ಮಕ್ಕಳ ಕವನಗಳು - ರಚನೆ : ಪ್ರತೀಕ್ಷಾ ತಂಟೆಕ್ಕು, 8ನೇ ತರಗತಿ
Monday, August 28, 2023
Edit
ಮಕ್ಕಳ ಕವನಗಳು
ಕವನ ರಚನೆ : ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್ ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ತೋರಿಸಿದ ಭಾರತದ ಪರಾಕ್ರಮ.
ಆಗಿದೆ ಚಂದ್ರನ ಹಾಗೂ ಭಾರತದ ಸಂಗಮ
ಇಡೀ ಭಾರತದಲ್ಲಿ ಆವರಿಸಿದೆ ಸಂಭ್ರಮ
ಎಲ್ಲೆಲ್ಲೂ ಸಂತೋಷದ ಸರಿಗಮ.
ಇಸ್ರೋ ವಿಜ್ಞಾನಿಗಳ ಪರಿಶ್ರಮ
ಅದಕ್ಕೊಂದು ಸಲ್ಲಿಸಬೇಕು ನಮನ
ಭಾರತದ ಮೇಲೆ ಇದೆ ಪೂರ್ತಿ ಜಗತ್ತಿನ ಗಮನ
ನನಗೆ ನಾನೊಬ್ಬ ಭಾರತೀಯನೆಂದು
ಹೆಮ್ಮೆ ಪಡುವ ದಿನ
ಗರ್ವ ಪಡುವ ಕ್ಷಣ.
ಚಂದ್ರಯಾನ ಎರಡರ ಹಸಿವಿಗೆ
ಚಂದ್ರಯಾನ ಮೂರೆ ಮೃಷ್ಟಾನ್ನ ಭೋಜನ.
ಇದು ಅತ್ಯಂತ ಶುಭವಾರ್ತೆ ಭಾರತೀಯರಿಗೆ
ನಮಗೆಲ್ಲರಿಗೂ ಇದೊಂದು ಒಳ್ಳೆಯ ಒಸಗೆ
ಸೋಲೇ ಗೆಲುವಿನ ಮೆಟ್ಟಿಲು
ಎಂಬ ಮಾತು ಕೇಳಿದೆ ನನ್ನ ಕಿವಿಗೆ
ಚಂದ್ರಯಾನ ಎರಡು ಮತ್ತು ಮೂರು
ಉದಾಹರಣೆಗೆ.
ನಮ್ಮ ಗುರಿಯ ಹಾದಿಯಲಿ
ನಡೆವ ಧೀರ ದಾರಿಯಲಿ
ಯಶಸ್ಸು ಕಂಡ ನೆನಪಿನಲ್ಲಿ
ನಾನೊಬ್ಬ ಭಾರತೀಯನೆಂಬ
ಸಂತಸ ಇದೆ ಮನದಲ್ಲಿ.
ಇಸ್ರೋ ವಿಜ್ಞಾನಿಗಳ ಸಾಧನೆ ಮತ್ತು ಪರಿಶ್ರಮ
ಇದೆ ಈ ಯಶಸ್ಸಿನಲ್ಲಿ
ಚಂದ್ರನ ದಕ್ಷಿಣ ದ್ರುವಕ್ಕೆ ಇಳಿದ
ಮೊದಲ ದೇಶ ಎಂಬ ಹೆಗ್ಗುರುತಿನಲ್ಲಿ
ಭಾರತದ ಬಾವುಟ ಹಾರಾಡುತ್ತಿದೆ
ಪ್ರತಿಯೊಬ್ಬ ಭಾರತೀಯನ ಮನದಲ್ಲಿ.
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್ ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಸಹಾಯ ಮಾಡುವುದು ನಿನ್ನ ಗುಣವೇ ?
ನೀನು ಬಿಸಿಲಿನಲ್ಲಿ ದಣಿದು
ನಮಗೆ ನೆರಳ ನೀಡುವೆ.
ಓಡಿ ಬಂದು ನಾ ದಣಿವೆ
ಕಣ್ಣ ಮುಂದೆ ನೀ ಕಾಣುವೆ.
ಈಗ ಹೇಳು ನೀ ದೇವರು ನೀಡಿರುವ ವರವೇ ?
ಅಬ್ಬಾ! ಎಂದುಕೊಂಡು ನಾ ಮುಗುಳು ನಗುವೆ,
ನಿನ್ನ ನೆರಳಲ್ಲಿ ನಾ ವಿಶ್ರಮಿಸುವೆ.
ಹಣ್ಣಿಗಾಗಿ ನಾ ಕಲ್ಲ ಎಸೆವೇ
ಕಲ್ಲ ಪೆಟ್ಟು ತಿಂದರು ನೀ ಹಣ್ಣು ಕೊಡುವೆ,
ನಿನಗೆ ಅಷ್ಟು ತಾಳ್ಮೆ ಹೇಗೆ ?
