-->
ಜಗಲಿ ಕಟ್ಟೆ : ಸಂಚಿಕೆ - 15

ಜಗಲಿ ಕಟ್ಟೆ : ಸಂಚಿಕೆ - 15

ಜಗಲಿ ಕಟ್ಟೆ : ಸಂಚಿಕೆ - 15
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


     ಜಗಲಿಯ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು......

     ಮಕ್ಕಳ ಜಗಲಿಯ ಎಲ್ಲರಿಗೂ ಪ್ರೀತಿಯ ನಮಸ್ಕಾರಗಳು... ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ. ಕಲಿಕೆಗೆ ಕಾರಣಕರ್ತರಾಗುವ ಪ್ರತಿಯೊಬ್ಬರು ಶಿಕ್ಷಕರೇ... ಕಲಿಸುವುದಕ್ಕಿಂತಲೂ ಕಲಿಕೆಗೆ ಸ್ಪೂರ್ತಿಯಾಗುವವನೇ ನಿಜವಾದ ಶಿಕ್ಷಕ ಎನ್ನಬಹುದು. 
     ಪಠ್ಯವನ್ನು ಕಂಠಪಾಠ ಮಾಡಿ ಪುಟ ಭರ್ತಿ ಮಾಡಿ ಜಾಸ್ತಿ ಅಂಕ ಗಳಿಸುವ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಇಟ್ಟವರೇ ಜಾಸ್ತಿ. ಆದರೆ ಪ್ರಕೃತಿಯ ನಂಟಿನೊಂದಿಗೆ ಅನುಭವದ ಕಲಿಕೆ ಉಂಟಾದಾಗ ಶಾಶ್ವತ ಜ್ಞಾನದ ಜೊತೆಗೆ ಜೀವನ ಕೌಶಲ್ಯವೂ ಲಭ್ಯವಾಗುತ್ತದೆ ಎನ್ನುವುದನ್ನು ಮನಗಾಣಬೇಕಾಗಿದೆ.
     ಒಟ್ಟು ಬದಲಾವಣೆಯ ಹಾದಿಗೆ ಇಂದೇ ಸಜ್ಜಾಗಬೇಕಾದ ಅವಶ್ಯಕತೆ ಇದೆ. ಪ್ರಕೃತಿಯ ಅಳಿವಿನಲ್ಲಿ ನಮ್ಮ ಉಳಿವಿನ ಪ್ರಶ್ನೆ ಅಡಗಿದೆ. ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ನಾವೆಷ್ಟೇ ಮುಂದುವರಿದರೂ ಪ್ರಕೃತಿಯನ್ನು ಮೀರಿ ಎಲ್ಲವೂ ಅಸಾಧ್ಯ ಎನ್ನುವ ನಿಲುವಿಗೆ ಬಂದು ತಲುಪುತ್ತಾ ಇದ್ದೇವೆ. ಜಾಗತಿಕ ತಾಪಮಾನದ ಬಗ್ಗೆ ಮಾತನಾಡುತ್ತಾ ಇದ್ದವರು ಜಗತ್ತು ಕುದಿಯುತ್ತಿರುವ ಬಗ್ಗೆ ಚಿಂತೆ ಮಾಡುವ ದಿನಗಳು ಬಂದಾಗಿದೆ...!!
     ಕಾಡುಗಳು ನಾಶ ಆಗುತ್ತಾ ಇದೆ.. ರಸ್ತೆ, ಫ್ಲಾಟು, ಫ್ಯಾಕ್ಟರಿಗಳು ತುಂಬುತ್ತಾ ಮರಗಳೇ ಕಾಣದಾಗಿದೆ...!! ನದಿ ಮೂಲವನ್ನೇ ನಾಶ ಮಾಡಿ ನದಿಯ ದಿಕ್ಕನ್ನೇ ತಿರುಗಿಸಿದ್ದೇವೆ...! ಬರಬೇಕಾದ ಮಳೆ ಬಂದಿಲ್ಲ... ಬರ ಬರಹುದು ಎಂದು ಕೊರಗುತ್ತಿದ್ದೇವೆ...!! ಭವಿಷ್ಯದ ಪ್ರಶ್ನೆ ನಮ್ಮೆಲ್ಲರ ಮುಂದಿದೆ... ಪ್ರಶ್ನೆ ಪ್ರಜ್ಞೆಯಾಗಬೇಕಾಗಿದೆ...!

