-->
ಹೊಸ ಕ್ಯಾಲೆಂಡರ್ ವರುಷ - 2024 : ಮಕ್ಕಳ ಲೇಖನಗಳು

ಹೊಸ ಕ್ಯಾಲೆಂಡರ್ ವರುಷ - 2024 : ಮಕ್ಕಳ ಲೇಖನಗಳು

ಹೊಸ ಕ್ಯಾಲೆಂಡರ್ ವರುಷ - 2024 : ಮಕ್ಕಳ ಲೇಖನಗಳು
ಜಗಲಿಯ ಮಕ್ಕಳು ಬರೆದ 
ಹೊಸ ಕ್ಯಾಲೆಂಡರ್ ವರುಷದ 
ಹೊಸ ಭರವಸೆಯ ನವ ಲೇಖನನಗಳು ಬಂತು - ಬಂತು ಹೊಸ 
ವರುಷ....
ಹೊತ್ತು ತರಲಿ ನೂರು ಬಗೆಯ ಹರುಷ..
ಕಂಡ ಮೇಲೂ ಕೊರೋನಾದ
ಆವೇಷ..
ಮತ್ಯಾಕೆ ಬೇಕು ನಮ್ಮೊಳಗೆ
ದ್ವೇಷ..
ಕರಗಿ ಹೋಗಲಿ ನಮ್ಮೀ ಮನದ
ರೋಷ..
ಮನದಿ ಹೂಡೋಣ "ಸಹನೆಯೆಂಬ ವೇಷ"     
    ಎಂಬ ಶುಭ ನುಡಿಯೊಂದಿಗೆ ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಷಯಗಳು.
ನಾನು ಪ್ರಣಮ್ಯ ಜಿ
ಕಂಡ ಕನಸನ್ನು ನನಸಾಗಿಸುವ
ಕಾರ್ಯದಲ್ಲಿ ತೊಡಗಿರುವ ನಮಗೆ ಈ ವರ್ಷ ಮುಗಿದದ್ದೇ ಗೊತ್ತಾಗಲಿಲ್ಲ. ಸಾಕಷ್ಟು ನೋವು - ನಲಿವುಗಳ, ಕಷ್ಟ- ಸುಖಗಳ, ಸೋಲು- ಗೆಲುವುಗಳ ಹಾಗೆಯೇ ಅದರ ಜೊತೆ - ಜೊತೆಗೆ ಮರೆಯಲಾಗದಷ್ಟು ಸುಂದರ ನೆನಪುಗಳ ರಾಶಿಯನ್ನು ಹೊತ್ತು, ಜೀವನವನ್ನು ಸಾಗಿಸುತ್ತಿರುವ ನಮಗೆಲ್ಲರಿಗೂ
ಹೊಸ ವರುಷದ ಸುದಿನ.....
"ಈ ಶುಭ ಘಳಿಗೆಯು, ಪೂರ್ತಿ ವರ್ಷ ಶುಭ ವಿಚಾರಗಳನ್ನೇ ನಮ್ಮೆದುರು ತಂದಿರಿಸಲಿ" ಎಂದು ನಾವೆಲ್ಲಾ ಆಶಿಸೋಣ... ಎಲ್ಲರ ಆಕಾಂಕ್ಷೆಗಳು ಆದಷ್ಟು ಬೇಗ ಪೂರೈಸಲಿ ಹಾಗೂ ಈ
ಹೊಸ ವರ್ಷವು ಆದಷ್ಟೂ ಪ್ರಮಾಣದಿ ದುಃಖ ರಹಿತವಾಗಿ, ಕಹಿ ಸಂಗತಿಗಳು ಕರಗಿ, ಹೊಸ ಆಲೋಚನೆಯು ನಮ್ಮೆಲ್ಲರ ಮನದಲ್ಲಿ ಮೂಡಲಿ, ಅಲ್ಲದೆ... ಸಂತಸದ ಸಡಗರವೇ ಎಲ್ಲೆಡೆಯೂ ಮೊಳಗಲಿ... ಆಯಸ್ಸು, ಆರೋಗ್ಯ ಇನ್ನೂ ಎರಡು ಪಟ್ಟು ಹೆಚ್ಚಾಗಲಿ ಎನ್ನುತ್ತಾ ಮತ್ತೊಮ್ಮೆ ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.....      
............................................... ಪ್ರಣಮ್ಯ ಜಿ
ಪ್ರಥಮ ಪಿಯುಸಿ
ಎಸ್ ಡಿ ಎಮ್ ಪಿ ಯು ಕಾಲೇಜು ಉಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
      
