ಇರುವೆ ರಾಜ ಮತ್ತು ಇಲಿರಾಜ - ಚಿತ್ರಕಥೆ : ಸಂಚಿಕೆ - 13
Thursday, July 6, 2023
Edit
ಚಿತ್ರಕಥೆ : ಸಂಚಿಕೆ - 13
ನಿನಾದ್ ಕೈರಂಗಳ
6ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಒಂದಾನೊಂದು ಊರಿನಲ್ಲಿ ಒಂದು ಮನೆ ಇತ್ತು. ಮನೆಯ ಸುತ್ತ ಸುಮಾರು ಇಲಿಗಳ ಮನೆಗಳಿದ್ದವು. ಆ ಇಲಿಗಳಿಗೆ ಒಬ್ಬ ರಾಜ ಇದ್ದನು. ಇಲಿಗಳಿಗೆ ಏನಾದರೂ ತೊಂದರೆ ಆದಾಗ ಇಲಿಗಳು ರಾಜನ ಹತ್ತಿರ ಹೋಗಿ ಹೇಳುತ್ತಿದ್ದವು.
ಒಂದು ದಿವಸ ರಾತ್ರಿ ಕಳ್ಳ ಇರುವೆಗಳು ಬಂದು ಇಲಿಗಳು ಬಚ್ಚಿಟ್ಟಿದ್ದ ಊಟ ತಿಂಡಿಗಳನ್ನೆಲ್ಲಾ ಕದ್ದುಕೊಂಡು ಹೋಯಿತು. ಮರುದಿವಸ ಇಲಿಗಳು ಊಟ ತಿನ್ನಲಿಕ್ಕೆ ಹೋದಾಗ ಅಲ್ಲಿ ಊಟ ಇರಲಿಲ್ಲ. ಎಲ್ಲಾ ಇಲಿಗಳು ಇಲಿ ರಾಜನ ಹತ್ತಿರ ಹೋಗಿ ಈ ವಿಷಯ ಹೇಳಿದರು. ರಾಜನಿಗೆ ಇದು ಯಾರು ಮಾಡಿದ್ದು ಅಂತ ಗೊತ್ತಾಯ್ತು.
ಇಲಿ ರಾಜ ತನ್ನ ಸೈನ್ಯದೊಂದಿಗೆ ಇರುವೆಗಳ ರಾಜನ ಬಳಿ ಹೋಯಿತು. ಇಲಿ ರಾಜ ಹೇಳಿತು, "ನಿಮ್ಮ ಇರುವೆಗಳೆಲ್ಲ ನಾವು ಸಂಗ್ರಹಿಸಿದ್ದ ಊಟ ತಿಂಡಿಗಳನ್ನೆಲ್ಲಾ ಕದ್ದಿದ್ದಾರೆ." ಎಂದು. ಆಗ ಇರುವೆ ರಾಜ ಕದ್ದು ತಿಂದ ಎಲ್ಲಾ ಕಳ್ಳ ಇರುವೆಗಳನ್ನು ಹುಡುಕಿ ಜೈಲಿಗೆ ಹಾಕಿದನು. ಇಲಿ ರಾಜನಿಗೆ ತುಂಬಾ ಖುಷಿಯಾಯಿತು. ಇಲಿರಾಜ ಇರುವೆ ರಾಜನಿಗೆ ಧನ್ಯವಾದ ಹೇಳಿತು. ಇಲಿರಾಜ ಖುಷಿಯಿಂದ ಊರಿಗೆ ಹೋಯಿತು.
6ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************