-->
ಜಗಲಿ ಕಟ್ಟೆ : ಸಂಚಿಕೆ - 14

ಜಗಲಿ ಕಟ್ಟೆ : ಸಂಚಿಕೆ - 14

ಜಗಲಿ ಕಟ್ಟೆ : ಸಂಚಿಕೆ - 14
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಇತ್ತೀಚೆಗೆ ಉಪನ್ಯಾಸಕರೊಬ್ಬರು ಫೋನ್ ಮಾಡಿ , "ನನಗೆ ಈ ಮಕ್ಕಳ ಜಗಲಿಯ ಬಗ್ಗೆ ಗೊತ್ತೇ ಇರಲಿಲ್ಲ. ಹಿರಿಯ ಉಪಸಂಪಾದಕ ಕೃಷ್ಣಮೋಹನ ತಲೆಂಗಳ ಇವರ ಸ್ಟೇಟಸ್ ನಲ್ಲಿ ನೋಡಿದೆ. ಇದರಲ್ಲಿ ಹಿರಿಯರ ಮತ್ತು ವಿದ್ಯಾರ್ಥಿಗಳ ಬರಹಗಳನ್ನು ಓದುತ್ತಾ ಖುಷಿಯಾಯಿತು. ಮಕ್ಕಳಿಗೆ ಇದೊಂದು ಉತ್ತಮವಾದ ವೇದಿಕೆ. ಬರೆಯಲು ಆಸಕ್ತಿ ಇರುವ ಹಿರಿಯರಿಗೂ ಉತ್ತಮ ಅವಕಾಶ ಒದಗಿಸಿದ್ದೀರಿ. ನನ್ನ ವಿದ್ಯಾರ್ಥಿಗಳಿಗೂ ಈ ಬಗ್ಗೆ ಮಾಹಿತಿ ಕೊಡುತ್ತೇನೆ." ಅಂದರು. ಮಕ್ಕಳ ಜಗಲಿ ಆರಂಭವಾಗಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಸಾವಿರಾರು ಓದುಗರನ್ನು ತಲುಪಿದೆ. ಇನ್ನೂ ಸಾವಿರಾರು ಓದುಗರನ್ನು ತಲುಪಲು ಬಾಕಿ ಇದೆ. ನಿಧಾನವಾಗಿ ಎಲ್ಲರ ಮನ - ಮನೆಗಳನ್ನು ತಲುಪುತ್ತಿದೆ ಎನ್ನುವುದು ಬಹಳ ಸಂತೋಷದ ವಿಷಯ. ಮಕ್ಕಳಲ್ಲಿ, ಶಿಕ್ಷಕರಲ್ಲಿ, ಪೋಷಕರಲ್ಲಿ , ಹಿತೈಷಿಗಳಲ್ಲಿ ಭಾವನಾತ್ಮಕ ಸಂಬಂಧವನ್ನು ಕೂಡಾ ಬೆಸೆಯುತ್ತಿದೆ.
      ಯಾವ ಭಾಗಕ್ಕೆ ಹೋದರೂ ಮಕ್ಕಳ ಜಗಲಿಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳು ಗುರುತು ಹಿಡಿದು ಬಂದು ಪ್ರೀತಿಯಿಂದ ಮಾತನಾಡುತ್ತಾರೆ. ಜಗಲಿಯ ಕಾರಣದಿಂದಾಗಿ ಇಂತಹ ಒಂದು ಆತ್ಮೀಯತೆ ಸೃಷ್ಟಿಯಾಯಿತು. ಇಂತಹ ಒಂದು ಸಂಸ್ಕಾರ ಬೆಳೆಯಲು ಅವಕಾಶ ನೀಡುತ್ತಿರುವ ಎಲ್ಲಾ ಪೋಷಕರು ಹಾಗೂ ಶಿಕ್ಷಕರ ಬಗ್ಗೆ ನಿಜವಾಗಲೂ ಹೆಮ್ಮೆ ಪಡಬೇಕು. 
