-->
ವಿದ್ಯಾರ್ಥಿಗಳ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 ರ ಪ್ರಶಸ್ತಿ ವಿಜೇತರು

ವಿದ್ಯಾರ್ಥಿಗಳ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 ರ ಪ್ರಶಸ್ತಿ ವಿಜೇತರು

ವಿದ್ಯಾರ್ಥಿಗಳ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 ರ ಪ್ರಶಸ್ತಿ ವಿಜೇತರು 

ಮಕ್ಕಳ ಜಗಲಿ ಕವನ ಸಿರಿ ಪ್ರಶಸ್ತಿ - 2023
ಮತ್ತು 
ಮಕ್ಕಳ ಜಗಲಿ ಕಥಾ ಸಿರಿ ಪ್ರಶಸ್ತಿ - 2023
ಪ್ರಶಸ್ತಿ ಪಡೆದ ಹಾಗೂ ಮೆಚ್ಚುಗೆ ಬಹುಮಾನ ಗಳಿಸಿದ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ...


     ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು.....ನಾನು ಪ್ರಿಯ... ಮಕ್ಕಳ ಜಗಲಿಯ ಬಗ್ಗೆ ನನ್ನ ಒಂದೆರಡು ಅನಿಸಿಕೆಗಳನ್ನು ಹೇಳಲು ಇಚ್ಚಿಸುತ್ತೇನೆ....
      'ಮಕ್ಕಳ ಜಗಲಿ' ಇದು ಮಕ್ಕಳ ಪ್ರತಿಭೆಯ ಅನಾವರಣಕ್ಕಾಗಿ ಇರುವ ಮಕ್ಕಳ ಕಲಾ ವೇದಿಕೆ...... ಜಗಲಿಯು ಮಕ್ಕಳ ಪ್ರತಿಭೆಯನ್ನು ಬಿತ್ತರಿಸುವಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿದೆ. ಇದು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಮಾತ್ರವಲ್ಲದೆ ಮಕ್ಕಳ ಜ್ಞಾನ ವಿಕಸನಕ್ಕೂ ಸ್ಪೂರ್ತಿದಾಯಕವಾಗಿದೆ. ಮಕ್ಕಳ ಜ್ಞಾನಾಭಿವೃದ್ಧಿಗೆ ಅತ್ಯುತ್ತಮ ವೇದಿಕೆಯಾಗಿದೆ.
ಇಲ್ಲಿ ಅಕ್ಕನಪತ್ರ, ಪದದಂಗಳ, ಪ್ರೀತಿಯ ಪುಸ್ತಕ, ಹೃದಯದ ಮಾತು, ಜೀವನ ಸಂಭ್ರಮ, ಹಕ್ಕಿ ಕಥೆ, ಸ್ಫೂರ್ತಿಯ ಮಾತುಗಳು, ನಿಷ್ಪಾಪಿ ಸಸ್ಯಗಳು, ಬದಲಾಗೋಣವೆ ಪ್ಲೀಸ್, ಜಗಲಿ ಕಟ್ಟೆ, ಸಂಚಾರಿಯ ಡೈರಿ ಅನುಭವಗಳು, ಆರ್ಟ್ ಗ್ಯಾಲರಿ, ಮಕ್ಕಳಿಗಾಗಿ ವಿಜ್ಞಾನ, ಶಿಕ್ಷಕರ ಡೈರಿ ಅನುಭವಗಳು ಹೀಗೆ ಹತ್ತು ಹಲವಾರು ಹೊಸ ವಿಚಾರಗಳನ್ನು ಹೊತ್ತು ತರುವ ಸಂಚಿಕೆಗಳಿಂದ ಸಕಾರಾತ್ಮಕ ಹಾಗೂ ಕ್ರಿಯಾಶೀಲತೆಯೆಡೆಗೆ ಮಕ್ಕಳ ಮನ ಅರಳುತ್ತದೆ... 
    ಮಕ್ಕಳ ಜಗಲಿಯು ಮನೆ ಮನ ಗೆದ್ದಿದೆ.... ಮಕ್ಕಳ ಜಗಲಿಯಲ್ಲಿ ನಾನು ಭಾಗಿಯಾಗಿರುವುದು ನನಗೆ ಹೆಮ್ಮೆಯ ವಿಚಾರ. ಪ್ರತೀ ವರ್ಷದಂತೆ ಮೂರನೇ ವರ್ಷದ ಸಂಭ್ರಮದಲ್ಲಿ ಜಗಲಿಯು ಆಯೋಜಿಸಿದ್ದ ರಾಜ್ಯ ಮಟ್ಟದ ಕವನಸಿರಿ ಹಾಗೂ ಕಥಾ ಸಿರಿ ಎಂಬ ಅತ್ಯುತ್ತಮವಾದ ಸ್ಪರ್ಧೆಗಳನ್ನು ಏರ್ಪಡಿಸಿದ್ದಕ್ಕಾಗಿ ಮೊದಲನೆಯದಾಗಿ ಜಗಲಿಯ ಎಲ್ಲಾ ಗಣ್ಯರಿಗೂ ವಂದನೆಗಳನ್ನು ತಿಳಿಸುತ್ತೇನೆ...
      ಕಥಾ ಸ್ಪರ್ಧೆಯಲ್ಲಿ ನನ್ನ ಕಥಾ ಬರಹವನ್ನು 'ಕಥಾ ಸಿರಿ ಪ್ರಶಸ್ತಿ' ಗೆ ಆಯ್ಕೆ ಮಾಡಿದ ಜಗಲಿಯ ಎಲ್ಲಾ ನಲ್ಮೆಯ ಮನಸುಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು........
      ಮಕ್ಕಳ ಜಗಲಿಯಲ್ಲಿ ಮತ್ತಷ್ಟು ಹೊಸ ಹೊಸ ಸಂಚಿಕೆಗಳು ಪ್ರಕಟವಾಗಲಿ. ಜಗಲಿಯು ಮತ್ತಷ್ಟು ಮನಗಳನ್ನು ಮುಟ್ಟುವಲ್ಲಿ ಯಶಸ್ವಿಯಾಗಲಿ... ಎಂದು ಆಶಿಸುತ್ತೇನೆ. ಮಕ್ಕಳ ಜಲಿಯಲ್ಲಿ ಕೊನೆಯ ಭಾಗವಹಿಸುವಿಕೆ ಎಂದು ಹೇಳಲು ಬೇಸರವಾಗುತ್ತದೆ. ಅನೇಕ ಮಕ್ಕಳ ಪ್ರತಿಭೆಗೆ ಕಾರಣೀಭೂತರಾದ ಮಕ್ಕಳ ಜಗಲಿ, ಜಗಲಿಯ ಬಳಗ ಹಾಗೂ ಜಗಲಿಯ ರೂವಾರಿಗಳನ್ನು ದೇವರು ಹಸನ್ಮುಖಿಯರನ್ನಾಗಿಸಲಿ ಎಂದು ಪ್ರಾರ್ಥಿಸುತ್ತೇನೆ. ಮಕ್ಕಳ ಜಗಲಿಯ ಕೀರ್ತಿಯು ಉತ್ತುಂಗಕ್ಕೇರಲಿ..... ಎಂದು ಹೇಳುತ್ತಾ....
ವಂದನೆಗಳೊಂದಿಗೆ.....
....................................................... ಪ್ರಿಯ
ದ್ವಿತೀಯ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


