ಕವನ ರಚನೆ : ಪ್ರಥ್ವಿ ಮಹಾಬಲೇಶ್ವರ ಜೋಶಿ, ಪ್ರಥಮ ಪಿಯುಸಿ
Tuesday, June 27, 2023
Edit
ಕವನ ರಚನೆ : ಪ್ರಥ್ವಿ ಮಹಾಬಲೇಶ್ವರ ಜೋಶಿ
ಪ್ರಥಮ ಪಿಯುಸಿ
ವಿಶ್ವದರ್ಶನ ಪದವಿಪೂರ್ವ ಕಾಲೇಜು
ಯಲ್ಲಾಪುರ ಉತ್ತರ ಕನ್ನಡ
ಮನಕೆ ಮುದ ನೀಡುವ ವನದಿ
ಕಣ್ ಸೆಳೆಯುವ ಹೂವಿದು...
ಸೀತಾಮಾತೆಯೂ ಬಯಸುವಂತಹ
ಸೀತಾದಂಡೆಯ ಮಾಲೆಯಿದು
ಪ್ರಕೃತಿಯೇ ಸಿದ್ಧಪಡಿಸಿದಂತಹ ಮೆರಗು
ಸ್ವಲ್ಪ ಬಿಳಿ-ಗುಲಾಬಿಯ ರಂಗು
ಕಂಡರೆ ನಾಚುವ ಕುಸುಮಗಳು
ಮರದಂಚಲಿ ಮರೆಯಾಗುವುವು..
ಮಹಾನ್ ತಜ್ಞರಿಗೂ ಹೂ ಪೋಣಿಸುವ
ಸವಾಲೆಸೆಯುವುದು...
ಇದೇ ಇದರ ಚಮತ್ಕಾರವು
ತಿಳಿಯದು ಈ ಅದ್ಬುತ ಕಲೆ...
ಬಿಡಿಸಲು ಕಷ್ಟವೇ ಸರಿ
ಈ ಪ್ರಶ್ನೆಯ ಮಾಯಾಬಲೆ !!
ಪ್ರಥಮ ಪಿಯುಸಿ
ವಿಶ್ವದರ್ಶನ ಪದವಿಪೂರ್ವ ಕಾಲೇಜು
ಯಲ್ಲಾಪುರ, ಉತ್ತರ ಕನ್ನಡ ********************************************