-->
ಕನ್ನಡ ರಾಜ್ಯೋತ್ಸವ - 2023 : ಮಕ್ಕಳ ಕವನಗಳು

ಕನ್ನಡ ರಾಜ್ಯೋತ್ಸವ - 2023 : ಮಕ್ಕಳ ಕವನಗಳು

ಕನ್ನಡ ರಾಜ್ಯೋತ್ಸವ - 2023
ಮಕ್ಕಳ ಜಗಲಿಯಲ್ಲಿ 
ಮಕ್ಕಳ ಕವನಗಳು

      ಸರ್ವ ಕನ್ನಡ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು....              

ಕನ್ನಡ ನುಡಿಯಲ್ಲಿ ಬಿಂಬಿಸುವ 
ಕನ್ನಡಮ್ಮನ ರೂಪ
ಎಲ್ಲರ ಮನಸ್ಸಿನಲ್ಲಿ ಪ್ರಜ್ವಲಿಸಲಿ 
ಕನ್ನಡದ ದೀಪ....

ಗಂಗೆ ತುಂಗೆ ತಲಕಾವೇರಿ 
ಹರಿಯುವ ಪವಿತ್ರ ನಾಡು
ಡಂಕಣ ಜಕಣಾಚಾರ್ಯರು 
ನೆಲೆಸಿದ ಹಿರಿಮೆಯ ಬೀಡು

ಕಲೆ ವಾಸ್ತುಶಿಲ್ಪದ ಮೆರಗನ್ನು ಕಾಣಿಸುವ
ಸಂಪ್ರದಾಯ ಸಂಸ್ಕೃತಿ ಆಚರಿಸುವ
ಸಾಹಿತ್ಯ ಕವಿಗಳ ನಾಡಿದು
ವೀರರು ಹುಟ್ಟಿದ್ದು ಮಣ್ಣಿದು

ಇಂದು ಕನ್ನಡ ರಾಜ್ಯೋತ್ಸವ
ಕನ್ನಡ ನಾಡು ನುಡಿ ಪರಂಪರೆ ಉತ್ಸವ
ನಾಡಿನಲ್ಲಿ ಹರಡಿದೆ ಶ್ರೀಗಂಧದ ವಾಸನೆಯು
ಸದಾ ಧುಮುಕಿ ಹರಿಯುತ್ತಿದೆ ಜಲಧಾರೆಯು

ಕರ್ನಾಟಕ ಕೋಗಿಲೆಗಳ ಸ್ವರ ಇಂಚರ
ಭುವನೇಶ್ವರಿ ಕೇಳುವಳು ಸಂಗೀತದ ಸುಮಧುರ
ಮೊಳಗುತ್ತಿದೆ ಕನ್ನಡದ ತುತ್ತೂರಿ
ಪಸರಿಸಲಿ ಹೀಗೆಯೇ ಕನ್ನಡದ ಕಸ್ತೂರಿ.
............................. ದೀಪಾ ಧ. ಗಿರಿಜನ್ನವರ
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ, 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ
******************************************

             
    ಕನ್ನಡ ಕನ್ನಡ ಎಂದು ಬಾಳುವ
   ಕನ್ನಡಿಗರ ಮನಸು ಧನ್ಯವಾಯಿತು ಇಂದು
   ಕನ್ನಡ ತಾಯಿಯ ಪೂಜೆಯಿಂದ 
   ನಮ್ಮ ಮನ ಭಕ್ತಿಯಿಂದ ತುಂಬಿತು ಇಂದು

   ಎಷ್ಟು ಚಂದ ಈ ಕನ್ನಡ ನೆಲ
   ಅದೆಷ್ಟೋ ಅಂದ ಈ ಕನ್ನಡ ಜಲ
   ಕನ್ನಡ ಸಂಸ್ಕೃತಿಯ ಬೆಳೆಸೋಣ
   ಕನ್ನಡದ ಮಹಿಮೆಯ ನೆನೆಯೋಣ 
   
   ಕಾಯಕವೇ ಕೈಲಾಸ ಎಂಬ ಮಾತು ಸತ್ಯ 
   ಕನ್ನಡವೇ ಎಂಬ ಶಬ್ದವು ಆಗಲಿ ನಿತ್ಯ
   ಕನ್ನಡಾಂಬೆ ನಿನ್ನ ಪಾದಕ್ಕೆ ಶರಣು  
   ಕನ್ನಡ ತಾಯಿ ನಿನ್ನ ಶಕ್ತಿಗೆ ಶರಣು
  