ಮರವೇ ಮರವೇ..
ನಿನ್ನ ಸಹಾಯ ನಾ ಹೇಗೆ ಮರೆವೇ ?
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್ ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಹೊತ್ತು ಹೆತ್ತು ತುತ್ತನಿಟ್ಟು
ಸಾಕಿ ಸಲಹಿ ಮುತ್ತನಿಟ್ಟ ಅಮ್ಮ...!
ಕಂದನಿಗೆ ಜಗವ ತೋರಿಸಿ
ಜಗವನ್ನೇ ಕಂದನೆಂದು ಬಾವಿಸಿ
ಜಗವ ನೀ ಮರೆತೆ ಅಮ್ಮ....!
ಕಣ್ಣಿಗೆ ಕಾಣುವ ದೇವತೆ ಅಮ್ಮ.
ದಾರಿ ತಿಳಿಯದ ಕಂದನಿಗೆ
ದಾರಿ ದೀಪ ನೀನಮ್ಮ..!
ದಿಕ್ಕನ್ನೇ ತಿಳಿಯದ ಮಗುವಿಗೆ
ದಿಕ್ಸೂಚಿ ನೀನಮ್ಮ...!
ಕಂದನನ್ನು ಒಂಬತ್ತು ತಿಂಗಳು
ಒಡಲಿನಲ್ಲಿ ಹೊತ್ತೆ...
ಎಂದು ಬಾರವೇನಿಸಲಿಲ್ಲ ನಿನಗೆ
ಆದರೆ ಬೆಳೆದ ಮಕ್ಕಳಿಗೆ
ತಾಯಿಯನ್ನು ಸಾಕಲು
ಭಾರವೆನಿಸುವುದು ಏಕೆ....?
ಮಕ್ಕಳನ್ನು ಮನೆಯಲ್ಲಿಯೇ ಸಾಕಿದೆ
ಆದರೆ ಬೆಳೆದ ಮಕ್ಕಳಿಗೆ
ತಾಯಿಯನ್ನು ಸಾಕಲು ವೃದ್ಧಾಶ್ರಮ ಬೇಕೇ..?
ಮಕ್ಕಳಿಗೆ ಜನನಿಯ ಕಣ್ಣೀರು ಶಾಪದಲ್ಲಿ
ದೊಡ್ಡ ಶಾಪ ಎಂದು ತಿಳಿಯದೆ ಹೋಯಿತೇ..?
ಈ ಶಾಪ ಅವರ ಮಕ್ಕಳ ಮೂಲಕ ತಟ್ಟುವುದು
ಎಂದು ಅರಿಯದೆ ಹೋಯಿತೇ...?
ಬೆಳೆದ ಮೇಲೆ ತಾಯಿಯನ್ನು
ಸಾಕಲು ಕಷ್ಟವೆಂದು ತಿಳಿವವರಿಲ್ಲ,
ಮಕ್ಕಳನ್ನು ಬೆಳೆಸಲು ತಾಯಿ ಪಡೆದ
ಕಷ್ಟ ತಿಳಿಯದಾಯಿತೇ.....?
ಎಲ್ಲ ಬಂಧಕ್ಕೂ ಮೀರಿದ ಬಂಧ
ಕರುಳ ಸಂಬಂಧ.
ತಾಯಿ ಕಂದನನ್ನು ಬೆರೆಯುವುದೇ
ಮಮತೆ ಎಂಬ ಆ ಬಂಧ
ತಾಯಿ ಬದುಕುವಳು ಕಂದನಿಗಾಗಿಯೇ ಕ್ಷಣ ಕ್ಷಣ
ನಾವೇಗೆ ತೀರಿಸಲು ಸಾಧ್ಯ ಆ ದೇವತೆಯ ಋಣ?
...................................... ಪ್ರತೀಕ್ಷಾ ತಂಟೆಕ್ಕು
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್ ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************
ಇದು ಪಚ್ಚೆ ಪೈರುಗಳ ಸಾಗರ.
ನಮಗೆ ಪರಮಾತ್ಮ ನೀಡಿದ ಸುಂದರ ವರ, ಶುದ್ಧವಾದ ಗಾಳಿಯನ್ನು ನೀಡುವ ಮರ.
ಈ ಮರವನ್ನೇ ಕಡಿದರೆ
ನಮ್ಮ ಭವಿಷ್ಯಕ್ಕೇನು ಆಧಾರ....?
ಶುದ್ಧ ನೀರನ್ನು ಉಳ್ಳ ನದಿ ಸರೋವರ,
ಕಸದಿಂದ ಕಳಪೆಯಾದರೆ
ನಮಗೇನು ಉಪಕಾರ...?
ಪರಿಸರ ಸಂರಕ್ಷಣೆಗೆ ಮಾಡೋಣ ಸಹಕಾರ,
ಶುದ್ಧವಾದ ಗಾಳಿ ಮಲೀನವಾಗುತ್ತಿದ್ದೆಯಲ್ಲಾ...!
