು : ಸಂಚಿಕೆ - 104

ಸ್ಫೂರ್ತಿಯ ಮಾತುಗಳು : ಸಂಚಿಕೆ - 104
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com      
     
ದುಷ್ಕರ್ಮಿಗಳು ಅಪರಾಧಗಳನ್ನು ಮಾಡಲು ಕಂಪ್ಯೂಟರನ್ನು ಬಳಸುತ್ತಾರೆ. ಅಂತಹ ಅಪರಾಧಗಲ್ಲಿ ಸೈಬರ್ ಭಯೋತ್ಪಾದನೆ, ಐ.ಪಿ.ಆರ್ ಉಲ್ಲಂಘನೆ (Intellectual property rights), ಕ್ರೆಡಿಟ್ ಕಾರ್ಡ್ ವಂಚನೆಗಳು, ಇ.ಎಫ್‌.ಟಿ ವಂಚನೆಗಳು (Electronic funds transfer), ಅಶ್ಲೀಲತೆ ಇತ್ಯಾದಿ ಸೇರಿವೆ. ಇವುಗಳಿಗಾಗಿ ಇ-ಕಂಪ್ಯೂಟರನ್ನು ಕಳ್ಳತನದ ಅಸ್ತ್ರದೋಪಾದಿಯಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದನ್ನು 103ನೇ ಸಂಚಿಕೆಯಲ್ಲಿ ಓದಿದ್ದೇವೆ. ಈ ಸಂಚಿಕೆಯಲ್ಲಿ ಅಶ್ಲೀಲತೆ. ಮಾದಕ ವಸ್ತು ಕಳ್ಳ ಸಾಗಣೆ, ಭಯೋತ್ಪಾದನೆ ಮುಂತಾದ ವಿನಾಶಕ ಕೆಲಸಗಳಿಗೆ ಸೈಬರ್ ದುರ್ಬಳಕೆಯಾಗುವುದನ್ನು ಗಮನಿಸೋಣ ಮತ್ತು ನಾವು ಅಪಾಯಗಳಿಗೆ ತುತ್ತಾಗದಂತೆ ಜಾಗೃತರಾಗೋಣ. 

ಅಶ್ಲೀಲ ಅಥವಾ ಆಕ್ರಮಣಕಾರಿ ವಿಷಯ :
ವೆಬ್‌ಸೈಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಂವಹನಗಳು ಅಸಹ್ಯಕರ, ಅಶ್ಲೀಲ ಅಥವಾ ಆಕ್ರಮಣಕಾರಿ ದುಷ್ಕೃತ್ಯಗಳಿಗೆ ದುರ್ಬಳಕೆಯಾಗುತ್ತಿವೆ. ಈ ಸಂವಹನಗಳು ಕೆಲವು ದೇಶಗಳಲ್ಲಿ ಕಾನೂನು ಬಾಹಿರವಾದರೆ ಕೆಲವು ದೇಶಗಳ ನ್ಯಾಯ ವ್ಯಾಪ್ತಿಗಳು ಕೆಲವು ಮಿತಿಗಳನ್ನು ಮಾತ್ರ ಹಾಕಿರುತ್ತವೆ. ಇದರಿಂದಾಗಿ ಅಪರಾಧ(ಧಿ)ಗಳಿಗೆ ಅಲ್ಲಲ್ಲಿ ಪ್ರಚೋದನೆಯೂ ದೊರೆತಂತಾಗುತ್ತದೆ. ಅಪರಾಧಗಳ ಪ್ರಚೋದನೆ, ಜನಾಂಗೀಯ ನಿಂದನೆ, ಧರ್ಮ ಅವಗಣನೆ, ವಿಧ್ವಂಸಕ ಕೃತ್ಯ, ಮಾನಹಾನಿಕರ ಅಪಪ್ರಚಾರ, ದೇಶದ್ರೋಹ ಮುಂತಾದುವುಗಳಿಗೆ ಎಲ್ಲೆಡೆ ನಿಷೇಧವಿದೆ. ಅಶ್ಲೀಲತೆ, ಅದರಲ್ಲೂ ಮಕ್ಕಳ ಅಶ್ಲೀಲತೆ ನೈತಿಕ ಅಪರಾಧಗಳಿಗೆ ಕಾರಣವಾಗುತ್ತಿವೆ. 

