-->
ಮಕ್ಕಳ ಕವನಗಳು - ಕವನ ರಚನೆ : ದಿವ್ಯಶ್ರೀ, 9ನೇ ತರಗತಿ

ಮಕ್ಕಳ ಕವನಗಳು - ಕವನ ರಚನೆ : ದಿವ್ಯಶ್ರೀ, 9ನೇ ತರಗತಿ

ಮಕ್ಕಳ ಕವನಗಳು
ಕವನ ರಚನೆ : ದಿವ್ಯಶ್ರೀ 
9ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
             
ಮರಳಿ ಬಂದಿಹುದು ಸ್ವಾತಂತ್ರ್ಯದ ದಿನ
‌ಭಾರತೀಯರ ಹೆಮ್ಮೆಯ ಸ್ವತಂತ್ರ ದಿನ

ಬಾನೆತ್ತರಕ್ಕೆ ಹಾರಿಸುವೆವು ವಿಜಯ ಪತಾಕೆ 
ಭಾರತಾಂಬೆಗೆ ಪ್ರತೀ ವರುಷದ ಹರಕೆ

ಹಿಂದೆ ನಮಗಿತ್ತು ಬ್ರಿಟಿಷರ ಕಾಟ 
ಭಾರತೀಯರಿಗಿತ್ತು ಅವರನ್ನೋಡಿಸುವ ಹಠ 

ಸ್ವಾತಂತ್ರ್ಯದ ಹೋರಾಟಗಾರರು
ಸ್ವಾತಂತ್ರ್ಯವನ್ನು ನಮಗೆ ಧಾರೆಯನೆರೆದರು

ವೀರವನಿತೆಯರು ಜನಿಸಿದ ನಾಡು
ಇದುವೇ ಸುಂದರ ಹೆಮ್ಮೆಯ ಬೀಡು

ಸಲ್ಲಿಸುವೆ ಭಾರತಾಂಬೆಗೆ ನಮನ 
ಚಿರರುಣಿಯಾಗಿರುವೇ ಅನುದಿನ

ಎಂದೆಂದೂ ಹೇಳುವೇ ಜೈ ಭಾರತಾಂಬೆಯೆಂದು 
ಕೊನೆವರೆಗೂ ಬೀಗುವೆ ಭಾರತೀಯಳೆಂದು......    
................................................... ದಿವ್ಯಶ್ರೀ 
9ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
             
ಓ ಚಿಟ್ಟೆ ನಿನಗೆಷ್ಟು ಸೊಕ್ಕೆ 
ನಿನಗಿದೆ ಬಣ್ಣ ಬಣ್ಣದ ರೆಕ್ಕೆ 
ನಾ ನಿನ್ನ ಹಿಡಿಯ ಬಂದಾಗ 
ನೀ ಹಾರಿ ಬಿಟ್ಟೆ 
ನೆಲವಾಗಲೀ ಗೋಡೆಯಗಲಿ 
ನೀನದರ ಮೇಲೆ ಕೂತು ಬಿಟ್ಟೆ
ನೀನಿರುವ ಚಂದಕ್ಕೆ
ನಾ ಮರುಳಾಗಿ ಬಿಟ್ಟೆ 
ನಿನ್ನ ನೋಡುವಾಗ ಅನ್ನಿಸುತ್ತಿದೆ 
ನಾನಾಗ ಬಾರದಿತ್ತೆ ಚಿಟ್ಟೆ 
ಬಣ್ಣ ಬದಲಿಸುವ ಜನರ ಮದ್ಯೆ 
ಹುಟ್ಟಿ ನಾ ಕೆಟ್ಟೆ....!!
................................................... ದಿವ್ಯಶ್ರೀ 
9ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ಓ ನನ್ನ ಗೆಳತಿ 
ಕೊನೆಯವರೆಗೂ ನೀನೆ ನನ್ನ ಗೆಳತಿ

