ಮಕ್ಕಳ ಕವನಗಳು - ರಚನೆ : ಐಶ್ವರ್ಯ ಮಾ ಚಿಕ್ಕಬಸನ್ನವರ, ದ್ವಿತೀಯ ಪಿಯುಸಿ
Wednesday, September 27, 2023
Edit
ಮಕ್ಕಳ ಕವನಗಳು
ಕವನ ರಚನೆ : ಐಶ್ವರ್ಯ ಮಾ ಚಿಕ್ಕಬಸನ್ನವರ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಯರಗಟ್ಟಿ ತಾಲೂಕು, ಬೆಳಗಾವಿ ಜಿಲ್ಲೆ
ಅಳುವಾಗ ಕಣ್ಣೀರು ಒರಿಸಿದಾತನೇ........
ಕಷ್ಟ ಸುಖದಲ್ಲಿ ಜೊತೆಗಾರನೇ........
ನೀನೇ ನನ್ನ ಪ್ರೀತಿಯ ಅಪ್ಪನೇ.....
ಎಲ್ಲಾ ನೋವುಗಳಿಗೆ ಸ್ಪಂದಿಸುವಾತನೇ.......
ಕೇಳಿದ್ದೆಲ್ಲ ಕೊಡಿಸುವ ಸಹುಕಾರನೇ.......
ನನ್ನ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುವಾತನೇ......
ನೀನೇ ನನ್ನ ಪ್ರೀತಿಯ ಅಪ್ಪನೇ.....
ಎಲ್ಲಾ ಸಮಯದಲ್ಲೂ ಜೊತೆಗಾರನೇ ......
ನನಗಾಗಿ ಜೀವನವನ್ನು ಜೀವಿಸುವಾತನೇ......
ನನಗಾಗಿ ತಮ್ಮ ಬದುಕನ್ನೇ ಮುಡಿಪಿಟ್ಟಾತನೇ.......
ನೀನೇ ನನ್ನ ಪ್ರೀತಿಯ ಅಪ್ಪನೇ...
...................... ಐಶ್ವರ್ಯ ಮಾ ಚಿಕ್ಕಬಸನ್ನವರ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಯರಗಟ್ಟಿ ತಾಲೂಕು, ಬೆಳಗಾವಿ ಜಿಲ್ಲೆ
********************************************
ಹುಚ್ಚು ರೀತಿ......
ನಗುವಿನಲ್ಲಿ ನೀನೇ ದೇವತೆ.....
ನಿನ್ನ ನೋಡುತ ನನ್ನ ನಾನೇ ಮರೆತೆ....
ನೀನೇ ನನ್ನ ಪ್ರೀತಿಯ ಸ್ನೇಹಿತೆ.....
ನೀನೇ ನನ್ನ ಜೀವದ ಒಡತಿ......
ಗುಣದಲ್ಲಿ ನೀನೇ ಹೃದಯವಂತೆ....
ಎಲ್ಲ ನೋವನ್ನು ಮರೆಸುವ ಮಯಾಗಾತಿ......
ಕಷ್ಟದಲ್ಲೂ ಜೊತೆಗಿರುವ ಜೊತೆಗಾತಿ......
ನೀನೇ ನನ್ನ ಪ್ರೀತಿಯ ಸ್ನೇಹಿತೆ......