      ಜಗಲಿಯಲ್ಲಿ ಮಕ್ಕಳು ಬರಹ ಮತ್ತು ಚಿತ್ರಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ತನ್ನ ಸ್ವ ಅನುಭವಕ್ಕಾಗಿ ಫೋನ್ ಮಾಡಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಕೇಳುತ್ತಾರೆ. ಅವರವರ ವಿಷಯ ಸಂಗ್ರಹಕ್ಕೆ ಅನುಗುಣವಾಗಿ ಜಗಲಿಯಲ್ಲಿ ಬರೆಯುವ ಅನೇಕ ಹಿರಿಯರ ಸಂಪರ್ಕವನ್ನು ಕೇಳುತ್ತಾರೆ. "ಸರ್ ನನಗೆ ರಮೇಶ ಎಂ ಬಾಯಾರು ಅವರ ನಂಬರ್ ಕೊಡಿ , ಹಕ್ಕಿಕಥೆ ಬರೆಯುವ ಅರವಿಂದ ಕುಡ್ಲ ಇವರಲ್ಲಿ ಮಾತನಾಡಬಹುದಾ. ನನಗೆ ಚಂದ್ರಯಾನದ ಬಗ್ಗೆ ಕೇಳ್ಲಿಕ್ಕೆ ಇತ್ತು." ಈ ತರಹ ಪ್ರಶ್ನೆಗಳನ್ನು ಕೇಳುವ ಮಕ್ಕಳ ಸ್ವಾಭಾವಿಕ ಸಹಜ ನಡೆಗಳನ್ನು ಗಮನಿಸುವಾಗ ಮಕ್ಕಳ ಜಗಲಿ ಶಿಕ್ಷಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಅಭಿಮಾನವನ್ನು ಮೂಡಿಸುತ್ತಿದೆ.
      ಜಗಲಿಯ ಹುಟ್ಟಿಗೆ ಕಾರಣಕರ್ತರಲ್ಲಿ ಒಬ್ಬರಾದ ನನ್ನ ಆತ್ಮೀಯರು ವಿಜ್ಞಾನ ಶಿಕ್ಷಕರು ಶ್ರೀರಾಮಮೂರ್ತಿ ಇವರು ಜಗಲಿ ಕಟ್ಟೆಯಲ್ಲಿ ಬರೆಯುತ್ತಾ ಹಿರಿಯ ಹಾಗೂ ಕಿರಿಯ ಬರಹಗಾರರನ್ನು ಪ್ರೋತ್ಸಾಹಿಸುವ ಹಾಗೂ ಸ್ಪೂರ್ತಿ ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇನ್ನು ಅನೇಕರು ಬಿಡುವಿರುವಾಗ ಬರೆದು ಸಹಕರಿಸುತ್ತಿದ್ದಾರೆ. ಇವರಿಗೆ ನನ್ನ ವೈಯಕ್ತಿಕ ಧನ್ಯವಾದಗಳು.