 

ನಮಗೆಲ್ಲ ತಿಳಿದಿರುವಂತೆ, ಜನವರಿ ಒಂದರಂದು ಹೊಸ ವರ್ಷ ಎನ್ನುವುದು, ಬ್ರಿಟಿಷರ ಪರಿಕಲ್ಪನೆ ಆಗಿದೆ. ಆದರೆ ಭಾರತೀಯರಿಗೆ, ಅಂದರೆ ನಮಗೆ ಹೊಸ ವರ್ಷ ಯಾವುದೆಂದರೆ, ಯುಗಾದಿ. ಏಕೆಂದರೆ ನಾವು ಪ್ರಕೃತಿ ಆರಾಧಕರು ಮತ್ತು ಪ್ರಕೃತಿಯ ಸುಂದರ ಸವಿಯ ಜೊತೆ ನಮ್ಮ ಸವಿಯನ್ನು ಆಚರಿಸಿಕೊಳ್ಳುವವರು. ಅದಕ್ಕೆ ತಾನೇ ಇಂಡಿಯನ್ಸ್ ಇಸ್ ಗ್ರೇಟ್ ಅನ್ನುವುದು. ಪ್ರತಿ ವರ್ಷ ಬರುವಂತೆ, ಈ ವರ್ಷವು ಕೂಡ ಹೊಸ ವರ್ಷ ಬಂದಿದೆ. ಆದರೆ ವರ್ಷದಿಂದ ವರ್ಷಕ್ಕೆ ನಮ್ಮಲ್ಲಿ ಏನು ಬದಲಾವಣೆ ಆಗಿದೆ ಎಂದು ಅರಿಯ ತೊಡಗಿದಾಗ, ವಿಪರ್ಯಾಸ ಎನಿಸುತ್ತದೆ. ಏಕೆಂದರೆ, ಮನುಜರ ನಡುವಿನ ದ್ವೇಷದ ಅಡ್ಡಗೋಡೆಗಳು ಮತ್ತಷ್ಟು ಎತ್ತರವಾಗಿ ಬೆಳೆದು ನಿಂತಿವೆ. ಪರಸ್ಪರ ಪ್ರೀತಿ ನಂಬಿಕೆ ಸಹಕಾರ ಮನೋಭಾವನೆಗಳು ಸುಟ್ಟು ಹೋಗುತ್ತಿವೆ. ಆದರಿಂದ ನಾವು ಹೇಗೆ ಕ್ಯಾಲೆಂಡರನ್ನು ಬದಲಾಯಿಸಿಕೊಂಡು, ಹೊಂದಿಸಿಕೊಳ್ಳುತ್ತೇವೋ, ಹಾಗೆ ನಮ್ಮ ಜೀವನದಲ್ಲಿ, ದ್ವೇಷದ ಮನೋಭಾವಗಳನ್ನು ಸುಟ್ಟು, ಹೊಂದಾಣಿಕೆ, ಪ್ರೀತಿ ಮತ್ತು ಸಹಕಾರ ಮನೋಭಾವನೆಯ ಬೀಜ ನೆಡೋಣ. ಹಾಗೆಯೇ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪರವರು ಹೇಳಿರುವಂತೆ, ಹಣತೆ ಹಚ್ಚುತ್ತೇನೆ ನಾನು, ಈ ಕತ್ತಲ್ಲನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ. ಇರೋವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಮುಖ ನಾನು, ನೋಡಬಹುದೆಂಬ ಒಂದೇ ಒಂದು ಆಸೆಯಿಂದ. ಹಣತೆ ಆರಿದ ಮೇಲೆ ನಾನು ಯಾರೋ, ನೀನು ಯಾರೋ. ಆದ್ದರಿಂದ ಈ ಅವಸರ ಜೀವನಕ್ಕೆ, ಎಷ್ಟೇ ನ್ಯೂ ಇಯರ್ ಆದರೂ ಸಾಲದು. ಆದರಿಂದ ನಾ ಹೇಳಬಯಸುವುದೇನೆಂದರೆ, ನಮ್ಮಲ್ಲಿರುವ ದುರ್ಗುಣಗಳನ್ನು, ದ್ವೇಷ, ಅಸೂಯೆಗಳನ್ನು , ಈ ಕ್ಷಣವೇ ಬಿಟ್ಟುಬಿಡೋಣ. ಪ್ರೀತಿಯ ಹಣತೆ ಬೆಳಗೋಣ. ಮನುಜರ ನಡುವೆ ಸ್ನೇಹ, ಸಹೋದರತೆಯ ಸೇತುವೆ ಕಟ್ಟೋಣ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಮೊದಲು ನಮ್ಮನ್ನು ನಾವು ಅರಿತು, ಸಾಧನೆಗೆ ಪಣತೊಟ್ಟು, ಇಂದಿನಿಂದಲೇ ನಿಷ್ಠೆಯಿಂದ ಕೆಲಸವನ್ನು ಆರಂಭಿಸೋಣ ಮಾತು ಗುರಿಯ ಕಡೆ ಸಾಗೋಣ....
............... ಶಿವನಾಗ ಬಸವರಾಜ ಅಡವಳ್ಳಿಮಠ
ಪ್ರಥಮ ಪಿಯುಸಿ ವಿಜ್ಞಾನ ವಿಭಾಗ
ಮ ಮ ಪಾಟೀಲ್ ಕಾಲೇಜ್ ಹೂವಿನಹಡಗಲಿ
ಮುದೇನೂರು. ಹೂವಿನಹಡಗಲಿ ತಾಲೂಕು ವಿಜಯನಗರ ಜಿಲ್ಲೆ
******************************************    
                                            