ಖುಷಿಯಾದಾಗ ಭುಜದ ಮೇಲೆ
ಕೈ ಇಟ್ಟು ನಡೆದಿರುವೆ
ಕಷ್ಟಬಂದಾಗ ಬೆನ್ನು ತಟ್ಟಿ 
ನಾನಿರುವೆನೆಂದು ಹೇಳಿರುವೆ 

ನೀ ನನ್ನ ಮನದ ಭಾವನೆಗೆ
ಸ್ಪಂದಿಸುವ ಜೀವ
ನಿನ್ನ ಸ್ನೇಹ ನನಗೊಂದು 
ಅದ್ಬುತ ಭಾವ

ನೀನಿದ್ದರೆ ನನಗೆ ಜೋಡಿ 
ನೀನೆ ನನಗೆ ಒಡನಾಡಿ 

ನಿನ್ನ ಒಳಿತಿಗಾಗಿ ಹಾರೈಸುವೆ 
ಪ್ರಾಣ ಗೆಳತಿ
ನನ್ನ ಮರೆಯದಿರು 
ಸ್ನೇಹದ ಒಡತಿ 
................................................... ದಿವ್ಯಶ್ರೀ 
9ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ಓ ವರುಣ ದೇವಾ ಕೇಳೆಯಾ
ನಮ್ಮ ಆತಂಕದ ಮೊರೆಯಾ

ಒಣಗಿ ಬರಡಾಗಿದೆ ಭೂಮಿ 
ಕರುಣೆ ತೋರೆಯಾ ಸ್ವಾಮಿ 

ಜೀವ ಸಂಕುಲವು ಚಡಪಡಿಸುತಿದೆ
ಇಳೆಗೆ ಮಳೆಯನು ಕರುಣಿಸದೆ

ಅದೆಲ್ಲಿ ಮರೆಯಾಗಿ ಕುಳಿತಿರುವೆ ನೀನು 
ಕೈ ಮುಗಿದು ಪ್ರಾರ್ಥಿಸುತ್ತಿರುವೆ ನಾನು 

ಕೊನೆಗೂ ನನ್ನ ಪ್ರಾರ್ಥನೆ ಫಲಿಸಿತು
ಭೂಮಿ ತನ್ನ ತನವ ಗಳಿಸಿತು...!
................................................... ದಿವ್ಯಶ್ರೀ 
9ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ನಮ್ಮೂರ ಸುಂದರ ಶಾಲೆ
ಮುಂಜಾನೆಯ ಮಕ್ಕಳ ಸಾಲೆ

ಅವರೆದುರಿಗೆ ಶಿಕ್ಷಕ ವೃಂದ 
ನೋಡಲು ಅದೇ ಬಲು ಅಂದ

ಮಕ್ಕಳದೋ ಬಲು ತುಂಟಾಟ 
ಶಿಕ್ಷಕರದು ಶಿಸ್ತಿನ ಪಾಠ

ಜೊತೆಗೂಡಿ ಮಾಡುವರು ಕೈತೋಟ 
ಅದುವೇ ಒಗ್ಗಟ್ಟಿನ ಒಕ್ಕೂಟ 

ಉತ್ತಮ ರೀತಿಯ ವಿದ್ಯಾಲಯ 
ನಮ್ಮನಿಮ್ಮೆಲ್ಲರ ದೇವಾಲಯ
................................................... ದಿವ್ಯಶ್ರೀ 
9ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

ಪಟ ಪಟ ಗಾಳಿಪಟ
ಬಣ್ಣ ಬಣ್ಣದ ಪಟ
ಇದರ ಜೊತೆ ಆಟ 
ಮಳೆ ಬಂದಾಗ ಓಟ
ಆಡಿ ಹಸಿವಾದಾಗ ಊಟ 
ಮನೆಯಲ್ಲಿ ತಂದೆ-ತಾಯಿಯ ಪಾಠ
ಇದೆಲ್ಲವ ಗಮನಿಸುತಿದೆ 
ನನ್ನ ನೋಟ.....!!
................................................... ದಿವ್ಯಶ್ರೀ 
9ನೇ ತರಗತಿ 
ಸರಕಾರಿ ಫ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article