     ಮಕ್ಕಳ ಜಗಲಿಯ ನನ್ನ ಎಲ್ಲಾ ಬಂಧು ಬಳಗದವರಿಗೆ ತುಂಬು ಹೃದಯದ ಧನ್ಯವಾದಗಳು. ನಾನು ಸಾತ್ವಿಕ್ ಗಣೇಶ್
        ತಾರಾನಾಥ್ ಕೈರಂಗಳ ಸರ್ ರವರು ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಗೆ ಸ್ವರಚಿತವಾಗಿ ಬರೆದು ಕಳುಹಿಸಲು ಮಾಹಿತಿಯನ್ನು ಹಾಕಿದ್ದರು. ಮತ್ತು ನಮಗೆಲ್ಲಾ ಇದರ ಬಗ್ಗೆ ಪುನಃ ಪುನಃ ನೆನಪಿಸುವಂತೆ ಮಕ್ಕಳ ಜಗಲಿಯಲ್ಲಿ ಹಾಕುತ್ತಿದ್ದರು. ಆಗ ಅಮ್ಮನು, "ನೀನು ರಜೆಯಲ್ಲಿ ಕುಳಿತಿರುವಾಗ ಯೋಚಿಸಿ ಯೋಚಿಸಿ ಬರೆಯಲು ಪ್ರಯತ್ನಿಸು ನಿನ್ನಿಂದ ಸಾಧ್ಯವಾಗುತ್ತದೆ. ನೀನು ಬರೆದು ಕಳುಹಿಸು" ಎಂದು ಅಮ್ಮ ಹೇಳಿದರು. ಆಗ ನಾನು ನನ್ನ ಮನಸ್ಸಿನಲ್ಲಿ ಬಂದ ವಿಷಯವನ್ನು ಹಾಗೆಯೇ ಬರೆದು ಕಳುಹಿಸಿದೆನು. ನಾನು ಬರೆದ ಕಥೆಗೆ ಪ್ರಶಸ್ತಿ ಬಂದಿದೆ ಎಂದು ಸರ್ ತಿಳಿಸಿದಾಗ ನನಗೆ ತುಂಬಾ ಸಂತಸವಾಯಿತು. ನನಗೆ ಖಂಡಿತಾ ಇದು ದೀಪಾವಳಿ ಹಬ್ಬಕ್ಕೆ ದೇವರು ಕೊಟ್ಟ ಉಡುಗೊರೆ ಎಂದು ಸಂತೋಷ ಪಟ್ಟೆನು. ಮೊದಲಿಗೆ ಹೋಗಿ ದೇವರಿಗೆ ಕೈಮುಗಿದು ನಮಸ್ಕರಿಸಿ ಬಂದೆನು. ಹಾಗೆಯೇ ನನಗೆ ದೊರೆತ ಮೊತ್ತಮೊದಲ ಪ್ರಶಸ್ತಿ ಕೂಡ ಇದಾಗಿದೆ. ಈ ವರುಷದ ನವೆಂಬರ್ ತಿಂಗಳ 14ನೆಯ ತಾರೀಖು ಮತ್ತು ಈ ವರುಷದ ದೀಪಾವಳಿಯು ನನಗೆ ಮರೆಯಲಾಗದ ದಿನವಾಗಿದೆ. ನಮಗೆ ಪ್ರತಿಯೊಂದು ವಿಷಯ ಕಲಿಯಲು ಪ್ರೋತ್ಸಾಹ ಕೊಡುವ ಎಲ್ಲಾ ಗುರುಹಿರಿಯರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.
....................................... ಸಾತ್ವಿಕ್ ಗಣೇಶ್
9ನೆಯ ತರಗತಿ
ಸರಕಾರಿ ಪ್ರೌಢ ಶಾಲೆ ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


     ಮಕ್ಕಳ ಜಗಲಿಯ ಎಲ್ಲರಿಗೂ ನನ್ನ ನಲುಮೆಯ  ನಮಸ್ಕಾರಗಳು. ನನ್ನ ಹೆಸರು ಶರ್ಮಿಳಾ ಕೆ. ಎಸ್. ನಾನು ಮಕ್ಕಳ ಜಗಲಿಯ ಅಭಿಮಾನಿ ಹಾಗೂ  ಮಕ್ಕಳ ಜಗಲಿಯ ಎಲ್ಲಾ ಸಾಹಿತ್ಯಗಳ ರಚನೆಯ ಪಾಲುದಾರಳೂ ಆಗಿರುತ್ತೇನೆ. ಮೊನ್ನೆ ದಿನಾಂಕ 05-10-2023 ರಂದು  ಮೂರನೇ ವರುಷದ ರಾಜ್ಯಮಟ್ಟದ ಕಥಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆಗಾಗಿ ಆಮಂತ್ರಣ ಬಂದಿದ್ದು ದಿನಾಂಕ 14-11-2023 ರಂದು ಫಲಿತಾಂಶ ಬಂದಿರುತ್ತದೆ. ಅದರಲ್ಲಿ ನಾನು ಕೂಡಾ ಭಾಗವಹಿಸಿದ್ದೆ. ನನ್ನ ಕವನ ಮೆಚ್ಚುಗೆ ಪಡೆದ ಕವನ ಎಂಬ ಬಿರುದಿಗೂ ಪಾತ್ರವಾಗಿದೆ. ಅದಕ್ಕೆ ಪಾತ್ರದಾರಿ ನಾನೇ ಆದರೂ ಸೂತ್ರದಾರಿ ನನ್ನ ಎಲ್ಲಾ ಪ್ರಯತ್ನಗಳಿಗೂ ಬೆಂಬಲ ನೀಡುವ ನನ್ನ ತಂದೆ ತಾಯಿ ಮತ್ತು ನನಗೆ ಬೆಂಬಲ ನೀಡುವ ಶಿಕ್ಷಕರು. ನಾನು ಅವರಿಗೆ ಎಂದೆಂದಿಗೂ ಚಿರಋಣಿಯಾಗಿರುವೆ. 
 
