ಪ್ರೀತಿಯ ಪುಸ್ತಕ : ಸಂಚಿಕೆ - 75
Friday, September 8, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 75
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಈ ಪುಸ್ತಕದಲ್ಲಿ ಚಿತ್ರಗಳೇ ಸಾಕಷ್ಟು ಕಥೆ ಹೇಳುತ್ತವೆ. ಕೆಲವು ಪುಟಗಳಲ್ಲಿ ನಾಲ್ಕಾರು ಸಾಲು ಬರಹವಿದೆ. ಪುಟ್ಟ ಹುಡುಗ ಮತ್ತು ಅವನ ಪ್ರೀತಿಯ ನಾಯಿ ತಿರುಗಾಡಲು ಹೊರಡುತ್ತಾರೆ. ಹೊರಟಾಗಲೇ ಅಮ್ಮ ಅವನಿಗೆ ಏನೇನು ಮಾಡಬಾರದು ಅಂತ ಹೇಳಿರುತ್ತಾಳೆ. ಆದರೆ ಅವನು ಮತ್ತು ತಂಬಿ ಎಲ್ಲವನ್ನೂ ಮಾಡಿ ಮಜಾ ಮಾಡುತ್ತಾರೆ. ಬಹಳ ಸುಂದರವಾಗಿ ದಿನ ಕಳೆಯುತ್ತಾರೆ. ಮನೆಗೆ ತಡವಾಗಿಯೂ ತಲಪುತ್ತಾರೆ. ಇಡೀ ದಿನ ಸುತ್ತಿದರೂ ಕೆಸರು ಅಂಟಿಸಿಕೊಂಡಿರುವುದಿಲ್ಲ. ಕೊನೆಯಲ್ಲಿ ಮಾತ್ರ ತಂಬಿ ಕೆಸರಲ್ಲೇ ಓಡುತ್ತಾನೆ. ಅಂತೂ ಮನೆಗೆ ತಲುಪಿ, ಮನೆಯಲ್ಲಿ ಚಂದ ಸ್ನಾನ ಮಾಡುತ್ತಾರೆ. ಮುದ್ದು ಮುದ್ದಾದ ಚಿತ್ರಗಳು ಇವೆ. ನೀವು ಕೂಡಾ ಎಲ್ಲಾದರೂ ನಿಮ್ಮಷ್ಟಕ್ಕೇ ತಿರುಗಾಡಿ ಬಂದು ನೀವು ನೋಡಿದ್ದನ್ನು ಚಿತ್ರ ಬರೆದು ಅನುಭವ ಬರೆಯಬಹುದು.
ಲೇಖಕರು: ಲಾವಣ್ಯ ಕಾರ್ತಿಕ್
ಅನುವಾದ: ಪ್ರೊಯಿತಿ ರಾವ್
ಚಿತ್ರಗಳು: ಜೈ ಶ್ರೀ ಉಲ್ಲಾಸ್
ಪ್ರಕಾಶಕರು: ತುಲಿಕಾ
ಬೆಲೆ: ರೂ.175
ನಾಲ್ಕು ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗಾಗಿ ಇದೆ. ದೊಡ್ಡ ಮಕ್ಕಳೂ ಓದಿ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************