    ಕಳೆದ ಸಂಚಿಕೆಯ ಜಗಲಿಕಟ್ಟೆ - 13 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ಶ್ರೀಮತಿ ‌ಕವಿತಾ ಶ್ರೀನಿವಾಸ್.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


     ಈ ಬಾರಿಯ ಹೃದಯದ ಮಾತು ಸರಣಿಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕ ಯಾಕುಬ್ ಸರ್ ಹೇಳಿದ ಎರಡು ಕತೆಗಳು ಬಹಳ ವಿಶೇಷವಾದವು. ಕಣ್ಣಿಗೆ ಕವಿದ ಮಬ್ಬು ಮರೆಯಾಗಲೇಬೇಕು. ಇಂತಹ ಮೌಲ್ಯಗಳನ್ನು ಕತೆಯ ಮೂಲಕ ಕಟ್ಟಿಕೊಡುವ ಶಿಕ್ಷಣ ಇಂದು ಶಾಲೆಗಳಲ್ಲೂ, ಮನೆಗಳಲ್ಲೂ ಕಣ್ಮರೆಯಾಗಿದೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************   ಜಗಲಿಯ ಹಿರಿಯರಿಗೆ ಮತ್ತು ಕಿರಿಯರಿಗೆ ನನ್ನ ನಮಸ್ಕಾರಗಳು.
       ಆತುರ ಅವಸರದಿಂದ ನಮ್ಮೆಲ್ಲ ಕೆಲಸ ಕಾರ್ಯಗಳು ಕೈಗೂಡದಿರುವುದೇ ಹೆಚ್ಚು. ನಿಧಾನಾಗಿ ಯೋಚಿಸಿದಲ್ಲಿ ನಮಗೆ ಯಾವುದೇ ಕ್ಲಿಷ್ಟಕರ ಸನ್ನಿವೇಶವನ್ನು ಯಶಸ್ವಿಯಾಗಿ ಎದುರಿಸಬಹುದು. ನಿಧಾನವೇ ಎಲ್ಲದಕ್ಕೂ ಪ್ರಧಾನ ಎಂಬ ಸಂದೇಶವನ್ನು ಸಾರುವ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ. ಇವರ ಈ ಸಲದ 'ಅವಧಾನ' ಸಂಚಿಕೆ ತುಂಬಾ ಇಷ್ಟವಾಯಿತು. ಧನ್ಯವಾದಗಳು ಸರ್ ತಮಗೆ.
       ಭಾರತೀಯ ಸಂಸ್ಕೃತಿಯಲ್ಲಿ ಎಲ್ಲದರಲ್ಲೂ ದೇವರನ್ನು ಕಾಣುತ್ತವೆ. ನಾಗರ ಪಂಚಮಿ ವಿಶೇಷ ಲೇಖನದಲ್ಲಿ ನಾಗಪೂಜೆಯ ಮಹತ್ವ ಈ ಆಚರಣೆಯು ಆಹಾರ ಸರಪಳಿಯೊಂದಿಗಿನ ಸಂಬಂಧವನ್ನು ಬಲಪಡಿಸಿ ಜೀವವೈವಿಧ್ಯತೆಯ ರಕ್ಷಣೆಗೆ ಹೇಗೆ ಕಾರಣವಾಗಬಲ್ಲದು ಎಂಬುದನ್ನು ಚಿತ್ರಾ ಶ್ರೀ ಮೇಡಂ ಚೆನ್ನಾಗಿ ವಿವರಿಸಿದ್ದಾರೆ. ಧನ್ಯವಾದಗಳು ಮೇಡಂ.
     ಈ ಸಲದ ಸ್ಪೂರ್ತಿಯ ನುಡಿಗಳ ಮೂಲಕ ನಾವೆಲ್ಲರೂ ಜ್ಞಾನವಂತರಾಗಿ ಪ್ರಜ್ಞಾವಂತರಾಗಿ ಗುಣಶೀಲರಾಗಿ ಸಮಾಜದ ತಿರುಳುಗಳಾಗಬೇಕೆನ್ನುವ ಉತ್ತಮ ಸಂದೇಶವನ್ನು ನೀಡಿದ ರಮೇಶ್ ಸರ್ ರವರಿಗೆ ನನ್ನ ನಮನಗಳು.
