-->
ಕವನಗಳ ರಚನೆ : ಜ್ಯೋತಿ ಪುಂಡಲಿಕ್ ಎಂ,  ದ್ವಿತೀಯ ಪಿಯುಸಿ ಕಲಾ ವಿಭಾಗ

ಕವನಗಳ ರಚನೆ : ಜ್ಯೋತಿ ಪುಂಡಲಿಕ್ ಎಂ, ದ್ವಿತೀಯ ಪಿಯುಸಿ ಕಲಾ ವಿಭಾಗ

ಕವನಗಳ ರಚನೆ : ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ



           ಮನಸ್ಸಿನ ಕೂಗು - ಕವನ

ಗೊತ್ತಿದ್ದರೂ ಯಾರಾದರೂ ಕೇಳಿದರೆ 
ಅವರು ಗೊತ್ತಿಲ್ಲ ನನಗೆ 
ಎನ್ನುವ ಜನರ ಮಧ್ಯೆ......!!
ಗೊತ್ತಿಲ್ಲದಿದ್ದರೂ ಅವರು 
ಗೊತ್ತು ನಂಗೆ ಎನ್ನುವ ಹಾಗೆ 
ಆಗಬೇಕು ಎನ್ನುವ ಆಸೆ 
ಎಂದು ಕೂಗಿ ಕೂಗಿ ಹೇಳುತ್ತಿದೆ 
ನನ್ನ ಮನಸ್ಸು...!!

ಮನಸ್ಸು ಕೂಗಿ ಕೂಗಿ ಹೇಳುತ್ತಿದೆ 
ಏನಾದರೂ ಮಾಡು ನೀನು...!!
ನಿನ್ನನ್ನು ಹೀಯಾಳಿಸಿ ಮಾತನಾಡಿದರೂ
ಮುಂದೆ ಅದಕ್ಕೋಸ್ಕರವಾದರೂ....
ನಿನ್ನ ಕೈಯಲ್ಲಿ ಏನೂ ಆಗುವುದಿಲ್ಲ ಎಂದವರಿಗೋಸ್ಕರವಾದರೂ....
ಪ್ರತಿ ಸಲ ನಿನ್ನ ನೋಡಿ 
ನಗುವವರಿಗೋಸ್ಕರವಾದರೂ
ಏನಾದರೂ ಮಾಡು 
ನಿನ್ನನ್ನು ದ್ವೇಷಿಸುವರು ಪ್ರೀತಿಸುವಂತೆ... ನಗುವವರು ಚಪ್ಪಾಳೆ ಹೊಡೆಯುವಂತೆ
ಇದು ಬಯಕೆ ನನ್ನದು ಎಂದು 
ಕೂಗಿ ಕೂಗಿ ಹೇಳುತ್ತಿದೆ
ನನ್ನ ಮನಸ್ಸು...!!

ಯಶಸ್ಸು ಕಾಣಬೇಕೆಂದರೆ ನೀನು
ನಿನ್ನ ಮುಂದೆ ನೂರಾರು ಸಮಸ್ಯೆಗಳು
ಅವುಗಳನ್ನು ಎದುರಿಸಿ 
ನಿಲ್ಲಬೇಕು ನೀನು ಎಂದು 
ಕೂಗಿ ಕೂಗಿ ಹೇಳುತ್ತಿದೆ 
ನನ್ನ ಮನಸ್ಸು....!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************





 ಓ ನನ್ನ ಮನವೇ

ಓ ನನ್ನ ಮನವೇ 
ಸಿಗದಿದ್ದರೂ ಬಯಸುವೆ 
ಯಾಕೆ ಈ ತರ ಇರುವೆ....!
ಅಪರಿಮಿತ ಆಸೆಗಳನ್ನು ಹೊಂದಿರುವೆ...
ಆದರೂ ಒಂದು ಸಲ ಹಿಗ್ಗುವೆ...
ಒಂದು ಸಲ ಕುಗ್ಗುವೆ...!!
ಯಾಕೆ ಅಪ್ಪಿಕೊಳ್ಳುವುದಿಲ್ಲ 
ಸೋಲು ಮತ್ತು ಗೆಲುವು 
ಒಂದೇ ಸಮನಾಗಿಯೇ....?
ಹತ್ತಿರ ಇರುವ ವಸ್ತುವನ್ನು ಪ್ರೀತಿಸದೆ 
ದೂರ ಇರುವ ವಸ್ತುವನ್ನು 
ಪ್ರೀತಿಸುವೆ ಯಾಕೆ....?? 
ಈ ತರ ಓ ನನ್ನ ಮನವೇ...?
ಓ ನನ್ನ ಮನವೇ 
ನನ್ನ ತಪ್ಪುಗಳಿಗೆ ಕನ್ನಡಿಯಾಗಿ ತೋರಿಸು 
ನಾನು ಕುಗ್ಗಿದಲ್ಲಿ ಪ್ರೇರಕವಾಗಿರು... 
ಬೇರೆ ಯಾವುದೇ ಮನವನ್ನು 
ನೋಯಿಸುದಿರು... 
ಸದಾ ಉತ್ಸಾಹದಿಂದ ತುಂಬಿರು....
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************




