ಮಕ್ಕಳ ಕವನಗಳು - ರಚನೆ : ಪ್ರತೀಕ್ಷಾ ತಂಟೆಕ್ಕ 8ನೇ ತರಗತಿ
Wednesday, September 6, 2023
Edit
ಮಕ್ಕಳ ಕವನಗಳು
ಕವನ ರಚನೆ : ಪ್ರತೀಕ್ಷಾ ತಂಟೆಕ್ಕ
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್
ಸ್ಕೂಲ್ ಕಕ್ಯಪದವ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ದುಷ್ಟ ಕಂಸನ ಕೊಂದ
ಗೋಪಿಕೆಯರ ಮನವ ಕದ್ದ
ರಾಧೆಯ ಕುಮಾರ
ಮಹಾವಿಷ್ಣುವಿನ ಅವತಾರ
ಪಾರ್ಥನಿಗೆ ತೋರಿಸಿ ನಾನಾವತಾರ
ಜಗದ ಉದ್ದಾರ ಮಾಡಿದ ಜಗದೋದ್ದಾರ
ವೇದ ಪಾಠಗಳ ಭಂಡಾರ
ದೇವಕಿಯ ಸುಕುಮಾರ
ಬೆಣ್ಣೆ ಕದ್ದ ಬೆಣ್ಣೆಯ ಚೋರ.
ಧರಿಸಿದ ಹಳದಿಯ ಪೀಠಾಂಬರ
ಎಲ್ಲರ ಮನಸ್ಸನ್ನು ಗೆದ್ದ ಮನೋಹರ
ನವಿಲುಗರಿಯ ಕಿರೀಟ ಇವನ ಶೃಂಗಾರ
ಕೊಳಲನೂದುತ ಬಂದ ಮುರಳೀಧರ
ಸುಭದ್ರೆ ಬಲರಾಮರ ಸಹೋದರ
ಮಹಾಭಾರತ ಕಥನದ ಸೂತ್ರದಾರ
ಹಸು ಪ್ರಿಯನು ರುಕ್ಮಿಣಿಯ ಪ್ರಿಯಕರ
ಆತನು ಬಲು ಸುಂದರ.
ಗೋಪಿಕೆಯರ ಮಡಿಕೆಯನ್ನು
ಒಡೆಯುವ ತುಂಟತನ
ಧರ್ಮದ ದಾರಿಯನು
ಜಗತ್ತಿಗೆ ತೋರಿದ ಮಧುಸೂದನ.
ಗೋಕುಲದ ಜನರ ಪ್ರೀತಿಯ ಗೋಕುಲಪ್ರಿಯ
ರಾಧೆಯ ಕೃಷ್ಣ ಸಾರಿದ ಜಗತ್ತಿಗೆ ಪ್ರೀತಿಯ
ಭಕ್ತ ಸುಧಾಮನ ಒಲವಿನ ಗೆಳೆಯ.
ಇಡೀ ಮೂರು ಲೋಕದ ಒಡೆಯ
ಈತನಿಗೆ ತಲೆ ಬಾಗಿ ಬಾಗಿಸುವೆನು ನನ್ನ ಶಿರ
ಜೋಡಿಸುವೆನು ನನ್ನ ಕರ.
ಇಡೀ ಜಗತ್ತಿಗೆ ಶ್ರೀ ಕೃಷ್ಣ ಗುರು,
ಆದ್ದರಿಂದ ಕೃಷ್ಣಂ ವಂದೇ ಜಗದ್ಗರುಮ್.
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್
ಸ್ಕೂಲ್ ಕಕ್ಯಪದವ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************