ಕಾರಣವೆ ಕಾರ್ಖಾನೆಗಳ ಅಬ್ಬರ.
ಏ.. ಸ್ವಾರ್ಥ ಮಾನವ
ಏಕೆ ಮಲಿನಗೊಳಿಸುವೆ ಈ ಪರಿಸರವ...?
ನೆಟ್ಟ ಬಿಡು ಮತ್ತಷ್ಟು ಗಿಡ ಮರವ
ಆಗ ಅದರಲ್ಲಿ ಕೇಳು ಹಕ್ಕಿಗಳ ಕಲರವ.
ಹಣ್ಣು ಕಾಯಿಗಳನ್ನು ನೀಡುವ
ಸುಂದರ ಮರ
ಅದ ಕಡಿಯುವಾಗ
ಉಂಟಾಗದೆ ನಿನಗೆ ಕನಿಕರ...?
ಪರಿಸರದಲ್ಲಿರುವ ಸರೋವರ
ಅದಂತೂ ಮನೋಹರ...
ಅಬ್ಬಬ್ಬಾ ಅದೆಷ್ಟು ಸುಂದರ !
ಕಾಡು ಎಷ್ಟೋ ಪ್ರಾಣಿಗಳಿಗೆ ಮನೆ
ಈಗ ಕಾಡಾಗುತ್ತಿದೆಯಲ್ಲ ಕೊನೆ...!!
ವನವಿದ್ದರೆ ಪ್ರವಾಹದಿಂದ
ಕೊಡುವುದ್ದಿಲ್ಲವೇ ರಕ್ಷಣೆ...?
ಮಾನವನ ದುಷ್ಕರ್ಮಕ್ಕೆ ಪ್ರಕೃತಿ ಮಾತೆ
ನೀಡುವಳೆ ಕ್ಷಮೆ ?
ಪರಿಸರದ ನೀರು ಮಲಿನಗೊಂಡರೆ
ಮುಂದಿನ ಪೀಳಿಗೆಗೆ ಶುದ್ಧ ನೀರು
ಉಳಿಯುದು ಹೇಗೆ... ?
ಪರಿಸರ ನಾಶವಾಗಿ ಹೋದರೆ,
ಕಾರ್ಖಾನೆಗಳ ಆರ್ಭಟದಿಂದ
ಮಲಿನವಾದ ಗಾಳಿ, ಕಲಬೆರಕೆಗೊಂಡ ನೀರು,
ಅರಣ್ಯಗಳ ನಾಶದಿಂದ,
ಭಣ ಭಣ ದಹಿಸುವ ಬಿಸಿಲಿನಲ್ಲಿ
ನಮ್ಮ ಭವಿಷ್ಯ ಅರಳುವುದೇ...?
ನಮ್ಮ ಮುಂದಿನ ಪೀಳಿಗೆ ಕಷ್ಟ ಕಾಣದೆ...?
ಮಾನವ, ಪರಿಸರ ನಾಶ ಮಾಡಬೇಡ
ಭವಿಷ್ಯದ ಬಗ್ಗೆ ಚಿಂತಿಸದೆ ....
ಜೀವನ ನಡೆಸಲು ಕಲಿ
ಪರಿಸರ ನಾಶವ ಮಾಡದೆ.
ಪರಿಸರ ನಾಶದಿಂದ ಆಗುತ್ತಿರುವ
ಅನಾಹುತ ನಿನ್ನ ನೇತ್ರಕೆ ಕಾಣದೆ......?
ಪ್ರವಾಹದಿಂದ ಕೊಚ್ಚಿ ಹೋದ
ಜನರ ಸಂಖ್ಯೆ ಎಣಿಸಲಾಗದಷ್ಟಿದೆ....
ನಿನ್ನ ತಲೆಗೆ ಇವೆಲ್ಲವು ಗೋಚರವಾಗದೆ....?
ಪರಿಸರವ ರಕ್ಷಿಸಿ
ಅರಳಿಸು ಎಲ್ಲರ ಭವಿಷ್ಯವ
ನನ್ನ ಈ ಕೋರಿಕೆಯ ಈಡೇರಿಸು ಮಾನವ...!
ಅರಳಿಸು ಪರಿಸವೆಂಬ ದೇವರ ವರವ
ಬೆಳಗಿಸು ಎಲ್ಲರ ಭವಿಷ್ಯವ
ಬದುಕಿಸು ಮುಂದಿನ ಪೀಳಿಗೆಯ.
ಕೊನೆಗೆ ನಾ ಹೇಳುವುದಿಷ್ಟೇ
ಪರಿಸರವ ರಕ್ಷಿಸಿ, ನಾಡನ್ನು ಉಳಿಸಿ.
8ನೇ ತರಗತಿ
ಯಲ್. ಸಿ. ಆರ್ ಇಂಡಿಯನ್ ಸ್ಕೂಲ್ ಕಕ್ಯಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************