             ಹೃದಯ ದೇವತೆ

ನಿನ್ನ ಮುಖದಲ್ಲಿ ಇರುವ ನೋವು 
ಯಾರಿಗೂ ಕಾಣಬಾರದೆಂದು 
ಸದಾ ಮುಗುಳ್ನಗೆ ಬೀರುತ್ತಿರುತ್ತೀಯಾ....!
ತನ್ನ ಆಸೆಗಳನ್ನು ಬದಿಗಿಟ್ಟು 
ತನ್ನ ಕರುಳು ಕುಡಿಯ 
ಆಸೆಗಳನ್ನು ಈಡೇರಿಸಲು 
ಹಗಲು-ರಾತ್ರಿ ದುಡಿಯುತ್ತಿರುತ್ತೀಯಾ....!
ಪದಗಳೇ ನಾಚುತ್ತಿವೆ ಹೇಗೆ ವರ್ಣಿಸಲಿ 
ನಿನ್ನ ಭಾವನೆಗಳನ್ನು ಎಂದು....!!

ಅದೆಷ್ಟು ನೋವುಗಳನ್ನು ಅನುಭವಿಸಿದ್ದಾಳೊ
ತನ್ನ ಕರುಳುಕುಡಿಗೆ ಗೊತ್ತಾಗದೆ
ಅದೆಷ್ಟು ಸಮಸ್ಯೆಗಳನ್ನು ತಾನೇ ಬಗೆಹರಿಸಿಕೊಂಡಿದ್ದಾಳೋ 
ತನ್ನ ಒಡಲಿಗೆ ಗೊತ್ತಾಗದೆ....!!
ಸದಾ ನಗುಮುಖದ ಒಡತಿ ನನ್ನವ್ವ
ನಿಸ್ವಾರ್ಥ ಪ್ರೀತಿಯವಳದು
ಕಣ್ಣಿಗೆ ಕಾಣುವ ದೇವತೆ ನನ್ನವ್ವ...!!

ನನ್ನ ಮನದಲ್ಲಿ ಮೂಡುವುದು 
ಒಂದೇ ಒಂದು ಪ್ರಶ್ನೆ...
ನನ್ನಿಂದ ನನ್ನ ತಾಯಿಗೆ 
ನಾನು ಏನು ಕೊಡಬಲ್ಲೆ....?
ಅವಳು ನೀಡಿದ ಪ್ರೀತಿ 
ಇಲ್ಲ .... ಸಾಧ್ಯವಿಲ್ಲ ....!!
ನನಗೆ ತಿಳಿದಿದ್ದು ಒಂದೇ 
ಅವಳ ಋಣ 
ತೀರಿಸಲು ಸಾಧ್ಯವೇ ಇಲ್ಲವೆಂದು....
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************