ಅವಕಾಶ ದೊರೆತಾಗಲೇ ತಾನೇ ಪ್ರತಿಭೆಗಳ ಅನಾವರಣ...........
ಆಸಕ್ತಿ ಇದ್ದಾಗಲೇ ತಾನೇ
ಸಾಧನೆಗಳ ತೋರಣ...........
ಹಾಗೆ ಬೆಂಬಲವಿದ್ದಲ್ಲಿ ತಾನೇ
ಯಶಸ್ಸಿನ ರಸದೌತಣ........... 

       ಎನ್ನುತ್ತಾ ನನಗೆ ಮಕ್ಕಳ ಜಗಲಿಯ ಪತ್ರಿಕೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ ತಾರಾನಾಥ ಕೈರಂಗಳ ಸರ್ ರವರಿಗೂ ಹಾಗೂ ತುಳಸಿ ಕೈರಂಗಳ ಮೇಡಂ ರವರಿಗೂ ಹಾಗೂ ರಾಜ್ಯಮಟ್ಟದ ಕವನ ಸ್ಪರ್ಧೆಯ ತೀರ್ಪುಗಾರರಾದ ದಿನೇಶ್ ಹೊಳ್ಳ ಸರ್ ರವರಿಗೂ ಭಾಸ್ಕರ ಅಡ್ವಾಳ್ ಸರ್ ರವರಿಗೂ ಹಾಗೂ ಚಂದ್ರಶೇಖರ ಪಾತೂರು ಸರ್ ರವರಿಗೂ ನನ್ನ ಅನಂತ ಕೋಟಿ ನಮನಗಳು. 
ಹಾಗೆಯೇ,  
ಹೇಳಿದಷ್ಟು ಸಾಲದೇ ಹೇಳಬೇಕು ಎನ್ನುವ ಹೆಸರು..........
ತನ್ನ ಮಕ್ಕಳ ಸಾಧನೆ ನೋಡಿ ನಲಿವ ಉಸಿರು.......... ಈ ಹೆಸರು. 
      ನನಗೂ ಕೂಡ ಆದರ್ಶವಾಗಿ ನನ್ನಲ್ಲಿ ತನ್ನ ಸಾಧನೆಯಿಂದ ಸಾಹಿತ್ಯದ ಬೀಜ ಬಿತ್ತನೆ ಮಾಡಿದ ನನ್ನ ಪ್ರೀತಿಯ ಗುರು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನರೇಂದ್ರ ಕುಮಾರ್ ಕೋಟ ಸರ್ ಅವರಿಗೆ ನನ್ನ ಅಭಿನಂದನೆಗಳು. 
     ಇನ್ನು ಅದೆಷ್ಟೋ ಎಣಿಸಲಾರದಷ್ಟು  ಪ್ರತಿಭೆಗಳಿಗೆ ವೇದಿಕೆಯಾಗಲಿ ನನ್ನ ಬಾಳಿಗೆ ಗೆಳತಿಯಂತಿರುವ, ಬಿಡುವಾದಾಗ ಕಥೆ ಕವನ ಬರೆವ ಮನಸು ನೀಡುವ, ಮಕ್ಕಳ ಜಗಲಿಯು.......!!
     ಮಕ್ಕಳ ಮನಸ್ಸಿನ ಮುದ್ದಿನ ಲಾಲಿ..... ಪ್ರತಿಭೆಗಳಿಗೆ ವೇದಿಕೆಯಾಗಲಿ.....
ಕತೆ ಕವಿತೆ ರಚಿಸುತ 
ಹಾಡುತ ನಲಿ ಕಲಿ 
ಏಕೆಂದರೆ ಇದು ನಮ್ಮ ಮಕ್ಕಳ ಜಗಲಿ.....!
....................................... ಶರ್ಮಿಳಾ ಕೆ ಎಸ್         9ನೇ ತರಗತಿ                       
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ, 
ಉಡುಪಿ ತಾಲೂಕು, ಉಡುಪಿ ಜಿಲ್ಲೆ
******************************************
     ನಾನು ಶ್ರುತಿಕಾ.... ಮಕ್ಕಳ ಜಗಲಿಯು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಕವನಸಿರಿ ಪ್ರಶಸ್ತಿ ನನಗೆ ಲಭಿಸಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ. ಕಥಾ ಸ್ಪರ್ಧೆಯಲ್ಲಿ ನನ್ನ ಕಥೆ ಮೆಚ್ಚುಗೆ ಗಳಿಸಿದೆ ಎನ್ನುವುದಕ್ಕೆ ಬಹಳ ಖುಷಿಯಾಗುತ್ತಿದೆ. ಎಲ್ಲಾ ಮಕ್ಕಳಿಗೂ ಆನ್ಲೈನ್ ಮೂಲಕ ಸಾಹಿತ್ಯ ಪ್ರೇಮವನ್ನು ಬೆಳೆಸಿ, ಎಲ್ಲಾ ರೀತಿಯ ಕಲೆಗಳಿಗೂ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವ ಮಕ್ಕಳ ಜಗಲಿ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಅವರಲ್ಲಿ ಉತ್ಸಾಹ ತುಂಬುತ್ತಿದೆ. ಅನೇಕ ಲೇಖಕರ ಲೇಖನಗಳನ್ನು ಪ್ರಕಟಿಸಿ ಮಕ್ಕಳಲ್ಲಿ ಜಾಗೃತಿಯ ಮನಸ್ಸನ್ನು ಮೂಡಿಸುತ್ತಿದೆ. ಮಕ್ಕಳು ಬರೆದ ಸಾಹಿತ್ಯವನ್ನು, ಬಿಡಿಸಿದ ಚಿತ್ರಗಳನ್ನು ಇದರಲ್ಲಿ ಪ್ರಕಟಿಸಲು ಅವಕಾಶವಿದೆ. ಮಕ್ಕಳ ಜಗಲಿಯೆಂಬ ಆನ್ಲೈನ್ ಬಳಗಕ್ಕೆ ನಾನೂ ಸದಸ್ಯೆ ಎನ್ನುವುದಕ್ಕೆ ನನಗೆ ಹೆಮ್ಮೆ ಇದೆ. ನನಗೆ ಕವನ ಸ್ಪರ್ಧೆಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಮಕ್ಕಳ ಜಗಲಿಗೆ ನನ್ನ ಧನ್ಯವಾದಗಳು. ಹಲವಾರು ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳನ್ನು ಕೊಟ್ಟಿದ್ದೀರಿ, ಇನ್ನೂ ಕೊಡುತ್ತೀರಿ ಹಾಗೂ ನನ್ನ ಸಾಹಿತ್ಯಾಸಕ್ತಿಗೆ ನೀರೆರೆಯುತ್ತಿರಿ ಎಂದು ಆಶಿಸುತ್ತೇನೆ.... ಧನ್ಯವಾದಗಳು.
................................................... ಶ್ರುತಿಕಾ      7ನೇ ತರಗತಿ.                                 
ದ.ಕ.ಜಿ.ಪಂ. ಹಿ. ಪ್ರಾ. ಶಾಲೆ ಓಜಾಲ. 
ಬಂಟ್ವಾಳ ತಾಲೂಕು, ದಕ್ಷಿಣಕನ್ನಡ ಜಿಲ್ಲೆ                       ******************************************


