ಪ್ರೀತಿಯ ಪುಸ್ತಕ : ಸಂಚಿಕೆ - 95
Friday, January 26, 2024
Edit
ಪ್ರೀತಿಯ ಪುಸ್ತಕ
ಸಂಚಿಕೆ - 95
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಬುದ್ಧನ ಹೆಸರು ಅವನ ಕಥೆಗಳನ್ನು ಕೇಳಿಸಿಕೊಂಡಿದ್ದೀರಲ್ಲಾ. ಕರುಣೆ, ಪ್ರೀತಿಯನ್ನು ಬದುಕಿ ತೋರಿಸಿದ ಮಹಾನುಭಾವ ಅವನು. ಬುದ್ಧನ ಅನೇಕ ಕಥೆಗಳು ಜಾತಕ ಕಥೆಗಳು ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿವೆ. ಇಲ್ಲಿ ಸಂಕಟದಲ್ಲಿರುವವರಿಗೆ ಸಹಾಯ ಮಾಡುವ ಉದಾತ್ತ ಮನಸ್ಸು ಇದ್ದ, ತಮ್ಮ ಅಂತಹ ಮನಸ್ಸಿನಿಂದ ಇತರರನ್ನೂ ಪ್ರೇರೇಪಿಸಿದ ಎರಡು ಪ್ರಾಣಿಗಳ ಕಥೆ ಇದೆ. ರೊಹಂತ- ಜಿಂಕೆಗಳ ನಾಯಕ ಮತ್ತು ನಂದ್ರಿಯಾ ವಾನರ ರಾಜ. ಈ ಎರಡೂ ಪ್ರಾಣಿಗಳು ತಮ್ಮ ಗುಂಪನ್ನು ಪ್ರೀತಿ, ಮಮತೆಯಿಂದ ನಡೆಸಿಕೊಳ್ಳುತ್ತಿದ್ದ ರೀತಿ, ತಮ್ಮ ಗುಂಪಿನ ರಕ್ಷಣೆಗಾಗಿ ತಾವೇ ಸಾವಿಗೀಡಾಗಲು ಸಿದ್ದವಾದ ರೀತಿ ಮನಸ್ಸು ಕಲಕುವ ಹಾಗೆ ಇದೆ. ಒಬ್ಬ ನಾಯಕ ಹೇಗೆ ಇರುವುದು ಸಾಧ್ಯ ಅಂತ ತೋರಿಸಿಕೊಡುತ್ತದೆ. ಓದಿ ನೋಡಿ. ನಿಮಗೂ ಇಷ್ಟವಾಗುವುದು.
ಲೇಖಕರು: ಕೃಷ್ಣ ಚೈತನ್ಯ
ಅನುವಾದ: ಹೆಚ್. ಕೆ ರಾಮಕೃಷ್ಣ
ಚಿತ್ರಗಳು: ಪ್ರಣಬ್ ಚಕ್ರವರ್ತಿ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ 45
5-7ನೇ ತರಗತಿಯವರು ಓದಿಕೊಳ್ಳಬಹುದು. ಇನ್ನೂ ದೊಡ್ಡ ಮಕ್ಕಳಿಗೂ ಇಷ್ಟ ಆಗುವಂತೆ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************