     ಮನುಷ್ಯನಂತೆ ಸಿಳ್ಳೆ ಹಾಕುವ ಹಿಮಾಲಯದ ನೀಲಿ ಸಿಳ್ಳಾರ ಹಕ್ಕಿಯ ಛಾಯಾಚಿತ್ರ ಮತ್ತು ವಿವರಣೆ ಚಾರಣದ ಅನುಭವದೊಂದಿಗೆ ತುಂಬಾ ಚೆನ್ನಾಗಿತ್ತು. ಜೊತೆಗೆ ಚಂದ್ರಯಾನದ ಕುರಿತಾದ ಮಾಹಿತಿಯನ್ನುಳಗೊಂಡ ಲೇಖನ ಕೂಡ ಸೊಗಸಾಗಿತ್ತು. ಧನ್ಯವಾದಗಳು ಅರವಿಂದ ಸರ್. ರವರಿಗೆ.
     ನಾಗರ ಪಂಚಮಿ ಹಬ್ಬ ಮತ್ತು ಅರಶಿನ ಗಿಡದ ಸಂಬಂಧ ಜೊತೆಗೆ ಗಿಡದ ಪರಿಚಯ ಮತ್ತು ಉಪಯೋಗದ ಕುರಿತಾದ ಲೇಖನ ಈ ವಾರದ ನಿಷ್ಪಾಪಿ ಸಸ್ಯಗಳು ಸಂಚಿಕೆಯಲ್ಲಿ ಸುಂದರವಾಗಿ ಮೂಡಿ ಬಂದಿದೆ. ವಂದನೆಗಳು ವಿಜಯ ಮೇಡಂರವರಿಗೆ.   
     ಬದುಕಲು ಹಣ ಮುಖ್ಯವಲ್ಲ ಗುಣ ಮುಖ್ಯ - ರಾಜನೊಬ್ಬನ ಕಥೆಯ ಮೂಲಕ ಬಹಳ ಮಾರ್ಮಿಕವಾಗಿ ನಿರೂಪಿಸಿದ್ದಾರೆ. ಯಾಕುಬ್ ಸರ್ ರವರು ಧನ್ಯವಾದಗಳು ಸರ್ ತಮಗೆ.
     ವಾಣಿಯಕ್ಕನವರ ಪುಸ್ತಕ ಪರಿಚಯ ಸಂಕ್ಷಿಪ್ತವಾಗಿ ಓದುಗರಲ್ಲಿ ಪುಸ್ತಕದ ಕುರಿತಾದ ಕುತೂಹಲವನ್ನು ಹೆಚ್ಚಿಸುತ್ತಿದೆ. ಧನ್ಯವಾದಗಳು ಮೇಡಂ.
     ಶಿಕ್ಷಕರ ಅದಮ್ಯ ಪ್ರೀತಿ, ಭರವಸೆ ಹಾಗೂ ಪ್ರೋತ್ಸಾಹದಾಯಕ ನುಡಿಗಳು ವಿದ್ಯಾರ್ಥಿಗಳಲ್ಲಿ ಹೇಗೆ ಬದಲಾವಣೆಯನ್ನು ತರಬಹುದು ಎನ್ನುವುದನ್ನು ಶಿಕ್ಷಕರ ಡೈರಿಯಲ್ಲಿ ಪ್ರೇಮನಾಥ ಮರ್ಣೆಯವರು ತಮ್ಮ ಅನುಭವವನ್ನು ಸೊಗಸಾಗಿ ಹಂಚಿಕೊಂಡಿದ್ದಾರೆ. ನಮನಗಳು ಸರ್ ತಮಗೆ.
       ಈ ಸಲದ ಮಕ್ಕಳ ಚಿತ್ರಗಳ ಸಂಚಿಕೆಗಳು ಹಾಗೂ ಮಕ್ಕಳು ರಚಿಸಿದ ಚಿತ್ರಗಳು ಸೊಗಸಾಗಿ ಮೂಡಿ ಬಂದಿವೆ. ಲಾವಣ್ಯ ರವರ ಕವನ ಕೂಡ ಸೊಗಸಾಗಿದೆ. ಮಕ್ಕಳೆಲ್ಲರಿಗೂ ನನ್ನ ಪ್ರೀತಿಯ ಅಭಿನಂದನೆಗಳು.
     ಬುದ್ಧಿಗೆ ಚುರುಕು ಮುಟ್ಟಿಸುವ ರಮೇಶ್ ನಾಯ್ಕ ಉಪ್ಪುಂದ ಇವರ ಪದದಂಗಳ ಚೆನ್ನಾಗಿದೆ. ಈ ವಾರದ ಜಗಲಿಯಲ್ಲಿ ಬಹಳಷ್ಟು ಲೇಖನಗಳು ಪ್ರಕಟವಾಗಿದ್ದು ತುಂಬಾ ಖುಷಿಯನ್ನು ನೀಡಿವೆ. ಕೊನೆಯದಾಗಿ ತಾರಾನಾಥ ಕೈರಂಗಳ ರವರೊಂದಿಗೆ ಜಗಲಿಯಲ್ಲಿ ಎಲ್ಲರಿಗೂ ನನ್ನ ಪ್ರೀತಿಯ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಸಹ ಶಿಕ್ಷಕಿ, .....ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************
Ads on article

Advertise in articles 1

advertising articles 2

Advertise under the article