-->
ಪ್ರೀತಿಯ ಪುಸ್ತಕ : ಸಂಚಿಕೆ - 86

ಪ್ರೀತಿಯ ಪುಸ್ತಕ : ಸಂಚಿಕೆ - 86

ಪ್ರೀತಿಯ ಪುಸ್ತಕ
ಸಂಚಿಕೆ - 86
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 


                                    ಪರಿಸರದ ಉಪಾಸಕಿ
     ಪ್ರೀತಿಯ ಮಕ್ಕಳೇ... ಅರಣ್ಯ ಪ್ರದೇಶದ ಝೂಬು ಆ ನಗರಕ್ಕೆ ಸಮೀಪದಲ್ಲಿ ಬಾಮನ್ ಸೆಮಲಿಯಾ ಎಂಬ ಒಂದು ಹಳ್ಳಿ ಇತ್ತು. ಅಲ್ಲಿ ಮಕನಾ ಎಂಬವನ ಮನೆಯಿತ್ತು. ಅದು ಪುಟ್ಟ ಗುಡಿಸಲು. ಮಕನಾನಗೆ ಮೂವರು ಮಕ್ಕಳು. ಇವರಲ್ಲಿ ನರಮಾ ಒಬ್ಬಳು. ಈ ಹುಡುಗಿ ಸುಂದರಿ, ನೋಡಲು ಮಾತ್ರವಲ್ಲ, ಮಾನಸಿಕವಾಗಿ ಸುಂದರಿ. ಅವಳಿಗೆ ಪ್ರಾಣಿ, ಪಕ್ಷಿ, ಗಿಡಮರ, ಜೀವಿ, ನಿರ್ಜೀವಿಗಳ ಬಗ್ಗೆ ಅಪಾರ ಪ್ರೀತಿ, ಸ್ನೇಹ ಮತ್ತು ಗೌರವ ಭಾವನೆ ಇತ್ತು. ನದಿ-ನಾಲೆಗಳು, ಮರ-ಕಾಡುಗಳು, ಬೆಟ್ಟಗಳು, ಪಕ್ಷಿಗಳು ಎಲ್ಲರೊಂದಿಗೂ ಆತ್ಮೀಯತೆ ಇತ್ತು. ಒಬ್ಬಳೇ ಇರುವಾಗ ಅವಳು ಅವುಗಳೊಂದಿಗೆ ಮಾತನಾಡುತ್ತಿದ್ದಳು. ಅವುಗಳೂ ಅವಳೊಂದಿಗೆ ಮಾತಾಡುತ್ತವೆ ಎಂದು ಅವಳು ಭಾವಿಸಿದ್ದಳು. ನರಮಾಳ ಈ ಸ್ನೇಹ ಮತ್ತು ಪ್ರೀತಿಯ ಕಾರಣದಿಂದಾಗಿಯೇ ಮಕನಾನ ಮನೆಯ ಅಂಗಳದಲ್ಲಿ ಎಲ್ಲೆಲ್ಲೂ ಹಸಿರು ತುಂಬಿತ್ತು. 
      ಇಂತಹ ಪರಿಸರ ಪ್ರೇಮಿಯ ಕಥೆ ಈ ಪುಸ್ತಕದಲ್ಲಿ ಇದೆ. ಅವಳ ಪರಿಸರ ಪ್ರೀತಿಯನ್ನು ಅವಳು ಹೇಗೆ ತಾನು ಓದುವ ಶಾಲೆ, ಕಾಲೇಜಿನಲ್ಲಿ, ತನ್ನ ಊರಿನಲ್ಲಿ ಬೆಳೆಸಿದಳು, ನಾವೂ ಇಂತಹುದು ಮಾಡಲು ಸಾಧ್ಯವೇ ಎಂದು ತಿಳಿದುಕೊಳ್ಳಲು ಪುಸ್ತಕ ಓದಿ. 
ಲೇಖಕರು: ರಾಮಶಂಕರ್ ಚಂಚಲ್ 
ಅನುವಾದ: ತಿಪ್ಪೇಸ್ವಾಮಿ
ಚಿತ್ರಗಳು: ದೀಪಕ್ ಕುಮಾರ್ ದಾಸ್ 
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ ( ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718) 
ಬೆಲೆ: ರೂ.25
5ನೇ, 6ನೇ ತರಗತಿಯವರು ಓದಿಕೊಳ್ಳಬಹುದು.  
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article