-->
ಮಕ್ಕಳ ಕವನಗಳು - ರಚನೆ : ದೀಪಾ ಧ. ಗಿರಿಜನ್ನವರ. ದ್ವಿತೀಯ ಪಿಯುಸಿ

ಮಕ್ಕಳ ಕವನಗಳು - ರಚನೆ : ದೀಪಾ ಧ. ಗಿರಿಜನ್ನವರ. ದ್ವಿತೀಯ ಪಿಯುಸಿ

ಮಕ್ಕಳ ಕವನಗಳು
ಕವನ ರಚನೆ : ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.


             
ನೀವೊಬ್ಬರೇ ಪ್ರತಿದಿನಕ್ಕಿಂತ
ಇಂದು ಪ್ರಕಾಶಿಸುತ್ತಿದ್ದೀರಿ,
ಕಂದಕಗಳ ಮಧ್ಯ 
ತಾಕಲಾಡುತಿಹುದು ಆ ಮಂತ್ರ 
ಅದುವೇ ಗುರು 
ಬ್ರಹ್ಮ ವಿಷ್ಣು ಮಹೇಶ್ವರ...

ನೀವೊಬ್ಬರೇ ಪ್ರತಿ ಕ್ಷಣದಂತೆ
ನೆಲೆ ಕಲೆಗಳಿಗೆ ಶಿಲ್ಪಿಯಾಗಿದ್ದೀರಿ
ಇಂದು ಕನವರಿಸುತ್ತಿದೆ ಅದ್ಬುತದಿ
ಅದುವೇ ಗುರು
ಬ್ರಹ್ಮ ವಿಷ್ಣು ಮಹೇಶ್ವರ....

ಆಕಾಶದ ಅಗಲ ಈಗಿಂದ ಅಲ್ಲ,
ವಿಜ್ಞಾನ ಯಾವತ್ತೂ ಕುಂದಿಲ್ಲ,
ಪ್ರತಿದಿನದ ಶೋಧನೆಗೆ ಸುಜ್ಞಾನದ
ಆರಾಧನೆಗೆ ಎಂದೆಂದೂ
ಮೊಳಗುತಿದೆ ಅನಂತ ಕಾಲದ ಪದ
ಅದುವೇ ಗುರು
ಬ್ರಹ್ಮ ವಿಷ್ಣು ಮಹೇಶ್ವರ.   
............................... ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************



ಪ್ರೀತಿಯ ಗೆಳತಿಯೇ
ಮನಸ್ಸಿನ ಮಾತು ಇದೆ
ಕೇಳಿ ಮನದಲ್ಲಿ ತುಂಬಿಕೊ ನೀನು....

ಕಷ್ಟದಲ್ಲಿದ್ದರೂ ಕಾಪಾಡಿದೆ ನೀ ನನ್ನ
ಮನದಲ್ಲಿ ಇಟ್ಟು ಕೊಂಡು 
ಪೂಜೆ ಮಾಡಿದೆ ನಿನ್ನ
ನೀನು ನೊಂದರೂ ಕೂಡ 
ತಾಳಲಾಗದು ನನ್ನ ಮನ
ಸ್ವಲ್ಪ ಕ್ಷಣವೂ ನಿನ್ನ ಬಿಟ್ಟು ಇರಲಾರೆ ನಾ...!!

ಧೈರ್ಯಗೆಡದೆ ಇರು 
ಎಂದು ಧೈರ್ಯ ತುಂಬಿದೆ ನೀನು 
ಕಷ್ಟ ಕಾಲದಲ್ಲೂ ಕಾಪಾಡಲು ನಿಂತೆ ನೀ  
ಪ್ರೀತಿ ಹಂಚಿದೆ ನೀನು 
ಕಷ್ಟ ಕೇಳಿದೆ ನೀನು
ನನ್ನ ಜೀವನ ನೀನಾದೆ ಗೆಳತಿ
ಜೀವವು ನೀನಾದೆ ಗೆಳತಿ 
ನನ್ನ ಪ್ರಾಣ ನಿನಗೆ ಅರ್ಪಿಸುವೆ 

ತಾಯಿಗಿಂತ ಹೆಚ್ಚು ನಿನ್ನ ಪ್ರೀತಿ ಕಂಡೆ ನಾನು
ನನ್ನ ಹೃದಯದಲ್ಲಿ ವಾಸ ಮಾಡಿದೆ ನೀನು
ನೋವಿನಲ್ಲೂ ನನಗೆ ಖುಷಿಯ ಪಡಿಸಿದೆ ನೀನು 
ನಿನ್ನ ನೋವಿನಲ್ಲೂ ನಾ ಭಾಗಿಯಾಗಿರುವೆ ಗೆಳತಿ. 
............................... ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************



           
ಹೇ ವಸಂತ ಋತುವೇ,
ಏನು ನಿನ್ನ ಸೊಬಗು
ನಿನ್ನ ಸೌಂದರ್ಯವನ್ನು ನೋಡಲು 
ಬಂದೆ ಮನೆಯಿಂದ ಆಚೆಗೆ...