   ಕನ್ನಡ ಸಂಪಿಗೆಯ ಸುವಾಸನೆ ಇಲ್ಲಿ
   ಮಲ್ಲಿಗೆಯ ಪರಿಮಳ ಸದಾ ಇರುವುದಿಲ್ಲಿ 
   ಬೇಡುವೆನೊಂದು ವರ ಕೊಡು ಓ ತಾಯಿ 
   ಭಕ್ತಿಯ ಮೆಚ್ಚುತ ಶಕ್ತಿಯ ಕೊಡು ಓ ತಾಯಿ
   
   ಜೈ ಕರ್ನಾಟಕ ಎಂದು ಗೌರವಿಸುವೆ 
   ಜೈ ಕನ್ನಡಾಂಬೆ ಎಂದು ಪೂಜಿಸುವ
................................. ರಿಧಾ ಎಂ ಡೋರಳ್ಳಿ
5ನೇ ತರಗತಿ
ಸೇಂಟ್ ಅಂಥೋನಿ ಪಬ್ಲಿಕ್ ಶಾಲೆ.   
ಹುಬ್ಬಳ್ಳಿ ತಾಲೂಕು, ಧಾರವಾಡ ಜಿಲ್ಲೆ
******************************************

          

ಕನ್ನಡವೆಂದರೆ ಸಿಪ್ಪೆ ತೆಗೆದ ಕಬ್ಬಿನಂತೆ
ಕನ್ನಡವೆಂದರೆ ಹಾಲಿನ ಹೊಳೆಯಂತೆ
ಕನ್ನಡವೆಂದೇ ಮಿಡಿಯುತಿದೆ ನಮ್ಮೆಲ್ಲರ ಮನವು
ಎಲ್ಲ ಭಾಷೆಗಳಿಗಿಂತ ಕನ್ನಡಕ್ಕೆ ಹೆಚ್ಹಿನ ಒಲವು

ಕನ್ನಡಕ್ಕೆ ನೀಡಿ ಮೊದಲ ಆದ್ಯತೆ
ಕನ್ನಡವೇ ಕನ್ನಡಿಗರ ಬಾಳಿನ ಹಣತೆ
ನಾಡಿನ ಸರ್ವ ಕವಿ ಸಂತರು
ಕನ್ನಡವ ಹಾಡಿ ಹೊಗಳಿಹರು

ಕನ್ನಡವನ್ನೇ ನಿನ್ನ ಉಸಿರಾಗಿಸಿಕೊ
ಕನ್ನಡ ಬೆಳೆಸುವುದೇ ನಿನ್ನ ಗುರಿಯಾಗಿಸಿಕೊ
ಕನ್ನಡವಿರುವುದು ಅರ್ಥಗರ್ಭಿತವಾಗಿ
ಅದನ್ನರಿತು ಬದುಕು ನೀ ಸುಂದರವಾಗಿ 

ಸಂತ ಕವಿಗಳ ಬೀಡು ಕರುನಾಡು
ಎಂದೆಂದಿಗೂ ಕನ್ನಡವ ಮರೆಯದಿರು
ಪರಭಾಷೆಗೆ ಅಭಿಮಾನವಿರಲಿ
ಕನ್ನಡ ಭಾಷೆಗೆ ಸ್ವಾಭಿಮಾನವಿರಲಿ

ನಮ್ಮ ಉಸಿರಿರುವವರೆಗೂ 
ಕನ್ನಡ ಮಾತಾಡೋಣ
ಆಂಗ್ಲರಿಗೆ ಕನ್ನಡವ ಕಲಿಸೋಣ
ಚಿರಕಾಲ ಬೆಳಗಲಿ ಕನ್ನಡ ದೀಪ
ಸದಾ ರಾರಾಜಿಸಲಿ ಕನ್ನಡಾಂಬೆಯ ಪ್ರತಿರೂಪ
ಎಲ್ಲೆಲ್ಲೂ ಮೊಳಗಲಿ ಕನ್ನಡ ಕನ್ನಡ... 
................................................. ಸೌಮ್ಯ ಈ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
******************************************





Ads on article

Advertise in articles 1

advertising articles 2

Advertise under the article