ಪ್ರೀತಿಯ ಪುಸ್ತಕ : ಸಂಚಿಕೆ - 74
Friday, September 1, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 74
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ..... ಕಸ್ತೂರ್ಬಾ ಅವರ ಹೆಸರು ನೀವು ಕೇಳಿರಬಹುದು. ಗಾಂಧಿ ತಾತಾ ಮತ್ತು ಅವರು ಗಂಡ-ಹೆಂಡತಿಯರು. ಪುಟ್ಟ ಹುಡುಗಿ ನೀನಾ ಗೆ ಕಸ್ತೂರ್ಬಾ ಅವರ ಪರಿಚಯ ಆಗಿದ್ದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ಓದಬಹುದು. ನೀನಾ ಗೆ ನಾಟಕ ಮಾಡುವುದು ಇಷ್ಟ. ದುಃಖಪಡುವ ಸೀತೆಯ ಪಾತ್ರ ಮಾಡಿದ್ದಾಳೆ. ಶೂರೆಯಾದ ರಜಿಯಾ ಪಾತ್ರ ಮಾಡಿದ್ದಾಳೆ. ಈಗ ಕಸ್ತೂರ್ಬಾ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಆದರೆ ಕಸ್ತೂರ್ಬಾ ಅವರ ಬಗ್ಗೆ ಏನು ಮಾಡುವುದು ಅಂತ ಗೊತ್ತಾಗುವುದಿಲ್ಲ. ಆಮೇಲೆ ಅವರ ಬಗ್ಗೆ ಓದಿ ಕೇಳಿ ತಿಳಿದುಕೊಳ್ಳುತ್ತಾಳೆ. ಅವರು ಬಹಳ ಧೈರ್ಯವಂತ ಮಹಿಳೆ, ಚಿಕ್ಕವರಿದ್ದಾಗಲೇ ಗಾಂಧೀಜಿಗೆ ಕತ್ತಲು ಅಂದರೆ ಭಯ, ಪಿಶಾಚಿಗಳ ಬಗ್ಗೆ ಭಯವಿತ್ತು. ಆದರೆ ಕಸ್ತೂರ್ಬಾ ಯಾವುದಕ್ಕೂ ಭಯ ಪಡುತ್ತಿರಲಿಲ್ಲ. ಇವೆಲ್ಲಾ ಮಾಹಿತಿ ತಿಳಿದುಕೊಂಡು ನೀನಾ ಹೇಗೆ ನಾಟಕ ಮಾಡಿದಳು ಎಂದು ಪುಸ್ತಕ ಓದಿ ತಿಳಿದುಕೊಳ್ಳಿ.
ಲೇಖಕರು: ತನಯಾ ವ್ಯಾಸ್
ಅನುವಾದ: ಕೌಶಿಕ್ ವೈದೀಶ್ವರನ್
ಚಿತ್ರಗಳು: ತನಯಾ ವ್ಯಾಸ್
ಪ್ರಕಾಶಕರು: ತುಲಿಕಾ
ಬೆಲೆ: ರೂ.150/-
ಐದು ವರ್ಷ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗಾಗಿ ಇದೆ. ದೊಡ್ಡ ಮಕ್ಕಳೂ ಓದಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************