                ಸ್ನೇಹಿತ

ನನ್ನ ಪ್ರೀತಿಯ ಸ್ನೇಹಿತನೇ.... 
ನೀನು ಯಾಕೆ ಯಾರನ್ನು ಪ್ರೀತಿಸುವುದಿಲ್ಲ...?
ನಿನ್ನನ್ನು ಇಷ್ಟಪಟ್ಟು ನಿನ್ನ ಕೈ ಹಿಡಿದರೆ 
ನೀನು ಅವರಿಗೆ ಮಾರ್ಗದರ್ಶಕನಾಗಿರುವೆ 
ದಾರಿ ದೀಪ ಆಗಿರುವೆ.....!!
ನಿನ್ನನ್ನು ನೋಡುತ್ತಲೇ ಇದ್ದರೆ 
ಒಂದು ದಿನ ಎಲ್ಲರೂ 
ನಮ್ಮನ್ನು ನೋಡುವಂತೆ ಮಾಡುವೆ...
ಒಂದು ವೇಳೆ ಎಲ್ಲರೂ 
ಬಿಟ್ಟು ಹೋಗಬಹುದು 
ಒಬ್ಬಂಟಿಯನ್ನಾಗಿ ಮಾಡಿ....!!!
ನೀನು ನನ್ನನ್ನು ಬಿಟ್ಟರೂ 
ಅಥವಾ 
ನಾನು ಒಂದು ವೇಳೆ ನಿನ್ನನ್ನು ಬಿಟ್ಟರೂ 
ನಿನ್ನಿಂದ ಪಡೆದ ಜ್ಞಾನ 
ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ..!
ನೊಂದವರಿಗೆ ಸಂತೋಷ ಕೊಡಬೇಕು ಎಂದವನು ನೀನು
ಸೋತವರಿಗೆ ಗೆಲುವು 
ಇನ್ನೂ ಸಮೀಪದಲ್ಲಿದೆ ಎಂದು 
ದಾರಿದೀಪವಾಗಿದ್ದವನು ನೀನು...!!
ಒಂದು ಮಾತ್ರ ಸತ್ಯ 
ನಿನ್ನನ್ನು ಯಾರು ಯಾರು ಪ್ರೀತಿಸುತ್ತಾರೋ... ಮುಂದೊಂದು ದಿನ ಅವರನ್ನು 
ಎಲ್ಲರೂ ಪ್ರೀತಿಸುತ್ತಾರೆಂದು...
ಇಂತಿ ನಿನ್ನ ಸ್ನೇಹಿತ ಪುಸ್ತಕ...!!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
*******************************************



              ಜೀವದ ಗೆಳತಿ

ಜೊತೆಗಿರುವ ಜೀವಾ ನೀನು
ಸಮಯ ಕಳೆದಂತೆ ಕಳದಂತೆ 
ಜೀವವೇ ನೀನಾದೆ...!!
ಹೋಗದಿರು ನೀನು ನನ್ನ ಬಿಟ್ಟು
ಇನ್ನು ಬಾಕಿ ಇದೆ 
ನನ್ನ ನಿನ್ನ ಪ್ರೀತಿಯ ಗಂಟು...
ಬಯಸದೇ ಬಳಿ ಬಂದೆ
ಗೊತ್ತಿಲ್ಲ ಹೇಗೆ ಗೆಳೆತನ ಮಾಡಿದೆ
ಈಗ ನನ್ನ ಜೀವವೇ ಆಗಿರುವೆ...!!

ನನ್ನ ಹುಚ್ಚು ಮನಸ್ಸಿನ ರಾಣಿ ನೀನು
ನನ್ನ ಎಂದಿಗೂ ಮರೆಯದಿರು ನೀನು
ನಾ ನಿನ್ನ ಹೃದಯದ 
ಅಕ್ಷರವಾಗಿರಬೇಕೆ ಹೊರತು 
ಲೇಖನಿಯಲ್ಲ.....!!
ನಾನು ನೀನು ದೂರವಿರಬಹುದು 
ಅದು ಬರೀ ಸ್ಥಳದಿಂದ...
ಹೊರತು ಮನಸ್ಸಿನಿಂದ ಅಲ್ಲ

ಎಂದಿಗೂ ಬದಲಾಗದ ಭಾವನೆ ನೀನು
ನೀ... ಮಾತನಾಡುತ್ತಿದ್ದರೆ 
ಮುಗಿಯದ ಮಾತು ನಿನ್ನದು....
ಮುಗಿಸು ಮುಗಿಸು ಎಂದರೆ ಇನ್ನಷ್ಟು ಮಾತನಾಡುವ ಹಠ ನಿನ್ನದು
ಎಂದಿಗೂ ಮರೆಯದಿರು ಗೆಳತಿ
ನಾ ನಿನ್ನ ಜೀವದ ಗೆಳತಿ.....!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



          ಕರುಳ ಬಳ್ಳಿ

ಏನೆಂದು ಹೆಸರಿಡಲಿ ಈ ನಿನ್ನ ಮೌನಕ್ಕೆ
ನನ್ನ ಜೀವದ ಗೆಳತಿ
ಮಾರ್ಗದರ್ಶಕಿಯಾಗಿರುವೆ 
ಪ್ರೇರಕ ಶಕ್ತಿಯಾಗಿರುವೆ 
ಸದಾ ಉತ್ಸಾಹವನ್ನು ತುಂಬುವವಳು ನೀನು...!

ನನ್ನ ಹೃದಯದ ಒಡತಿ ನೀನು
ನನಗೆ ಗೊತ್ತಿಲ್ಲದೆ ನನ್ನ ಶಕ್ತಿಯಾಗಿರುವೆ
ಮುಗಿದ ಪ್ರೀತಿ ನಿನ್ನದು
ಸದಾ ಬೆಳಕಿನಿಂದ ಕೂಡಿರಲಿ ನಿನ್ನ ಬಾಳು...!

