ಮಕ್ಕಳ ಕವನಗಳು - ರಚನೆ : ವಿದ್ಯಾರ್ಥಿಗಳು, ಸರಕಾರಿ ಪ್ರೌಢಶಾಲೆ, ವಿಟ್ಲ
Tuesday, September 12, 2023
Edit
ಮಕ್ಕಳ ಕವನಗಳು
ಕವನ ರಚನೆ : ವಿದ್ಯಾರ್ಥಿಗಳು
8 ನೇ ತರಗತಿ
ಸರಕಾರಿ ಪ್ರೌಢಶಾಲೆ, ವಿಟ್ಲ
ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ
ಇಲ್ಲಿದೆ ಗಿಡ, ಮರ, ಬಳ್ಳಿ
ತಂಪಾದ ಗಾಳಿ ಬೀಸುವುದಿಲ್ಲಿ
ಹಣ್ಣು-ಹಂಪಲ ಮರಗಳಿವೆಯಿಲ್ಲಿ
ಮೃದುವಾದ ಮಾತುಗಳ ಜನರು
ಒಗ್ಗಟ್ಟಿನಲ್ಲಿ ಇರುವರು ಎಲ್ಲರು
ಗಿಡ-ಮರಗಳ ರಕ್ಷಿಸುವರು ಇವರು
ಶ್ರಮವ ನಂಬಿ ಬದುಕುವರು
ಕೃಷಿಯ ನಂಬಿಹ ನಮ್ಮ ರೈತರು
ಬೆವರು ಸುರಿಸಿ ದುಡಿಯುವರು
ಆಹಾರ ಪೋಲು ಮಾಡರು ಮಕ್ಕಳು
ನೆಮ್ಮದಿ ಜೀವನ ನಡೆಸುತಿಹರು ಎಲ್ಲರು
8ನೇ ತರಗತಿ
ಸರಕಾರಿ ಪ್ರೌಢಶಾಲೆ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ನನ್ನ ಪ್ರೀತಿಸುವ ಅಪಾರ
ನನ್ನ ನೋಡಿಕೊಳ್ಳುವ ಸರದಾರ
ನನ್ನ ಜೀವವೆ ನನ್ನಪ್ಪ
ನನ್ನ ಮನಸನು ಅರಿಯುವ
ಏನು ಕೇಳಿದರು ಕೊಡಿಸುವ
ನನ್ನ ಜೊತೆ ಸೇರಿ ಆಡುವ
ನನ್ನ ಜೀವವೆ ನನ್ನಪ್ಪ
ತಪ್ಪು ಮಾಡಿದರೆ ಕ್ಷಮಿಸುವ
ಕಷ್ಟಗಳ ತಾನು ಸಹಿಸುವ
ನಮ್ಮ ಮನೆಯ ಯಜಮಾನ
ನನ್ನ ಜೀವವೆ ನನ್ನಪ್ಪ
ನನ್ನ ಕನಸುಗಳ ನನಸಾಗಿಸುವ
ಜೀವನ ಪಾಠಗಳ ಕಲಿಸುವ
ದೇವರ ರೂಪವೆ ನನ್ನಪ್ಪ
ನನ್ನ ಜೀವವೆ ನನ್ನಪ್ಪ
8ನೇ ತರಗತಿ
ಸರಕಾರಿ ಪ್ರೌಢಶಾಲೆ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಮಣ್ಣಿನ ಘಮ ತಣಿಸುತ್ತದೆ ಜನರ ಮನ
ಕುಣಿಯುವುದು ನವಿಲು ಗರಿಬಿಡಿಸಿಕೊಂಡು
ಪ್ರಕೃತಿ ನಲಿವುದು ಸಂತಸದಲಿ ಮಿಂದು
ಕೊಂಚ ಮಳೆ ಬಂದರೆ ಸಾಕು
ಮಕ್ಕಳು ಮಳೆಯಲಿ ನೆನೆಯಲೇಬೇಕು
ಕಾಗದದ ದೋಣಿಯ ತಯಾರಿಸಬೇಕು
ನೀರಲಿ ತೇಲುತಲದು ಬಹುದೂರ ಸಾಗಲೇಬೇಕು
ಮಳೆ ಬಂದರೆ ತುಂಬುವುದು ನೀರಿನ ಮೂಲಗಳು
ಆ ದಿನಗಳು ರೈತರ ಖುಷಿಯ ಕ್ಷಣಗಳು
ಮಳೆಯ ಸ್ಪರ್ಶದಲ್ಲಿ ಬೆಳೆವವು ಮರ ಗಿಡಗಳು
ಮರ ಗಿಡಗಳಿಂದ ದೊರೆಯುತ್ತದೆ
ರಸಭರಿತ ಹಣ್ಣುಗಳು
ಮಳೆ ಬಂದರೆ ಸಿಗುವುದು ನೀರು
ಇದರಿಂದ ಬದುಕುವುದು
ಜೀವರಾಶಿಗಳು
ನೀರನ್ನು ರಕ್ಷಿಸುವ ಕರ್ತವ್ಯ ನಮ್ಮದು
ನೀರನ್ನು ಉಳಿಸಿದರೆ ಭೂಮಿ ಹಚ್ಚ ಹಸಿರು
8ನೇ ತರಗತಿ
ಸರಕಾರಿ ಪ್ರೌಢಶಾಲೆ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************