     ನಾನು ದೀಕ್ಷಾ ಪಾಂಡಿಗಾಯ..... ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆಯಲ್ಲಿ ನಾನು ಮೊದಲ ಬಾರಿಗೆ ಭಾಗವಸಿದ್ದೇನೆ. ಹಾಗೂ ಮೊದಲ ಬಾರಿ ಭಾಗವಹಿಸಿ ಮೆಚ್ಚುಗೆ ಪ್ರಶಸ್ತಿ ಪಡೆದಿದ್ದೇನೆ. ಅದು ನನಗೆ ತುಂಬಾ ಸಂತೋಷದ ವಿಷಯ.
      ನಾನು 6ನೇ ತರಗತಿಯಲ್ಲಿರುವಾಗ ಶಾಲೆಯಲ್ಲಿ ಮೊದಲ ಬಾರಿಗೆ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಬಂದಿತ್ತು. ಆ ಕಾರಣದಿಂದದಾಗಿ ಇನ್ನು ಕೂಡ ಆಸಕ್ತಿ ಹೆಚ್ಚಾಯಿತು. ಅವತ್ತಿನಿಂದ ಇವತ್ತಿನವರೆಗೆ ಆ ಆಸಕ್ತಿ ಕಡಿಮೆಯಾಗಲಿಲ್ಲ. ಇವತ್ತಿನವರೆಗೂ ನನ್ನ ಜೀವನದ ಕಹಿ ಸಿಹಿ ಘಟನೆಗಳು ಎಲ್ಲವನ್ನು ಕಥೆ ರೂಪದಲ್ಲಿ ಬರೆಯುತ್ತಿದ್ದೇನೆ. ಹಾಗೂ ನಾನು ಯಾವ ರೀತಿಯ ಕಥೆ ಕವನ ಬರೆಯುತ್ತೇನೋ ಅದಕ್ಕೆಲ್ಲ ಸ್ಫೂರ್ತಿ ನನ್ನಮ್ಮ..... ಯಾಕೆಂದರೆ ನಾನು ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹ ಕೊಟ್ಟದ್ದೇ ಅಮ್ಮ.... ಹಾಗೂ ಈ ಸ್ಪರ್ಧೆಯಲ್ಲಿ ಶಾಲಾ ಮುಖ್ಯಪಾದ್ಯಾರರ ಸಹಿ ಕೂಡಾ ಬೇಕಾಗಿತ್ತು, ಅದರಿಂದಾಗಿ ಮುಖ್ಯೋಪಾಧ್ಯಾಯರಿಗೂ ನನ್ನಲ್ಲಿರುವ ಕಲೆ ಕೂಡ ಗೊತ್ತಾಯ್ತು. ಅದಕ್ಕೆಲ್ಲ ಕಾರಣ ಈ ಸ್ಪರ್ಧೆ... ಇನ್ನು ಕೂಡ ಬೆಳೆಯಲಿ ಹಾಗೂ ಮಕ್ಕಳಾದ ನಾವು ಕೂಡ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತೇವೆ ಹಾಗೂ ನಾನು ಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತೇನೆ. ಕೊನೆಗೆ ಹೇಳುವುದಾದರೆ ಈ ಸ್ಪರ್ಧೆ ಅತ್ಯುತ್ತಮವಾಗಿದೆ. ಮಕ್ಕಳಾದ ನಮಗೆ ನಮ್ಮ ಪ್ರತಿಭೆಯನ್ನು ಎತ್ತಿ ಹಿಡಿಯಲು ಒಂದು ಅವಕಾಶವಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಒಳ್ಳೆಯ ರೀತಿಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಹಾಗೂ ಇಂತಹ ಸ್ಪರ್ಧೆಯನ್ನು ಇನ್ನೂ ಕೂಡ ಆಯೋಜಿಸಿ ಎಂದು ಹೇಳಿ ನನ್ನೆರೆಡು ಅನಿಸಿಕೆ ಮಾತುಗಳನ್ನು ಕೊನೆಗೂಳಿಸುತ್ತಿದ್ದೇನೆ.......... ಧನ್ಯವಾದಗಳು.......
................................................... ದೀಕ್ಷಾ
ಪಾಂಡಿಗಾಯ (ಅಡ್ಕಸ್ಥಳ )
ಎಸ್ ಎಸ್ ಹೆಚ್ ಎಸ್ ಶಾಲೆ ಕಾಟುಕುಕ್ಕೆ
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
******************************************


