-->
ಕನ್ನಡ ರಾಜ್ಯೋತ್ಸವ - 2023 : ಮಕ್ಕಳ ಕವನಗಳು

ಕನ್ನಡ ರಾಜ್ಯೋತ್ಸವ - 2023 : ಮಕ್ಕಳ ಕವನಗಳು

ಕನ್ನಡ ರಾಜ್ಯೋತ್ಸವ - 2023
ಮಕ್ಕಳ ಜಗಲಿಯಲ್ಲಿ 
ಮಕ್ಕಳ ಕವನಗಳು

ಎಲ್ಲಾ ಕನ್ನಡ ಹೃದಯಗಳಿಗೇ ೬೮ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು....

      
ಕಪ್ಪು ಮಣ್ಣಿನ ನಾಡಿದು. 
ಕಾವೇರಿ ನದಿಯ ಬೀಡಿದು..

ಸಂಸ್ಕೃತಿಯ ತವರೂರಿದು.
ಜ್ಞಾನಪೀಠ ಕವಿಗಳ ಜನ್ಮ ತಾಣವಿದು..

ಕದಂಬರಾಳಿದ ಮೊದಲ ರಾಜ್ಯವಿದು.
ಒಡೆಯರಾಳಿದ ಕೊನೆಯ ರಾಜ್ಯವಿದು..

ಮಹಾತ್ಮರಿಗೇ ಕರ್ಮಭೂಮಿ ಇದು.
ಸಾಧಕರಿಗೇ ಸಿದ್ದ ತವರೂರಿದು..

ಶ್ರೀಗಂಧಧ ನಾಡಿದು.
ಹಟ್ಟಿ ಚಿನ್ನದ ಗಣಿಯ ತಾಣವಿದು..

ಕೃಷ್ಣೇ ತುಂಗೇ ಮಲಪ್ರಭೆಯ ನಾಡಿದು.
ಹಚ್ಚಹಸರಿನಿಂದ ಕೂಡಿದ ಕಾನನವಿದು..

ಎದೆಯ ಸೀಳಿದರು ಪಸರಿಸಲಿ ಕನ್ನಡ.
ಕೊನೆ ಉಸಿರಿನಲ್ಲಿಯೂ ಇರಲಿ ಕನ್ನಡ..

ಹಳದಿ ಕೆಂಪು ಬಾವುಟ.
ಮನೆ ಮೇಲೆ ಹಾರಾಟ..

ನೆಲ ಜಲ ಭಾಷೆಗಳೇ ನನ್ನ ಜೀವ
ಕನ್ನಡವೇ ನನ್ನ ಆತ್ಮವೆಂದು ಬದುಕುವ 
............................. ಮಾಂತೇಶ. ರಂಕಲಕೊಪ್ಪ
ದ್ವಿತೀಯ ಪಿಯುಸಿ 
ಸ. ಪ. ಪೂ. ಕಾಲೇಜು ನರಗುಂದ
ಗದಗ ಜಿಲ್ಲೆ
******************************************


       
ಕನ್ನಡ ಎಂದರೆ ಮೈಯಲ್ಲಿ 
ಮೂಡುವುದು ರೋಮಾಂಚನ..
ಕನ್ನಡಕ್ಕಿರುವ ಶಕ್ತಿಯೇ ಬೇರೆ....!!
ಕನ್ನಡ ಭಾಷೆ ಕನ್ನಡಿಗರ ಭಾವನೆ...
ನಮ್ಮ ನಾಡು ನನ್ನ ಹೆಮ್ಮೆ...

ಹಲವಾರು ಕವಿಗಳಿಗೆ 
ಜನ್ಮ ನೀಡಿದ್ದು ನನ್ನ ನಾಡು..
ಸಾಧಕರ ಬೀಡು....
ಕನ್ನಡ ಮಾತೆಯ ಒಡಲಿನಲ್ಲಿ ಜನಿಸಿರುವರು..
ಕನ್ನಡ ಭಾಷೆ ನಮ್ಮ ಉಸಿರು 
ಕನ್ನಡ ನಾಡು ನಮ್ಮ ಹೆಮ್ಮೆ
ನಮ್ಮ ನಾಡು ನನ್ನ ಹೆಮ್ಮೆ...!

ಸಂಸ್ಕೃತಿಗಳನ್ನು ಹೊತ್ತು 
ನಡೆಸುವ ತಾಯ್ನಾಡು ನನ್ನದು...
ಕರುಣೆ ತುಂಬಿರುವ ಕನ್ನಡಿಗರು
ನಮ್ಮ ನಾಡು ನನ್ನ ಹೆಮ್ಮೆ...!

ಕನ್ನಡ ಮಣ್ಣಿನ ಋಣ ತೀರಿಸಲು ಸಾಧ್ಯವಿಲ್ಲ...
ಕನ್ನಡ ನಾಡಿಗೆ ಸದಾ ಚಿರಋಣಿಯಾಗಿರುವೆ..

