ಪ್ರೀತಿಯ ಪುಸ್ತಕ : ಸಂಚಿಕೆ - 69
Friday, July 28, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 69
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ನೀತಾ ಮತ್ತು ವಿವೇಕ್ ಇಬ್ಬರಿಗೂ ಅಜ್ಜಿ ಮಾಡುವ ಮೈಸೂರು ಪಾಕ್ ತಿನ್ನಬೇಕು. ಆದರೆ ಅಜ್ಜಿ ಸ್ವಲ್ಪ ಹೊತ್ತು ಮಲಗಿ, ಸಂಜೆ ಗಿಡಗಳಿಗೆ ನೀರು ಹಾಕಿದ ಮೇಲೆಯೇ ಮೈಸೂರು ಪಾಕ್ ಮಾಡುವುದಾಗಿ ಹೇಳಿದ್ದಾರೆ. ಅಜ್ಜಿ ಏಳುವ ಮೊದಲೇ ಗಿಡಗಳಿಗೆ ನೀರು ತಾವೇ ಹಾಕಿ ಬಿಟ್ಟರೆ ಅಜ್ಜಿ ಬೇಗ ಮೈಸೂರು ಪಾಕ್ ಮಾಡುವರಲ್ಲಾ ಎಂದು ಮಕ್ಕಳ ಯೋಚನೆ. ಅದಕ್ಕಾಗಿ ನೀರು ಹಾಕಲು ಹೋದರೆ ಅಲ್ಲಿ ಒಂದು ಗಲಿಬಿಲಿ ಆಗುತ್ತದೆ. ಸ್ಟೀಲ್ ನಲ್ಲಿ, ಪ್ಲಾಸ್ಟಿಕ್ ನಲ್ಲಿ – ಹೀಗೆ ಎರಡು ನಲ್ಲಿಗಳು ಮತ್ತು ಕೆಂಪು, ನೀಲಿ ಬಣ್ಣದ ಎರಡು ಪೈಪುಗಳು ಅಲ್ಲಿ ಇರುತ್ತವೆ. ಆದರೆ ಯಾವ ನಲ್ಲಿಗೆ ಯಾವ ಪೈಪು ಸಿಕ್ಕಿಸಿದರೆ ನೀರು ಬರುತ್ತದೆ ಎಂಬುದು ಮಕ್ಕಳಿಗೆ ಗೊತ್ತಾಗುವುದೇ ಇಲ್ಲ.. ಇದರ ಹಿಂದಿನ ಲಾಜಿಕ್ ಗೇಟ್ಸ್ ತತ್ವಗಳ ಪರಿಚಯ ಆದರೆ “ಯಾವ ನಲ್ಲಿ ಯಾವ ಪೈಪು” ಎಂಬ ಪ್ರಶ್ನೆಗೆ ಉತ್ತರ ಸಿಗುತ್ತದೆ. ಓದಿ ನೋಡಿ, ಅರ್ಥವಾಗದೆ ಹೋದರೆ ನಿಮ್ಮ ಶಿಕ್ಷಕರನ್ನು ಕೇಳಿ.
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಲೇಖಕರು: ಶ್ರುತಿ ರಾವ್
ಚಿತ್ರಗಳು: ಬಿ. ಗುಜ್ಜಾರಪ್ಪ
ಬೆಲೆ: ರೂ.60/-
ನಾಲ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************