                  

     ಹಳೆಯ ವರುಷದ ಅಂತ್ಯದೊಂದಿಗೆ ಹೊಸ ವರ್ಷದ ಆರಂಭ ವನ್ನು ಹೊಸ ವರುಷ ಎಂದು ಕರೆಯಲಾಗುತ್ತದೆ. ಹಳೆಯ ವರುಷ ನನ್ನ ಜೀವನದಲ್ಲಿ ಯಾವುದೇ ರೀತಿಯ ಕಹಿ ಘಟನೆಗಳು ನಡೆದಿಲ್ಲ. ತುಂಬಾ ಖುಷಿಯಿಂದ ಕಳೆದಿವೆ. ಆ ವರುಷ ನನ್ನಿಂದ ಮಾಡಲು ಸಾಧ್ಯವಾಗದ ಸಾಧನೆ ಗಳನ್ನು ನಾನು ಈ ವರುಷ ಮಾಡಲು ಪ್ರಯತ್ನ ಪಡುತ್ತೇನೆ. ಶಿಕ್ಷಣದ ಜೊತೆಗೆ ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ. ಅದರಲ್ಲೂ ಕಬಡ್ಡಿ ಎಂದರೇ ಬಲು ಪ್ರೀತಿ. ನಾನು ಈ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ ದೊಂದಿಗೆ ಕಬಡ್ಡಿ ಆಟದಲ್ಲಿ ಇನ್ನಷ್ಟು ಉತ್ತುಂಗವೇರಲು ಪ್ರಯತ್ನ ಪಡುತ್ತೇನೆ. 
......................................... ಹಾರ್ದಿಕ್ ಆರ್
4ನೇ ತರಗತಿ
ಸರಕಾರಿ ಮಾದರಿ ಉನ್ನತ ಹಿರಿಯ 
ಪ್ರಾಥಮಿಕ ಶಾಲೆ ಹಾರಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************                                                      
                            
            

ನೋಡ ನೋಡುತ್ತಿದ್ದಂತೆ ಹೊಸ ವರ್ಷವೂ ಬಂದೇ ಬಿಟ್ಟಿತು... ಹೊಸ ವರ್ಷಕ್ಕೊಂದು ನಮ್ಮ ಪ್ರೀತಿಯ ಮಕ್ಕಳ ಜಗಲಿಗೆ ಲೇಖನವನ್ನು ಬರೆಯಲು ಪ್ರಾರಂಭಿಸಬೇಕು ಎಂಬ ಹುಮ್ಮಸ್ಸು ಮೂಡಿತು. ಮಕ್ಕಳ ಜಗಲಿಯ ಎಲ್ಲಾ ಆತ್ಮೀಯರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ಈ ವರ್ಷ ಮಕ್ಕಳ ಜಗಲಿಗೆ ಚಿತ್ರಗಳನ್ನು ಬರೆದು ಕಳಿಸಬೇಕು, ಕವನಗಳನ್ನು ಬರೆದು ಕಳಿಸಬೇಕು ಎಂಬ ಆಶಯವಿದೆ. ನಮ್ಮಂತ ಪುಟಾಣಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿರುವ ಮಕ್ಕಳ ಜಗಲಿ ಪತ್ರಿಕೆಗೆ ಹಾಗೂ ಅದನ್ನುನಡೆಸಿಕೊಂಡು ಬರುತ್ತಿರುವ ಹಿರಿಯರಿಗೆ ಅನಂತಾನಂತ ಕೃತಜ್ಞತೆಗಳು. ಮುಂದೆಯೂ ಈ ಪತ್ರಿಕೆಯು ಬೆಳಗಲಿ. ದೇಶ ವಿದೇಶಗಳಲ್ಲಿ ಇದರ ಕೀರ್ತಿ ಹರಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆನು.
......................................... ಲಕ್ಷಣ್ಯ ಜಿ.ಕೆ.
7ನೇ ತರಗತಿ
ತುಂಬೆ ಬಿ ಎ ಇಂಗ್ಲೀಷ್ ಮೀಡಿಯಂ 
ಶಾಲೆ ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************                          