ಕಿರುಕುಳ:
ಕಿರುಕುಳವು ನಿರ್ದಿಷ್ಟವಲ್ಲದ ರೀತಿಯಲ್ಲಿ ಆಕ್ರಮಣಕರವಾಗಿ ರವಾನೆಯಾಗುತ್ತದೆ. ನಿರ್ದಿಷ್ಟ ವ್ಯಕ್ತಿಗಳಿಗೆ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಕಳುಹಿಸುವಂತೆ ನಿರ್ದೇಶಿಸಲಾಗುತ್ತದೆ. ರಾಷ್ಟ್ರೀಯತೆ, ಧರ್ಮ, ಜನಾಂಗ, ಲಿಂಗ, ಲೈಂಗಿಕ ದೃಷ್ಟಿಕೋನ ಮುಂತಾದುವುಗಳು ಚಾಟ್ ಮೂಲಕ, ನ್ಯೂಸ್‌ಗ್ರೂಪ್‌ಗಳ ಮೂಲಕ ಮತ್ತು ಆಸಕ್ತ ವ್ಯಕ್ತಿಗಳಿಗೆ ಇ-ಮೇಲ್ ಕಳುಹಿಸುವ ಮೂಲಕ ನಡೆಯುತ್ತವೆ. ಅವಹೇಳನಕರ ಮತ್ತು ಆಕ್ರಮಣಕಾರಕವಾದ ಎಲ್ಲ ಕಮೆಂಟ್ ಗಳು ಕಿರುಕುಳ ಗುಂಪಿಗೆ ಸೇರುತ್ತವೆ

ಮಾದಕವಸ್ತು ಕಳ್ಳಸಾಗಣೆ :
ಅಕ್ರಮ ಅಥವಾ ಅಸಿಂಧು ಇ-ಮೇಲ್ ಅಥವಾ ಅಂತರ್ಜಾಲ ತಂತ್ರಜ್ಞಾನದ ಮೂಲಕ ಮಾದಕವಸ್ತು ಕಳ್ಳಸಾಗಣೆದಾರರು ತಮ್ಮ ಅಕ್ರಮ ವಸ್ತುಗಳನ್ನು ಮಾರಾಟ ಮಾಡಲು ಅಂತರ್ಜಾಲವನ್ನು ದುರುಪಯೋಗ ಮಾಡುವರು. ಕೆಲವು ಮಾದಕವಸ್ತು ಕಳ್ಳಸಾಗಣೆದಾರರು ಅದಕ್ಕೆಂದೇ ಇಂಟರ್ನೆಟ್ ಕೆಫೆಗಳ ಒಡೆತನ ಹೊಂದಿರುವುದೂ ಇದೆ. ಕೆಲವರು ಕೊರಿಯರ್ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ. ಇಂಟರ್ನೆಟ್ ಡ್ರಗ್ ವಹಿವಾಟು ಮುಖಾಮುಖಿ ನಡೆಯುವುದಿಲ್ಲ. ವರ್ಚುವಲ್ ಎಕ್ಸ್ ಚೇಂಜ್ ವ್ಯವಹಾರ ಮಾದಕ ಮತ್ತು ಅಕ್ರಮ ಔಷಧಿಗಳನ್ನು ಸುಲಭವಾಗಿ ಖರೀದಿಸಲು ಸಹಕರಿಸುತ್ತದೆ. ರಹಸ್ಯವಾಗಿದ್ದ ಸಾಂಪ್ರದಾಯಿಕ Drugಗಳ ಪಾಕ ಮಾಹಿತಿಯು ಆಧುನಿಕ ಕಂಪ್ಯೂಟರ್ ತಂತ್ರಜ್ಞಾನದೊಂದಿಗೆ ಎಲ್ಲರಿಗೂ ಲಭ್ಯವಾಗುತ್ತಿರುವುದು ಮಾದಕವಸ್ತು ತಯಾರಕರಿಗೆ ಸುಲಿದ ಬಾಳೆಹಣ್ಣು ಸಿಕ್ಕಂತಾಗಿದೆ.

