-->
ಜಗಲಿ ಕಟ್ಟೆ : ಸಂಚಿಕೆ - 12

ಜಗಲಿ ಕಟ್ಟೆ : ಸಂಚಿಕೆ - 12

ಜಗಲಿ ಕಟ್ಟೆ : ಸಂಚಿಕೆ - 12
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


    ಎಲ್ಲರಿಗೂ 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
         ಮಕ್ಕಳ ಜಗಲಿಯಲ್ಲಿ ಹಿರಿಯರು ಬರೆಯುತ್ತಿರುವ ಅಂಕಣಗಳು ನೂರರ ಗಡಿ ತಲುಪುತ್ತಿರುವುದು ಬಹಳ ಸಂತೋಷದ ವಿಷಯ. ಕಳೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆಯಾದ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಎಂ ಪಿ ಇವರ 'ಜೀವನ ಸಂಭ್ರಮ' ಅಂಕಣದ ಲೇಖನಗಳು ಇದೀಗ ಸಂಚಿಕೆಗಳು ನೂರರ ಸಮೀಪ ತಲುಪಿದೆ. ಅದೇ ರೀತಿ ರಮೇಶ ಎಂ ಬಾಯಾರು ಬರೆಯುತ್ತಿರುವ ಸ್ಪೂರ್ತಿಯ ಮಾತುಗಳು, ಕನ್ನಡ ಶಿಕ್ಷಕ ರಮೇಶ್ ನಾಯ್ಕ ಉಪ್ಪುಂದ ಅವರ ಪದದಂಗಳ ಮತ್ತು ವಾಣಿ ಪೆರಿಯೋಡಿ ಅವರು ಪರಿಚಯಿಸುತ್ತಿರುವ ಪ್ರೀತಿಯ ಪುಸ್ತಕ ಅಂಕಣಗಳು ನೂರು ಸಂಚಿಕೆಗಳನ್ನು ಪೂರೈಸುವ ಆಸುಪಾಸಿನಲ್ಲಿದೆ. ಅರವಿಂದ ಕುಡ್ಲರ ಹಕ್ಕಿಕಥೆಯಂತೂ 100 ರ ಗಡಿ ದಾಟಿ ಮುಂದುವರಿಯುತ್ತಿದೆ. ಮಕ್ಕಳ ಜಗಲಿ ಇಂತಹ ಅವಕಾಶವನ್ನು ಸೃಷ್ಟಿಸಿರುವುದಕ್ಕೆ ನಾವೆಲ್ಲ ಕೃತಾರ್ಥರು. ಇದಕ್ಕಿಂತಲೂ ಮಿಗಿಲಾಗಿ ಮಕ್ಕಳ ಜಗಲಿಯನ್ನು ಬೆಳೆಸುತ್ತಿರುವ ನಿಮಗೆ ನಾವು ಆಭಾರಿಗಳು.
       ಕಳೆದ ಹತ್ತು ದಿನಗಳಿಂದ ಬೇರೆ ಬೇರೆ ಚಟುವಟಿಕೆಗಳ ಕಾರಣ ಸಮಯದ ಅಭಾವದಿಂದ ಮಕ್ಕಳ ಚಿತ್ರ ಹಾಗೂ ಬರಹಗಳನ್ನು ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಅಂದಮಾತ್ರಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ನಿರಾಶರಾಗಬೇಕಾಗಿಲ್ಲ. ನೀವು ಕಳುಹಿಸಿರುವ ಪ್ರತಿಯೊಂದು ಚಿತ್ರಗಳನ್ನು ಹಾಗೂ ಬರಹಗಳನ್ನು ಗೌರವಿಸುತ್ತೇವೆ. ಪ್ರಕಟವಾಗಲು ತಡವಾಗಬಹುದು ಆದರೆ ನಿರಂತರವಾಗಿ ಕಳುಹಿಸಿಕೊಡುವುದನ್ನು ಮರೆಯದಿರಿ. 
       ಈ ಮುಂಚೆ ತಿಳಿಸಿದ ಹಾಗೆ ಮಕ್ಕಳ ಜಗಲಿಯ 2ನೇ ರಾಜ್ಯ ಮಟ್ಟದ ಕಥೆ - ಕವನ ಸ್ಪರ್ಧೆಗಳ ಆಯೋಜನೆಯ ಸಿದ್ಧತೆಯಲ್ಲಿದ್ದೇವೆ... ಎಂದಿನಂತೆ ನಿಮ್ಮೆಲ್ಲರ ಸಹಕಾರ ನಮ್ಮ ಜೊತೆಗಿರಲಿ.....
        