      ನನ್ನ ಹೆಸರು ದಿಯಾ.... 2023-24 ನೇ ಸಾಲಿನ ಕವನಸಿರಿ ಪ್ರಶಸ್ತಿ 5ರಿಂದ 8ನೇ ತರಗತಿ ವಿಭಾಗದಲ್ಲಿ ನನಗೆ ಸಿಕ್ಕಿರುವುದು ನನಗೆ ವಿಪರೀತ ಆನಂದವನ್ನು ನೀಡಿದೆ. ತುಂಬಾ ಜನರ ಅಭಿನಂದನೆಗಳು ನನಗೆ ಇನ್ನೂ ಕವನಗಳನ್ನು ಬರೆಯಲು ಸ್ಪೂರ್ತಿ ನೀಡಿದೆ. ಶಾಲೆಗೆ ನಡೆದುಕೊಂಡು ಹೋಗುವಾಗ ರಸ್ತೆಯಲ್ಲಿ ನಾಯಿ, ಬೆಕ್ಕಿನ ಮರಿಗಳನ್ನು ತಂದು ಬಿಡುವುದು, ಅವು ವಾಹನಗಳ ಅಡಿಗೆ ಸಿಕ್ಕಿ ಸಾಯುವುದು, ಹಾಗೆಯೇ ಬಣ್ಣ ಬಣ್ಣದ ಹೂವುಗಳಲ್ಲಿ ಹಾರಾಡುವ ಅಂದದ ಚಿಟ್ಟೆಗಳು ನಮಗೆ ಯಾವಾಗಲೂ ಖುಷಿ ಕೊಡುವ ಇವು ಸತ್ತಾಗ ಯಾರೂ ಗಮನಿಸದೆ ಇರುವುದು ನನಗೆ ಬಹಳ ಬೇಸರ ತಂದ ವಿಷಯ. ಇದರ ಮೇಲೆ ನಾನು ಕವನ ಬರೆದೆ. ಶಾಲೆಯಲ್ಲಿ ಪ್ರತಿಭಾ ಕಾರಂಜಿಯ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಓದಿದ ಹಿರಿಯ ಕವಿಗಳ ಕವನ, ಹಲವಾರು ಜಿಲ್ಲಾ, ರಾಜ್ಯ, ಅಂತರ ರಾಜ್ಯ ಮಟ್ಟದಲ್ಲಿ ವಿವಿಧ ಕವಿಗೋಷ್ಠಿಗಳಲ್ಲಿ ಭಾಗವಹಿಸಿದಾಗ ಕೇಳಿದ, ಹಾಗೂ ಓದಿದ ವಿವಿಧ ಕವಿಗಳ ಉತ್ತಮ ಕವನಗಳು ನನ್ನ ಈ ಕವನಕ್ಕೆ ಸಹಾಯ ಮಾಡಿದವು. ಈ ರೀತಿಯ ಸ್ಪರ್ಧೆಯನ್ನು ಆಯೋಜಿಸಿ ನಮಗೆ ಅವಕಾಶ ಕೊಟ್ಟ ಮಕ್ಕಳ ಜಗಲಿಯ ಸಂಪಾದಕರು ಹಾಗೂ ಪತ್ರಿಕಾ ಬಳಗಕ್ಕೆ, ನನ್ನ ಹವ್ಯಾಸಗಳಿಗೆ ನೀರೆರೆದು ಪೋಷಿಸಿದ ನನ್ನನ್ನು ಪ್ರತಿ ಕ್ಷಣ ಪ್ರೋತ್ಸಾಹಿಸುವ ನನ್ನ ಅಮ್ಮನಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಜೊತೆ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ, ಬಹುಮಾನ ಪಡೆದ ಇತರ ವಿದ್ಯಾರ್ಥಿಗಳಿಗೂ ಅಭಿನಂದನೆಗಳು..
............................ ದಿಯಾ ಉದಯ್ ಡಿ ಯು
5ನೇ ತರಗತಿ
ಶ್ರೀ ವ್ಯಾಸಮಹರ್ಷಿ ವಿದ್ಯಾ ಪೀಠ, ಕಿಲ್ಪಾಡಿ,
ಮೂಲ್ಕಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************ಎಲ್ಲರಿಗೂ ನಮಸ್ಕಾರ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಸರ್ಕಾರಿ ಪ್ರೌಢಶಾಲೆಯ ಪ್ರಾಥಮಿಕ ವಿಭಾಗದ 6ನೇ ತರಗತಿಯಲ್ಲಿ ಓದುತ್ತಿರುವ ಯಶಸ್ವಿ...
       "ಮಕ್ಕಳ ಜಗಲಿ ಬಳಗ" ಹಮ್ಮಿಕೊಂಡಿದ್ದ "ಕಥಾ ಸಿರಿ ಪ್ರಶಸ್ತಿ - 2023" ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪುರಸ್ಕೃತಳಾಗಿದ್ದೇನೆ.... ನನ್ನಲ್ಲಿದ್ದ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದ ಮಕ್ಕಳ ಜಗಲಿ ಬಳಗಕ್ಕೆ ದನ್ಯವಾದಗಳು... ಇನ್ನು ಮುಂದೆ ಕೂಡ ಇಂತಹ ಅವಕಾಶವನ್ನು ಬೆಳೆಯುತ್ತಿರುವ ಪ್ರತಿಭೆಗಳಿಗೆ ಮಾಡಿಕೊಡಿ ಎಂದು ವಿನಂತಿಸುತ್ತಾ, ವಂದನೆಗಳು..
.................................................. ಯಶಸ್ವಿ
6ನೇ ತರಗತಿ
ಸರಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ), ವಿಟ್ಲ
ಪ್ರಾಥಮಿಕ ಶಾಲಾ ವಿಭಾಗ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