ಪ್ರಕೃತಿಗೆ ಮರು ಜನ್ಮ ನೀಡಿದೆ,
ನಮಗೂ ಹೊಸ ಗಾಳಿ ಉಸಿರು ಕೊಟ್ಟೆ ಸೌಂದರ್ಯವನ್ನು ನೋಡಲು 
ಬಂದೆ ಮನೆಯಿಂದ ಆಚೆಗೆ...

ಯೌವ್ವನದ ಸಂಕೇತ ನೀನಾದೆ,
ಸಂತೋಷದ ದಾರಿ ಕರುಣಿಸಿದೆ,
ನಿನ್ನ ಸೌಂದರ್ಯವನ್ನು ನೋಡಲು 
ಬಂದೆ ಮನೆಯಿಂದ ಆಚೆಗೆ...

ಪ್ರಕೃತಿ ಪ್ರೇಮಿ ನಾನಾದೆ,
ಪರಿಸರ ಒಡಲಲ್ಲಿ ನಾನಿದ್ದೆ
ನಿನ್ನ ಸೌಂದರ್ಯವನ್ನು ನೋಡಲು 
ಬಂದೆ ಮನೆಯಿಂದ ಆಚೆಗೆ,

ಎಲ್ಲೆಲ್ಲೂ ಹಸಿರು ಇಟ್ಟೆ,
ಅದೇ ನಮಗೆ ಉಸಿರಾಡಲು ಕೊಟ್ಟೆ
ನಿನ್ನ ಸೌಂದರ್ಯವನ್ನು ನೋಡಲು 
ಬಂದೆ ಮನೆಯಿಂದ ಆಚೆಗೆ.
............................... ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************


          
ನನ್ನ ಉರಿಸಿನ ಒಡತಿ,
ಕಣ್ಣಿಗೆ ಹೊಳಿಯುವಂತಾಕಿ,
ಶಾಲೆಯೊಳಗೆ ಬಲು ಜುಟಿ,
ಮನಸ್ಸಿಗೆ ನಾಟುವಂತಾಕಿ,
ನನ್ನ ಕಲ್ಪನೆ ಮೀರಿದಾಕಿ,
ನನಗೂ ಕನಸು ಕೊಟ್ಟಾಕಿ,
ಕನಸಿಗೂ ಬೆಳಕಾದಾಕಿ,
ಇವೆಲ್ಲ ಗುಣ ಇರಾಕಿ,
ನನ್ನ ಗೆಳತಿ ಈಕಿ.....
............................... ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************


      
ಕನ್ನಡದಾ ಮಕ್ಕಳು ನಾವೆಲ್ಲ,
ಕನ್ನಡ ಹೆಮ್ಮೆ ಎಂದು ತಿಳಿಯಬೇಕು
ಉಸಿರೆಲ್ಲಾ ಕನ್ನಡವಾಗಿರಬೇಕು
ದೇಹವು ಪ್ರಾಣವೆಲ್ಲ ಕನ್ನಡವಾಗಿರಬೇಕು 

ಈ ಮಣ್ಣಲ್ಲಿ ಹುಟ್ಟಿದ ನಾವೆಲ್ಲ,
ಪುಣ್ಯವಂತರಾಗಿ ಹೋಗೋಣ,
ಇಲ್ಲಿ ಹುಟ್ಟಿದ ರಾಯಣ್ಣ , ಚೆನ್ನಮ್ಮ,
ಹೋರಾಡಿ ಮಡಿದರಲ್ಲ ಬ್ರಿಟಿಷರ ವಿರುದ್ಧ...

ನೀರು ತರಲು ಹೋದಾ ಓಬವ್ವ,
ಕೋಟೆ ರಕ್ಷಿಸಲು ನಿಂತಳು,
ಪರಕೀಯರನ್ನು ಒನಕೆಯಿಂದಲೇ,
ರಾಶಿ ಮಾಡಲು ಸಿದ್ಧಳಾದಳು....!!

