ಮಕ್ಕಳ ಕವನಗಳು - ರಚನೆ : ಶರ್ಮಿಳಾ ಕೆ. ಎಸ್, 9ನೇ ತರಗತಿ
Tuesday, October 3, 2023
Edit
ಮಕ್ಕಳ ಕವನಗಳು
ಕವನ ರಚನೆ : ಶರ್ಮಿಳಾ ಕೆ.ಎಸ್
9 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
ನಿನ್ನ ನೋಡಲು ನೀ ಮರೆಯಾಗುವೆ....!
ಅದೆಷ್ಟೋ ಚೆಂದದಾಸೆಗಳಾ ನೀ ಹುಟ್ಟಿಸಿದೆ...
ಅದಕೆ ಅಪರೂಪದ ಆದರ್ಶ ನೀನಾದೆ....!
ನೀ ಮಿನುಗುವ ರೀತಿ ನನ್ನ ಬದುಕಿನ ಪ್ರೀತಿ......
ನೀನಾದೆ ನನ್ನ ಕನಸಿಗೆ ಸ್ಪೂರ್ತಿ......!
ನೀ ಮಿನುಗುವಾಗ
ಬಾನ ತುಂಬಾ ವಜ್ರ ಕವಿದಂತೆ.....
ನೀ ಮಿನುಗುತಾ ನಲಿವಾಗ
ಬಾನ ಹಾಸಿಗೆ ಕಂಡಿತು ನವಿಲಂತೆ......!
ನನ್ನ ಕನಸಲಿ ಬಂದೆ
ನೀ ನನಸಾದ ಬೆಳಕಾಗಿ.......
ನನ್ನ ಮನಸಲಿ ನಿಂತೆ
ನೀ ಮಿನುಗುವ ತಾರೆಯಾಗಿ......!
ನೀನೆಷ್ಟು ಚೆಂದ ಮಿನುಗುವಾಗ.....
ನಾ ಕಂಗಾಲಾದೆ ನೀ ಮರೆಯಾದಾಗ.....!
...................................... ಶರ್ಮಿಳಾ ಕೆ.ಎಸ್
9 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
********************************************
ಹೂವರಳಿ ಮರವಾಗಿ.....
ಮರವರಳಿ ನೆರಳಾಗಿ.....
ನೆಲೆಸಿದೆ ಬದಲಾವಣೆಯಾ......!
ಹುಲ್ಲರಳಿ ಹಾವಾಗಿ......
ನೀರರಳಿ ಮುಳ್ಳಾಗಿ......
ಮನವರಳಿ ಮೃಗವಾಗಿ.....
ತಿಂದೆ ಸಾವಿರ ಬದುಕ.......!
ಇನ್ನೂ ಈ ಬದುಕು ಸಾಕೆನ್ನುವಾಗ
ಮನವರಳಿ ಮಗುವಾಗಿ
ನಗುವರಳಿ ಮನಸಾಗಿ...
ನಾನರಳಿ ನಾನಾಗಿ.......
ಬದಲಾವಣೆಯ ಬಯಸಿದೆ.....!
...................................... ಶರ್ಮಿಳಾ ಕೆ.ಎಸ್
9 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
********************************************
ಬೆಳಕು ಏಕೆ.....?
ಕಷ್ಟ ಕಂಡ ಮನಕೆ
ಸುಖ ಏಕೆ......?
ಸದಾ ಬಾಡುವ ಗಿಡಕೆ
ನೀರೇಕೆ.....?
ಸದಾ ಇರುವ ಬಾನಿಗೆ
ಸೂರ್ಯಚಂದ್ರರೇಕೆ...?
ನಗುತಾ ನಲಿವಾ ಮನಕೆ
ನಗುವೇಕೆ.....?
ಒಳಗೆ ತುಂಬಿಹ ನೋವುಗಳಿಗೆ
ಅಳುವೇಕೆ......?
ಏಕೆ......ಎಂದು ಕೇಳುವ
ಮನಸೇಕೆ....?
ಉತ್ತರ ತಿಳಿವ ಹಂಬಲ ನಮಗೇಕೆ.....!
...................................... ಶರ್ಮಿಳಾ ಕೆ.ಎಸ್
9 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
********************************************
ಹರಿವ ನೀರು ನದಿ ಸೇರುವುದು......
ಸೋಲಿನಿಂದ ಬರುವುದು ಗೆಲುವು......
ಸೋತು ಗೆದ್ದಾಗ ನಲಿವುದು ಮನವು.....
ನಮ್ಮಲ್ಲಿಯೇ ಸದಾ ಇರುವ
ಖುಷಿಗೆ ಬೆಲೆ ಕಡಿಮೆ......
ಕಷ್ಟಗಳಿಂದ ಹೊರಬಂದು
ಬರುವ ನಗುವಿಗಿದೆ ಗರಿಮೆ.....
ಕಷ್ಟದಿಂದಲೇ ಕಲಿವ ಮಾನವ.....
ಜೀವನ ಪಯಣದ ಪಾಠವ.......
ಜೀವನ ನಿಂತ ನೀರಾಗಬಾರದು.....
ಹರಿವ ಹೊಳೆಯಾಗಬೇಕು.......
ಯಶಸ್ಸು ತಾಣವಾಗಿರಬಾರದು....
ನಿರಂತರ ಪಯಣವಾಗಬೇಕು.....!
...................................... ಶರ್ಮಿಳಾ ಕೆ.ಎಸ್
9 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
********************************************
ನನ್ನ ಹಾಗೆ ನಲಿವ ಚಿಟ್ಟೆಗಳಾ.......
ಅವುಗಳ ನೋಡುತಾ ನಾ ನಿಂತಾಗ
ಒಂದನ್ನೊಂದು ಅಗಲಿದವುಗಳು......!
ಕ್ರೂರ ಜೇಡವೊಂದು ಬಂದಿತು ಸುಮ್ಮನೆ.......
ಬಲೆಯ ಕಟ್ಟಿತು ಮೆಲ್ಲನೆ.....
ಒಂದು ಚಿಟ್ಟೆ ಅದರಲಿ ಸಿಲುಕಲು......
ಮತ್ತೊಂದು ಚಿಟ್ಟೆಯು ಅದ ಹುಡುಕಲು......!
ನಿಂತು ನೋಡುತಿರುವಾಗ ನಾ ನೊಂದುಕೊಂಡೆ......
ನಲಿವ ಚಿಟ್ಟೆ ಗಳಾ ಒಂದಾಗಿಸುವ ಅಂದುಕೊಂಡೆ.......!
ಜೇಡದ ಬಲೆಯ ಕೆಡವಿದೆ.....
ನಲಿವ ಚಿಟ್ಟೆಯ ಕಾಪಾಡಿದೆ.....
ಕೆಳಗೆ ಬೀಳುತಿರಲು ಆ ಜೇಡ....
ಕಾಪಾಡಿಕೊಂಡಿತು ತನ್ನನ್ನು ತಾನೇ....
ಆತ್ಮಸ್ಥೈರ್ಯ ಕಳೆದುಕೊಳ್ಳದೆ ಜೇಡ......
ಜೀವಿಸಿತು ತನ್ನ ಬಲೆಯಲಿ....!
ಇತ್ತ ಎರಡು ನಲಿವ ಚಿಟ್ಟೆಗಳು
ಒಂದಾಗಿ ನಲಿಯಲು.....
ನೋಡಿ ನಾ ನಲಿದೆ ಮನದೊಳು.....!
9 ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ.
********************************************