ಎಂದಿಗೂ ಮುಗಿಯದ ನಿನ್ನ ಸಿಟ್ಟು
ಆ ಸಿಟ್ಟೇ ನಿನ್ನ ಪ್ರೀತಿಯ ಒಳಗುಟ್ಟು
ಎಲ್ಲಿ ಕಳೆದುಕೊಳ್ಳುವೆ ಎನ್ನುವ
ನಿನ್ನಯ ಮನಸ್ಸು 
ಪರಿಶುದ್ಧ ತುಂಬಾ ವಿಶಾಲವಾದದ್ದು....!!

ನಿನಗೆ ಕೋಪ ಬರಿಸುವುದೇ 
ನನ್ನ ಯಶಸ್ಸು....!!
ನನ್ನ ಬದುಕಿನ ಬಂಗಾರಿ
ನೀನೆಂದಿಗೂ ನನ್ನ ಮನಸ್ಸಿನ ಸಿಂಗಾರಿ....
ನೀನೇ ನನ್ನ ಕರುಳ ಬಳ್ಳಿ (ಅಕ್ಕ)
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



           ಪ್ರೀತಿ

ಗೊತ್ತಿಲ್ಲ ನಂಗೆ 
ನನ್ನ ಜೀವನದಲ್ಲಿ ಹೇಗೆ ಬಂದೆ 
ಎನ್ನುವುದು....!
ನನ್ನ ನೋವುಗಳಿಗೆ ಸ್ಪಂದಿಸಿದೆ
ನನ್ನನ್ನು ಹೆಚ್ಚು ಅರ್ಥ ಮಾಡಿಕೊಂಡೆ
ನನಗೆ ಗೊತ್ತಿಲ್ಲ 
ಹೇಗೆ ಆಯ್ತು ನಮ್ಮ ಪರಿಚಯ...!!

ನೀನು ನಾನು ದೂರವಿರಬಹುದು
ಸದಾ ನಿನ್ನನ್ನು ಕೋಪಗೊಳಿಸುವುದೇ ಇಷ್ಟ
ಆ ನಿನ್ನ ಪ್ರತಿಕ್ರಿಯೆಯನ್ನು ಕಂಡು 
ಅದೆಷ್ಟು ನನ್ನ ಮನಸ್ಸು ಖುಷಿಯಾಗಿದೆಯೋ...
ನಿನ್ನ ನೆನಪು ಬಂದ ತಕ್ಷಣ 
ಮುಖದಲ್ಲಿ ಬರುವ ನಗು ಕೇಳಿತು 
ಅವರು ನಿಂಗೆ ಏನಾಗಬೇಕು....?

ಬೇಡ ಯಾರು ನೀನಿರುವಾಗ
ಎಲ್ಲರ ತರ ನೀನಲ್ಲ
ನಂಗೆ ನೀನೆ ಎಲ್ಲ....!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



                 ಅಪ್ಪ

ನನ್ನನ್ನು ರಾಣಿ ತರ 
ನೋಡಿಕೊಂಡ ಜೀವವಿದು
ನನ್ನ ಬಗ್ಗೆ ಯೋಚಿಸುವ ಜೀವ
ಪ್ರತಿಕ್ಷಣ ನನ್ನ ಬಗ್ಗೆ 
ಯೋಚಿಸುವ ಜೀವವಿದು
ಕಣ್ಣೊಳಗೆ ಇಟ್ಟುಕೊಂಡು 
ಯಾರದು ದೃಷ್ಟಿ ತಾಕ ಬಾರದೆಂದು 
ಕಾಪಾಡುವ ಜೀವವಿದು....!!

ಪ್ರತಿಯೊಂದು ಸಮಯ ಇರಬಹುದು
ಪ್ರತಿಯೊಂದು ಸಂದರ್ಭದಲ್ಲಿ ಇರಬಹುದು
ಎಂದಿಗೂ ಕಡಿಮೆಯಾಗದ ಪ್ರೀತಿಸುವ 
ಮನಸ್ಸುಳ್ಳವನು ನನ್ನಪ್ಪ....!!
ತಪ್ಪು ಮಾಡಿದಾಗ ತಿದ್ದಿ 
ಬುದ್ದಿ ಹೇಳುವ ತಾಳ್ಮೆ ನಿನ್ನದು ಅಪ್ಪ...!