ಸಾವು ಎನ್ನದೆ ನೋವು ಎನ್ನದೆ 
ಗುರಿಯನ್ನು ಬಿಡದೆ ಹೋರಾಡಿದರಲ್ಲ,
ಪ್ರಾಣ ತ್ಯಾಗವ ಮಾಡಿದರಲ್ಲ,
ಕನ್ನಡದಾ ವೀರ ವನಿತೆಯರು.....
............................... ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************


 
ಬಂದಿತು ಬಂದಿತು
ಸ್ವಾತಂತ್ರ್ಯದ ದಿನ
ಆಂಗ್ಲರಿಂದ ಬಿಡುಗಡೆಯ ಸುದಿನ
ಭಾರತೀಯರೆಲ್ಲರಿಗೂ ಆನಂದದ ಕ್ಷಣ ||

ಬ್ರಿಟಿಷರಿಂದ ಪಾರಾದ
ನೆನಪಿನ ಒಂದು ದಿನವು
ಏಕತೆ ಮೂಡಿಸಿದೆ ಮನವು
ಸಡಗರ ಸಂಭ್ರಮದ ಕ್ಷಣವು ||

ನಾವೆಲ್ಲರೂ ಒಂದು ಎನ್ನುವ
ಪದ ಅನುಕ್ಷಣ 
ನೊಂದ ಜೀವಗಳಿಗೆ
ಸಾಂತ್ವಾನದ ಮಹತ್ವದ ದಿನ ||

ಅಗಸ್ಟ್ ಹದಿನೈದರಂದು ನಡೆಯುವುದು
ಸಂಭ್ರಮ ಸಡಗರದ ಸ್ವಾತಂತ್ರೋತ್ಸವ
ಆಚರಿಸಿ ಸಂತೋಷ ಸಂಭ್ರಮ ಬಿತ್ತೋಣ
ನಡೆಯಲಿ ದೇಶ ಭಕ್ತಿಯ ಪಯಣ ||

ಎಂದಿಗೂ ಕಣ್ಮರೆಯಾಗದು
ದೇಶಾಭಿಮಾನದ ಒಲವು
ಸಾಗಿ ಅದೇ ಛಲವು ಬಲವು 
ಸ್ವಾತಂತ್ರ್ಯ ದಿನಾಚರಣೆಯ ನಲಿವು ||
............................... ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************

           
             

ಹೇ ಲಕ್ಷ್ಮೀ ಮನೆಗೆ ದಯಪಾಲಿಸಮ್ಮ 
ಹರಸಿ ಹಾರೈಸಿ ನಮ್ಮನು ಉದ್ಧರಿಸಮ್ಮ

ಸರ್ವ ಜನರೆಲ್ಲರೂ ಸ್ಮರಿಸುವರು ನಿನ್ನ
ನೀ ಬರುವ ದಾರಿ ಕಾಯುತಿಹರು
ಕಷ್ಟವ ಕಳೆದು ಹರುಷವ ನೀಡು
ನೋವಿಗೆ ನೀನೇ ನೆರಳಾಗು

ಪ್ರತಿದಿನ ಪೂಜೆ ನಿನಗಾಗಿ ಅಮ್ಮ
ಇರುವ ಫಲವೆಲ್ಲ ನನಗಿರಲಿ ಅಮ್ಮ
ನೀ ಬರುವೆ ಎಂದು ತಿಳಿದಿರುವೇನಮ್ಮ
ಶ್ರದ್ಧೆ ಭಕ್ತಿಯ ವಿದ್ಯಾ ಬುದ್ಧಿಯ ನೀಡಮ್ಮ

ವೆಂಕಟರಮಣನ ಸತಿ ನೀನಲ್ಲವೇ ಅಮ್ಮ
ವೈಭೋಗದ ರಾಣಿ ವೆಂಕಟರಮಣಿಯಮ್ಮ
ನೀ ಇರುವಾ ಮನೆಯು 
ಎಲ್ಲರಿಗೂ ನೆರಳಾಗಿರುವುದಮ್ಮ....
ಕಷ್ಟವ ಅಳಿಸಿ ಸುಖವನ್ನು ನೀ ನೀಡಮ್ಮ. 

ವಿದ್ಯೆಯ ಸಮಯದಿ ಸರಸ್ವತಿಯಾದೆ
ಬಡತನ ಸಮಯದಿ ಧ್ಯಾನ ಲಕ್ಷ್ಮೀಯಾದೆ
ಭಯವ ನಿವಾರಿಸುವ ಧೈರ್ಯದ ಲಕ್ಷ್ಮೀಯಾದೆ 
ಸಾಧನೆ ವಿಷಯದಿ ವಿಜಯ ಲಕ್ಷ್ಮೀಯಾದೆ
ಸಂಸಾರದ ಮನೆಗೆ ಮಹಾಲಕ್ಷ್ಮೀಯಾದೆ ||
............................... ದೀಪಾ ಧ. ಗಿರಿಜನ್ನವರ.
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ.
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
*******************************************