       ಕಳೆದ ಸಂಚಿಕೆಯ ಜಗಲಿಕಟ್ಟೆ - 11 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು, ಭಾರತಿ ರಂಗನಾಥ್ ಹೆಗಡೆ ಹಳ್ಳಿ ಬೈಲ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ರಮೇಶ ಎಂ ಬಾಯಾರು..... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

    ಎಲ್ಲರಿಗೂ ನನ್ನ ನಮಸ್ಕಾರಗಳು. ಮಕ್ಕಳ ಜಗಲಿಯಲ್ಲಿ ಪ್ರತಿ ವಾರವೂ ಹೊಸ ಹೊಸ ವಿಷಯಗಳ ಲೇಖನ ಸರಣಿಗಳು ಪ್ರಕಟಗೊಳ್ಳುವುನನ್ನು ಕಂಡು ತುಂಬಾ ಸಂತಸವಾಗುತ್ತಿದೆ.
    ಕಳೆದ ವಾರದ ಸಂಚಿಕೆಯಲ್ಲಿ ಸುಖ ಮತ್ತು ಆನಂದದ ವಿಶ್ಲೇಷಣೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ರವರು ಉದಾಹರಣೆಗಳೊಂದಿಗೆ ಬಹಳ ಅರ್ಥವತ್ತಾಗಿ ವಿವರಿಸಿದ್ದಾರೆ. ಧನ್ಯವಾದಗಳು ಸರ್ ತಮಗೆ. ಭಾಷಾ ಕಲಿಕೆಗೆ ಬೇಕಾಗುವ ಹಂತಗಳು ಮತ್ತು ಅವುಗಳಿಂದ ಭಾಷಾಕಲಿಕೆಯ ಸಾಧ್ಯತೆ ಹಾಗೂ ಓದುವಿಕೆ ಜ್ಞಾನಾರ್ಜನೆಗೆ ಯಾವ ರೀತಿ ಸಹಕಾರಿ ಎನ್ನುವುದನ್ನು ತುಂಬಾ ಚೆನ್ನಾಗಿ ನಿರೂಪಿಸಿದ ರಮೇಶ್ ಸರ್ ರವರಿಗೆ ನನ್ನ ನಮನಗಳು. ಸ್ಪಾಟೆಡ್ ಪೋರ್ಕ್ ಟೈಲ್ ಎನ್ನುವ ಸುಂದರವಾದ ಹಕ್ಕಿಯೊಂದರ ಪರಿಚಯ ಚಾರಣದ ಅನುಭವ ಹಾಗೂ ಚಿತ್ರಗಳೊಂದಿಗೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು ಅರವಿಂದರಿಗೆ. 
     ಬಹಳ ಸುಂದರವಾಗಿ ಪೊದೆಯಂತೆ ಬೆಳೆಯುವ ನೆಕ್ಕಿಗಿಡದ ಪರಿಚಯ ಜೊತೆಗೆ ಮಕ್ಕಳಲ್ಲಿ ಸಸ್ಯ ಸಂಕುಲಗಳ ಬಗ್ಗೆ ಕಾಳಜಿ ವಹಿಸುವಂತೆ ಮಾಡುವ ಈ ಸಲದ ಸಂಚಿಕೆ ತುಂಬಾ ಚೆನ್ನಾಗಿತ್ತು. ಧನ್ಯವಾದಳು ವಿಜಯಾ ಮೇಡಂ. ಹೃದಯದ ಮಾತು ಸಂಚಿಕೆ -3 ಈಗಿನ ಯುವ ಜನಾಂಗಕ್ಕೆ ಪೇರಣೆ ನೀಡುವ ಲೇಖನ. ಯಾಕೂಬ್ ಸರ್ ರವರಿಗೆ ನನ್ನ ನಮನಗಳು. ವಾಣಿಯಕ್ಕನವರ ಹಿಮಸಂಪಿಗೆ ಪುಸ್ತಕದ ಪರಿಚಯ ಚನ್ನಾಗಿ ಮೂಡಿಬಂದಿದೆ. ಶಿಕ್ಷಕರ ಡೈರಿಯಲ್ಲಿ ಪವಿತ್ರಾ ಮೇಡಂ ರವರು ತಮ್ಮ ಅದ್ಭುತ ಅನುಭವವವನ್ನು ಹಂಚಿಕೊಂಡಿದ್ದಾರೆ. ಕೊನೆಯದಾಗಿ ತಾರಾನಾಥ ಸರ್ ಜೊತೆಗೆ ಜಗಲಿಯ ಎಲ್ಲರಿಗೂ ನನ್ನ ಮನದಾಳದ ವಂದನೆಗಳು.
..................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
***************************************


ಸರ್, ಮಕ್ಕಳ ಜಗಲಿಯಲ್ಲಿ ಪವಿತ್ರಾ ಮೇಡಂ ಬರೆದ 'ನನ್ನೊಳಗಿನ ಅವನು' ಲೇಖನ ಅದ್ಭುತವಾಗಿತ್ತು. ಅದೊಂದು ಅಸೀಮವಾದ ಅರ್ಪಣಾ ಭಾವ ಹಾಗೂ ಅಪ್ಪಿಕೊಳ್ಳುವ ಔದಾರ್ಯವಾಗಿದೆ. ಇದೊಂದು ನೈಜ ಘಟನೆಯಾಗಿದ್ದರೆ, ಪವಿತ್ರಾ ಮೇಡಂ ನಿಜಕ್ಕೂ ಅಪರೂಪದಲ್ಲಿ ಅಪರೂಪದ ಶಿಕ್ಷಕಿ. ಮಗುವಿನ ಬಗೆಗಿನ ಕಾಳಜಿ, ಪ್ರೀತಿ.... ಯಾವುದಕ್ಕೂ ಸಾಟಿನೇ ಇಲ್ಲ
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



     ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು, ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು.....ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************




Ads on article

Advertise in articles 1

advertising articles 2

Advertise under the article