ನೀವಿನ್ನೂ ಸ್ವರೂಪದ ಶಿಬಿರಕ್ಕೆ ಹೋಗಿಲ್ಲವೇ..?
Tuesday, October 3, 2023
Edit
ನನ್ನ ಅನುಭವಗಳು ಸಾಕ್ಷಿಯಾಗಿ ದಾಖಲಾಗಿವೆ...
ಬರಹ : ತೇಜಸ್ವಿ ಅಂಬೆಕಲ್ಲುಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರತಿದಿನವೂ ನಾನು ಹೊಸತಾಗುತ್ತಿರಬೇಕು... ಏನನ್ನಾದರೂ ಕಲಿಯುತ್ತಿರಬೇಕು.. ಆ ಕಲಿಕೆಯ ಸುಖದಲ್ಲಿ ಕ್ಷಣ ಕ್ಷಣವೂ ಸಾರ್ಥಕವಾಗಬೇಕೆನ್ನುವ ಹೊಸ ಸಾಧ್ಯತೆಯ ಹೊಳಹು 'ಸ್ವರೂಪ'. ನಾನು ಬದಲಾಗುತ್ತಿದ್ದೇನೆ. ಆ ಬದಲಾವಣೆಗೆ ಯಾರನ್ನೂ ಕಾಯುತ್ತಿಲ್ಲ. ನನ್ನ ಜೊತೆಗೆ ನನ್ನ ಶಾಲೆ ಮತ್ತು ಮನೆಯ ಮಕ್ಕಳು ಕೂಡಾ. ನಮಗೆ ಈಗ ಬೋರ್ ಆಗುವ ಸಮಸ್ಯೆ ಇಲ್ಲ! ಯಾವತ್ತೂ ಬ್ಯುಸಿ ಯಾಗಿರುವಂತೆ, ಪ್ರತಿ ಕ್ಷಣವೂ ಏನು ಮಾಡುತ್ತಿದ್ದೇವೆ ಮತ್ತು ಎಲ್ಲಿದ್ದೇವೆ ಎನ್ನುವ ಪ್ರಜ್ಞೆಯನ್ನು ಜಾಗೃತಗೊಳಿಸುವ ನನ್ನದೇ 'ಸ್ವರೂಪ'.
ಬಹುಶಃ ಸ್ವರೂಪದ ಸಾಂಗತ್ಯ ಕ್ಕೆ ನಾನು ಸಿಗದಿರುತ್ತಿದ್ದರೆ ನನ್ನ ಆಲೋಚನೆಗಳೂ ಸಾಮಾನ್ಯವಾಗಿಯೇ ಕಳೆದು ಹೋಗುತ್ತಿದ್ದವೇನೋ...! ಕಳೆದ ಬೇಸಗೆ ರಜೆಯ 15 ದಿನಗಳ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರ ನಡೆಸುವ ಮೆಮೊರಿ ಕ್ಯಾಂಪ್ ನಿಂದ ನಾನು ಕಂಡುಕೊಂಡ ಕಲಿಕಾ ಸಾಧ್ಯತೆಗಳ ಜೊತೆಗೆ ಈಗ ನಿತ್ಯ ಪಯಣಿಸುತ್ತಿದ್ದೇನೆ. ನಾಲ್ಕನೇ ತರಗತಿಯಿಂದ ಮೇಲ್ಪಟ್ಟಂತೆ ವಯಸ್ಸಿನ ಮಿತಿಯಿಲ್ಲದೆ ಭಾಗವಹಿಸಿದ ಸ್ವರೂಪದ ಸಂಗಾತಿಗಳೆಲ್ಲರೂ ಕಲಿಕೆಯನ್ನು ಸಂಭ್ರಮಿಸಿದ ದೃಶ್ಯಕ್ಕೆ ಸಾಕ್ಷಿಯಾದ ಖುಷಿ ನನ್ನದು. 10 ನೆನಪಿನ ತಂತ್ರಗಳ ಮೂಲಕ ಪಾಠ ಪುಸ್ತಕದ ಸಾಮರ್ಥ್ಯ ಗಳನ್ನು ಕಲಿಯುವ ಹೊಸತಾದ ಮತ್ತು ಸರಳವಾದ ಎಂದೂ ಮರೆಯದಂತೆ ನೆನಪಿನ ಪುಟಗಳಲ್ಲಿ ದಾಖಲಿಸುವ ಅದ್ಭುತ ಪ್ರಕ್ರಿಯೆ..!, ಕ್ರಿಯೇಟಿವ್ ಆರ್ಟ್ ತೆರೆದಿಟ್ಟ ಸಾಹಿತ್ಯ ಮತ್ತು ಯೋಚನಾ ಸಾಮರ್ಥ್ಯ ದ ಅಗಾಧ ಸಾಧ್ಯತೆಗಳು...! ಮಕ್ಕಳು ಬರಹಗಾರರಾಗಲು ಮತ್ತು ಮಾತುಗಾರರಾಗಲು ಅಪೂರ್ವ ಪ್ರಯೋಗ..! ಪ್ರೌಢ ಶಾಲೆಯ ಹಂತದಲ್ಲಿದ್ದರೂ ಅಕ್ಷರದಲ್ಲಿ ಅದುವರೆಗೆ ಸುಧಾರಣೆ ಕಾಣದ ಮಕ್ಕಳು ಈಗ ಆ ಪ್ರಬುದ್ಧತೆಯನ್ನು ರೂಢಿಸಿಕೊಂಡ ಸಾಧ್ಯತೆಯೊಂದು ಬೆರಗು!