       ಶಿಕ್ಷಕರ ದಿನಾಚರಣೆಯ ವಿಶೇಷ ವಾಗಿ "ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು" ಕುರಿತಂತೆ ಬರಹಗಳನ್ನು ಸ್ವಾಗತಿಸಿದ್ದೇವೆ. ಇಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗಾಗಿ 2 ಅಂಕಣಗಳನ್ನು ಮೀಸಲಿಟ್ಟಿದ್ದೇವೆ.... ತುಂಬಾ ಚಂದದ ಸ್ಪಂದನೆ ಸಿಕ್ಕಿದೆ... ಬರೆದು ಪ್ರತಿಕ್ರಿಯಿಸಿದ ನಿಮಗೆಲ್ಲಾ ಧನ್ಯವಾದಗಳು

ಕಳೆದ ಸಂಚಿಕೆಯ ಜಗಲಿಕಟ್ಟೆ - 14 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ವಿಜಯಾ ಬಿ ಶೆಟ್ಟಿ ಸಾಲೆತ್ತೂರು.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಮಕ್ಕಳ ಜಗಲಿ ಮಕ್ಕಳಿಗೆ ಉತ್ತಮ ವೇದಿಕೆ . ಶುಭವಾಗಲಿ. ದ್ರುವ ನಕ್ಷತ್ರಗಳು ಹೊರಬರಲಿ.
................... ಚಂದ್ರಶೇಖರ ಗಟ್ಟಿ ನರಿಕೊಂಬು.
******************************************