ಭಯೋತ್ಪಾದನೆ :‌
ಮಾಹಿತಿ ತಂತ್ರಜ್ಞಾನ ಭದ್ರತಾ ತಜ್ಞರು 2001 ರ ಆರಂಭದಿಂದಲೂ ಇಂಟರ್ನೆಟ್ ಸಮಸ್ಯೆಗಳು ಮತ್ತು ಸರ್ವರ್ scam ಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಗುರುತಿಸಿದ್ದಾರೆ. ಸೈಬರ್ ಭಯೋತ್ಪಾದಕರು, ವಿದೇಶಿ ಗುಪ್ತಚರ ಸೇವೆಗಳು ಅಥವಾ ಇತರರ ಸಂಘಟಿತ ಪ್ರಯತ್ನದಿಂದಾಗಿಯೇ ಅಪರಾಧಗಳ ಒಳನುಸುಳುವಿಕೆ ನಡೆಯುತ್ತಿದೆ. ಸೈಬರ್ ಭಯೋತ್ಪಾದಕ ಎಂದರೆ ಕಂಪ್ಯೂಟರ್, ನೆಟ್‌ವರ್ಕ್ ಮತ್ತು ಅವುಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯ ವಿರುದ್ಧ ಕಂಪ್ಯೂಟರ್ ಆಧಾರಿತ ದಾಳಿಯನ್ನು ಪ್ರಾರಂಭಿಸಿ, ತನ್ನ ರಾಜಕೀಯ ಅಥವಾ ಸಾಮಾಜಿಕ ಉದ್ದೇಶಗಳನ್ನು ಮುನ್ನಡೆಸಲು ಸರ್ಕಾರ ಅಥವಾ ಸಂಸ್ಥೆಯನ್ನು ಹೆದರಿಸುವ ಅಥವಾ ಒತ್ತಾಯಿಸುವ ವ್ಯಕ್ತಿ. ಸೈಬರ್ ಭಯೋತ್ಪಾದನೆಯನ್ನು ಸಾಮಾನ್ಯವಾಗಿ ಸೈಬರ್‌ಪೇಸ್ ಅಥವಾ ಕಂಪ್ಯೂಟರ್ ಸಂಪನ್ಮೂಲಗಳ ಬಳಕೆಯಿಂದ ಮಾಡಿದ ಭಯೋತ್ಪಾದನೆಯ ಕುಕೃತ್ಯವೆಂದು ವ್ಯಾಖ್ಯಾನಿಸಬಹುದು. ...... ದಿನ ಬಾಂಬ್ ದಾಳಿ ನಡೆಯಲಿದೆ ಎಂಬ ಅಂತರ್ಜಾಲದ ಸರಳವಾದ ಪ್ರಚಾರವನ್ನು ಸೈಬರ್ ಭಯೋತ್ಪಾದನೆ ಎಂದು ಪರಿಗಣಿಸಬಹುದು. ಕೆಟ್ಟದಾಗಿ, ಸೈಬರ್ ಭಯೋತ್ಪಾದಕರು ನಿಜವಾದ ದಾಳಿ ನಡೆಸಲು ಇಂಟರ್ನೆಟ್ ಅಥವಾ ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸುವರು. ವ್ಯಕ್ತಿಗಳು, ಕುಟುಂಬಗಳು, ನೆಟ್‌ವರ್ಕ್‌ಗಳೊಳಗಿನ ಗುಂಪುಗಳ ಮೂಲಕ ಪ್ರಚಾರ ಆಯೋಜಿಸುವರು. ಜನರಲ್ಲಿ ಭಯವನ್ನುಂಟುಮಾಡುವುದು, ಶಕ್ತಿಯನ್ನು ಪ್ರದರ್ಶಿಸುವುದು, ಜನರ ಜೀವನವನ್ನು ಹಾಳುಮಾಡುವುದು, ದರೋಡೆ ಮಾಡುವುದು, ಬ್ಲ್ಯಾಕ್‌ಮೇಲಿಂಗ್ ಇತ್ಯಾದಿಗಳಿಗೆ ಸಂಬಂಧಿಸಿ ಮಾಹಿತಿಯನ್ನು ಸಂಗ್ರಹಿಸುವರು.