ನಾಟಕ, ಕಥೆ, ಕವನ, ಸಾಮಾನ್ಯ ಜ್ಞಾನ, ಗಣಿತದ ಪ್ರಶ್ನೆಗಳು, ಮೌಲ್ಯಗಳು, ಕ್ರಾಫ್ಟ್, ಭಿತ್ತಿಪತ್ರಗಳು, ಹಾಡು, ಮಿಮಿಕ್ರಿ, ಮೈಮ್, ಎಡಗೈ ಬರೆಹ, ಅಷ್ಟಾವಧಾನ, ತ್ರಯೋದಶಾವಧಾನ.
ಇಲ್ಲಿ ಯಾವುದನ್ನೂ ನೇರವಾಗಿ ಕಲಿಸುವ ಸಿದ್ಧ ಶಿಬಿರವಲ್ಲ! ಎಲ್ಲದರೊಳಗೆ ಅರಿವಿಲ್ಲದೆ ಒಂದಾಗುವ ಮತ್ತು ಪ್ರತಿಯೊಂದಕ್ಕೂ ನಿರ್ದಿಷ್ಟ ಕಾರಣದ ಮೂಲಕ ನಮ್ಮ ನೆನಪಿನ ಶಕ್ತಿಯನ್ನು ಪರೀಕ್ಷಿಸುತ್ತಾ ಹೆಚ್ಚಿಸಿಕೊಳ್ಳುವ, ಜಾಗೃತಗೊಳಿಸುವ ವಿಭಿನ್ನ ಶಿಬಿರ. ಗೋಪಾಡ್ಕರ್ ಎನ್ನುವ, ವ್ಯಕ್ತಿ ರೂಪದ ಶಕ್ತಿಯ ಸಾಧ್ಯತೆ ಇದು. ಯಾವುದೂ ಕಷ್ಟವಲ್ಲ ಎನ್ನುತ್ತಾ ಎಲ್ಲರಲ್ಲೂ ಕಲಿಕೆಯ ಸುಖವನ್ನು ಸಾಧಿಸಿದ ಸಂಭ್ರಮವನ್ನು ಕಾಣಿಸುವ ಅಪೂರ್ವ ಅವಕಾಶ. ರೂಬಿಕ್ಸ್ ಕ್ಯೂಬ್ ಪರಿಹರಿಸುವವರನ್ನು ಬಹಳ ವಿಶೇಷ ಶಕ್ತಿ ಉಳ್ಳವರೆಂದೇ ತಿಳಿದುಕೊಂಡಿದ್ದ ನನಗೆ, ನಾನೂ ಅದನ್ನು ಪರಿಹರಿಸಿದೆ ಎನ್ನುವಾಗ ಅರಿವಾದ ಸತ್ಯ ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು.
