ಮಕ್ಕಳ ಕವನ - ರಚನೆ : ಲಾವಣ್ಯ
Thursday, August 24, 2023
Edit
76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ : ಮಕ್ಕಳ ಕವನ
ಕವನ ರಚನೆ : ಲಾವಣ್ಯ
ದ್ವಿತೀಯ ಪಿಯುಸಿ
ಸರ್ಕಾರಿ ಪದವಿಪೂರ್ವ ಕಾಲೇಜು
ಕುರ್ನಾಡು , ಮುಡಿಪು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಸ್ವತಂತ್ರ ಭಾರತವಿದು
ಹಚ್ಚ ಕನಸುಗಳ ದಿಟ್ಟ ಹೆಜ್ಜೆಗಳ ಭಾರತವಿದು
ನನ್ನ ಭಾರತವಿದು |
ಹಲವು ಭಾಷೆಗಳ ಹಲವು ಧರ್ಮಗಳ
ದಿವ್ಯ ಭಾರತವಿದು
ಸಹನೆ ಸೌಹಾರ್ದತೆಯ
ಶಾಂತಿ ದ್ಯೋತಕವಿದು
ನನ್ನ ಭಾರತವಿದು |
ಹಲವು ವೀರರ ರಕ್ತದ ಅರ್ಚನೆಯು
ಹಲವು ದೇಶಪ್ರಿಯರ ಕನಸುಗಳು
ಹಲವು ಮನಸ್ಸುಗಳ ಆಶಾ ಭಾವನೆಯ
ಪುಣ್ಯ ಪವಿತ್ರ ಭಾರತವಿದು
ನನ್ನ ಭಾರತವಿದು
ಈ ಮಣ್ಣು ಪಾವಿತ್ರ್ಯತೆಗೆ ದ್ಯೋತಕ
ಈ ಮಣ್ಣ ಕಣಕಣ ಕೆಚ್ಚಿದೆಯ
ಕಲಿಗಳ ಅಪ್ರತಿಮ ಹೋರಾಟದ ದ್ಯೋತಕ
ನನ್ನ ಭಾರತವಿದು ಭವ್ಯ ಭಾರತವಿದು
ದ್ವಿತೀಯ ಪಿಯುಸಿ
ಸರ್ಕಾರಿ ಪದವಿಪೂರ್ವ ಕಾಲೇಜು
ಕುರ್ನಾಡು , ಮುಡಿಪು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************