       
ಎಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷ 2024ರ ಶುಭಾಶಯಗಳು.
     ನಮ್ಮ ಸನಾತನ ಧರ್ಮದ ಪ್ರಕಾರ ಯುಗಾದಿಯು ಹೊಸ ವರ್ಷದ ಆರಂಭದ ದಿನವಾಗಿದೆ. ಹೊಸ ವರ್ಷದ ಯುಗಾದಿ ಆಚರಣೆಯಲ್ಲಿ ಭಾರತೀಯ ಸಂಸ್ಕೃತಿಯ ಸೊಗಡು ಇರುತ್ತದೆ. ಡಿಸೆಂಬರ್ ನಂತರ ಬರುವ ಜನವರಿಯ ಹೊಸ ವರ್ಷದ ಆಚರಣೆಯಲ್ಲಿ ಕೆಲವು ಕಡೆ ಪಾಶ್ಚಾತ್ಯ ಸಂಸ್ಕೃತಿಯನ್ನು ಕಾಣಬಹುದು.
     ಈ ನೆಲದಲ್ಲಿ ಹುಟ್ಟಿದ ಬೆಳೆದ ಒಳ್ಳೆಯ ಸಂಪ್ರದಾಯಗಳು, ಉತ್ತಮವಾದ ಹಬ್ಬ - ಆಚರಣೆಗಳು ಮನುಷ್ಯನಿಗೆ ಉತ್ತಮ ಸಂಸ್ಕಾರವನ್ನು ಕೊಡುತ್ತದೆ. ಮತ್ತು ಉನ್ನತಿಯೆಡೆಗೆ ಸಾಗಲು ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. "ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು" ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ ಉತ್ತಮ ಪ್ರಜೆಗಳಾಗೋಣ.
     ಪ್ರತಿವರ್ಷವೂ ಹೊಸ ವರ್ಷವನ್ನು ನಾವು ಹಲವು ನಿರೀಕ್ಷೆಗಳೊಂದಿಗೆ ಮತ್ತು ಹೊಸ ಯೋಜನೆಗಳೊಂದಿಗೆ ಬರಮಾಡಿಕೊಳ್ಳುತ್ತೇವೆ. ನಾವು ಮಾತ್ರವಲ್ಲ ನಮ್ಮ ಸುತ್ತಲಿನ ಜಗತ್ತು ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳೊಣ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಹೊಸ ದಿಕ್ಕಿನತ್ತ ಹೆಜ್ಜೆ ಇಡೋಣ.
....................................... ಸಾತ್ವಿಕ್ ಗಣೇಶ್
9ನೇ ತರಗತಿ
ಸರಕಾರಿ ಪದವಿ ಪೂರ್ವ 
ಕಾಲೇಜು, ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣಕನ್ನಡ ಜಿಲ್ಲೆ
******************************************

      

