-->
ಪ್ರೀತಿಯ ಪುಸ್ತಕ : ಸಂಚಿಕೆ - 73

ಪ್ರೀತಿಯ ಪುಸ್ತಕ : ಸಂಚಿಕೆ - 73

ಪ್ರೀತಿಯ ಪುಸ್ತಕ
ಸಂಚಿಕೆ - 73
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

                              ಪುಟ್ಟ ಲಾಲಿ
ಪ್ರೀತಿಯ ಮಕ್ಕಳೇ....
     ನೀನು ಚಿಕ್ಕವಳು; ಅದು ಮಾಡಬಾರದು; ಇದು ಮಾಡಬಾರದು – ಅಂತ ಹೇಳುತ್ತಾ ಇದ್ದರೆ, ಚಿಕ್ಕವರಿಗೆ ತುಂಬಾ ಸಿಟ್ಟು ಬರುತ್ತದೆ ಅಲ್ಲವೇ..? ಹಾಗೇನೇ ಲಾಲಿಗೂ ಆಗಿರುತ್ತದೆ. ಲವಲವಿಕೆಯ ಹುಡುಗಿ ಅವಳು. ಮರಹತ್ತುವ ಆಸೆ. ಅದಕ್ಕೆ ‘ನೀನಿನ್ನೂ ಚಿಕ್ಕವಳು’ ಅಂತ ಅಮ್ಮ ಹೇಳುತ್ತಾರೆ.. ಹೀಗೇ ಒಂದೊಂದಕ್ಕೂ ಒಬ್ಬೊಬ್ಬರೂ ಹೇಳುತ್ತಾರೆ. ಅದಕ್ಕೇ ಅವಳು ಚಿಕ್ಕವಳಾಗಿಯೂ ಅವಳು ಏನೇನು ಮಾಡಬಲ್ಲಳು ಅಂತ ಹೇಳುತ್ತಾ ಹೋಗುತ್ತಾಳೆ. ಪುಟ ತುಂಬಾ ಚಿತ್ರ ಇದೆ. ಒಂದೆರಡು ಸಾಲುಗಳ ಬರಹ ಇದೆ. ಮುದ್ದು ಮುದ್ದಾದ ಲಾಲಿಯ ಮಾತುಗಳನ್ನು ಕೇಳಿಸಿಕೊಳ್ಳಿ. ಸುಂದರವಾದ ಚಿತ್ರಗಳನ್ನು ನೋಡಿ. ನೀವೂ ಚಿತ್ರ ಮಾಡಿ. 
ಲೇಖಕರು: ಅಲಂಕೃತ ಜೈನ್ 
ಅನುವಾದ: ಎಸ್ ದಿವಾಕರ್
ಚಿತ್ರಗಳು: ಅಲಂಕೃತ ಜೈನ್
ಪ್ರಕಾಶಕರು: ತುಲಿಕಾ 
ಬೆಲೆ: ರೂ.120/-
ಈ ಪುಸ್ತಕ ಮೂರು ವರ್ಷ ಮೇಲ್ಪಟ್ಟ ವಯಸ್ಸಿನವರಿಗಾಗಿ ಇದೆ. ದೊಡ್ಡ ಮಕ್ಕಳೂ ನೋಡಿ ಆನಂದಿಸುವ ಹಾಗೆ ಇವೆ.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************



Ads on article

Advertise in articles 1

advertising articles 2

Advertise under the article