ಮಕ್ಕಳ ಕವನಗಳು - ರಚನೆ : ಪ್ರಥ್ವಿ ಮಹಾಬಲೇಶ್ವರ ಜೋಶಿ, ಪ್ರಥಮ ಪಿಯುಸಿ
Wednesday, September 20, 2023
Edit
ಮಕ್ಕಳ ಕವನಗಳು
ಕವನ ರಚನೆ : ಪ್ರಥ್ವಿ ಮಹಾಬಲೇಶ್ವರ ಜೋಶಿ
ಪ್ರಥಮ ಪಿಯುಸಿ
ವಿಶ್ವದರ್ಶನ ಪದವಿಪೂರ್ವ ಕಾಲೇಜು
ಯಲ್ಲಾಪುರ, ಉತ್ತರ ಕನ್ನಡ
ಮಹಾನ್ ನಾಯಕರ ಬೀಡಿದು...
ಸಾಹಸಪೂರ್ಣ ಮಣ್ಣಿನ ಸೊಗಡಿದು...
ವಿವಿಧ ಕಲೆ-ಕೌಶಲ್ಯಗಳ ತವರೂರು...
'ಸತ್ಯಮೇವ ಜಯತೆ'ಯೆಂಬ
ಮಾತೆಂದಿಗೂ ಹಸಿರು...
ಈ ನೆಲವ ತಲುಪುತಿರೆ, ಮಳೆಯ ಹನಿಗಳೂ
ಮಧುರನಾದದಿ ಮೊಳಗಿಹುದು.....
ಹರಿಯುವ ನೀರಲಿ, ಭಾರತೀಯನೆಂಬ
ಹೆಮ್ಮೆಯ ಬಿಂಬ ಒಡಮೂಡುವುದು...
ಹೆಜ್ಜೆ ಹಾಕಿದಂತೆ ಭವ್ಯ ಇತಿಹಾಸ ಬೆಳೆಯುವುದು...
ಕವಿಪುಂಗವರ ಅದ್ಭುತ ನೆಲೆಯಿದು..
ಗಂಗೆಯು ಹರಿಯುವ
ಪುಣ್ಯ ತಾಣವಿದು....
ಗೀತೆಯ ಸಾರವಿಹ ಹಿರಿನಾಡು...
ಇಲ್ಲಿರಲು ಸೂರ್ಯ-ಚಂದ್ರರೂ
ಹೆಮ್ಮೆಯ ಪಡುತಿಹರು, ಇದ ನೋಡು!
ಪ್ರಕೃತಿಯ ಕಣ-ಕಣವೂ ಒಂದುಗೂಡಿಹುದು...
ನಮ್ಮ ಹೆಮ್ಮೆಯ ರಾಷ್ಟ್ರಕಿದೋ
ನಮನವ ಸಲಿಸುತಿಹುದು...
ಆಹಾ! ಎಂತಹ ಸೊಬಗಿದು...
ನೋಡಲು ಕಣ್ಣುಗಳೆರಡಿದೋ ಸಾಲದು...
ಗುಡಿ ಗೋಪುರಗಳಿಹ ರಾಷ್ಟ್ರವು...
ವೈರಿಗಳಿಗೂ ಒಳಿತ ಬಯಸುವ ಸಂಸ್ಕಾರವು...
ಇಂತಹ ಶ್ರೇಷ್ಠ ರಾಷ್ಟ್ರದಲಿ ಜನಿಸಿಹೆವು...
ಇದೆಮಗೆ ದೊರಕಿದ ಸೌಭಾಗ್ಯವು...
ಭಾರತೀಯರನು
ಅಡಿಯಾಳಾಗಿಸಿಕೊಂಡಿದ್ದರೊಮ್ಮೆ ಬ್ರಿಟಿಷರು...
ಆದರೀಗ ಬ್ರಿಟನ್ನಿನಲ್ಲಿಯೇ ಭಾರತೀಯರು...
ಈ ಬೆಳವಣಿಗೆ ಎಂತಹ ಸೋಜಿಗವು...
ಭಾರತವು ಅಭಿವೃಧ್ಧಿ ಹೊಂದಿದ ಸಂಕೇತವು...
ಒಟ್ಟಿನಲಿ,
ಸ್ವಾರ್ಥದ ಬಂಧನದಿಂದ ಬಿಡುಗಡೆ ಹೊಂದುತಾ...