ಇಮೇಲ್ ಬಾಂಬ್ ದಾಳಿ :
ಇ-ಮೇಲ್ ಬಾಂಬ್ ಸ್ಫೋಟ ಎಂಬುದು ಹೆಚ್ಚಿನ ಪ್ರಮಾಣದ ಇ-ಮೇಲ್‌ಗಳನ್ನು ಕಳುಹಿಸುವುದನ್ನು ಸೂಚಿಸುತ್ತದೆ. ಇದರ ಪರಿಣಾಮವಾಗಿ ಬಲಿಪಶುವಿನ ಇ-ಮೇಲ್ ಖಾತೆ (ವ್ಯಕ್ತಿಯ ಸಂದರ್ಭದಲ್ಲಿ) ಅಥವಾ ಮೇಲ್ ಸರ್ವರ್ (ಕಂಪನಿ ಅಥವಾ ಇಮೇಲ್ ಸೇವಾ ಪೂರೈಕೆದಾರರ ಸಂದರ್ಭದಲ್ಲಿ) ಕ್ರ್ಯಾಶ್ ಆಗುತ್ತದೆ.

ಡೇಟಾ ಡೆಡ್ಲಿಂಗ್ :
 ಈ ರೀತಿಯ ಆಕ್ರಮಣವು ಕಚ್ಚಾ ಡೇಟಾವನ್ನು ಕಂಪ್ಯೂಟರ್‌ನಿಂದ ಪ್ರಕ್ರಿಯೆಗೊಳಿಸುವ ಮೊದಲು ಅದನ್ನು ಬದಲಾಯಿಸುವುದು ಮತ್ತು ಸಂಸ್ಕರಣೆ ಪೂರ್ಣಗೊಂಡ ನಂತರ ಅದನ್ನು ಬದಲಾಯಿಸುವುದು ಒಳಗೊಂಡಿರುತ್ತದೆ.

ಇಂಟರ್ನೆಟ್ ಸಮಯ ಕಳ್ಳತನ :
ಇನ್ನೊಬ್ಬ ವ್ಯಕ್ತಿಯು ಪಾವತಿಸಿದ ಇಂಟರ್ನೆಟ್ ಗಂಟೆಗಳನ್ನು ಇತರ ಅನಧಿಕೃತ ವ್ಯಕ್ತಿಯು ಬಳಸಿದರೆ ಇಂಟರ್ನೆಟ್ ಸಮಯ ಕಳ್ಳತನ.

ಲಾಜಿಕ್ ಬಾಂಬ್ :
ಇದು ಇವೆಂಟ್ ಅವಲಂಬಿತ ಕಾರ್ಯಕ್ರಮ. ಒಂದು ನಿರ್ದಿಷ್ಟ ಘಟನೆ (ಪ್ರಚೋದಕ ಇವೆಂಟ್ ಎಂದು ಕರೆಯಲ್ಪಡುವ) ಸಂಭವಿಸಿದಾಗ ಏನಾದರೂ ಕುಕೃತ್ಯ ಮಾಡಲು ಈ ಪ್ರೋಗ್ರಾಂನ್ನು ರಚಿಸಲಾಗುವುದು. ಉದಾ. ಕೆಲವು ವೈರಸ್‌ಗಳನ್ನು ಲಾಜಿಕ್ ಬಾಂಬ್‌ಗಳು ಎಂದು ಕರೆಯಬಹುದು ಏಕೆಂದರೆ ಅವು ವರ್ಷಪೂರ್ತಿ ಸುಪ್ತವಾಗುತ್ತವೆ ಮತ್ತು ನಿರ್ದಿಷ್ಟ ದಿನಾಂಕದಂದು ಮಾತ್ರ ಸಕ್ರಿಯಗೊಳ್ಳುತ್ತವೆ (ಚೆರ್ನೋಬಿಲ್ ವೈರಸ್‌ನಂತೆ).

