76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ : ಮಕ್ಕಳ ಕವನ
Monday, August 14, 2023
Edit
76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ
ಮಕ್ಕಳ ಕವನ
ಕವನ ರಚನೆ : ಧನ್ವಿತಾ ಕಾರಂತ್
9ನೇ ತರಗತಿ
ಶ್ರೀ ಸತ್ಯಸಾಯಿ ಲೋಕ ಸೇವಾ
ಪ್ರೌಢ ಶಾಲೆ, ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಹೊಳೆದಿದೆ ವಿಶ್ವದಿ ನಿನ್ನಯ ಕಾಂತಿ
ಜಯ ಜಯ ಹಿಮಾದ್ರಿ ಶಿಖರ ಮುಕುಟಧಾರಿಣಿ
ಶತ್ರುಸೈನಿಕರ ವಧಿಸುವ ಭಯ ನಿವಾರಿಣಿ
ಗಂಗೆ ಯಮುನೆ ಕಾವೇರಿ ನದಿಗಳೊಡತಿಯು
ಗಿರಿಶಿಖರ ವನಸಿರಿಯ ಸೊಬಗ ರಾಣಿಯು
ನಿನ್ನ ಪಾದ ಪೂಜೆಗೆಂದು ಹಾತೊರೆವ ಕಡಲುಗಳು
ನಿನ್ನ ಮಕ್ಕಳಾಗಲು ನಲಿಯುವ ಜೀವ ಸಂಕುಲಗಳು
ಸಂಸ್ಕೃತಿ ಕಲೆ ವೈಭವಗಳಲಿ ಬೆರೆತ ಮಣ್ಣಿದು
ಸ್ವರ್ಗದಂತೆ ಕಂಗೊಳಿಸುವ ತಾಯ್ನೆಲವಿದು
ನಿನ್ನ ರಕ್ಷಣೆಯು ನಮ್ಮ ಮುಂದಿನ ಧ್ಯೇಯವು
ನಿನ್ನ ಉತ್ತುಂಗಕೆ ಯಾವುದಿದೆ ಸಾಟಿಯು ?
9ನೇ ತರಗತಿ
ಶ್ರೀ ಸತ್ಯಸಾಯಿ ಲೋಕ ಸೇವಾ
ಪ್ರೌಢ ಶಾಲೆ, ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************