        
ಜಾತಿ ಧರ್ಮ ಮೀರಿದ ಯಾಣ
ದೈವತ್ವಕ್ಕೆ ಪ್ರಸಿದ್ಧ ತಾಣ
ಇರುವ ಜನರೆಲ್ಲರಿಗೂ ಅದೇ ಸಂಸ್ಥಾನ
ನಿಮ್ಮೆಲ್ಲರಿಗೂ ಆಸರೆಯ ಮನ
ಪ್ರತಿಯೊಬ್ಬರಿಗೂ ನೆರಳಾಗೊ ಗುಣ
ಸಂಕಷ್ಟದ ಜನರ ಕಾಪಾಡುವ ಪ್ರಮಾಣ
ನಮ್ಮೆಲ್ಲರ ಸೃಷ್ಟಿಯ ಸುಂದರ ವನ
ನಮ್ಮ ಸವದತ್ತಿ ಕ್ಷೇತ್ರ ಪವಿತ್ರ ಸ್ಥಾನ
............................... ದೀಪಾ ಧ. ಗಿರಿಜನ್ನವರ
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************



ಮಳೆ ಹನಿಯು ಭೂಮಿಗೆ ಬಿದ್ದಿತು
ಇಳೆಗೆ ಹಸಿರ ರತ್ನದ ಕಳೆ ತಂದಿತು
ಮೋಡದ ಮುಸುಕು ಹೊದಿಸಲಾಗಿತ್ತು
ಕಾಣುವ ಕಣ್ಣಿಂದ ಕಣ್ಮರೆಯಾಗಿತ್ತು

ಭೂಮಿಗೆ ಬೀಳುವ ಹನಿಗಳಾಯಿತು
ಎಲೆಗಳಿಗೂ ರತ್ನದ ಹಾರವಾಯಿತು
ಬೆಟ್ಟ ಗುಡ್ಡ ಪರ್ವತ ಗಿರಿಗಳ ಝರಿಯಾಯಿತು
ನೆಲದ ಮಣ್ಣಿಗೆ ವರುಣ ಸಿಂಚನವಾಯಿತು

ಗಾಳಿಯೊಡನೆ ಕರಿ ಮೋಡಗಳ ಕೋಲಾಟ
ಮರಗಿಡ ರಾಶಿಗಳ ಆನಂದ ನೋಟ
ರಭಸವಾದ ಅಲೆಗಳಿಗೆ ಸುಂದರ ಆಟ
ಗುಡುಗು ಸಿಡಿಲಿನ ಜೊತೆ ಆರ್ಭಟ

ಬೀಸುವ ಗಾಳಿಗೆ ಮೈಯ ಚಾಚುತ್ತ
ಹಸಿರು ಬಣ್ಣದ ಸೀರೆ ತೊಡುತ್ತ
ಆಕಾಶದಲ್ಲಿ ಮೋಡ ಸರಿಯುತ್ತ
ಜಲದೇವತೆಯ ಸೌಂದರ್ಯ ನೋಡುತ್ತ
ಮೌನಿಯಾಗಿ ನಿಂತಳು ಧರೆ ನಾಚುತ್ತ.....!!
............................... ದೀಪಾ ಧ. ಗಿರಿಜನ್ನವರ
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************




ಚಂದ್ರಲೋಕದ ಯಾಣ
ಭಾರತ ಸ್ಥಾಪಿತ ಧ್ರುವ ತಾಣ
ಜಗತ್ತಿನ ಮೇಲೆ ಶಾಶ್ವತ ಸ್ಥಾನ
ವಿಕ್ರಮ್ ಎಂಬ ಸಾಧನ 

ಚಂದ್ರಯಾನ - 3 ಮೇಲೇರಿದಾಗ 
ಆನಂದ ಹರುಷ ತುಂಬಿತು ಎಲ್ಲೆಡೆ
ವಿಜ್ಞಾನಿಗಳ ಶ್ರಮದ ಸಂಶೋಧನೆ
ಮನಸ್ಸಿಗಾಯಿತು ಸಾಹಸದ ಚಿಂತನೆ
............................... ದೀಪಾ ಧ. ಗಿರಿಜನ್ನವರ
ದ್ವಿತೀಯ ಪಿಯುಸಿ 
ಕೆ ಎಲ್ ಇ ಸಂಸ್ಥೆಯ 
ಎಸ್ ಕೆ ಪದವಿ ಪೂರ್ವ ಕಾಲೇಜು ಸವದತ್ತಿ
ತಾಲೂಕು: ಸವದತ್ತಿ, ಜಿಲ್ಲೆ: ಬೆಳಗಾವಿ.
********************************************





Ads on article

Advertise in articles 1

advertising articles 2

Advertise under the article