ಮಕ್ಕಳ ಕವನಗಳು : ಸಂಚಿಕೆ - 01 : ರಚನೆ - ಶರ್ಮಿಳಾ ಕೆ ಎಸ್
Wednesday, January 10, 2024
Edit
ಮಕ್ಕಳ ಕವನಗಳು : ಸಂಚಿಕೆ - 01
ಕವನ ರಚನೆ : ಶರ್ಮಿಳಾ ಕೆ ಎಸ್
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ ಉಡುಪಿ ಜಿಲ್ಲೆ
ಬರದಿರು ಮತ್ತೆ ಹಳೆಯ ನೆನಪೇ......
ಕೆಸರಿನಲಿಯೇ ಇದ್ದು ತಿಳಿಯಾಗಿರೊ ಕಮಲದಂತೆ......
ಕಾಡುವೆಯೇಕೆ ಕಹಿನೆನಪೇ......!
ಕತ್ತಲ ಕೋಣೆಯ ಮೂಲೆಯಂಚಲ್ಲಿ ಕೂತೆನಗೆ......
ದಿಟ್ಟ ಮುಳ್ಳಿನ ಹಾಗೆ ಕಾಡದಿರು ಓ ನೆನಪೇ......
ಹೊಲಿದ ತುಟಿಗಳ ಚುಂಬಕದಲೇ......
ನೀ ಇರಿದು ಕೊಲ್ಲಲು ಬಾರದಿರೇ ನೆನಪೇ.......!
ಸ್ಮಶಾನದೆಡೆಗೆ ಕೊಂಡು ಹೋದ ನನ್ನನ್ನು......
ಮರಳಿ ಕರೆಯದಿರೇ ಓ ನೆನಪೇ......
ತಾರುಣ್ಯದ ಮೊಗದಲೇಕೆ ನೀ ನೆಲೆಹೂಡುವೆ
ಓ ಕಹಿನೆನಪೇ.....!
ಇಷ್ಟು ಕಾಲ ಒಡನೆಯೇ ಇದ್ದು......
ಇಂದಿಗೆ ಎನ್ನಿಂದ ದೂರವಾದೆಯಾ
ಓ ನೆನಪೇ......
ನೀನೆ ಎನಗೆಲ್ಲಾ ಬೇರಾರಿಲ್ಲ......
ಎನ್ನ ಬಂಧು ಬಳಗವೆಲ್ಲಾ ನೀನೆ ಓ ಕಹಿನೆನಪೇ......
ನನ್ನ ಎಲ್ಲಾ ಗೆಲುವಿಗೆ ನೀನೆ ಸ್ಪೂರ್ತಿ......
ಎಂದೆಯಾದರೇ ನೀ ಮತ್ತೆ
ಕಾಡುವೆಯಾ ಓ ನೆನಪೇ......
ಮುರಿದ ಎನ್ನ ಹೃದಯಕೆ ಜೊತೆಗಾರನಾಗಿ......
ಕನಸಿನಲೂ ಕಾಡುತಾ, ನನಸಲೂ....
ಓ ಕಹಿಯ ನೆನಪೇ......
ಕೊನೆಗಾಲದವರೆಗೆ ನೀನಿರು ಸನಿಹದಲಿ......
ಬದುಕೆಂಬ ತರಗತಿ ಕೋಣೆಯಲಿ ನೆನಪೇ......
ದಿಕ್ಕಿಲ್ಲದೆನಗೆ ನೀನೆ ದಿಕ್ಕಾಗಿರು......
ಜತೆಗಾರನೇ ನೀನೀಗ ಓ ಕಹಿನೆನಪೇ......
...................................... ಶರ್ಮಿಳಾ ಕೆ ಎಸ್
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ ಉಡುಪಿ ಜಿಲ್ಲೆ
********************************************
ಸಿಹಿಯ ಸವಿಯೋ ಇರುವೆಯು
ಬೆಲ್ಲ ನೋಡಿ ಆಸೆ ಪಟ್ಟು
ಅದನ್ನು ಸವಿಯ ಬಯಕೆಯು.....
