-->
ಜಗಲಿ ಕಟ್ಟೆ : ಸಂಚಿಕೆ - 29

ಜಗಲಿ ಕಟ್ಟೆ : ಸಂಚಿಕೆ - 29

ಜಗಲಿ ಕಟ್ಟೆ : ಸಂಚಿಕೆ - 29
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


     ಈ ತಿಂಗಳು ಶಾಲಾ ಪ್ರವಾಸ , ವಾರ್ಷಿಕ ಕ್ರೀಡಾಕೂಟಗಳು, ಶಾಲಾ ವಾರ್ಷಿಕೋತ್ಸವಗಳ ಸಂಭ್ರಮದಲ್ಲಿ ನಾವೆಲ್ಲ ಇದ್ದೇವೆ. 2024 ರ ಆಗಮನಕ್ಕೆ ಇನ್ನೇನು ದಿನಗಳು ಮಾತ್ರ ಬಾಕಿ ಉಳಿದಿದೆ. ವರುಷಗಳು ಕಳೆದುಹೋಗುವುದೇ ತಿಳಿಯುತ್ತಿಲ್ಲ. ಜಗಲಿಯ ವರುಷ ಪೂರ್ತಿಯ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ನಿಮಗೆ ತಿಂಗಳುಗಳು ಸಾಗುವುದೇ ತಿಳಿಯದು. ಹೊಸ ಹೊಸ ಕಾರ್ಯಕ್ರಮಗಳು ನಮ್ಮಲ್ಲಿ ಹೊಸ ಆಲೋಚನೆಗಳನ್ನು ತುಂಬುತ್ತವೆ. ಆಸಕ್ತಿಯನ್ನು ತುಂಬಿಕೊಂಡಿರುವ ಪ್ರತಿಯೊಬ್ಬರೂ ಕೂಡ ಹೊಸತನ್ನು ಸಂಭ್ರಮಿಸುತ್ತಾರೆ. 
     ಒಂದು ಸಣ್ಣ ಮಗುವನ್ನು ಗಮನಿಸಿ. ಹೊಸ ಆಟಿಕೆಗಳನ್ನು ತಂದ ಶುರುವಿನಲ್ಲಿ ತುಂಬಾ ಇಷ್ಟಪಟ್ಟು ಆಟವಾಡುತ್ತದೆ. ದಿನ ಕಳೆದಂತೆ ಆ ವಸ್ತುವಿನಲ್ಲಿ ಆಸಕ್ತಿ ಕಳೆದುಕೊಂಡು ಹೊಸ ಇನ್ನೊಂದು ವಸ್ತುವಿಗೆ ಕಾಯುತ್ತದೆ. ಇದು ಮಕ್ಕಳ ಸಹಜ ಸ್ವಭಾವ. ಮಕ್ಕಳು ಹೊಸತನ್ನು ಬಯಸುತ್ತಾರೆ. ಹೊಸ ಚಿಂತನೆಗಳನ್ನು, ಹೊಸ ಆಲೋಚನೆಗಳನ್ನು ಇಷ್ಟಪಡುತ್ತಾರೆ ಎನ್ನುವುದು ತಿಳಿಯಬಹುದಾದ ವಿಷಯ. 
     ಜಗಲಿಯಲ್ಲಿ ಬೆರೆಯುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ. ಪ್ರತಿ ವಿದ್ಯಾರ್ಥಿಗಳು ಕಳುಹಿಸುವ ಚಿತ್ರ, ಕಥೆ, ಕವನಗಳು, ಲೇಖನಗಳು ಪ್ರಭುದ್ಧವಾಗಿದೆ. ನೀವು ಕಳುಹಿಸುವ ಪ್ರತಿಯೊಂದು ಕೂಡ ನಮಗೆ ಅಮೂಲ್ಯ. ಪ್ರತಿಯೊಂದನ್ನು ಪ್ರಕಟಿಸೋ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಮುಂಚೆ ತಮಗೆ ತಿಳಿಸಿದ ಹಾಗೆ ಪ್ರಕಟವಾಗುವಾಗ ಸ್ವಲ್ಪ ಸಮಯಾವಕಾಶವನ್ನು ತೆಗೆದುಕೊಳ್ಳುತ್ತೇವೆ. 
     ಮಕ್ಕಳ ಜಗಲಿ ಆಯೋಜಿಸುತ್ತಿರುವ 3ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ. ಡಿಸೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ. ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವಕಾಶ ವಂಚಿತ ಮಕ್ಕಳ ಸಹಿತ ಜಗಲಿಯಲ್ಲಿ ಬೆರೆಯುವ ಪ್ರತಿಯೊಬ್ಬ ಮಕ್ಕಳ ಪ್ರತಿಭಾ ವಿಕಸನಕ್ಕೆ ಪೂರಕವಾಗಿ ಕಾರ್ಯನಿರತವಾಗಿದೆ... ಇದು ನಿಮ್ಮ ಮನೆ ಮಕ್ಕಳ... ಜಗಲಿ. ನಮಸ್ಕಾರ.