ಸಿಟ್ಟಿನ ಸ್ವಭಾವ ನಿನ್ನದು
ಸೋಲನ್ನು ಒಪ್ಪಿಕೊಳ್ಳದೆ 
ಸ್ವತಂತ್ರ ಪ್ರಯತ್ನ ಮಾಡು
ನಿನ್ನ ಜೊತೆ ನಾನಿದ್ದೇನೆ 
ಎನ್ನುವ ನಿನ್ನ ಮಾತು ತುಂಬಾ..... ಅಪ್ಪ

ನನ್ನ ಪ್ರತಿ ಗೆಲುವಿಗೂ ಕಾರಣವಾಗಿದೆ
ನನ್ನ ನಗುವಿನ ಕಾರಣ ನೀನು
ನನ್ನ ಸುಖ ದುಃಖಗಳ ಸಹಭಾಗಿಯಾಗಿರುವೆ
ದೇವರೇ ನನ್ನ ಜೊತೆ ಇರುವಾಗ 
ಯಾರ ಭಯ ನನಗೆ ಇನ್ನು ....!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



          ಕುಗ್ಗದಿರು ಮನವೇ

ನೀನು ಹೇಗಿದ್ದರೂ ಮಾತನಾಡುತ್ತಾರೆ
ಕಾಲು ಎಳೆಯುತ್ತಾರೆ
ಪ್ರತಿಯೊಂದು ಕ್ಷಣ....!
ಯಾರನ್ನು ಹಿಂತಿರುಗಿ ನೋಡಬೇಡ
ಬಯಸುತ್ತಿರುವುದಿಲ್ಲ ......
ಒಳ್ಳೆಯದನ್ನು ಅವರು ನಿನಗೆ....!!

ಯಾವುದೇ ಕಾರಣಕ್ಕೂ 
ಗುರಿ ತಲುಪ ಬಾರದೆಂದು
ಉದ್ದೇಶ ಅವರದು....
ಸೋತಾಗ ನಿನ್ನ ನೋಡಿ ನಕ್ಕರೆ 
ಹೊಡೆಯುತ್ತಿದ್ದಾರೆ ಚಪ್ಪಾಳೆ ಎಂದುಕೋ....!!
ಅವಮಾನ ಮಾಡಿದರೆ ಅದನ್ನೇ 
ಸನ್ಮಾನ ಮಾಡುತ್ತಿದ್ದಾರೆ ಎಂದುಕೋ...!!

ಅವರು ಬಯಸೋದು ಒಂದೇ 
ನಿನ್ನ ನಿರಾಸೆ ಮತ್ತು ಕಣ್ಣೀರು....
ಯಾರದೋ ಮಾತು ಕೇಳಿ 
ನಮ್ಮ ಕುಟುಂಬಕ್ಕೆ   
ನಂಬಿದ ನಮಗೆ 
ಮೋಸ ಮಾಡಿಕೊಳ್ಳುವುದು ಬೇಡ....!!

ಒಂದು ದಿನ ನೀನು ಗೆಲುವನ್ನು ಕಂಡಾಗ..
ಯಾರು ಆಸೆ ಮಾಡಿರುತ್ತಾರೆ 
ಯಾರು ಅವಮಾನ ಮಾಡಿರುತ್ತಾರೋ
ಅವರೆ ಒಂದು ದಿನ 
ನಿನ್ನ ಮುಂದೆ ನಿಂತು 
ಚಪ್ಪಾಳೆ ಹೊಡೆಯುತ್ತಾರೆ...

ಯಾವುದೇ ಕಾರಣ ಇರಲಿ 
ಯಾವುದೇ ನೋಯಿಸುವ ಮಾತು ಇರಲಿ
ಎಂದಿಗೂ 
ಕುಗ್ಗದಿರು ಓ ನನ್ನ ಮನವೇ....!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



          ಭಾವನೆಗಳ ಜೊತೆ ಆಟ

ಯಾರು ಅರ್ಥ ಮಾಡಿಕೊಳ್ಳುವುದಿಲ್ಲ 
ನಿನ್ನ ಭಾವನೆಗಳನ್ನು .....
ಯಾರಿಗೂ ಹೇಳಬೇಡ ನೀನು ಸಮಸ್ಯೆಗ...
ಯಾರಿಗೂ ತಿಳಿಸಿ ಕೊಡಬೇಡ 
ನಿನ್ನೊಳಗಿರುವ ದೌರ್ಬಲ್ಯವನ್ನು...
ನಿನ್ನ ದೌರ್ಬಲ್ಯವನ್ನು ತಿಳಿದುಕೊಂಡು 
ನಿನ್ನ ಜೊತೆ ಆಟವಾಡಿ ಬಿಡುತ್ತಾರೆ....!!
ನಿನಗೆ ನಿನ್ನ ಬಗ್ಗೆ 
ಚುಚ್ಚಿ ಚುಚ್ಚಿ ಮಾತನಾಡುತ್ತಾರೆ....