ಅತ್ತ ಇತ್ತ ನೋಡಿ ಹಾಗೆ
ಸನಿಹ ಸುಳಿದು ಹೊರಟಿತು
ಆಗ ಅಲ್ಲಿ ಬಂದ ಮಿಡತೆ
ಅದನ್ನು ಬಂದು ಹಿಡಿಯಿತು.....
ಬೆಲ್ಲ ತಿನ್ನೋ ಆಸೆ ಹಾಗೆ
ಮನದಿ ಉಳಿದು ಕೊಂಡಿತು
ಹೊಟ್ಟೆ ಒಳಗೆ ಕಷ್ಟ ಕೊಡಲು
ಮಿಡತೆ ಹೊರಗೆ ಉಗಿಯಿತು.....
ಮತ್ತೆ ಸುತ್ತಿ ಬಳಿಗೆ ಬಂದು
ಸವಿಯೋ ಆಸೆ ಇರುವೆಗೆ
ಅಲ್ಲಿ ಬಂದು ನೋಡ ಸಮಯ
ಬೆಲ್ಲ ತಿಂದು ಹೊರಟಿದೆ.....
...................................... ಶರ್ಮಿಳಾ ಕೆ ಎಸ್
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ ಉಡುಪಿ ಜಿಲ್ಲೆ
********************************************
ಕದ್ದು ಆಟ ಆಡ ಬೇಡ
ಆದ ಪಾಠ ಮರೆಯಬೇಡ
ಓದಿ ನೀನು ಜಾಣನಾಗು.....
ಸುತ್ತಿ ಸುತ್ತಿ ಸುತ್ತಿ ನೋಡು
ದೇಶಕೋಶ ಸುತ್ತಿ ನೋಡು
ಎಷ್ಟು ಚೆಂದ ಎಂದು ಹಾಡು
ದೇಶ ಸುತ್ತಿ ಜಾಣನಾಗು......
ಗುಣ ನೋಡಿ ಸ್ನೇಹ ಮಾಡು
ಸ್ನೇಹ ಎಂಥಾ ಚೆಂದ ನೋಡು
ಸ್ನೇಹದ ಅರ್ಥ ಅರಿತು ನೋಡು
ಸ್ನೇಹದ ಸಿಹಿಯಲಿ ಪಾವನವಾಗು.....
...................................... ಶರ್ಮಿಳಾ ಕೆ ಎಸ್
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ ಉಡುಪಿ ಜಿಲ್ಲೆ
********************************************
ಪಾಠವ ಓದುವಾ ಬನ್ನಿ
ಸಿರಿತನ ಬಡತನ ಭೇದವು ಇಲ್ಲದ
ಹೆಮ್ಮೆಯ ಶಾಲೆಗೆ ಬನ್ನಿ.....
ಬನ್ನಿರಿ ಎಲ್ಲರೂ ಶಾಲೆಗೆ ಬನ್ನಿರಿ
ಆಟವ ಆಡುವಾ ಬನ್ನಿ
ಜಾತಿಯ ಕುಲದ ಭೇದವು ಇಲ್ಲದೆ
ನಮ್ಮಯ ಶಾಲೆಗೆ ಬನ್ನಿ.....
ಬನ್ನಿರಿ ಎಲ್ಲರೂ ಶಾಲೆಗೆ ಬನ್ನಿರಿ
ಸೇರಿ ಕಲಿಯುವಾ ಬನ್ನಿ
ಪಾಠದ ಜತೆಯಲಿ ಆಟವು ಇರಲು
ನಲಿಯುತಾ ಶಾಲೆಗೆ ಬನ್ನಿ.....
ನಮ್ಮಯ ನೆಚ್ಚಿನ ಗುರುಗಳು ಇರಲು
ದಿನವೂ ಶಾಲೆಗೆ ಬನ್ನಿ
ಗುರುಗಳ ಪಾಠವಾ ಕೇಳುತಾ, ಆಡುತಾ
ನಲಿಯುವಾ ಶಾಲೆಗೆ ಬನ್ನಿ.....
9ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ ಉಡುಪಿ ಜಿಲ್ಲೆ
********************************************