76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ : ಮಕ್ಕಳ ಕವನ
Monday, August 14, 2023
Edit
76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ : ಮಕ್ಕಳ ಕವನ
ಕವನ ರಚನೆ : ನಂದಿತಾ ಯು ತೋರಣಗಲ್
ಪ್ರಥಮ ಪಿಯುಸಿ
ಕ್ಲಾಸಿಕ್ ಪಿಯು ಕಾಲೇಜು,
ಧಾರವಾಡ.
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
76ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು..
ಚಿನ್ನದ ರೆಕ್ಕೆಯ ಧರಿಸಿ..
ಮಿಂಚುತ್ತಾ ಜಗದ ಕಣ್ಣಿಗೆ..
ಹಾರುತ್ತಿತ್ತು ಆನಂದದಿ ಮೇಲೆ, ಮೇಲೆ..!!
ಒಮ್ಮೆ ಹಾಕಿದರು ಯುರೋಪಿನ
ಬೇಡರು ಹೊಂಚ,
ಇಟ್ಟರು ಪಂಜರದಲ್ಲಿ ಸೌಮ್ಯಸ್ವಭಾವದ ಹಕ್ಕಿಯಾ...!
ಕಳೆದುಕೊಂಡಿತು ಬಂಗಾರದ ಹಕ್ಕಿ ಸ್ವತಂತ್ರವ
ಕಸಿದರು ಲೂಟಿಕೋರರು
ಹಕ್ಕಿಯ ಸಿರಿವಂತಿಕೆಯ..
ಹೋರಾಡಿದರು ಹಕ್ಕಿಯ ಧೀರ ಮಕ್ಕಳು,
ಹರಿಸಿದರು ರಕ್ತವ ತಾಯಿಗಾಗಿ..!!
ಹಾರಿತು ಬಂಧನದಿಂದ ಹಕ್ಕಿಯು
ಕೇಸರಿ ಬಿಳಿ ಹಸಿರ ಬಟ್ಟೆಧರಿಸಿ
ಹಾರಿತು ಮತ್ತೆ ತ್ಯಾಗ-ಬಲಿದಾನವ ಮೀರಿ..
ಸಿರಿಯ ಕಳಕೊಂಡ ಹಕ್ಕಿಯು
ಹಸಿವು ಬಡತನದಿ ನರಳಿತು
ಕಷ್ಟಗಳ ಹಿಮ್ಮೆಟ್ಟಿ ಮತ್ತೆ ಬೆಳೆಯ ತೊಡಗಿತು
76ವರ್ಷ ತುಂಬಿದ ನಮ್ಮೀ ಹೆಮ್ಮೆಯ ಹಕ್ಕಿಯು
ಮಿಂಚುತ್ತಿದೆ ಇಂದು ಜಗತ್ತಿನಲ್ಲಿ ವಿಶಿಷ್ಟವಾಗಿ..
ನಮ್ಮೀ ಭಾರತಿ ಹಕ್ಕಿಗೆ ಜಯವಾಗಲಿ
ಶತ-ಶತ ವಂದನೆಗಳು ಮಾತೆ ಭಾರತಿ..
ಜೈ ಹಿಂದ್ ಜೈ ಭಾರತ ಮಾತೆ..
ಪ್ರಥಮ ಪಿಯುಸಿ
ಕ್ಲಾಸಿಕ್ ಪಿಯು ಕಾಲೇಜು,
ಧಾರವಾಡ.
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
********************************************