ಆ ನಿನ್ನ ಸಮಸ್ಯೆ ನಿನ್ನೊಳಗೆ ಇರಲಿ
ಆ ನಿನ್ನ ದೌರ್ಬಲ್ಯ ನಿನಗಷ್ಟೇ ಗೊತ್ತಿರಲಿ
ಯಾರು ನಿನ್ನ ಜೀವನದಲ್ಲಿ ಬರಲಿ 
ಎಷ್ಟೇ ಅವರು ಒಳ್ಳೆಯವರೇ ಇರಲಿ
ಅವರು ನಿಮ್ಮ ಜೊತೆ ಇರುವಾಗ ಅಷ್ಟೇ

ಆಮೇಲೆ ಎಲ್ಲಾ ಬೇರೆಯಾಗಿ ಬಿಡುತ್ತದೆ...!
ನಮ್ಮ ಭಾವನೆಗಳ ಜೊತೆ 
ಆಟವಾಡಿ ಬಿಡುತ್ತಾರೆ....!!
ಇರಲಿ ಗುಟ್ಟಾಗಿ
ನಮಗೆ ನಾವೇ ಎಲ್ಲಾ ಎಂಬ ಮಾತು..!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



       ಏಕಾಂತ ಬಯಸಿದ ಮನಸ್ಸು

ಏಕಾಂತ ಬಯಸಿದೆ 
ನನ್ನ ಮನ ಯಾಕೋ ಇಂದು..!
ಎಲ್ಲರೂ ಹೊರಗಿನವರು ಎಣಿಸುತ್ತಿದ್ದಾರೆ ಯಾಕೋ ಇಂದು..!
ಯಾವತ್ತೂ ಬರದ ಭಾವನೆಗಳು 
ಮೂಡುತ್ತಿವೆ ಯಾಕೋ ಇಂದು..!
ಎಂದಿಗೂ ಮರಳಿ ಬರಬೇಡ ನೀ ಎಂದು..
ಸಾಕಿನ್ನು ನೀ ಕೊಟ್ಟ ನೋವು ನನಗಿಂದು..
ಮರೆಯಲಿ ನಿನ್ನ ನೆನಪು..
ಸಾಕು ಆ ನೆನಪುಗಳೇ..
ಮತ್ತೇನು ಬೇಡ ಇನ್ನು...!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************




          ಹೆಣ್ಣಿನ ಶೋಷಣೆ

ಸಹಿಸಿಕೊಳ್ಳಬೇಕು ಅವಳು ಎಲ್ಲವನ್ನು..
ಅಂಜಬೇಕು ಸಮಾಜಕ್ಕೆ..
ಮಾತನಾಡುತ್ತಿದೆ ಜನ 
ಅವಳು ಸ್ವಂತ ದುಡಿಮೆ ಮಾಡುವುದರಿಂದ
ಯಾವಾಗ ಸ್ವಾತಂತ್ರ್ಯ ದೊರೆಯುವುದು ಅವಳಿಗೆ..?
ಗೌರವ ಶಬ್ದದಲ್ಲಿ 
ಅವಳಿಗೂ ಪಾಲು ಇಲ್ಲವೇ..?
ಸ್ವಾಭಿಮಾನವೆಂಬುದು 
ಅವಳಿಗೂ ಇದೇ ತಾನೆ..?
ಯಾರಿಗೂ ತಿಳಿಸದೆ, ಯಾರಿಗೂ ಹೇಳ್ದೆ ಮೌನವಾಗಿದ್ದಾಳೆ..?
ಯಾಕೆ ಪ್ರಶ್ನಿಸುತ್ತಿಲ್ಲ ಅವಳು ಸಮಾಜವನ್ನು..?
ಅವಳ ದೌರ್ಜನವನ್ನು ಕೇಳಲು 
ಯಾರಿಗೂ ಆಗುತ್ತಿಲ್ಲವೇ..?
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************