ನಿನ್ನೆಯ ನಾನಲ್ಲ ಎನ್ನುವ ಹೊಸತನದೆಡೆಗೆ ನಿತ್ಯ ಕರೆದೊಯ್ಯುತ್ತಾ , ಮನೋವಿಜ್ಞಾನದ ಪ್ರಯೋಗದ ಫಲಿತಾಂಶದ ಮಾತುಗಳನ್ನಾಡುತ್ತಾ ಬದುಕಿನ ಸುಂದರತೆಯೆಡೆಗೆ ದಾರಿ ತೋರಿಸುವ ಗೋಪಾಡ್ಕರ್ ಸರ್, ವಿಶ್ವ ದಾಖಲೆಗಳ ಮೂಲಕ ಇದೆಲ್ಲದ್ದಕ್ಕೂ ಸಾಕ್ಷಿಯಾಗಿರುವ ಆದಿ ಸ್ವರೂಪ, ಸಾಹಿತ್ಯ ಅಗಾಧ ಜ್ಞಾನವನ್ನು ಪ್ರೀತಿಯಿಂದ ಉಣಿಸುವ ಸುಮಂಗಲಾ ಮೇಡಂ... ಜೊತೆಗೆ ನಡುನಡುವೆ ಪರಿಚಯವಾಗುವ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು. ಒಂದು ಶಿಬಿರ ಎನ್ನುವುದಕ್ಕಿಂತ ಇಲ್ಲಿ ಭಾಗವಹಿಸಿದ ನಂತರ ನಮ್ಮಲ್ಲಿ ಆಗುವ ಧನಾತ್ಮಕ ಬದಲಾವಣೆಗಳು ಯಾವತ್ತಿಗೂ ನಮ್ಮನ್ನು ಇತರರಿಗಿಂತ ಭಿನ್ನವಾಗಿಡುತ್ತವೆ.
ಮತ್ತೆ ಈ ಅವಕಾಶ...! ಎಲ್ಲರೂ ಎಲ್ಲವನ್ನೂ ತಿಳಿದುಕೊಂಡರೆ ನಷ್ಟವೇನಿದೆ...? ಇಲ್ಲಿ ಮೈಕ್ ಸೆಟ್ ಮಾಡುವುದೂ ಕಲಿಕೆ! ಶಬ್ದ ಮಾಡದೆ ಕುರ್ಚಿಗಳನ್ನು ಸರಿಸಿಡುವುದೂ ಕಲಿಕೆ.. ಪಾದರಕ್ಷೆಗಳನ್ನು ಸಾಲಾಗಿ ಜೋಡಿಸಿಡುವುದೂ ಕಲಿಕೆ! ಎಲ್ಲದಕ್ಕೂ ಅಂಕಗಳು... ಇಲ್ಲೊಂದು ಸಂಭ್ರಮವಿದೆ.... ಮಕ್ಕಳ ವಿಭಾಗದಲ್ಲಿ ನನ್ನ ಮಗ ಪ್ರಥಮ ಸ್ಥಾನ, ದೊಡ್ಡವರ ವಿಭಾಗಲ್ಲಿ ನನಗೆ ಪ್ರಥಮ..... ಈ ಅಂಕಗಳು ನಮ್ಮನ್ನು ಗೆಲ್ಲಿಸುವಷ್ಟು ಸರ್ಟಿಫಿಕೇಟ್ ಅಂಕಗಳು ಗೆಲ್ಲಿಸುವುದಿಲ್ಲ!
ನಮ್ಮನ್ನು ಮತ್ತೆ ಮತ್ತೆ ವಿಮರ್ಶಿಸಿ ಕೊಳ್ಳಲು ಕಾರಣವಾಗುವ ನಮಗೇ ಅರಿವಿಲ್ಲದೆ ಪ್ರದರ್ಶಿಸಲ್ಪಡುವ ನಮ್ಮ ತಪ್ಪುಗಳು! ಯಾರು ಎಲ್ಲಿ ಹೇಗಿರಬೇಕೆನ್ನುವ ಸೂಕ್ಷ್ಮ ತೆಯ ಕಲಿಕೆ!
ದೊಡ್ಡವರೆನಿಸಿಕೊಂಡ ನಮ್ಮ ಸಣ್ಣತನಗಳು ಬಯಲಾಗುತ್ತಾ ಹೋದಂತೆ ಮತ್ತೆ ಕಲಿಯುವ ಮಗುವಾಗುತ್ತೇವೆ..! ಹಾಗೆಂದು ಇಲ್ಲಿ ಯಾವುದನ್ನೂ ಕಲಿಸುವುದಿಲ್ಲ! ಮಕ್ಕಳೆಲ್ಲರೂ ಪ್ರೀತಿಯಿಂದ ಇಲ್ಲಿನ ಕಲಿಕೆಯಲ್ಲಿ ತೊಡಗಿಕೊಂಡಾಗ, ಕಲಿಸುವುದರಿಂದ ಮಕ್ಕಳು ಕಡಿಮೆ ಕಲಿಯುತ್ತಾರೆ ಎನ್ನುವ ಮಾತಿನ ಸತ್ಯ ಅರಿವಾಗತೊಡಗಿತು. ಇಲ್ಲಿ ಯಾರಾದರೂ ಏನು ಕಲಿತಿದ್ದೀರಿ ಎಂದರೆ ಕಲಿತದ್ದು ಕಾಣಿಸುವುದಿಲ್ಲ...!ನಮ್ಮಲ್ಲಿ ಆದ ಬದಲಾವಣೆ ಗೋಚರಿಸುತ್ತದೆ!
