-->
ಚುನಾವಣಾ ನೈಜತೆ... ಲೇಖನ : ನಂದಿತಾ , ಪ್ರಥಮ ಪಿಯುಸಿ

ಚುನಾವಣಾ ನೈಜತೆ... ಲೇಖನ : ನಂದಿತಾ , ಪ್ರಥಮ ಪಿಯುಸಿ

ಲೇಖನ : ನಂದಿತಾ
ಪ್ರಥಮ ಪಿಯುಸಿ
ಕ್ಲಾಸಿಕ್ ಪಿ ಯು ಕಾಲೇಜ್, ಧಾರವಾಡ
ವಿಳಾಸ :- ತೋರಣಗಲ್ಲು ಗ್ರಾಮ, 
ಸಂಡೂರು ತಾಲೂಕು , ಬಳ್ಳಾರಿ ಜಿಲ್ಲೆ,  
                  

     ನಮ್ಮ ಭಾರತ ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದು. ಇಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಹಿತಕ್ಕಾಗಿಯೇ ಇಲ್ಲಿ ರಾಜಕೀಯವೆಂಬ ಸೇವೆಯಿರುತ್ತದೆ. ಇದರಲ್ಲಿ ಜನರ ಸೇವೆ ಮಾಡಲು ಬಹುತೇಕ ಪಕ್ಷಗಳಿರುತ್ತವೆ. ಪ್ರಭುವಾದ ಪ್ರಜೆಯು ತನಗೆ ನಿಯತ್ತಿನಿಂದ ಇರುವ ಒಬ್ಬ ಸೇವಕನನ್ನು ಅಥವಾ ಪಕ್ಷವನ್ನು ಆರಿಸಿ ಆಡಳಿತಕ್ಕೆ ತರುತ್ತಾರೆ. ಆ ಆಡಳಿತಕ್ಕೆ ಬಂದಂತಹ ಪಕ್ಷ ಅಥವಾ ವ್ಯಕ್ತಿಯ ಕೆಲಸ, ದೇಶದ ಸರ್ವತೋಮುಖ ಅಭಿವೃದ್ಧಿ, ಜನರ ಅಭಿವೃದ್ಧಿ, ಹಾಗೂ ದೇಶದ ಜನರ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆ....!
         ಆದರೆ ಇಂದಿನ ದಿನಗಳಲ್ಲಿ ಜನರ ಸೇವೆಗಾಗಿ ಬಂದ ಸೇವಕ ಸೆಲೆಬ್ರೇಟಿ!.. ಆ ರಾಜಕೀಯವೆಂದರೆ ಇಂದು 'ಗಲೀಜು' ಎಂಬ ಭಾವ ಮೂಡುವಂತಾಗಿದೆ. ಭಾರತದಲ್ಲಿನ್ನು ಬಡತನ ಕಡಿಮೆಯಾಗಿಲ್ಲ, ಸಾಮಾಜಿಕ ಸಮಸ್ಯೆಗಳು ಕಡಿಮೆಯಾಗಿಲ್ಲ, ನಿರುದ್ಯೋಗದ ಸಮಸ್ಯೆ ಕಡಿಮೆಯಾಗಿಲ್ಲ, ರೈತರ ಸಾವು ಕಡಿಮೆಯಾಗಿಲ್ಲ, ಆದರೆ ಸೆಲೆಬ್ರೇಟಿಗಳಾದ ರಾಜಕೀಯ ವ್ಯಕ್ತಿಗಳ ಆಸ್ತಿಯಲ್ಲಿನ ಅಭಿವೃದ್ಧಿಯೂ ಕಡಿಮೆಯಾಗುತ್ತಿಲ್ಲ..!!
      "ಪ್ರಜಾಪ್ರಭುತ್ವದ" ನಿಜವಾದ ಅರ್ಥ, ಪ್ರಜೆಗಳಿಗೆ ಗೊತ್ತಿಲ್ಲದ ಈ ಭಾರತದ ಸ್ಥಿತಿಗೆ ಕಾರಣ ಪ್ರಜಾಪ್ರಭುತ್ವದ ಅಡಿಪಾಯವಾದ ಚುನಾವಣೆಗಳು! ಇವುಗಳು ನಿಸ್ಪಕ್ಷಪಾತವಾಗಿ ಹಾಗೂ ನಿರ್ಭಯವಾಗಿ ಸೂಕ್ತ ರೀತಿಯಲ್ಲಿ ನಡೆಯದಿರುವುದೇ ಇದಕ್ಕೆ ಕಾರಣ.
