ಮಕ್ಕಳ ಕವನಗಳು ರಚನೆ : ಸುಶ್ಮಿತಾ. ಎಂ, 8ನೇ ತರಗತಿ
Monday, September 11, 2023
Edit
ಮಕ್ಕಳ ಕವನಗಳು
ಕವನ ರಚನೆ : ಸುಶ್ಮಿತಾ. ಎಂ
8 ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ
ಸರಿಯಾಗಿ ಹೇಳಿಸುವಳೇ
ನನ್ನ ಅಕ್ಕ....
ತಪ್ಪು ದಾರಿ ಹಿಡಿದ
ಜೀವನದಲ್ಲಿ ತಿದ್ಧಿ ಬುದ್ಧಿ ಹೇಳಿ
ಸರಿ ದಾರಿಯಲ್ಲಿ ನಡೆಸುವಳೆ
ನನ್ನ ಅಕ್ಕ
ಇಷ್ಟೆಲ್ಲಾ ಮಾಡೋ ನನ್ನ ಅಕ್ಕಗೆ
ಏನು ಉಡುಗೊರೆ ಕೊಟ್ಟರೂ ಸಾಲಲ್ಲ
ಆದರೆ ನನ್ನ ಅಕ್ಕಗೆ ತುಂಬಾ ಇಷ್ಟವಾದ ತಿಂಡಿಯನ್ನು ಕೊಡಿಸುವುದಂತು ಪಕ್ಕ .....!!
............................................. ಸುಶ್ಮಿತಾ. ಎಂ
8 ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ
********************************************
ತಿದ್ದಿ ಬುದ್ದಿ ಹೇಳುವರು ಶಿಕ್ಷಕರು
ಪದೇ ಪದೇ ತಪ್ಪು ಮಾಡಿದಾಗಲೂ
ಪುಟ್ಟ ಇನ್ನೊಂದು ಸಾರಿ ತಪ್ಪು ಮಾಡಬೇಡ ಎನ್ನುವರು ಶಿಕ್ಷಕರು....!!
ಆದರೆ ಆ ಮಗು ಬೆಳೆದು
ದೊಡ್ಡವನಾದ ಮೇಲೆ
ಏನಾದರೂ ತಪ್ಪು ಮಾಡಿದಾಗ
ನೆನಪಾಗುವವರು ಶಿಕ್ಷಕರು....!!
.............................................. ಸುಶ್ಮಿತಾ. ಎಂ
8 ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ
********************************************
ಶ್ರೀ ರಾಮನ ಪರಮ ಭಕ್ತ
ನಮ್ಮ ಆಂಜನೇಯ
ವಾಯುಪುತ್ರ ವಜ್ರಕಾಯ
ಕೇಸರಿ ನಂದನ ಮಾರುತಿ
ಚಿಕ್ಕ ವಯಸ್ಸಿನಲ್ಲಿ ಏನೂ ತಿಳಿಯದೆ
ಸೂರ್ಯನನ್ನು ನುಂಗಿದ ಆಂಜನೇಯ
ಮಂಗನ ಸ್ವರೂಪ ನಮ್ಮ ಆಂಜನೇಯ
ಸೀತೆಯ ಎಳೆದುಕೊಂಡು ಹೋದ
ರಾವಣನ ಲಂಕೆಗೆ ಹಾರಿದ
ಆಂಜನೇಯ ರಾವಣನನ್ನು ಶಿಕ್ಷಿಸಿ
ಸೀತೆಯನ್ನು ರಕ್ಷಿಸಿದ
.............................................. ಸುಶ್ಮಿತಾ. ಎಂ
8 ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ
********************************************
ತಂದುಕೊಟ್ಟ ನಮ್ಮ ನಾಗಪ್ಪ
ಎಷ್ಟು ಕೃತಜ್ಞತೆ ಹೇಳಿದರೂ ಸಾಲಲ್ಲಪ್ಪ
ಹುತ್ತದಲಿ ನೀ ಇರುವೇನಪ್ಪ
ಹಾಲನ್ನು ನಾ ಹಾಕುವೆನಪ್ಪ
ಹೊರಗೆ ಬಂದು ನೀ ಹರಸು ನನ್ನಪ್ಪ
ಎಲ್ಲರಿಗೂ ಖುಷಿಯ ಹಬ್ಬವ ತಂದು
ಹರಸು ನೀ ಎದುರಿಗೆ ಬಂದು
ನಾಗಪ್ಪ ನೀ ಇದ್ದರೆ ಇಳೆಯು
ಹಸಿರಾಗಲಿ ಎಲ್ಲೆಡೆ ಬೆಳೆಯು.
8 ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲ್ಲೂಕು, ಬಳ್ಳಾರಿ ಜಿಲ್ಲೆ
********************************************