   ಎಲ್ಲರಿಗೂ ನಮಸ್ತೇ.. ನಾನು ನಿಮ್ಮೆಲ್ಲರ ಮನೆ ಮಗಳು, ಜಗಲಿಯ ಬರಹಗಾರ್ತಿ ಶೌರ್ಯ ಎಸ್ ವಿ ಚಿಕ್ಕಮಗಳೂರು....
      ಮಕ್ಕಳ ಜಗಲಿ ಎಂದರೆ ಬರೀ ಒಂದು ತಂಡ ಅಲ್ಲ. ಅದೊಂದು ವಿವಿಧ ರಾಜ್ಯಗಳ ಮಕ್ಕಳನ್ನು ಆಕಾಶದೆತ್ತರಕ್ಕೆ ಮುಟ್ಟಿಸುವ ಪರಿವಾರ. ಮಕ್ಕಳ ಜಗಲಿಯ ತಾರಾನಾಥ್ ಕೈರಂಗಳ ಸರ್ ಹಾಗೂ ತುಳಸಿ ಕೈರಂಗಳ ಮೇಡಂನವರು ಮಕ್ಕಳ ಜ್ಞಾನವನ್ನು ಹೆಚ್ಚಿಸಲು ಇದೀಗ ಮೂರನೇ ವರ್ಷದ ಮಕ್ಕಳ ರಾಜ್ಯ ಮಟ್ಟದ ಕಥೆ ಹಾಗೂ ಕವನ ಸ್ಪರ್ಧೆಯನ್ನು ಆಯೋಜಿಸಿದ್ದರು. ಇದಂತೂ ರಾಜ್ಯದ ಎಲ್ಲಾ ಮಕ್ಕಳಿಗೂ ತುಂಬಾ ಖುಷಿಯನ್ನು ತಂದಿದೆ. ನನಗಂತೂ ತುಂಬಾ ಖುಷಿಯಾಗಿದೆ. ನನ್ನ ಕಥೆ ಹಾಗೂ ಕವನಕ್ಕೆ ಮೆಚ್ಚುಗೆ ಬಹುಮಾನ ಬಂದದ್ದು ಅಂತೂ ತುಂಬಾ ಖುಷಿಕೊಟ್ಟಿದೆ. ನನ್ನ ಕಥಾ ಬರವಣಿಗೆ ಅಂತೂ ಮೊದಲ ಪ್ರಯತ್ನ ಅದರ ಶೀರ್ಷಿಕೆ 'ಬುದ್ದಿವಂತಿಕೆಯ ಸಿರಿತನ' ವಾಗಿತ್ತು. ಕವನದ ಶೀರ್ಷಿಕೆ 'ಅಮ್ಮ' ಎಂಬುದು.. ಈ ಎರಡು ಸ್ಪರ್ಧೆಯಲ್ಲೂ ಮೆಚ್ಚುಗೆ ಬಹುಮಾನ ಬಂದಿದೆ. ನನ್ನ ಈ ಸಣ್ಣ ಪ್ರಯತ್ನಕ್ಕೆ ಮಕ್ಕಳ ಜಗಲಿ ಹಾಗೂ ನನ್ನ ತಾಯಿ, ನನ್ನ ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ತುಂಬಾ ಪ್ರೋತ್ಸಾಹ ನೀಡಿದ್ದಾರೆ. ಪ್ರೋತ್ಸಾಹ ಒಂದಿದ್ದರೆ ಎಲ್ಲವೂ ಸಾಧ್ಯ. ಯಾವುದು ನಮ್ಮಲ್ಲಿ ಅಸಾಧ್ಯವೋ ಅದು ಕೂಡ ಪ್ರೋತ್ಸಾಹ, ನಂಬಿಕೆಯಿಂದ ಮಾಡಿದರೆ ಅದು ಖಂಡಿತಾ ಸಾಧ್ಯ. ಜಗಲಿಯ ತಾರಾನಾಥ್ ಸರ್ ಹಾಗೂ ತುಳಸಿ ಮೇಡಂ ಗೆ ತುಂಬು ಹೃದಯದ ಧನ್ಯವಾದಗಳು. ಇನ್ನೂ ಹೆಚ್ಚೆಚ್ಚು ಸ್ಪರ್ಧೆಯನ್ನು ಏರ್ಪಡಿಸುವಂತಾಗಲಿ ಸರ್.. ಜಗಲಿ ಎಂಬ ಪರಿವಾರದಲ್ಲಿ ನಾವೆಲ್ಲ ಎಂದಿಗೂ ಇರುತ್ತೇವೆ ಸರ್..
................................... ಶೌರ್ಯ ಎಸ್ ವಿ
9ನೇ ತರಗತಿ 
ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************    ನಾನು ಭೂಮಿಕಾ.... ಮೊದಲನೆಯದಾಗಿ ಮಕ್ಕಳ ಜಗಲಿಯಲ್ಲಿರುವವರಿಗೆ ನನ್ನ ಧನ್ಯವಾದಗಳು. ನನಗೆ ಮಕ್ಕಳ ಜಗಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬಾ ಸಂತೋಷವಾಗಿದೆ. ಈ ಕಾರ್ಯಕ್ರಮವು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸಹಾಯಕವಾಗುತ್ತದೆ. ಇದರಲ್ಲಿ ಎಷ್ಟೋ ಜನ ಮಕ್ಕಳು ಅವರವರ ಪ್ರತಿಭೆಯನ್ನು ತೋರಿಸಿರುತ್ತಾರೆ. ನನಗೂ ಕಥೆ ಬರೆಯುವುದು ಎಂದರೆ ತುಂಬಾ ಖುಷಿ. ನಾನು ಸಹ ಈ ಮಕ್ಕಳ ಜಗಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತೇನೆ. ನನಗೆ ಪ್ರಗತಿಯವರು ಬರೆದಿರುವಂತಹ ಬಂಗಾರದ ಗಂಡು ಎಂಬ ಪುಸ್ತಕವನ್ನು ನೀಡಿದ್ದಾರೆ. ಇವರು 9ನೇ ತರಗತಿಯಲ್ಲಿರುವಾಗ ಬರೆದ ಪುಸ್ತಕವದು. ನನಗೂ ಕೂಡ ಇಂತಹ ಒಂದು ಪುಟ್ಟ ಪುಟ್ಟ ಕಥೆಗಳನ್ನು ಒಳಗೊಂಡ ಪುಸ್ತಕವನ್ನು ರಚಿಸಬೇಕೆಂಬ ಹಂಬಲ. ನನಗೆ ಈ ಪುಸ್ತಕವನ್ನು ತಂದು ಕೊಟ್ಟವರಿಗೆ ನನ್ನ ಕೃತಜ್ಞತೆಗಳು...
.................................................. ಭೂಮಿಕ 
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು, ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************


      ನಮಸ್ತೆ... ನಾನು ಶಿಫಾನ.... 2023 ನೇ ಸಾಲಿನ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಪ್ರಶಸ್ತಿಯನ್ನು ಪಡೆದ ಬಗ್ಗೆ ನನ್ನ ಚಿಕ್ಕದೊಂದು ಅನಿಸಿಕೆ... ನನಗೂ ನನ್ನ ತಂದೆ ತಾಯಿಯರಿಗೂ ನನಗೆ ವಿದ್ಯೆ ಕಲಿಸಿದಂತಹ ಶಿಕ್ಷಕರಿಗೂ ತುಂಬಾನೆ ಖುಷಿಯಾಯಿತು. ಮಕ್ಕಳೊಳಗೆ ಅಡಗಿದಂತಹ ಪ್ರತಿಭೆಗಳನ್ನು ಹೊರತರುತ್ತಿರುವ ಮಕ್ಕಳ ಜಗಲಿ ಎಲ್ಲಾ ಕಾರ್ಯಕರ್ತರಿಗೂ ನನ್ನ ಮನದಾಳದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಕ್ಕಳ ಜಗಲಿಯು ಇನ್ನೂ ಉನ್ನತ ಮಟ್ಟಕ್ಕೆ ತಲುಪಲಿ ಎಂದು ಆಶಿಸುತ್ತೇನೆ. ದೇಶದ ಬೆನ್ನೆಲುಬು ರೈತರು ಹೇಗೋ ಹಾಗೆಯೇ ಮಕ್ಕಳ ಜಗಲಿಯ ಬೆನ್ನೆಲುಬು ಆಗಿರುವ ತಾರಾನಾಥ ಕೈರಂಗಳ ಸರ್ ರವರು ಮತ್ತು ನನ್ನ ಪ್ರೀತಿಯ ಆದರ್ಶ ಟೀಚರ್ ತುಳಸಿ ಕೈರಂಗಳ ರವರು ನನ್ನ ಈ ಪ್ರಶಸ್ತಿ ಗೆ ಮೂಲ ಪ್ರೇರಕರು. ಆಶೀರ್ವಾದವಿರಲಿ ಹೀಗೆ ಸದಾ ಮುಂದುವರಿಯಲಿ ಹಿರಿಯರ ಕಿರಿಯರ ಮಕ್ಕಳ ಜಗಲಿಯಲ್ಲಿ ಸಾಧನೆ.... 
................................................ ಶಿಫಾನ
ಪ್ರಥಮ ಪಿಯುಸಿ ವಿಜ್ಞಾನ ವಿಭಾಗ
ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
******************************************