       "ಚುನಾವಣೆ" ಎಂದರೆ, ಜನರು ತಮ್ಮ ಸೇವಕನನ್ನು ಆಯ್ಕೆ ಮಾಡುವ ವಿಧಾನ. ಆದರೆ ಈ ಚುನಾವಣೆಗಳಲ್ಲಿ ಭ್ರಷ್ಟಾಚಾರವೆಂಬ ಆಮಿಷಗಳನ್ನು ಹಂಚುವ ಅಪರಾಧದ ಕೆಲಸ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆಮಿಷಗಳನ್ನು ಕೊಟ್ಟು ಭ್ರಷ್ಟಾಚಾರದ ವಿಜಯ ಪತಾಕೆಯನ್ನು ಕೈಯಲ್ಲಿಡಿದುಕೊಂಡು ಬಂದು, "ನಾವು ದೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸುತ್ತೇವೆ" ಎಂದು ಆಶ್ವಾಸನೆ ಕೊಡುವವರು.., ಅಧಿಕಾರಕ್ಕಾಗಿ ಹೊಡೆದಾಡುವವರು.. ಮುಂದೊಂದು ದಿನ ಹಣಕ್ಕಾಗಿ ನಮ್ಮ ದೇಶವನ್ನೇ ಮಾರಬಹುದು!ಎಂಬುದು ಮುಂದಿನ ಸಂಭವನೀಯವಾಗಿದೆ.
      ನಮ್ಮ ದೇಶದಲ್ಲಿ ಜನರಿಗೆ ಚುನಾವಣಾ ಜಾಗೃತಿ ಮೂಡದಿದ್ದರೆ, ಮುಂದೊಂದು ದಿನ ಶ್ರೀಲಂಕಾದಂತೆ ನಮ್ಮ ದೇಶವನ್ನು ಲೂಟಿ ಹೊಡೆಯಲು ರಾಜಕಾರಣಿಗಳು ಸಂಚು ಹೂಡುವ ಮಾತು ದೂರವಿಲ್ಲ. ಶ್ರೀಲಂಕಾ, ಪಾಕಿಸ್ತಾನದಂತಹ ಪರಿಸ್ಥಿತಿಗಳು ನಮ್ಮ ದೇಶದಲ್ಲಿ ಕಾಲಿಡಬಾರದೆಂದಾದರೆ, ನಮ್ಮ ಜನರಲ್ಲಿ ಮತದಾನದ ಜಾಗೃತಿ ಮೂಡಬೇಕಿದೆ. ಇದಕ್ಕೆ ಚುನಾವಣಾ ಆಯೋಗ ಹಾಗೂ ದೇಶದ ಸರ್ವನಾಗರೀಕರು ಮತದಾನದ ಜಾಗೃತಿಗಾಗಿ ಶ್ರಮಿಸಬೇಕು ಹಾಗೂ ಪ್ರತಿಯೊಬ್ಬರೂ, ನಿರ್ಭಯದಿಂದ, ನಿಷ್ಪಕ್ಷಪಾತದಿಂದ, ಪ್ರಾಮಾಣಿಕವಾಗಿ, ಜಾತ್ಯತೀತವಾಗಿ, ಹಾಗೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮತದಾನ ಮಾಡುವುದು ಅವಶ್ಯಕವಾಗಿದೆ..
      ನಮ್ಮ ಭಾರತವನ್ನು ಇಡೀ ವಿಶ್ವದಲ್ಲೇ ಮಾದರಿ ದೇಶವನ್ನಾಗಿ ಕಟ್ಟೋಣ ಹಾಗೂ ವಿಶ್ವ ಗುರು ಭಾರತವನ್ನು ನಿರ್ಮಿಸೋಣ.
................................................... ನಂದಿತಾ
ಪ್ರಥಮ ಪಿಯುಸಿ
ಕ್ಲಾಸಿಕ್ ಪಿ ಯು ಕಾಲೇಜ್, ಧಾರವಾಡ
ವಿಳಾಸ :- ತೋರಣಗಲ್ಲು ಗ್ರಾಮ, 
ಸಂಡೂರು ತಾಲೂಕು , ಬಳ್ಳಾರಿ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article