ಪ್ರೀತಿಯ ಪುಸ್ತಕ : ಸಂಚಿಕೆ - 84
Friday, November 10, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 84
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಅಮ್ಮ, ಅಪ್ಪ ನಮಗಾಗಿ ಏನೇನೋ ಮಾಡುತ್ತಾರೆ, ಪ್ರೀತಿಯಿಂದ. ಕೆಲವೊಮ್ಮೆ ಮಕ್ಕಳಿಗೂ ಅಮ್ಮ ಅಪ್ಪನಿಗಾಗಿ ಏನೋ ಮಾಡಬೇಕು ಅನಿಸುತ್ತದಲ್ಲಾ.. ಅದೊಂದು ಚಂದದ ಭಾವ. ಈ ಪುಸ್ತಕದಲ್ಲಿ ಅಂತಹುದೇ ಒಂದು ಸನ್ನಿವೇಶವನ್ನು ನಾವು ಕಾಣಬಹುದು. ಅಮ್ಮಿ ಅತ್ಯಂತ ಸುಂದರವಾದ ಸೀರೆಗಳನ್ನು ನೇಯುತ್ತಾಳೆ. ಆದರೆ ಯಾವತ್ತೂ ಅವುಗಳಲ್ಲಿ ಒಂದನ್ನೂ ಉಟ್ಟಿರುವುದಿಲ್ಲ. ನೇಯ್ದ ಸೀರೆ ಮಾರಿದರೇನೇ ದುಡ್ಡು ಬರೋದು ಅಲ್ವಾ? ಅವಳ ಇಬ್ಬರು ಪುಟ್ಟ ಮಗಳಂದಿರಿಗೆ, ಒಂದು ಆಸೆ. ತಮ್ಮ ಅಮ್ಮಿಗೂ ಒಂದು ಸೀರೆ ಕೊಡಿಸಬೇಕು ಅಂತ. ಅದಕ್ಕಾಗಿ ಹಣ ಒಟ್ಟುಗೂಡಿಸಬೇಕಲ್ಲಾ! ಹೇಗೆ ಮಾಡುತ್ತಾರೆ ಅಂತ ವಿವರಿಸುವ ಮುದ್ದಾದ ಕಥೆ ಇದು. ಚಿತ್ರಗಳು ಕೂಡಾ ಪ್ರಕಾಶಮಾನ ಬಣ್ಣಗಳಿಂದ ಮನಸೆಳೆಯುವ ಹಾಗೆ ಇದೆ. ನೇಕಾರರ ಮತ್ತು ಹಾಗೆ ದುಡಿಮೆ ಮಾಡುವವರ ಬದುಕಿನ ಒಂದು ಚಿತ್ರಣ ಸಿಗುತ್ತದೆ. ಕೆಲವೊಂದು ವಿಷಯಗಳು ನಮ್ಮ ಮನೆಯೊಳಗೇ ನಡೆಯುವ ಹಾಗೆ ಅನಿಸಿ ತುಂಬಾ ಆಪ್ತವಾಗುತ್ತದೆ.
ಲೇಖಕರು: ಮಮತಾ ನೈನಿ
ಅನುವಾದ: ನಂದಾ ದೇವಿ ಬಿ.ಜಿ
ಚಿತ್ರಗಳು: ಸಂಧ್ಯಾ ಪ್ರಭಾತ್
ಪ್ರಕಾಶಕರು: ತುಲಿಕಾ ಪಬ್ಲಿಷರ್ಸ್
ಬೆಲೆ: ರೂ.175/
5+ ವಯಸ್ಸಿವರಿಗಾಗಿ ಇದೆ. ದೊಡ್ಡ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************