ಕವನ ರಚನೆ : ಶಿರ್ಷಿತಾ ಕಾರಂತ್, 6ನೇ ತರಗತಿ
Tuesday, August 22, 2023
Edit
76ನೇ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷ : ಮಕ್ಕಳ ಕವನ
ಕವನ ರಚನೆ : ಶಿರ್ಷಿತಾ ಕಾರಂತ್
6ನೇ ತರಗತಿ
ಶ್ರೀ ಸತ್ಯ ಸಾಯಿ ಲೋಕ ಸೇವಾ
ಪ್ರಾಥಮಿಕ ಶಾಲೆ, ಅಳಿಕೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕೇಸರಿ, ಬಿಳಿ, ಹಸಿರಿನ ಭಜನೆ
ಭಗತ್ ಸಿಂಗ್, ಆಜಾದ್, ಗಾಂಧಿಯವರು
ಭಾರತದ ಮಹಾ ನಾಯಕರು
ಸ್ವಾತಂತ್ರ್ಯಕ್ಕಾಗಿ ವೀರರ ಕಾದಾಟ
ದೇಶಭಕ್ತರ ಮುಗಿಯದ ಹೋರಾಟ
ಮಿತಿಮೀರಿದ ಬ್ರಿಟಿಷರ ಕಾಟ
ಗೆದ್ದಿತು ನಮ್ಮಯ ಹೆಮ್ಮೆಯ ಕೂಟ
ಆಗಸ್ಟ್ ಹದಿನೈದು ಖುಷಿಯ ಸಂತೆ
ಬ್ರಿಟಿಷರಿಗೆ ಆಪತ್ಕಾಲದ ಚಿಂತೆ
ಮನೆಮನಗಳಲ್ಲಿ ಸಂತೋಷದ ಕಂತೆ
ವಿಶ್ವದಿ ಭಾರತ ಬೆಳಗಿದೆಯಂತೆ
ಧ್ವಜವು ಹಾರುತಿದೆ ಬಾನಿನಲ್ಲಿ
ವಂದೇ ಮಾತರಂ ಮೊಳಗಿದೆ ನಿಲ್ಲಿ
ತ್ಯಾಗಕೆ ಬೆಲೆಯು ಸಿಕ್ಕಿತು ಇಲ್ಲಿ
ಜನವು ಖುಷಿಯಲಿ ನಲಿದಿದೆಯಲ್ಲಿ
6 ನೇ ತರಗತಿ
ಶ್ರೀ ಸತ್ಯ ಸಾಯಿ ಲೋಕ ಸೇವಾ
ಪ್ರಾಥಮಿಕ ಶಾಲೆ, ಅಳಿಕೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
********************************************