ಕಳೆದ ಸಂಚಿಕೆಯ ಜಗಲಿಕಟ್ಟೆ - 28 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ , ಗಿರೀಶ್ ಕೋಟ್ಯಾನ್ ಸರಪಾಡಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಎಲ್ಲರಿಗೂ ನಮಸ್ಕಾರ,
       ಸುಜ್ಞಾನದಿಂದ ಎಲ್ಲವೂ ಸಾಧ್ಯ. ಜೀವನ ಸುಗಮವಾಗಿರಲು ನಾವು ಜ್ಞಾನಿಗಳಾಗಬೇಕು. ಅದಕ್ಕೆ ಪೂರಕವಾದ ಜ್ಞಾನಿಗಳ ಕುರಿತಾದ ಕಥೆಗಳನ್ನು ಓದಬೇಕು ಎನ್ನುವುದನ್ನು ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ಸುಂದರವಾಗಿ ನಿರೂಪಿಸಿದ್ದಾರೆ.
     ನಿರ್ಮಾಣಕ್ಕೆ ಹಲವಾರು ಜನಗಳ ಪರಿಶ್ರಮ ಮತ್ತು ಸಮಯ ಅಗತ್ಯ. ಆದರೆ ನಿರ್ನಾಮಕ್ಕೆ ಒಂದು ಕ್ಷಣ ಸಾಕಾಗುವುದು. ನಾವು ವಿನಾಶಕಾರರಾಗದೆ ನಿರ್ಮಾಣಕಾರರಾಗಬೇಕು ಎನ್ನುವ ಕಿವಿಮಾತಿನೊಂದಿಗೆ ರಮೇಶ್ ಸರ್ ರವರ ಸಂಚಿಕೆ ತುಂಬಾ ಇಷ್ಟವಾಯಿತು.
     ವೈಜ್ಞಾನಿಕ ಲೇಖನದಲ್ಲಿ ದಿವಾಕರ ಸರ್ ರವರು ಮಾನವನ ಬುದ್ಧಿಮತ್ತೆಗೆ ಕಾರಣವಾದ ಅಂಶಗಳನ್ನು ಬಹಳ ಸರಳವಾಗಿ ತಿಳಿಸಿದ್ದಾರೆ.
    ಅರವಿಂದ ಸರ್ ರವರ ಹಕ್ಕಿ ಕಥೆಯಲ್ಲಿ ಈ ಸಲ ಮಿಂಚು ಕೆಂಬರಲು ಹಕ್ಕಿಯ ವಿವರಣಾತ್ಮಕ ಹಾಗೂ ಸೊಗಸಾದ ಪರಿಚಯ.
     ನಾವು ಪರಿಚಯವಿಲ್ಲದೆ ಕಳೆಗಿಡವೆಂದು ಪರಿಗಣಿಸುವ ಅನೇಕ ಸಸ್ಯಗಳನ್ನು ನಾಶಪಡಿಸುವುದಿದೆ. ಆದರೆ ಪ್ರತಿ ಸಸ್ಯವೂ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕಾರಿ. ಈ ಸಲ ವಿಜಯ ಮೇಡಂರವರಿಂದ ಹೆತ್ತುತ್ತಿ ಗಿಡದ ಬಗ್ಗೆ ಸಮಗ್ರ ಮಾಹಿತಿ ಸಿಕ್ಕಿತು.
     ಪ್ರತಿಯೊಂದು ಮಗುವಿನಲ್ಲೂ ಅದ್ಭುತ ಪ್ರತಿಭೆ ಇದೆ. ಆದರೆ ಅದನ್ನು ಆರಂಭದಲ್ಲೇ ಪತ್ತೆ ಹಚ್ಚಿ ನೀರೆರೆದರೆ, ಅಥವಾ ಅದಕ್ಕೆ ತಕ್ಕ ವೇದಿಕೆ ಒದಗಿಸಿದರೆ ಆ ಮಗು ಪ್ರತಿಭಾವಂತರಾಗುವುದರಲ್ಲಿ ಸಂಶಯವಿಲ್ಲ. ಪೋಷಕರು ಹಾಗು ಶಿಕ್ಷಕರಿಗೆ ಕಿವಿಮಾತಿನಂತಿದೆ ಯಾಕೂಬ್ ಸರ್ ರವರ ಈ ಸಲದ ಸಂಚಿಕೆ.
     'ಮಾಂತ್ರಿಕ ಮೀನು' ಎಂಬ ಮಕ್ಕಳಿಗಾಗಿ ಇರುವ ಉತ್ತಮ ಪುಸ್ತಕದ ಪರಿಚಯ ವಾಣಿಯಕ್ಕನವರಿಂದ.
    ಕಲಿಯುವ ವಯಸ್ಸಿನಲ್ಲಿ ಮಕ್ಕಳನ್ನು ದಾಂಪತ್ಯಕ್ಕೆ ದೂಡುವ ಸನ್ನಿವೇಶದ ಕುರಿತಾದ ತಮ್ಮ ಅನುಭವವನ್ನು ಶಿಕ್ಷಕರ ಡೈರಿಯಲ್ಲಿ ಸುರೇಖಾ ಮೇಡಂ ಸುಂದರವಾಗಿ ಹಂಚಿಕೊಂಡಿದ್ದಾರೆ.
     ರಮೇಶ್ ಉಪ್ಪುಂದರವರ ಪದದಂಗಳ ಉತ್ತಮವಾಗಿ ಮುಂದುವರಿಯುತ್ತಿದೆ. ಮಕ್ಕಳ ಚುಟುಕು ಕವನಗಳು ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು ಮಕ್ಕಳಿಗೆ.
     ಈ ವಾರದ ಜಗಲಿ ಉತ್ತಮವಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************

ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
****************************************** 



Ads on article

Advertise in articles 1

advertising articles 2

Advertise under the article