-->
ಕವನಗಳ ರಚನೆ : ಶರ್ಮಿಳಾ ಕೆ.ಎಸ್ , 9ನೇ ತರಗತಿ

ಕವನಗಳ ರಚನೆ : ಶರ್ಮಿಳಾ ಕೆ.ಎಸ್ , 9ನೇ ತರಗತಿ

ಕವನಗಳ ರಚನೆ : ಶರ್ಮಿಳಾ ಕೆ.ಎಸ್    
9ನೇ ತರಗತಿ                     
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
    
            
           
     ನನ್ನ ಮೊದಲ ಕವನವೇ "ಸಮಾಜ ವಿಜ್ಞಾನ". ಕವನದ ಶೀರ್ಷಿಕೆ ಕೇಳಿದರೆ ನಿಮ್ಮಗೆಲ್ಲರಿಗೂ ಯಾವುದೋ ಪಠ್ಯದ ವಿಷಯವಿರಬಹುದು ಎಂದೆನಿಸುತ್ತಿರಬಹುದು..... ಖಂಡಿತವಾಗಿಯೂ ನಾನು ಈಗ ಬರೆಯುತ್ತಿರುವ ಕವನ ಪಠ್ಯ ವಿಷಯಕ್ಕೆ ಸಂಬಂದಿಸಿದ್ದೇ.....! ಅದಕ್ಕೂ ಮಿಗಿಲಾಗಿ ಹೇಳಬೇಕೆಂದರೆ ಸಮಾಜ ವಿಜ್ಞಾನ ನನ್ನ ನೆಚ್ಚಿನ ವಿಷಯ. ನನ್ನ ನೆಚ್ಚಿನ ಗುರುಗಳು ಹಾಗೂ ನಮ್ಮ ಸಮಾಜ ವಿಜ್ಞಾನ ಭೋಧನೆಯ ಗುರುಗಳಾದ ನರೇಂದ್ರ ಕುಮಾರ್ ಕೋಟ ಇವರು ಬರೆಯಲು ಹೇಳಿದ ಎಂಟನೇ ತರಗತಿಯ ಸಮಾಜ ವಿಜ್ಞಾನ ಪಾಠದ ಪೂರ್ತಿ ಸಾರಾಂಶವನ್ನು ಒಂದು ಸಣ್ಣ ವಾಕ್ಯರೂಪದಲ್ಲಿ ಬರೆದಿರುವ ಕವನವಿದೋ ನಿಮಗಾಗಿ.......... ಶರ್ಮಿಳಾ ಕೆ.ಎಸ್, 9ನೇ ತರಗತಿ                         

ನನ್ನ ಪ್ರೀತಿಯ ಸಮಾಜ ವಿಜ್ಞಾನ.......... 
ಅದೆಂದರೆ ನನಗೆ ಪಂಚಪ್ರಾಣ
ಅದೊಂತರ ನವಪಲ್ಲವಿಗಾನ
ಅದರ ಮೇಲಿದೆ ನನಗೆ ಅಭಿಮಾನ
ಅದ ಕಲಿಯಲು ಮಿಡಿಯುವ ನನ್ನ ಮನ
ಅದುವೇ ನನಗೆ ಸಮ್ಮಾನ ಸನ್ಮಾನ......... 
      ಮೊದಲ ಪಾಠ ಮೌರ್ಯ ಮತ್ತು ಕುಶಾಣ      
      ಇದರಲ್ಲಿದೆ ಅಶೋಕನ ಶೌರ್ಯ ತಾಣ.... 
ಎರಡನೆಯದು ಗುಪ್ತ ಮತ್ತು ವರ್ಧನ.....
ಇಲ್ಲಿದೆ ಹರ್ಷನ ನೋವು ನಲಿವುಗಳ ಯಾನ............ 
     ಮೂರನೇ ಪಾಠ ದಕ್ಷಿಣ ಭಾರತದ
     ರಾಜವಂಶ..........
     ಇದರಲ್ಲಿದೆ ನಮ್ಮ ಕರ್ನಾಟಕವನ್ನಾಳಿದ 
     ರಾಜರ ಅಂಶ........ 
ನಾಲ್ಕನೆಯದು ಚಾಲುಕ್ಯ ಮತ್ತು ಪಲ್ಲವ...
ಇಲ್ಲಿದೆ ಚಾಲುಕ್ಯರ ಶಕ್ತಿ 
ಪಲ್ಲವರ ಶ್ರೇಷ್ಠತೆಯ ಪಲ್ಲಕಿ........... 
      ಐದನೆಯ ಪಾಠ ರಾಷ್ಟ್ರ ಕೂಟ ಮತ್ತು 
      ಕಲ್ಯಾಣ ಚಾಲುಕ್ಯ.........
      ಇದರಲ್ಲಿದೆ ರಾಷ್ಟ್ರಕೂಟರ ಶಾಂತಿಯ ಚಟ 
      ಮತ್ತು ಚಾಲುಕ್ಯರ ಕೊಡುಗೆಯ 
      ವಚನ  ಸಾಹಿತ್ಯ............ 
ಆರನೆಯದು ಚೋಳ ಮತ್ತು ಹೊಯ್ಸಳ..
ಇಲ್ಲಿದೆ ಸಳನ ಶೌರ್ಯದ ಪರಿಮಳ........ 
     ಮುಂದಿನದು ರಾಜ್ಯಶಾಸ್ತ್ರ, ಸಮಾಜಶಾಸ್ತ್ರ,
     ಭೂಗೋಳಶಾಸ್ತ್ರ..............
     ಅದ ಸೋಲಿಸಲು ನನ್ನ ಬಳಿ ಇಲ್ಲ 
     ಯಾವುದೇ ಅಸ್ತ್ರ................      
ನಂತರದ ಪಾಠವೇ ಅರ್ಥಶಾಸ್ತ್ರ.......
ಇದರಲ್ಲಿದೆ ಪಾರಿಭಾಷಿಕ ಪದಗಳ 
ಮಿನುಗುವ ನಕ್ಷತ್ರ......... 
     ತದನಂತರ ಪಾಠವೇ 
      ವ್ಯವಹಾರ ಅಧ್ಯಯನ..........
      ಇದರಲ್ಲಿದೆ ವ್ಯವಹಾರದ ಇತಿಹಾಸದ    
      ಗೀತಗಾಯನ........ 
........................................ ಶರ್ಮಿಳಾ ಕೆ.ಎಸ್    
9ನೇ ತರಗತಿ                     
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************    


