76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ : ಮಕ್ಕಳ ಕವನ
Tuesday, August 15, 2023
Edit
76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ : ಮಕ್ಕಳ ಕವನ
ಕವನ ರಚನೆ : ರೇಣುಕಾ ಸಂಗಪ್ಪನವರ
ದ್ವಿತೀಯ ಪಿಯುಸಿ
ಕರ್ನಾಟಕ ಕಲಾ ಮಹಾವಿದ್ಯಾಲಯ
ಧಾರವಾಡ ಜಿಲ್ಲೆ
76ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು..
ಅದೊಂದು ಕಾಲ
ಅದುವೇ ಬ್ರಿಟಿಷರೆಂಬ ಪಿರಂಗಿಗಳು
ಭಾರತವನ್ನಾಳಿದ ಕಾಲ
ಬೇಡುತ್ತಾ ಬಂದ ಬ್ರಿಟಿಷರಿಗೆ
ಭಾರತ ನೀಡಿತು ಆಶ್ರಯವನ್ನು
ಅದಕ್ಕೆ ಪ್ರತಿಫಲವಾಗಿ
ಬ್ರಿಟಿಷರು ನೀಡಿದರು ನಿರಾಶೆಯನ್ನು
ರೊಚ್ಚಿಗೆದ್ದಿತ್ತು ಒಂದು ದಿನ ಅದೆಷ್ಟೋ
ಭಾರತೀಯರ ನೋವುಗಳು
ಭಾರತದ ಸ್ವಾತಂತ್ರ್ಯಕ್ಕೆ
ಮಡಿಯಿತು ಅದೆಷ್ಟೋ ಜೀವಗಳು..!!
ಎದ್ದಿತು ಯುದ್ಧಗಳು ಮುಂಗಾರಿನ ಸಿಡಿಲಿನಂತೆ
ಹೆದರಿದರು ಬ್ರಿಟೀಷರು
ಯುದ್ಧದಲ್ಲಿ ಸೋತ ರಾಜನಂತೆ..!!
ಕೊನೆಗೂ ಜಯಶಾಲಿಯಾಯಿತು
ಭಾರತೀಯರ ದೇಶಪ್ರೇಮ
ಎಲ್ಲೆಲ್ಲೂ ಮೊಳಗಿತು
ಎಲ್ಲರೂ ಒಂದೇ ಎಂಬ ಅಮರ ಪ್ರೇಮ..!
ಎಂದೆಂದಿಗೂ ನೆನೆಯುತ್ತೇವೆ
ಸ್ವಾತಂತ್ರ್ಯದ ಆ ದಿನಗಳನ್ನು
ಎಲ್ಲರೂ ಬೆಳೆಸಿಕೊಳ್ಳಬೇಕು
ಸ್ವಾತಂತ್ರ್ಯದ ಆಶಯವನ್ನು..!!
ಪುಣ್ಯ ಭೂಮಿ ನನ್ನ ಭಾರತ
ತ್ಯಾಗ ದಾನದ ಅರ್ಥವೇ ನನ್ನ ಭಾರತ
ನನ್ನ ದೇಶ ಭಾರತ
ನಾನು ಈ ಭಾಗ್ಯವಿದಾತ..!
ದ್ವಿತೀಯ ಪಿಯುಸಿ
ಕರ್ನಾಟಕ ಕಲಾ ಮಹಾವಿದ್ಯಾಲಯ
ಧಾರವಾಡ ಜಿಲ್ಲೆ
********************************************
ನಿತ್ಯ ನಿನ್ನ ಮನದಲ್ಲಿ ಪ್ರಾರ್ಥಿಸುವೆ
ಇಂದು ನಿನ್ನ ಜನುಮದಿನ
ಭಾರತೀಯರು ಕಂಡ ಸುದಿನ
ಪ್ರತಿಜನ್ಮಕ್ಕೂ ನಿನ್ನ ಮಡಿಲಲ್ಲಿ ಜನಿಸುವೆ..
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿಯುಸಿ
ಕರ್ನಾಟಕ ಕಲಾ ಮಹಾವಿದ್ಯಾಲಯ
ಧಾರವಾಡ ಜಿಲ್ಲೆ
********************************************
ಗಡಿಯಲ್ಲಿ ಭಯವ ತೊರೆದು
ಹೋರಾಡುವರು
ಓ ವೀರ ಸೈನಿಕ
ನೀನೆ ನಿಜವಾದ ನಾಯಕ
ದೇಶದ ಕೀರ್ತಿ ಕಳಶವೇ ಸೈನಿಕರು..
ದ್ವಿತೀಯ ಪಿಯುಸಿ
ಕರ್ನಾಟಕ ಕಲಾ ಮಹಾವಿದ್ಯಾಲಯ
ಧಾರವಾಡ ಜಿಲ್ಲೆ
********************************************