ಎಲ್ಲರನ್ನೂ ತೊಡಗಿಸಿಕೊಳ್ಳುತ್ತಾ,ಈ ಸತ್ಯ ದರ್ಶನದೊಳಗೆ ನಮ್ಮ ಸ್ವರೂಪ ತೆರೆದುಕೊಳ್ಳಲು ಮತ್ತೆ ಮೆಮೊರಿ ಕ್ಯಾಂಪ್ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರ, ಕೊಡಿಯಾಲಬೈಲ್ ನಲ್ಲಿ ಅಕ್ಟೋಬರ್ 10 ರಿಂದ 15 ರ ವರೆಗೆ ನಡೆಯಲಿದೆ. ಸ್ವರೂಪದ ಹತ್ತು ಮಾದರಿ ವಿದ್ಯಾರ್ಥಿಗಳು ಈ ಸಲ ವಿಶೇಷವಾಗಿ ಪರಿಚಯವಾಗಲಿದ್ದಾರೆ.. ಅವರ ಜೊತೆಗೆ ಕಲಿಯುತ್ತಾ ಬೆಳೆಯಲು..... ನಾನು ಹೊರಟೆ...!ನೀವು?
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
Mob : +91 94803 45799
**********************************************
===================================
ಇದೊಂದು ವಿಶೇಷ ಅವಕಾಶ. ನಿಮ್ಮ ಆತ್ಮೀಯ ಶಿಕ್ಷಕರಿಗೆ, ಪೋಷಕರಿಗೆ, ಬಂಧುಗಳಿಗೆ ಈ ಸುದ್ದಿಯನ್ನು ತಲುಪಿಸಿರಿ. ಒಬ್ಬ ತನ್ನ ಜೀವನದಲ್ಲಿ ಒಮ್ಮೆಯಾದರೂ ಪಡೆದುಕೊಳ್ಳಲೇಬೇಕಾದ ನಿಶ್ಚಿತ ಫಲಿತಾಂಶದ ಅಪೂರ್ವ ತರಬೇತಿ.
ಮಕ್ಕಳನ್ನು ಕಲಿಕೆ, ವಿಶೇಷ ಸಾಮರ್ಥ್ಯ, ಹತ್ತು ಗುಣ ಹಲವು ಪ್ರತಿಭೆ - ಸಾಧನೆಯ ಕಡೆಗೆ ಕರೆದುಕೊಂಡು ಹೋಗುವ ತರಬೇತಿ.ಎಲ್ಲವೂ memory ಚಟುವಟಿಕೆಗಳ ಮೂಲಕ ನಿರ್ದಿಷ್ಟ ಗುರಿಯನ್ನು ತಲುಪುವುದು.. ಅದ್ಭುತ ಬದಲಾವಣೆ, ಅಪಾರ ಸಾಧ್ಯತೆಯನ್ನು ಪ್ರತ್ಯಕ್ಷ ಅನುಭವಿಸಲೇಬೇಕಾದ ತರಬೇತಿ. ಇದು ಭವಿಷ್ಯದಲ್ಲಿ ದೇಶದ ಎಲ್ಲಾ ಮಕ್ಕಳಿಗೂ - ಶಿಕ್ಷಕರಿಗೂ ಲಭ್ಯವಾಗಲಿದೆ.
'ಇದು ಅದಲ್ಲಾ'.. ಪ್ರತೀ ಮಗುವೂ ಜೀನಿಯಸ್. ಎಲ್ಲಾ ಮಕ್ಕಳೂ ಸಾಧಕರು ಅನ್ನೋದಕ್ಕೆ.. 'ಯಾಕಾಗಲ್ಲ '.!?.. ಉತ್ತರವಿದೆ. ಧನ್ಯವಾದಗಳು....
ನಿರ್ದೇಶಕರು
ಸ್ವರೂಪ ಅಧ್ಯಯನ ಕೇಂದ್ರ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: +91 98452 03472
****************************************