...................... ಐಶ್ವರ್ಯ ಮಾ ಚಿಕ್ಕಬಸನ್ನವರ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಯರಗಟ್ಟಿ ತಾಲೂಕು, ಬೆಳಗಾವಿ ಜಿಲ್ಲೆ
********************************************
ಆದರೆ ಪ್ರಯತ್ನಗಳನ್ನೆ ಮಾಡದಿರುವುದು
ಜೀವನದಲ್ಲಿನ ದೊಡ್ಡ ಸೋಲು
ನಡೆದಷ್ಟೂ ದಾರಿಯಿದೆ
ಪಡೆದಷ್ಟು ಭಾಗ್ಯವಿದೆ
ಜೀವನ ಅನ್ನೋದು ಸೋಲು ಗೆಲುವಿನ ಆಟ
ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ
ಸೋತವನಿಗೆ ಗೆಲ್ಲಲೇಬೇಕೆಂಬ ಛಲ ಇರುತ್ತೆ
...................... ಐಶ್ವರ್ಯ ಮಾ ಚಿಕ್ಕಬಸನ್ನವರ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಯರಗಟ್ಟಿ ತಾಲೂಕು, ಬೆಳಗಾವಿ ಜಿಲ್ಲೆ
********************************************
ನೀನೇ ನನ್ನ ಜೀವದ ಒಲುಮೆ
ನೀನಿಲ್ಲದ ನಾನು
ನೀರಿಲ್ಲದ ಮೀನು
ನೀನೇ ಜೀವಾಧಾರ
ಪ್ರಾಣಿಗಳಿಗೂ ಆಧಾರ ನೀನೇ
ಪಕ್ಷಿಗಳಿಗೂ ಆಧಾರ ನೀನೇ
ನೀನೇ ಜೀವಾಧಾರ
ಕುಂಬಾರನ ಕೈಯಲ್ಲಿ ಮಡಿಕೆಯಾದೆ
ರೈತನ ಕೈಯಲ್ಲಿ ಬೆಳೆಯಾದೆ
ನೀನೇ ಜೀವಾಧಾರ
ಮೀನುಗಳಿಗೆ ಜೀವವಾದೆ
ಜಲರಾಶಿಗಳಿಗೆ ಆಶ್ರಯವಾದೆ
ನೀನೇ ಜೀವಾಧಾರ.
ರಕ್ಷಕರಿಗೆ ಅಮೃತವಾದೆ.
ಭಕ್ಷಕರಿಗೆ ಚಂಡಮಾರುತವಾದೆ
ನೀನೇ ಜೀವಾಧಾರ
...................... ಐಶ್ವರ್ಯ ಮಾ ಚಿಕ್ಕಬಸನ್ನವರ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಯರಗಟ್ಟಿ ತಾಲೂಕು, ಬೆಳಗಾವಿ ಜಿಲ್ಲೆ
********************************************
ಬಂದು ಸೇರಿದೆವು ಒಂದು ಕಡೆ.....
ಜಾತಿ ಮತ ಎನ್ನದೆ ಭಾಗಿಯಾದೆವು
ಎಲ್ಲರ ನೋವಿಗೆ.....
ಮೋಜು ಮಸ್ತಿ ಮಾಡುತ
ಮರೆತೆವು ಜಗವನೆ.....
ಪರೀಕ್ಷೆಯಲ್ಲಿ ಪರಿದಾಡಿದೆವು
ಎಲ್ಲರೂ ಒಂದೇ ಸಮನೆ.....
ಬಿಟ್ಟು ಹೋಗುವ ಸಮಯ
ಬಂತು ತುಂಬಾ ದು:ಖ
ಇವಾಗ ಮಾತ್ರ ಎಲ್ಲಾ ನೆನಪುಗಳು
ಎಲ್ಲವೂ ಅಷ್ಟೇ ಕ್ಷಣಿಕ ....
...................... ಐಶ್ವರ್ಯ ಮಾ ಚಿಕ್ಕಬಸನ್ನವರ
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಯರಗಟ್ಟಿ ತಾಲೂಕು, ಬೆಳಗಾವಿ ಜಿಲ್ಲೆ
********************************************
ಕೂಡಿದ ಅಮೃತ......
ಖುಷಿಯಿಲ್ಲದಿದ್ದರೆ ಜೀವನವೇ ವ್ಯರ್ಥ.....
ನಾವಷ್ಟೇ ಖುಷಿಯಾಗಿ
ಇರಬೇಕೆಂಬುವುದು ಸ್ವಾರ್ಥ.....
ಎಲ್ಲರೂ ಖುಷಿಯಾಗಿರಬೇಕೆಂಬುವುದೇ ಜೀವನದ ನಿಜವಾದ ಅರ್ಥ....
ದ್ವಿತೀಯ ಪಿಯುಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಯರಗಟ್ಟಿ ತಾಲೂಕು, ಬೆಳಗಾವಿ ಜಿಲ್ಲೆ
********************************************