-->
ಪ್ರೀತಿಯ ಪುಸ್ತಕ : ಸಂಚಿಕೆ - 88

ಪ್ರೀತಿಯ ಪುಸ್ತಕ : ಸಂಚಿಕೆ - 88

ಪ್ರೀತಿಯ ಪುಸ್ತಕ
ಸಂಚಿಕೆ - 88
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 


                           ಮಾಂತ್ರಿಕ ಮೀನು
       ಪ್ರೀತಿಯ ಮಕ್ಕಳೇ... ಕಥೆ ಮತ್ತು ಚಿತ್ರ ಎರಡನ್ನೂ ಮನಸ್ಸು ತುಂಬಾ, ಕಣ್ಣು ತುಂಬಾ ಆನಂದಿಸಬಹುದಾದ ಪುಸ್ತಕ ಇದು. ಎಲ್ಲೂ ಬಣ್ಣ ಇಲ್ಲದೇ ಹೋದರೆ, ಆಹಾರವಿಲ್ಲದೆ ಹೋದರೆ, ನಗುವೇ ಇಲ್ಲದೆ ಹೋದರೆ ಹೇಗಾಗಬಹುದು, ಊಹಿಸಿ. ಸಂತೋಷವೇ ಇಲ್ಲ. ಬರೀ ಹಸಿವು, ದುಃಖ, ಜಗಳಗಳು ತುಂಬಿಕೊಂಡವು. ಆಗ ಒಬ್ಬ ಮುದಿ ಹೆಂಗಸು ಇದನ್ನು ಸರಿ ಮಾಡಬೇಕು ಅಂತ ನಿರ್ಧಾರ ಮಾಡಿದಳು. ಅವಳಿಗೆ ದೂರದ ಹಚ್ಚ ಹಸಿರಿನ ಕೊಳದಲ್ಲಿ ವಾಸಿಸುವ ಮಾಂತ್ರಿಕ ಮೀನು ಬಗ್ಗೆ ಗಾಳಿಯಿಂದ ತಿಳಿಯಿತು. ಹೊರಟೇ ಬಿಟ್ಟಳು.. ಅವಳು ಹೇಗೆ ಹೋದಳು, ಮಾಂತ್ರಿಕ ಮೀನನ್ನು ಹೇಗೆ ಒಪ್ಪಿಸಿದಳು, ಮೀನು ಏನು ಮಾಡಿತು, ಅವರಿಗೆ ಮತ್ತೆ ಸಂತೋಷ ಸಿಕ್ಕಿತೇ ತಿಳಿದುಕೊಳ್ಳುವ ಕುತೂಹಲ ಇದ್ದರೆ ಪುಸ್ತಕ ಓದಿ. ಇದು ಗೋಂಡ್ ಬುಡಕಟ್ಟಿನವರ ನಡುವೆ ಕೇಳಿಬಂದ ಕಥೆ. ಕಥೆ ಹೇಳಿದವರೂ, ಚಿತ್ರ ಮಾಡಿದವರೂ ಅದೇ ಸಮುದಾಯಕ್ಕೆ ಸೇರಿದವರು. 
ಕಥೆ ಹೇಳಿದವರು: ಚಂದ್ರಕಲಾ ಜಗತ್
ಕಥೆ ಬರೆದವರು: ಮಹೀನ್ ಮತ್ತು ರಿನ್ ಚಿನ್ 
ಅನುವಾದ: ಜಯಶ್ರೀ ಕಾಸರವಳ್ಳಿ
ಚಿತ್ರಗಳು: ಶಾಕುನ್ ಲತಾ ಕುಶ್ರಾಮ್ 
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್ 
ಬೆಲೆ: ರೂ.175/-
6+ ವಯಸ್ಸಿವರಿಗಾಗಿ ಇದೆ. ಇತರ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************




Ads on article

Advertise in articles 1

advertising articles 2

Advertise under the article