ವೈರಸ್ / ವರ್ಮ್ ದಾಳಿ :
ವೈರಸ್ ಎನ್ನುವುದು ಕಂಪ್ಯೂಟರ್ ಅಥವಾ ಫೈಲ್‌ಗೆ ತನ್ನನ್ನು ಜೋಡಿಸಿಕೊಳ್ಳುವ ಪ್ರೋಗ್ರಾಂ ಆಗಿದ್ದು, ನಂತರ ತನ್ನನ್ನು ಇತರ ಫೈಲ್‌ಗಳಿಗೆ ಮತ್ತು ನೆಟ್‌ವರ್ಕ್‌ನಲ್ಲಿರುವ ಇತರ ಕಂಪ್ಯೂಟರ್‌ಗಳಿಗೆ ಪ್ರಸಾರ ಮಾಡುತ್ತದೆ. ಅವು ಸಾಮಾನ್ಯವಾಗಿ ಕಂಪ್ಯೂಟರ್‌ನಲ್ಲಿನ ಡೇಟಾವನ್ನು ಬದಲಾಯಿಸುವ ಅಥವಾ ಅಳಿಸುವ ಕೆಲಸ ಮಾಡುತ್ತದೆ.. ಅವರು ಕೇವಲ ತಮ್ಮ ಕ್ರಿಯಾತ್ಮಕ ಪ್ರತಿಗಳನ್ನು ತಯಾರಿಸುತ್ತಾರೆ ಮತ್ತು ಕಂಪ್ಯೂಟರ್‌ನ ಸ್ಮರಣೆಯಲ್ಲಿ ಲಭ್ಯವಿರುವ ಎಲ್ಲ ಜಾಗವು ಭರ್ತಿಯಾಗುವವರೆಗು ಇದು ಕ್ರಿಯಾಶೀಲವಾಗಿರುವುದು.

ಸೈಬರ್ ಅಶ್ಲೀಲತೆ:
ಇದರಲ್ಲಿ ಅಶ್ಲೀಲ ವೆಬ್‌ಸೈಟ್‌ಗಳು, ಕಂಪ್ಯೂಟರ್‌ಗಳನ್ನು ಬಳಸಿ ತಯಾರಿಸಿದ ಅಶ್ಲೀಲ ನಿಯತಕಾಲಿಕೆಗಳು (ವಸ್ತುಗಳನ್ನು ಪ್ರಕಟಿಸಲು ಮತ್ತು ಮುದ್ರಿಸಲು) ಸೇರಿವೆ. ಇಂಟರ್ನೆಟ್ ಮೂಲಕ ಅಶ್ಲೀಲ ಚಿತ್ರಗಳು, ಫೋಟೋಗಳು, ಬರಹಗಳು ಇತ್ಯಾದಿಗಳನ್ನು ರವಾನಿಸಲು ಅಥವಾ ಡೌನ್‌ಲೋಡ್ ಮಾಡಲು ಪ್ರೇರೇಪಿಸಲಾಗುತ್ತದೆ

ಹಣದ ಮ್ಯೂಲ್ :
ಹಣದ ಯಾ ಮನಿ ಮ್ಯೂಲ್ ಎನ್ನುವುದು ಅಮಾಯಕರ ಬ್ಯಾಂಕ್‌ ಖಾತೆಗಳಲ್ಲಿರುವ ಹಣವನ್ನು ವಂಚಕರು / ಮೊಸಗಾರರು ವಿವಿಧ ರೀತಿಯಲ್ಲಿ ಅಕ್ರಮವಾಗಿ ಬೇರೆ ಖಾತೆಗಳಿಗೆ ಕದಿಯುವ/ ವರ್ಗಾಯಿಸಿಕೋಳ್ಳುವ ವಂಚನೆಯಾಗಿರುತ್ತದೆ.