ಎಲ್ಲರಿಗೂ ನಮಸ್ಕಾರ....
     ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎಂ.ಪಿ. ಜ್ಞಾನೇಶ್ ರವರ ಜೀವನ ಸಂಭ್ರಮಕ್ಕೆ ಶತಕದ ಸಂಭ್ರಮ. ಅನೇಕ ಕೆಲಸಗಳ ಒತ್ತಡಗಳ ನಡುವೆಯೂ ಮಕ್ಕಳಿಗಾಗಿ ಬಿಡುವು ಮಾಡಿಕೊಂಡು ಬರೆಯುತ್ತಿರುವ ಶ್ರೀ ಎಂ. ಪಿ. ಜ್ಞಾನೇಶ್ ಸರ್ ರವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಸ್ತುತ ಸಂಚಿಕೆಯಲ್ಲಿ ರಟಗಳ್ಳಿ ಮತ್ತು ಬಾಳೆಗಿಡದ ಕಥೆ ಹಾಗೂ ಶಾಲೆಯಲ್ಲಿ ನಡೆದ ಘಟನೆಯ ಉದಾಹರಣೆಯ ಮೂಲಕ ಯಾವತ್ತೂ ದುರಾಭ್ಯಾಸ ದುಶ್ಚಟಗಳಿಂದ ದೂರವಿರುವವರ ಜೊತೆಗೆ ದುಷ್ಟ ವ್ಯಕ್ತಿಗಳಿಂದಲೂ ಸಾಕಷ್ಟು ಅಂತರದಿಂದಿರಬೇಕು ಎನ್ನುವುದನ್ನು ಬಹಳ ಸುಂದರವಾಗಿ ತಿಳಿಸಿದ್ದಾರೆ. ಧನ್ಯವಾದಗಳು ಸರ್ ತಮಗೆ. 
     ಗಳಿಕೆ ನ್ಯಾಯಯುತವಾಗಿರಬೇಕು. ಉತ್ತಮ ಕಾರ್ಯಗಳಿಗೆ ವಿನಿಯೋಗವಾಗಿ ಸದ್ಬಳಕೆಯಾಗಬೇಕು. ಗಳಿಸಿದ ಒಂದಷ್ಟು ಅಂಶವನ್ನಾದರೂ ಸಮಾಜಕ್ಕೆ ವಿನಿಯೋಗಿಸಬೇಕೆನ್ನುವ ರಮೇಶ್ ಸರ್ ರವರ ಈ ಸಲದ ಸಂಚಿಕೆ ಸೊಗಸಾಗಿತ್ತು ಧನ್ಯವಾದಗಳು ಸರ್.
     ದೃತಿ ಯವರ ರಕ್ಷಾ ಬಂಧನ ಕುರಿತಾದ ಕವನ ಸೊಗಸಾಗಿತ್ತು. ಅಖಿಲ್ ರವರ ಚಿತ್ರಗಳು ಕೂಡ ಚೆನ್ನಾಗಿವೆ. ಅಭಿನಂದನೆಗಳು ಮಕ್ಕಳಿಗೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಕುರಿತಾಗಿ ಪೂರ್ಣಿಮಾ ಮೇಡಂರವರ ಲೇಖನ ಸುಂದರವಾಗಿ ಮೂಡಿ ಬಂದಿದೆ.
     ಚಾರಣದ ಅನುಭವದೊಂದಿಗೆ ಹಿಮಾಲಯದಲ್ಲಿ ಮಾತ್ರ ಕಾಣಸಿಗುವ ಮತ್ತೊಂದು ಹೊಸ ಹಕ್ಕಿಯ ಪರಿಚಯ ಚೆನ್ನಾಗಿತ್ತು. ಅರವಿಂದರವರಿಗೆ ನಮನಗಳು. 
     ನಮ್ಮ ಸುತ್ತುಮುತ್ತಲಿರುವ ಅನೇಕ ಸಸ್ಯಗಳು ನಮಗೆ ಚಿರಪರಿಚಿತವಲ್ಲದಿದ್ದರೂ ತುಂಬಾ ಉಪಯುಕ್ತವಾಗಿರುತ್ತವೆ. ನಿಷ್ಪಾಪಿ ಸಸ್ಯಗಳ ಕುರಿತಾದ ಲೇಖನ ಸರಣಿ ಇಂತಹ ಗಿಡಗಳ ಪರಿಚಯವನ್ನು ಬಹಳ ಸುಂದರವಾಗಿ ಮಕ್ಕಳಲ್ಲಿ ಜೊತೆಗೆ ಜಗಲಿಯ ಎಲ್ಲರಲ್ಲೂ ಮೂಡಿಸುತ್ತಿದೆ. ಈ ಸಲ ಸಾಂಬ್ರಾಣಿ ಸಸ್ಯದ ಪರಿಚಯವೂ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ. ವಿಜಯಾ ಮೇಡಂ ರವರಿಗೆ ಧನ್ಯವಾದಗಳು.
     ಹೃದಯದ ಮಾತು ಸಂಚಿಕೆ - 6 ರಲ್ಲಿ ಯಾಕೂಬ್ ಸರ್ ರವರು ಓರ್ವ ಮಗುವಿನ ಮನೆಯ ಪರಿಸರದ ಕಾರಣದಿಂದಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳದಿರುವ ವಿಷಯವನ್ನು ತಿಳಿದ ಶಿಕ್ಷಕಿಯೋರ್ವರು ಆ ಮಗುವಿನ ಕಲಿಕೆಯಲ್ಲಿ ತೊಡಗಿಸಿಕ್ಕೊಳುವಂತೆ ಮಾಡಿದ ರೀತಿ ಜೊತೆಗೆ ಆ ಮಗು ಕೊನೆಯ ತನಕ ಆ ಶಿಕ್ಷಕಿಯನ್ನು ಆತನ ಮನದಾಳದ ಮೆಚ್ಚಿನ ಶಿಕ್ಷಕಿಯಾಗಿ ಸ್ವೀಕರಿಸುವ ಜೊತೆಗೆ ಆತನ ತಾಯಿಯಾಗಿ ಕರ್ತವ್ಯ ನಿರ್ವಹಿಸುವ ಸನ್ನಿವೇಶ ತುಂಬಾ ಮನೋಜ್ಞವಾಗಿತ್ತು. ಸೊಗಸಾದ ಲೇಖನ. ಧನ್ಯವಾದಗಳು ಸರ್.
     ಮಕ್ಕಳ ಲೇಖನದಲ್ಲಿ ಮಿಕ್ದಾದ್ ನ ಲೇಖನ ಎಲ್ಲಾ ಮಕ್ಕಳಿಗೆ ಪುಸ್ತಕ ಓದುವುದರ ಬಗ್ಗೆ ಉತ್ತಮ ಸಂದೇಶ ನೀಡಿದೆ. ಸೊಗಸಾದ ಲೇಖನ. ಅಭಿನಂದನೆಗಳು ಮಿಕ್ದಾದ್ ಗೆ. ಕಸ್ತೂರ್ಬಾ ರವರ ಪುಸ್ತಕದ ಪರಿಚಯ ಚೆನ್ನಾಗಿದೆ. ವಂದನೆಗಳು ವಾಣಿಯಕ್ಕನವರಿಗೆ. ಶಿಕ್ಷಕರ ಸ್ಕೂಲ್ ಡೈರಿ ಅಂಕಣದಲ್ಲಿ ಪ್ರಶಾಂತ್ ಅನಂತಾಡಿ ಯವರು ಬರೆದ ಅನುಭವ ಲೇಖನ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಕೋನಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ..
      ಪದದಂಗಳ ಯಶಸ್ವಿಯಾಗಿ ಮುಂದುವರಿಯುತ್ತಿದೆ. ವಂದನೆಗಳು ರಮೇಶ್ ನಾಯ್ಕ ಉಪ್ಪುಂದ ರವರಿಗೆ. ಈ ವಾರದ ಜಗಲಿಯಲ್ಲಿ ಮಕ್ಕಳ ಬರಹಗಳು ಕವನಗಳು ಚಿತ್ರಗಳು ಹಿರಿಯರ ಲೇಖನಗಳು ಎಲ್ಲವೂ ತುಂಬಾ ಖುಷಿ ನೀಡಿವೆ. ಇವೆಲ್ಲದಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ತಾರಾನಾಥ ಕೈರಂಗಳ ರವರಿಗೆ ಹಾಗೂ ಜಗಲಿಯ ಎಲ್ಲರಿಗೂ ನನ್ನ ಮನದಾಳದ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
******************************************

   ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ಚಂದ್ರಶೇಖರ ಗಟ್ಟಿ ನರಿಕೊಂಬು..... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article