      ಎಲ್ಲರಿಗೂ ನಮಸ್ಕಾರಗಳು... ನಾನು ವಂಶಿ ಬಿ ಆರ್... ನನಗೆ ಮಕ್ಕಳ ಜಗಲಿಯ ಪರಿಚಯವಾದದ್ದು 2ನೇ ವರ್ಷದಲ್ಲಿ.. ಆ ವರ್ಷ ದಲ್ಲಿ ಚಿತ್ರ ಬಿಡಿಸಿ ಮಕ್ಕಳ ಜಗಲಿ ಕಲಾ ಪ್ರಶಸ್ತಿ ದೊರೆಯಿತು. ತುಂಬಾನೇ ಸಂತೋಷವಾಯಿತು. ಈ ವರ್ಷ ಕಥೆ ಹಾಗೂ ಕವನ ವನ್ನು ಮೊದಲ ಸಲ ನಾನೇ ಸ್ವತಃ ರಚಿಸಿ ಕಳಿಸಿದ್ದೆ.... ಇದರಲ್ಲಿ ನಾನು ಬರೆದ ಕಥೆಗೆ ಮೆಚ್ಚುಗೆ ಬಹುಮಾನ ದೊರೆತಿರುವುದು ತುಂಬಾ ಸಂತೋಷದ ವಿಷಯ.... ನನ್ನಲ್ಲಿ ಈ ತರಹ ಪ್ರತಿಭೆಗಳು ಇವೆ ಎಂದು ಮಕ್ಕಳ ಜಗಲಿ ಕಾರ್ಯಕ್ರಮದ ಮೂಲಕ ಗೊತ್ತಾಯಿತು..... ಹೀಗೆ ಹಲವಾರು ಮಕ್ಕಳ ಪ್ರತಿಭೆಗಳನ್ನು ಗುರುತಿಸುವಲ್ಲಿ ಮಕ್ಕಳ ಜಗಲಿ ಬಹುಮುಖ್ಯವಾದ ಪಾತ್ರವನ್ನು ವಹಿಸಿರುತ್ತದೆ... ಇದರ ಆಯೋಜನೆ ಮಾಡಿರುವ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು... 
.......................................... ವಂಶಿ ಬಿ ಆರ್
7ನೇ ತರಗತಿ
ರೋಟರಿ ಹೈಯರ್ ಪ್ರೈಮರಿ ಸ್ಕೂಲ್
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************      ನನ್ನ ಹೆಸರು ಎಂ ಎಸ್ ಪೂಜಾ..
ನಾನು ಈ ವರ್ಷ ಮಕ್ಕಳ ಜಗಲಿಯ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನಾನು ಇದರಲ್ಲಿ ಮೆಚ್ಚುಗೆ ಬಹುಮಾನವನ್ನು ಪಡೆದಿದ್ದೇನೆ. ನನಗೆ ತುಂಬಾ ಖುಷಿಯಾಯಿತು. ನನ್ನ ಮನೆಯವರಿಗೆ, ಸಂಬಂಧಿಕರಿಗೆ, ಸ್ನೇಹಿತೆಯರಿಗೆ ತುಂಬಾ ಖುಷಿಯಾಗಿದೆ. ನನ್ನ ಗುರುಗಳಿಗೂ ಖುಷಿಯಾಗಿದೆ. ಕಳೆದ ವರ್ಷ ನನಗೆ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಸಿಕ್ಕಿತ್ತು..
ಈ ವರ್ಷವೂ ಭಾಗವಹಿಸಿ ನನಗೆ ತುಂಬಾ ಖುಷಿಯಾಗಿದೆ. ನನ್ನ ತರಗತಿಯ ಸ್ನೇಹಿತೆಯೂ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದಿದ್ದಾಳೆ. ಇನ್ನು ಮುಂದೆಯೂ ನಾನು ಈ ರೀತಿಯಾಗಿ ಭಾಗವಹಿಸುತ್ತೇನೆ. ಭಾಗವಹಿಸಿ ಬಹುಮಾನ ಪಡೆದದ್ದು ನನಗೆ ಬಹಳ ಸಂತೋಷವಾಗಿದೆ.
.................................. ಎಂ ಎಸ್ ಪೂಜಾ..
ದ್ವಿತೀಯ ಪಿಯುಸಿ
ಶ್ರೀರಾಮ ಪದ ಪೂರ್ವ 
ಕಾಲೇಜು ಕಲ್ಲಡ್ಕ, ಹನುಮಾನ್ ನಗರ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


    ನಮಸ್ಕಾರ.... ಈ ಪ್ರಶಸ್ತಿ ಬಂದಿರುವುದರಿಂದ ನನಗೆ ತುಂಬ ಸಂತೋಷವಾಗುತ್ತಿದೆ. ನನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರೋತ್ರಾಹಿಸುತ್ತಿರುವ ಮಕ್ಕಳ ಜಗಲಿಗೆ ಹೃತ್ಪೂರ್ವಕ ಧನ್ಯವಾದಗಳು...
......................................... ಸಮನಾ ಕರಣಂ
7ನೇ ತರಗತಿ
ಜ್ಞಾನೋದಯ ಸ್ಕೂಲ್
ಬೆಂಗಳೂರು
******************************************