 ಕಣ್ಣು ಮತ್ತು ಹೃದಯದ ಸಂಬಂಧ

ಕಣ್ಣು ಕೇಳಿತು ಹೃದಯವನ್ನು 
ನೀನೇಕೆ ನನ್ನ ಮೂಲಕ 
ಸುಖ ದುಃಖಗಳನ್ನು 
ವ್ಯಕ್ತಪಡಿಸುವೆ.....?
ನೀನು ನನಗೆ ಸಮಾಧಾನ ಪಡಿಸುವೆ 
ಹೃದಯ ಹೇಳಿತು....
ಹೃದಯದ ಮಾತು 
ಕಣ್ಣಿನಲ್ಲಿ ನೋಡು
ಹೃದಯದ ನೋವು 
ಕಣ್ಣೀರಿನಲ್ಲಿ ನೋಡು
ಹೃದಯದ ಸಂತೋಷ  
ಕಣ್ಣಿನ ಕಾಂತಿಯಲ್ಲಿ ನೋಡು
ಎಷ್ಟೊಂದು ಚೆಂದ 
ಹೃದಯ ಕಣ್ಣಿನ ಸಂಬಂಧ
ಅದಕ್ಕೆ ಹೇಳೋದು 
ಕಣ್ಣು ಮತ್ತು ಹೃದಯ ಅಂತ ಇರಬೇಕು 
ಸ್ನೇಹವಾಗಿರಲಿ, ಪ್ರೀತಿಯಾಗಿರಲಿ
ಎಂದೆಂದಿಗೂ ಅಮರವಾಗಿರಲಿ
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



                ಅವ್ವ

ನನ್ನವ್ವ ನನ್ನವ್ವ..
ನೀನೆ ನನ್ನ ಜೀವ..
ನನ್ನ ಜೀವನಕ್ಕೆ ನೀ ಇರುವಾಗ
ಬೇಕಿಲ್ಲ ಬೇರೆ ಯಾರು
ನಿನ್ನ ಮಡಿಲೇ ಸಾಕು 
ನನಗೆ ನೆಮ್ಮದಿ ನೀಡಲು
ನಿನ್ನ ಲಾಲಿ ಹಾಡು ಸಾಕು 
ನಾ ಸಂತೋಷವಾಗಿರಲು....!

ನೀನಿರದೆ ನಾನಿಲ್ಲ..
ನೀ ಇಲ್ಲದಿದ್ದರೆ 
ಇವತ್ತು ನಾ ಇರತಿರಲಿಲ್ಲ..!!
ನೀನೆ ನಂಗೆ ಎಲ್ಲ..
ನನ್ನ ಜಗತ್ತು ನೀನು..
ನಿನ್ನನ್ನು ಖುಷಿಯಾಗಿ 
ಇರಿಸುವುದೇ ನನ್ನ ಕನಸು...!!

ನನ್ನ ಸಾಮ್ರಾಜ್ಯದ 
ಮಹಾರಾಣಿ ನನ್ನ ತಾಯಿ...
ಅವಳೇ ನನ್ನ ದೇವರು..
ಅವಳ ಆಶೀರ್ವಾದ ಸಾಕು
ನನ್ನ ಜೀವನದ ಎಲ್ಲಾ
ಸವಾಲುಗಳನ್ನು ಕಡಿದು ಹಾಕಲು
ಇಂದಿಗೂ ಎಂದಿಗೂ 
ಅವಳೇ ನನ್ನ ದೇವರು...!!
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



              ನನ್ನ ಜೀವ

ಮುಖದಲ್ಲಿ ಕೋಪ
ಮನಸಲ್ಲಿ ಪ್ರೀತಿ
ಮಾತಾಡಿದರೆ ಸಾಕು 
ಸಿಟ್ಟಿನ ಮಾತುಗಳು...!!
ಮುಂದೆ ಸಿಟ್ಟು
ಹಿಂದೆ ಪ್ರೀತಿ
ಒಳ್ಳೆಯ ನಡೆ-ನುಡಿ ಕಲಿಸಬೇಕು 
ಎನ್ನುವ ಹೃದಯವಂತ
ನನ್ನ ಜೀವ ನನ್ನಪ್ಪ....!!

ಯಾರೇ ಆದರೂ ಸರಿ
ಗೌರವ ಕಾಣುವುದು ಅವರಿಗೆ
ಎಷ್ಟೇ ತುಂಟಾಟ ಮಾಡಿದರು ಸರಿ
ಅದನ್ನು ನೋಡಿ ಸಂತೋಷ ಪಡುವ ಜೀವ
ಧೈರ್ಯ ತುಂಬುವ ಜೀವ...
ನನ್ನಪ್ಪ...
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************


 
ಕಲ್ಪನೆಯ ದೊರೆ


ಬೆಳದಿಂಗಳ ಬಾಳಂಚಿನಲಿ
ನಿನ್ನ ನಗುವ ಮೊಗವ ಕಂಡು 
ಏನಾಗಿದೆ ನಂಗೆ,,,,,?
ನಿನ್ನದೇ ಯೋಚನೆ..