ಪರಿಹಾರ ಏನು...?
ನಮ್ಮ ಕೆಲಸ ಮುಗಿದೊಡನೆ ಇಂಟರ್ ನೆಟ್ ಸಂಪರ್ಕವನ್ನು ಕಡಿತಗೊಳಿಸಬೇಕು, ಸ್ಕ್ಯಾನ್ ಮಾಡದೆ ಯಾವುದೇ ಹೊರ ಡಿವೈಸ್ ಗಳನ್ನು ನಮ್ಮ ಕಂಪ್ಯೂಟರ್ ಸಿಸ್ಟಂನಲ್ಲಿ ಚಾಲುಗೊಳಿಸ ಬಾರದು. ಅಪರಿಚಿತ ವೆಬ್ಸೈಟ್ ಗಳನ್ನು ತೆರೆಯ ಬಾರದು. ಆಮಿಷಗಳಿಗೆ ಬಲಿಯಾದರೆ ಮಾಡಿರದ ತಪ್ಪಿಗೂ ನಾವು ಅಪರಾಧಿ ಪಟ್ಟ ಏರಬೇಕಾಗುತ್ತದೆ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಮ್ಮ ಯಾವುದೇ ಗುಪ್ತ ಸಂಕೇತಗಳನ್ನು ಇತರರೊಂದಿಗೆ ಹಂಚಬಾರದು. ಅವು ನಮ್ಮೊಂದಿಗಿದ್ದು ನಮ್ಮೊಂದಿಗೆಯೇ ಸಾಯಬೇಕು. ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗುಪ್ತ ಸಂಕೇತಗಳು ಸುರಕ್ಷಿತವಾಗಿರಲು ಯಾವುದೇ ಊಹಾ ಗುಪ್ತ ಸಂಕೇತಗಳಿಗೆ ಅವಕಾಶವಿರದಂತೆ ನಮ್ಮ ರಹಸ್ಯ ಸಂಕೇತಗಳು ಬಲಶಾಲಿಯಾಗಿರಬೇಕು. ನೆನಪುಳಿಯಲು ಸುಲಭ ಎಂದು ನಮ್ಮ ಹೆಸರಿನ ಮೊದಲ ಅಥವಾ ಕೊನೆಯ ಮೂರೋ ನಾಲ್ಕೋ ಅಕ್ಷರಗಳನ್ನು ಜೋಡಿಸಿ ಜನನ ದಿನಾಂಕ ಅಥವಾ ವರ್ಷ ಹಾಕಿದರೆ ಕಳ್ಳರು ಊಹಿಸಲು ಸುಲಭವಾಗುತ್ತದೆ. ಕೆಲವರು ತಂದೆಯ ತಾಯಿಯ ಹೆಸರನ್ನು ಪ್ರೀತಿಯಿಂದ ಜೋಡಿಸಿದ ರಹಸ್ಯ ಸಂಕೇತಗಳನ್ನು ರಚಿಸಿಕೊಂಡಿರುತ್ತಾರೆ. ಪ್ರೀತಿಗೆ ಬಲಿಯಾಗಿ ಭೀತಿಗೊಳಗಾಗುವುದು ಮೂರ್ಖತನವಾಗುತ್ತದೆ. ಎಲ್ಲ ಸಂದರ್ಭಗಳಲ್ಲೂ ಕಟ್ಟೆಚ್ಚರವಿರಲೇ ಬೇಕು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article