    ನಾನು ಪ್ರಿನ್ಸನ್ ಲೋಯ ಡಿ' ಸೋಜಾ.... ನನಗೆ ಮಕ್ಕಳ ಜಗಲಿಯ ಕಥಾ ಹಾಗೂ ಕವನ ಸ್ಪರ್ಧೆ ಮರೆಯಲಾರದಂಥ ಅನುಭವ ಕೊಟ್ಟಿತು. ನನಗೆ 2ನೇ ವರ್ಷದ ಕಥೆ ಹಾಗೂ ಕವನ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿ ನೀನು ಕಥೆ ಬರಿ ಎಂದು ಶಿಕ್ಷಕರು ಪ್ರೋತ್ಸಾಹಿಸಿದರು. ಅದಕ್ಕೆ ನಾನು 5 ಕಥೆಗಳನ್ನು 3 ಕವನವನ್ನು ಬರೆದು ಶಿಕ್ಷಕರಿಗೆ ತೋರಿಸಿದೆ. ಆಗ ಶಿಕ್ಷಕರು ಕಥೆ ಹಾಗೂ ಕವನವನ್ನು ಓದಿ ಅದರಲ್ಲಿ ಒಂದು ಕಥೆಯನ್ನು ಆಯ್ಕೆ ಮಾಡಿ ಕೊಟ್ಟರು. ಅದನ್ನು ನಾನು ಒಂದು ಬಿಳಿ ಹಾಲೆಯಲ್ಲಿ ಬರೆದು ತೋರಿಸಿದೆ. ಶಿಕ್ಷಕರು ಅದನ್ನು ಅಂಚೆ ಮಾಡಲು ತಿಳಿಸಿದರು. ಅದನ್ನು ನಾನು ಅಂಚೆ ಮಾಡಿದೆ. ಅಂಚೆ ಮಾಡಿದ ಕೆಲವು ದಿನಗಳ ನಂತರ ನನಗೆ ಆನ್ಲೈನ್ ಮೂಲಕ ಕಥೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣ ಪತ್ರ ಬಂದಿತು. ಇದನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಹೀಗೆ ಕಥೆ ಹಾಗೂ ಕವನ ಸ್ಪರ್ಧೆಯ ಫಲಿತಾಂಶದ ದಿನ ಮಕ್ಕಳ ಜಗಲಿ ವಾಟ್ಸಾಪ್ ಗ್ರೂಪ್ನಲ್ಲಿ ಫಲಿತಾಂಶದ ಲಿಂಕ್ ಅನ್ನು ತೆರೆದು ನೋಡಿದೆ. ಅದರಲ್ಲಿ ನನಗೆ ಮೆಚ್ಚುಗೆ ಬಹುಮಾನ ಬಂದಿರುವುದು ನೋಡಿ ಬಹಳ ಖುಷಿಯಾಯಿತು. ಮೆಚ್ಚುಗೆ ಬಹುಮಾನ ಬಂದಿರುವುದು ನೋಡಿ ಶಿಕ್ಷಕರು ನನಗೆ ಶಾಲೆಯ ಅಸ್ಸೆಂಬ್ಲಿಯಲ್ಲಿ ಶುಭಾಶಯ ಕೋರಿದರು. ಒಟ್ಟಿನಲ್ಲಿ ಈ ಕಥೆ ಹಾಗೂ ಕವನ ಸ್ಪರ್ಧೆಯಲ್ಲಿ ನಾನು ಭಾಗವಹಿಸುವುದರೊಂದಿಗೆ ನನ್ನ ಸ್ನೇಹಿತರು ಕೂಡ ಕಥೆ ಬರೆಯುವಂತೆ ಪ್ರೇರಣೆಯಾಗಿ ಅವರು ಕಥೆ ಬರೆದು ಕಳುಹಿಸಿದ್ದಾರೆ. ಮಕ್ಕಳ ಜಗಲಿ ನಮ್ಮಂತಹ ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಅವಕಾಶ ನೀಡುತ್ತಿರುವುದು ಇಂದಿನ ಆನ್ಲೈನ್ ಯುಗಕ್ಕೆ ಸರಿಯಾಗಿ ಮೂಡಿ ಬರುತ್ತಿದೆ. ಇನ್ನಷ್ಟು ಕಥೆ ಕವನ, ಕಲಾಕೃತಿಗಳು ಬಾಲ ಪ್ರತಿಭೆಗಳ ಮೂಲಕ ಅನಾವರಣಗೊಳ್ಳಲಿ ಎಂದು ಶುಭ ಹಾರೈಸೋಣ.
...................... ಪ್ರಿನ್ಸನ್ ಲೋಯ್ ಡಿ' ಸೋಜಾ
7ನೇ ತರಗತಿ                                                               
ದ. ಕ. ಜಿ. ಪಂ. ಹಿ. ಪ್ರಾ 
ಶಾಲೆ ಕೊಯಿಲ, ಬಡಗನ್ನೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


       ನಾನು ಜನ್ಯ.... ನಮ್ಮ ಮಕ್ಕಳ ಜಗಲಿಯ ಮೆಚ್ಚುಗೆ ಪ್ರಶಸ್ತಿ 2023... ದೀಪಾವಳಿ ಮತ್ತೆ ಮಕ್ಕಳ ದಿನಾಚರಣೆಯಂದು ಸಿಕ್ಕಿದಕ್ಕೆ ನನಗೆ ಸಂತೋಷವಾಗಿದೆ. ನಾನೊಂದು ಚಿಕ್ಕ ಹೆಜ್ಜೆ ಇಟ್ಟಿದ್ದೇನೆ. ನಿಮ್ಮ ಪ್ರೋತ್ಸಾಹ ಹೀಗೆ ಎಲ್ಲರಿಗೂ ಇರಲಿ. ಮಕ್ಕಳ ಜಗಲಿ ವೃಂದಕ್ಕೆ ನನ್ನ ಕೃತಜ್ಞತೆಗಳು. ನಾನು ನಿಮಗೆ ಚಿರಋಣಿಯಾಗಿದ್ದೇನೆ.
.............................................. ಜನ್ಯ ಕೇಶವ 
8ನೇ ತರಗತಿ 
ಸಂತ ಡೊಮಿನಿಕ್ ಶಾಲೆ 
ಬಡಕಬೈಲ್ ಪೊಳಲಿ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ಪ್ರೀತಿಯ ಗೌರವಗಳೊಂದಿಗೆ,
“ತಾರಾನಾಥ್ ಕೈರಂಗಳ್” ಸರ್
“ಭಾರತಿ ಕೈರಂಗಳ್”
ನಿಮ್ಮ ಅಂಗಳದಿ ಬೆಳೆದ ಮಕ್ಕಳಿಗೆ ನಿಮ್ಮ ಮಮತೆಯ 'ಕೈ' ಜೋಡಿಸಿ ನೀವೇ ಆದಿರಿ “ಕೈರಂಗಳ”, ನಿಮ್ಮ ಬೊಗಸೆಯಲ್ಲಿ ಬೆಳದ ಮಕ್ಕಳಿಗೆ ಅವರ ಪುಟ್ಟ ಬದುಕಿಗೆ “ತಾರಾ” ದೀಪವಾದಿರಿ, ಸ್ಮೃತಿಯಲ್ಲೂ ಗತಿಯಲ್ಲೂ, ಮತಿಯಲ್ಲೂ, ಇತಿಮಿತಿಯಿಲ್ಲದ ತಾಯಿ ಸ್ವರೂಪಿ “ಭಾರತಿ”. ನಲಿನಲಿಯುವ ಚಿಣ್ಣರ ಪ್ರತಿಭಗೆ ಒಲಿಯುವ, ಕಲಿಯುವ “ಮಕ್ಕಳ ಜಗಲಿಗೆ” ಕೇದಗೆ ಹೂವಾದಿರಿ.
ನಿಜಕ್ಕೂ ನಿಮ್ಮದು ಪ್ರೇರಣೀಯ, ಪ್ರೇಕ್ಷಣೀಯ ಅಕ್ಷರಧಾಮ. ಹೀಗೆ ಹಬ್ಬಲಿ, ಜಗವೆಲ್ಲ ಪಸರಿಸಲಿ, ಕನ್ನಡದ “ನಿನಾದ” ವೃದ್ಧಿಸಲಿ ಮಕ್ಕಳ ಜ್ಞಾನ ಭಂಡಾರದ “ನಿಧಿ” 
ಧನ್ಯವಾದಗಳೊಂದಿಗೆ... 
................... ಸುಚಿತ್ರಾ, ರವಿಚಂದ್ರ ಆಚಾರ್ಯ  
ಹಳೆಯಂಗಡಿ
ಇತೀ ಸವಿಯ ಸುತೆ
ರಿಧಿ (ಕಥಾ ಸ್ಪರ್ಧೆಯ ಮೆಚ್ಚುಗೆ ಬಹುಮಾನ ವಿಜೇತೆ)
************************************************Ads on article

Advertise in articles 1

advertising articles 2

Advertise under the article