ನನ್ನ ಹೃದಯ ರಾಜನೇ ನೀನು....?
ನನ್ನ ಪುಟ್ಟ ಲೋಕಕ್ಕೆ 
ಹೇಗೆ ಹೆಜ್ಜೆ ಇಟ್ಟೆ,,?
ಓ ನನ್ನ ನಗು ಮೊಗದ ಒಡೆಯ
ಯಾಕೆ ಈ ರೀತಿ ಕಾಡುತ್ತಿದ್ದೀಯಾ.
ಬಂದು ಬಿಡು ಕಣ್ಣ ಮುಂದೆ..
ಇನ್ನು ಎಷ್ಟು ಕಾಯಿಸುವೆ ನನ್ನನ್ನು
ನಿನ್ನ ಮಾತು ಕೇಳೊ ಆಸೆಯಾಗಿದೆ
ನಿನ್ನನ್ನೇ ಬಯಸುತ್ತಿದೆ ನನ್ನ ಮನಸ್ಸು...!!

ಓ ನನ್ನ ಹೃದಯದ ಒಡೆಯ 
ಕಣ್ಮರೆಯಾಗದೇ ಇರು
ಬೇಗ ಬಂದು ನನ್ನನ್ನು ಸೇರು

ನಿನ್ನನ್ನು ಕಂಡು ನಾಚುವ ತವಕವನ್ನು ಅನುಭವಿಸಲು ಕಾಯುತ್ತಿದೆ ನನ್ನ ಮನ.....

ನನ್ನ ಪ್ರೀತಿಯ ನಾಯಕ
ನನ್ನದೆಯಾ ನನ್ನ ಪುಟ್ಟ ಲೋಕದಲ್ಲಿ ರಾಜನಾಗಿರುವೆ ನೀನು
ಓ ನನ್ನ ಹೃದಯದ ಒಡೆಯ...
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************



             ಮಹನಾಯಕ

ಜಾತಿ ಎಂಬ ಪದವನ್ನು ಕೇಳಿದರೆ 
ನೆನಪಾಗುವುದು ಇವರು
ಹೆಣ್ಣು ಮಕ್ಕಳಿಗೆ ಶಕ್ತಿ ಸ್ವಾತಂತ್ರ್ಯ ವ
ದೊರಕಿಸಿ ಕೊಟ್ಟ ದೇವರು
ತಮ್ಮ ಜೀವನದ ಇಡೀ ಸಮಯವನ್ನು 
ಅಸ್ಪೃಶ್ಯರ ಏಳಿಗೆಗೆ ಮುಡಿಪಿಟ್ಟ 
ಮಹಾ ನಾಯಕ ಇವರು...
ಸಂವಿಧಾನ ಶಿಲ್ಪಿ ಎಂದು 
ಪ್ರಸಿದ್ಧಿ ಹೊಂದಿರುವ ನನ್ನ ದೇವರು
ಭೀಮರಾವ್...!!

ನಾನು ಒಂದು ಹೆಣ್ಣಾಗಿ 
ಚಿರಋಣಿಯಾಗಿರುವೆ
ನಾನು ಅಸ್ಪೃಶ್ಯಗಳಾಗಿ ಚಿರಋಣಿಯಾಗಿರುವೆ
ನಾನು ಬಡ ಕುಟುಂಬದಲ್ಲಿ ಹುಟ್ಟಿ ನಿಮಗೆ ಚಿರಋಣಿಯಾಗಿರುವೆ
ದೊರಕಿಸಿ ಕೊಟ್ಟಿರುವಿರಿ
ನನಗೆ ನೀವು ಎಲ್ಲದರಲ್ಲೂ 
ಸಮಾನ ಅವಕಾಶಗಳನ್ನು 
ಯಾವುದೇ ಭೇದ ಭಾವವಿಲ್ಲದೆ....!!

ಆ ಜಾತಿ- ಈ ಜಾತಿಯನ್ನದೆ
ಶ್ರೀಮಂತ- ಬಡವ ಎನ್ನದೆ
ಹೆಣ್ಣು- ಗಂಡು ಎನ್ನದೆ
ಕಾನೂನು ಮುಂದೆ ಎಲ್ಲರೂ ಸಮಾನರೆಂದು...
ನಾನು ಕಂಡ ನಿಜವಾದ ದೇವರು ನೀನು...
............................... ಜ್ಯೋತಿ ಪುಂಡಲಿಕ್ ಎಂ
ದ್ವಿತೀಯ ಪಿಯುಸಿ ಕಲಾ ವಿಭಾಗ 
ಕರ್ನಾಟಕ ಪದವಿಪೂರ್ವ 
ಕಾಲೇಜು , ಧಾರವಾಡ
ಸವದತ್ತಿ ತಾಲೂಕು, ಬೆಳಗಾವಿ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article