ಸಂಚಾರಿಯ ಡೈರಿ : ಸಂಚಿಕೆ - 42
Thursday, July 27, 2023
Edit
ಸಂಚಾರಿಯ ಡೈರಿ : ಸಂಚಿಕೆ - 42
ಲೇಖಕರು : ಸುಭಾಸ್ ಮಂಚಿ
ಕಾಡಂಗಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ನೂರು ರೂಪಾಯಿಯ ಹೊಸ ನೋಟು ನೋಡಿದ್ದೀರಾ...? ಅದರಲ್ಲಿ ಒಂದು ಸುಂದರವಾದ ಕಟ್ಟಡದ ಚಿತ್ರ ಇದೆ. ಅದು ಒಂದು ಕಾಲದಲ್ಲಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಬೃಹತ್ ಪಾರಂಪರಿಕ ವಿನ್ಯಾಸವೊಂದು 1940 ರಲ್ಲಿ ಪತ್ತೆಯಾಗಿ, 1980 ರಲ್ಲಿ ಅದು ಪ್ರವಾಸೀ ತಾಣವಾಗಿ ಮಾರ್ಪಾಟಾಗಿ ಇಂದು ಸಾವಿರಾರು ಪರ್ಯಟಕರ ಪಾಲಿಗೆ ಅತ್ಯದ್ಭುತ ಗಮ್ಯವಾಗಿರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣ - ರಾಣಿ-ಕಿ-ವಾವ್.
ಗುಜರಾತ್ ರಾಜ್ಯದ ಪಾಟನ್‌ನಲ್ಲಿರುವ ರಾಣಿ-ಕಿ-ವಾವ್ ನ ಅರ್ಥ ರಾಣಿಯ ಮೆಟ್ಟಿಲ ಬಾವಿ. ಅಂದರೆ ರಾಣಿಯ ಬಳಕೆಯ ಬಾವಿ. ಹನ್ನೊಂದನೆಯ ಶತಮಾನದ ಚಾಲುಕ್ಯ ಸಾಮ್ರಾಜ್ಯದ ರಾಜಭೀಮ-೧ ನ ಪತ್ನಿ ಉದಯಮತಿ ನಿರ್ಮಿಸಿದಳು ಎಂಬ ಪ್ರತೀತಿ ಇದೆ.
ಮಾರು-ಗುರ್ಜರ್ ಶೈಲಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಮೌಂಟ್‌ಅಬುವಿನ ವಿಮಲವಂಶಿ ದೇವಾಲಯವನ್ನ ಹೋಲುತ್ತದೆ. ಇಲ್ಲಿಯ ಮೆಟ್ಟಿಲು, ಗೋಡೆ, ಕಂಬಗಳಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಅದಲ್ಲದೆ ಇಲ್ಲಿ ಒಟ್ಟು ೨೧೨ ಕಂಬಗಳಿವೆ. ಅದಲ್ಲದೆ ದಶಾವತಾರದ ಕಲ್ಪನೆಯ ಮೂರ್ತಿಗಳೂ ಇಲ್ಲಿವೆ. ಇವು ಮಾತ್ರವಲ್ಲದೆ ಮಹಿಳೆಯ ಜೀವನದ ಬಗ್ಗೆ ತಿಳಿಹೇಳುವ ಕೆತ್ತನೆಗಳೂ ಇವೆ.
ಗುಜರಾತ್ ರಾಜ್ಯಕ್ಕೆ ಭೇಟಿ ಕೊಟ್ಟಾಗ ರಾಣಿ-ಕಿ-ವಾವ್ ನೋಡೋದನ್ನ ಮರೀಬೇಡಿ.
ಕಾಡಂಗಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************