ಪ್ರೀತಿಯ ಪುಸ್ತಕ : ಸಂಚಿಕೆ - 90
Friday, December 22, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 90
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಮಹಾ ತಬಲಾ ವಾದಕ ಜಾಕಿರ್ ಹುಸೇನ್ ಬಗ್ಗೆ ನಿಮಗೆ ಗೊತ್ತೇ? ಅವರ ಬಾಲ್ಯದ ಕಥೆ ಇದು. ಪುಟ್ಟ ಮಗು, ಒಂದೂವರೆ ದಿನದ ಮಗು ಆಸ್ಪತ್ರೆಯಿಂದ ಮನೆಗೆ ಬಂದಾಗ ಮಗುವನ್ನು ತಂದೆ ಅಲ್ಲಾರಖಾನ ಮಡಿಲಲ್ಲಿ ಮಲಗಿಸುತ್ತಾರೆ. ತಂದೆ ಮಗುವಿನ ಕಿವಿಯಲ್ಲಿ ಆಶೀರ್ವಾದ ನೀಡಿದ್ದು –“ಧೇ ಟ ಧಾ ಗ ಧುನ್ ನಾ ಘೇ ನಾ” – ತಬಲಾದ ನುಡಿಗಳು. ಜಾಕಿರ್ ಅಂತಹಾ ತಬಲಾ ನುಡಿಗಳನ್ನು ಕೇಳಿಸಿಕೊಳ್ಳುತ್ತಾ ಬೆಳೆಯುತ್ತಾನೆ. ಚೆಂಡು, ಚೇರ್, ಅಡುಗೆಮನೆಯ ಪಾತ್ರೆ ಪಗಡದ ಮೇಲೆ ಆಟಾಡುತ್ತಾ ತಬಲಾ ನುಡಿಗಳನ್ನೇ ಬಡಿಯತೊಡಗುತ್ತಾನೆ. ತಬಲಾ ನುಡಿಸುವುದು ಅವನಿಗೆ ಎಂತಹಾ ಖುಶಿ ಅಂದರೆ, ಬೆಳಗ್ಗೆ ಮೂರೂವರೆಗೇ ಎದ್ದು ಕಲಿಯತೊಡಗುತ್ತಾನೆ.. ಜಾಕಿರ್ ಕಲಿಯುವ, ಖುಶಿ ಪಡೆವ ಚಿತ್ರಗಳು ತುಂಬಾ ತುಂಬಾ ಮುದ್ದಾಗಿವೆ. ಕಲಿಯುವ ಸಂಭ್ರಮ ನೋಡುವುದಕ್ಕೆ ಚಂದ ಅನಿಸುತ್ತದೆ. ತಪ್ಪದೆ ಓದಿ.
ಲೇಖಕರು: ಸಂಧ್ಯಾ ರಾವ್
ಅನುವಾದ: ನಯನಾ ಕಾಶ್ಯಪ್
ಚಿತ್ರಗಳು: ಪ್ರಿಯಾ ಕುರಿಯನ್
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್
ಬೆಲೆ: ರೂ.175
6+ ವಯಸ್ಸಿವರಿಗಾಗಿ ಇದೆ. ಇತರ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************