ಕಣ್ಣು ಮುಚ್ಚಿ ತೆಗೆಯುವುದರೊಳಗೆ 2023ನೇ ವರ್ಷ ಮುಗಿದೇ ಹೋಯಿತು. ಪ್ರತೀ ವರ್ಷ ನಾನು ಹೀಗೆ ಮಾಡಬೇಕೆಂದು ಆಶಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲಳಾಗಿದ್ದೇನೆ. ಆದರೆ ಈ ವರ್ಷ ಅದನ್ನು ಕಾರ್ಯರೂಪಕ್ಕೆ ತರಲೇಬೇಕೆಂದು ಛಲದಿಂದ ಪ್ರಯತ್ನಿಸುತ್ತೇನೆ. 
       ನನಗೆ ಕೋಪ ಬರುವುದು ಬೇಗ. ಅದನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತೇನೆ. ನನ್ನದೇ ಕೈತೋಟವನ್ನು ಬೆಳೆಸುವ ಹೊಸ ಯೋಜನೆಯನ್ನು ಕೈಗೊಂಡಿದ್ದೇನೆ. ಬೇರೆ ಬೇರೆ ಹೂವಿನ ಬೀಜ, ಗಿಡಗಳನ್ನು ನೆಟ್ಟು, ತರಕಾರಿಗಳನ್ನು ಬೆಳೆಸಬೇಕೆಂಬ ಆಸೆ. ಮನೆಗೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಿ, ಅವರ ಮೆಚ್ಚುಗೆಗೆ ಪಾತ್ರಳಾಗಬೇಕೆಂದು ನನ್ನ ಅಪೇಕ್ಷೆ. ಜೊತೆಗೆ ನನ್ನ ಕೆಲಸಗಳನ್ನು ನಾನೇ ಮಾಡಲು ನಾನೀಗ ಶಕ್ತಳಾಗಿದ್ದೇನೆ. ಹಿರಿಯರಿಗೆ ವಿಧೇಯಳಾಗಿರುವುದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. 
         ಕೊನೆಯದಾಗಿ ಎಲ್ಲರಿಗೂ ಹೊಸ ವರ್ಷವು ಶುಭದಾಯಕವಾಗಿರಲಿ ಎಂದು ಆಶಿಸುತ್ತೇನೆ.
....................................... ಸಾನ್ವಿ ಸಿ ಎಸ್ 
6ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


     
ಹೊಸ ವರುಷ ಬಂದಿದೆ.. 
ಹೊಸ ವರುಷ ಬಂದಿದೆ  
ಹೊಸ ವರುಷ ಬಂದಿದೆ 
ಕರೋನದಂತಹ ಭೀಕರ ರೋಗ ಬಾರದಿರಲಿ. ಹೊಸ ವರುಷ ಬರಲಿ, ಕೊಲೆ ಸುಲಿಗೆ ತೊಲಗಲಿ ಎಲ್ಲರಲ್ಲೂ ಸೌಹಾರ್ದ ಭಾವ ಬೆಳೆಯಲಿ.
................................. ಸಾನಿಕ ಭಟ್ ಕೆ ಆರ್ 
7ನೇ ತರಗತಿ 
ರೋಟರಿ ಶಾಲೆ, ಸುಳ್ಯ 
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

                

      ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಎಲ್ಲರಿಗೂ ಸಂತೋಷ ನೆಮ್ಮದಿಯನ್ನು ಕೊಡಲಿ. ನಾವೆಲ್ಲರೂ ಈಗ ಹೊಸ ವರುಷದಲ್ಲಿ ಇದ್ದೇವೆ. ಈ ವರ್ಷದಲ್ಲಿ ನಾನು ಕಳೆದ ವರ್ಷಕ್ಕಿಂತಲೂ ಇನ್ನೂ ಚೆನ್ನಾಗಿ ಓದಬೇಕು. ನನ್ನ ಕೈಯಲ್ಲಾದಷ್ಟು ಎಲ್ಲಾ ಸ್ಪರ್ಧೆಗಳಿಗೆ ಭಾಗವಹಿಸುತ್ತೇನೆ. ನನ್ನ ಅಪ್ಪ ಮತ್ತು ಅಮ್ಮನಿಗೆ ನಾನು ಕೆಲಸದಲ್ಲಿ ಹೆಚ್ಚಿನ ಸಹಾಯ ಮಾಡುತ್ತೇನೆ.
................................. ಸನ್ನಿಧಿ ಭಟ್ ಕೆ ಆರ್ 
4ನೇ ತರಗತಿ 
ರೋಟರಿ ಶಾಲೆ, ಸುಳ್ಯ 
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

                 

ನಮಸ್ತೆ ನನ್ನ ಹೆಸರು ಸಿಂಚನಾ.... 2023ನ್ನು ಬಿಟ್ಟು 2024ಕ್ಕೆ ಕಾಲಿಡುವ ಕ್ಷಣ. ಒಂದು ವರ್ಷ ಹೋದದ್ದೇ ಗೊತ್ತಿಲ್ಲ. ಹೊಸ ವರ್ಷ ಹೇಗಿದೆ ಎಂಬ ಕುತೂಹಲ ನನಗೂ ಇದೆ. ನನ್ನ ಕೈಲಾದಷ್ಟು ಸಾಧನೆಗಳನ್ನು ಮಾಡಲು ಭಾವಿ‌ಸಿದ್ದೇನೆ. ಇಲ್ಲಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.
........................................ ಸಿಂಚನಾ ಶೆಟ್ಟಿ
6ನೇತರಗತಿ
ಉದಯಗಿರಿ ಕುದ್ದುಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article