ಪ್ರೀತಿಯ ಪುಸ್ತಕ : ಸಂಚಿಕೆ - 81
Friday, October 20, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 81
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಜೂಂಯ್ ಅಂತ ಬೈಕ್ ಓಡಿಸಿಕೊಂಡು ಹೋಗುವುದು ಹೆಚ್ಚಿನ ಮಕ್ಕಳಿಗೂ ಒಂಥರಾ ಥ್ರಿಲ್ಲು ಕೊಡುತ್ತದೆ. ಕಿಕ್ ಮಾಡೋದು, ಭರ್ ಅಂತ ಓಡಿಸೋದು.. ಎಲ್ಲವೂ ರೋಚಕ. ಈ ಪುಸ್ತಕದ ಸೊಗಸು ಏನೆಂದರೆ, ಇದರಲ್ಲಿ ಕಿಕ್ ಮಾಡುವಾಗ ಗಾಡಿಯ ಒಳಗೆ ಏನೇನು ಕೆಲಸ ನಡೆಯುತ್ತದೆ...? ಏನೇನು ಯಂತ್ರಗಳು ಇವೆ....? ಅವನ್ನು ಹೇಗೆ ಜೋಡಿಸಲಾಗಿದೆ...? ಗಾಡಿ ಓಡುವುದು ಹೇಗೆ...? ಇವೇ ಮುಂತಾದ ವಿವರಗಳನ್ನು ಸರಳವಾಗಿ ಕೊಟ್ಟಿದ್ದಾರೆ. ಹೊರಗಿನಿಂದ ನಮಗೆ ಏನೂ ಗೊತ್ತಾಗುವುದಿಲ್ಲ. ಮೆಕ್ಯಾನಿಕ್ಸ್ ಕಲಿತವರಿಗೆ ಮಾತ್ರ ಗೊತ್ತಿರುತ್ತದೆ. ಮ್ಯಾಜಿಕ್ ತರಹ ಕಾಣುತ್ತದೆ. ಈ ಪುಸ್ತಕ ಓದಿದರೆ, ನಿಮಗೆ ‘ಓಹ್, ಇದುವಾ ಇದರ ಒಳಗಿನ ಮ್ಯಾಜಿಕ್’ ಅಂತ ತಿಳಿದು ಬಿಡುತ್ತದೆ. ಚಿತ್ರಗಳೂ ವಿಷಯವನ್ನು ಮನದಟ್ಟು ಮಾಡುವ ತರಹ ಇದೆ. ಇಂತಹ ವಿಚಾರಗಳನ್ನು ಇಷ್ಟು ಸರಳ ಮತ್ತು ಆಕರ್ಷಕ ರೀತಿಯಲ್ಲಿ ವಿವರಿಸುವ ಪುಸ್ತಕಗಳು ಬಹಳ ಅಪರೂಪ. ಇದರಲ್ಲಿ ಗಾಡಿ ಓಡಿಸುವ ವ್ಯಕ್ತಿ ಒಬ್ಬ ಗಟ್ಟಿಮುಟ್ಟು ಹೆಣ್ಣುಮಗಳು. ಓದಿ, ಕಿಕ್ ಮಾಡಿದಾಗ ಏನಾಗುತ್ತದೆ ತಿಳಿದುಕೊಳ್ಳಿ.
ಲೇಖಕರು: ನಿಖಿಲ್ ಗುಲಾಟೆ
ಅನುವಾದ: ಸಂಕೇತ್ ಗುರುದತ್ತ
ಚಿತ್ರಗಳು: ನಿಖಿಲ್ ಗುಲಾಟೆ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.55
10+ ವಯಸ್ಸಿವರಿಗಾಗಿ ಇದೆ. ಇತರ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
********************************************