ಏಕತೆಯ ಮಂತ್ರವ ಎಲ್ಲೆಡೆ ಸಾರುತಾ...
ಹಿರಿಯರು ನಡೆದ ದಾರಿಯ
ಹಿರಿಮೆಯ ಹೆಚ್ಚಿಸುತಾ...
ಹೊಸ ಸಂಕಲ್ಪಗಳ ತೇರನು ಎಳೆಯುತಾ..
ರಾಷ್ಟ್ರದ ಗೌರವವ ಹೆಚ್ಚಿಸಲು ಬದ್ಧರಾಗೋಣ..
ಬನ್ನಿ, ನಮ್ಮೀ ರಾಷ್ಟ್ರಕ್ಕೊಂದು
ಹೆಮ್ಮೆಯ ನಮನವರ್ಪಿಸೋಣ...
...................... ಪ್ರಥ್ವಿ ಮಹಾಬಲೇಶ್ವರ ಜೋಶಿ
ಪ್ರಥಮ ಪಿಯುಸಿ
ವಿಶ್ವದರ್ಶನ ಪದವಿಪೂರ್ವ ಕಾಲೇಜು
ಯಲ್ಲಾಪುರ, ಉತ್ತರ ಕನ್ನಡ
********************************************
ಕೊಳಚೆಯ ನೀರಲಿದೋ ಕಾಣೆಯಾದಂತಿಹುದು
ಸ್ವಚ್ಛ ಭಾರತದ ಪುಟ್ಟ ಕನಸುಗಳು...
ಮರದ ಹಸಿರೆಲೆಗಳೂ ಮರುಗಿ, ಸೊರಗಿಹುದು
ನೋಡುತಲಿ ಈ ಸನ್ನಿವೇಶಗಳ...
ಪುಟ್ಟ ಬಾಲಕನೂ ಅಯ್ಯೋ ಎಂದಿಹನು..
ಪೃಥ್ವಿಯ ಕೂಗಿಗೆ 'ಓ' ಗುಟ್ಟಿಹನು..
ಪುಟ್ಟ ಮನಸುಗಳಿಗಿಹ ಯೋಚನೆಯೂ
ನಮಗಿಲ್ಲವೇನು??..
ಸ್ವಚ್ಛತೆಯ ಕಾರ್ಯ ನಡೆಯುತಿಹುದು..
ಪೋಟೋ, ಹೆಸರುಗಳಿಗೆಂದು..
ಮಾತಿಗಷ್ಟೇ ಸ್ವಚ್ಛತೆಯೆಂದರೆ ಸಾಲದು..
ಭೂಮಾತೆಯ ಒಡಲಲಿ ಜನಿಸಿಹ ನಾವಿಂದು.. ಇವುಗಳೆಡೆಗೆ ಗಮನ ನೀಡದಿರುವುದು ಸರಿಯೇ,
ತಿಳಿದೂ ತಿಳಿದೂ!!
ಮೊದಲಿಗರಾರೆಂದು ಕಾಯುತ್ತಿದ್ದರೆ
ಆಗದು ಸ್ವಚ್ಛತೆ...
ಆ ಮೊದಲಿಗರು 'ನಾವೇ' ಎಂದರೆ ಮಾತ್ರ
ಕನಸು ನನಸಾಗುವ ಸಾಧ್ಯತೆ..
ಬನ್ನಿ ಸ್ವಚ್ಛತೆಯೆಡೆಗೆ ಹೆಜ್ಜೆ ಹಾಕೋಣ...
ಮನೆ-ಮನಗಳಲ್ಲಿರುವ ಕಲ್ಮಶಗಳ
ದೂರವಾಗಿಸೋಣ...
ಚಂದ್ರನೂ ಪೃಥ್ವಿಯ ಹೊಳಪಿಗೆ
ತಲೆಬಾಗುವಂತೆ ಮಾಡೋಣ...
ಪ್ರಥಮ ಪಿಯುಸಿ
ವಿಶ್ವದರ್ಶನ ಪದವಿಪೂರ್ವ ಕಾಲೇಜು
ಯಲ್ಲಾಪುರ, ಉತ್ತರ ಕನ್ನಡ
********************************************