ಕನ್ನಡ ಭಾಷೆ ಬಳಸೋಣ..
ಕನ್ನಡವನ್ನು ಕಟ್ಟೋಣ..
ನಮ್ಮತನವನ್ನು ಉಳಿಸಿಕೊಳ್ಳೋಣ..
ನಮ್ಮ ನಾಡು ನನ್ನ ಹೆಮ್ಮೆ...!
............................................ ಜ್ಯೋತಿ ಪಿ ಎಮ್
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಸವದತ್ತಿಯ ಹಿರೇಉಳಿಗೀರಿ
ಬೆಳಗಾವಿ ತಾಲೂಕು ಮತ್ತು ಜಿಲ್ಲೆ
******************************************ಇದೇ ನಮ್ಮ ಸುಂದರ ನಾಡು,
ಅದುವೇ ನಮ್ಮ ಕರುನಾಡು......
ನಾನಿರುವೆ ಕನ್ನಡಮ್ಮನ ನೆಲೆಯಲ್ಲಿ
ನಾ ಮಲಗಿರುವೆ 
ಭುವನೇಶ್ವರಿ ಅಮ್ಮನ ಮಡಿಲಿನಲ್ಲಿ.....
ಸಂಪತ್ತಿಗೆ ಚಿನ್ನದ ನಾಡು......
ಜೀವನದ ಆಡಂಬರದ ನಾಡು....
ಪ್ರಕೃತಿಗೆ ಹಸಿರಿನ ನಾಡು.....
ಅದುವೇ ನಮ್ಮ ಕರುನಾಡು....
ನಿನ್ನ ಕೈಯಲ್ಲಿ ಬಾವುಟವೇ,
ಅದು ದ್ವಿ ಬಣ್ಣವೇ,
ನಾ.. ತಲೆ ಎತ್ತಿ ನೋಡುವೆ
ಆ... ಬಾವುಟ ಪಟಪಟನೆ ಹಾರುತಿದೆ...!
ಕನ್ನಡಮ್ಮನ ಬಗ್ಗೆ ವರ್ಣಿಸಲು ಪದಗಳಿಲ್ಲ...
ಕನ್ನಡಮ್ಮನ ಬಗ್ಗೆ ಹೊಗಳದೆ 
ಇರುವ ಕ್ಷಣಗಳಿಲ್ಲ.!
ಕನ್ನಡಮ್ಮನ ಬಗ್ಗೆ 
ಮರೆಯದೆ ಇರುವ ದಿನಗಳಿಲ್ಲ....!
ಕನ್ನಡಮ್ಮನ ಬಗ್ಗೆ ಬರೆಯಲು 
ಪದಗಳೇ ಸಾಲಲ್ಲ....!
ನೀ ನನ್ನ ತಾಯಿಯೇ....
ನೀ ನನ್ನ ಜೀವವೇ.....
ನೀನೇ ನಮ್ಮ ಕನ್ನಡಮ್ಮವೇ....
ಬ್ರಹ್ಮಾಂಡದಲ್ಲಿ ಗ್ರಹಗಳಂತೆ....
ಪ್ರಪಂಚದಲ್ಲಿ ಖಂಡಗಳಂತೆ....
ದೇಶದಲ್ಲಿ ರಾಜ್ಯಗಳಂತೆ...
ನನ್ನ ಪುಟ್ಟ ಮನದಲ್ಲಿ ಕನ್ನಡಮ್ಮನಂತೆ.....
................................................. ಚೈತ್ರ ಯು 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
******************************************

          
ಕನ್ನಡವೆಂದರೆ ನನ್ನಯ ಉಸಿರು 
ಅದಕ್ಕೆ ಕಾರಣ ಈ ಹಸಿರು

ಎಂಥಾ ಸೊಬಗು ಈ ನಾಡು
ನೆರೆದಿದೆ ಬೇಲೂರು, ಹಳೇಬೀಡು

ಸಾಹಿತ್ಯ, ಕಲೆ , ಧರ್ಮಗಳ ತವರೂರು
ಅನೇಕ ಕವಿರತ್ನಗಳಿಗೆ ದೊರೆತಿವೆ ಸೂರು

ಇವನ್ನು ನೋಡಲು ಸಾಲದು ನಯನ
ಇದರ ಬಗೆಯೇ ರಚಿಸಿದೆ ಕವನ

ಆಹಾ! ಎಂಥಾ ಸೊಬಗು ಈ ನಾಡು
ನೆರೆದಿವೆ ಇಲ್ಲಿ ನವರಸಗಳ ಬೀಡು

ಕನ್ನಡನಾಡಿಗೆ ಸರಿಸಾಟಿಯೇ ಇಲ್ಲ
ನೋಡಬನ್ನಿರಿ ಇವನ್ನೆಲ್ಲ...!
........................................................ ಸೃಷ್ಟಿ
ದ್ವಿತೀಯ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು
ಕಾರ್ಕಳ, ಉಡುಪಿ ಜಿಲ್ಲೆ
****************************************** 

Ads on article

Advertise in articles 1

advertising articles 2

Advertise under the article