      
ಜ್ಞಾನ ಕೊಡುವ ಪುಸ್ತಕ
ಮನುಕುಲದ ರಕ್ಷಕ
ಬೆಳಕು ತೋರುವ ದೀಪಕ
ಅದುವೇ ಜ್ಞಾನದ ದ್ಯೋತಕ.......... 
     ಪುಸ್ತಕದಲ್ಲಿದೆ ಜ್ಞಾನಗಳ ಹಾರ
     ಸುಸೂತ್ರ ಜೀವನಕ್ಕೆ ಅದೇ ಆಧಾರ 
     ಪುಸ್ತಕದಲ್ಲಿದೆ ಪದಗಳ ಕೂಪಾರ
     ಅದುವೇ ಪದಗಳ ವಿಹಾರ...........!
........................................ ಶರ್ಮಿಳಾ ಕೆ.ಎಸ್    
9ನೇ ತರಗತಿ                     
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************    


      
ಬೇಸರಕ್ಕೆ ಮದ್ದು ಸಂಗೀತ
ಕೇಳಲು ಚೆಂದ ಸ್ವರದ ಗೀತ
ಸಂಗೀತದ ರೂಪ ಸುಕೃತ
ಸಂಗೀತವೇ ಭಾವನೆಗಳ ಸಂಕೇತ.......... 
     ಹುಟ್ಟು ಸಾವಿನ ತನಕ 
     ಕೇಳಬಯಸುವರು ಸಂಗೀತ
     ಸಂಗೀತವಿದ್ದರೆ ಭಯವೂ ಕೂಡಾ     
     ನಿರ್ಭೀತ..........!
     ಪ್ರಪಂಚದ ಪ್ರತಿಯೊಂದು
     ಚರಾಚರಸಂಗೀತದಿಂದಲೇ        
     ನಿರ್ಮಿತ...............!   
........................................ ಶರ್ಮಿಳಾ ಕೆ.ಎಸ್    
9ನೇ ತರಗತಿ                     
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************    

      

ಒಬ್ಬ ಶಿಕ್ಷಕರೆಂದರೆ ಕೇವಲ ಪಠ್ಯ ಭೋಧಿಸುವವರಾಗಿರಬಾರದು..........
ಒಬ್ಬ ಶಿಕ್ಷಕರೆಂದರೆ ಕೇವಲ ಶಿಕ್ಷೆ ಕೊಡುವವರಾಗಿರಬಾರದು............
ಒಬ್ಬ ಶಿಕ್ಷಕರೆಂದರೆ ಮಕ್ಕಳನ್ನು 
ಜಾಣ ಮತ್ತು ದಡ್ಡ ಎಂದು 
ವಿಭಾಗಿಸುವವರಾಗಿರಬಾರದು........... 
     ಒಬ್ಬ ಶಿಕ್ಷಕರೆಂದರೆ ಪ್ರೀತಿ,ವಾತ್ಸಲ್ಯ     
     ತೋರುವವರಾಗಿರಬೇಕು...........
     ಒಬ್ಬ ಶಿಕ್ಷಕರೆಂದರೆ ಒಲುಮೆಯ     
     ದ್ಯೋತಕವಾಗಿರಬೇಕು..
     ಒಬ್ಬ ಶಿಕ್ಷಕರೆಂದರೆ  ಉತ್ತಮ    
     ಮಾತುಗಾರರಾಗಿರಬೇಕು..........
     ಒಬ್ಬ ಶಿಕ್ಷಕರೆಂದರೆ ವಿದ್ಯಾರ್ಥಿಗಳನ್ನು 
     ಜಾಣ ಮತ್ತು ದಡ್ಡ ಎಂದು ವಿಭಾಗಿಸದೇ
     ಅವರಿಗೆ ತೋರುವ ಸಕ್ಕರೆಯಾಗಿರಬೇಕು..... 
........................................ ಶರ್ಮಿಳಾ ಕೆ.ಎಸ್    
9ನೇ ತರಗತಿ                     
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************    


          
ವಿದ್ಯೆಯ ಕಲಿಸುವ ಶಿಕ್ಷಕ.........
ಅವನೇ ಜೀವನದ ರಕ್ಷಕ.........
ಓದಲು ಕಲಿಸಿದ ಪುಸ್ತಕ.........
ಚುರುಕುಗೊಳಿಸಿದ ಮಸ್ತಕ......... 
      ಇರುಳಾ ತೊರೆದು ಬೆಳಕ.........
      ತುಂಬಿದ ದೀಪಕ........
      ಅಜ್ಞಾನವ ಸರಿಸಿ ಜ್ಞಾನ 
      ತುಂಬಿದ ಪೋಷಕ.........
      ಪ್ರೀತಿ ವಿಶ್ವಾಸದ ದ್ಯೋತಕ.........
      ನನ್ನ ಶಿಕ್ಷಕ......... 
ಸದಾ ರಕ್ಷಣೆ ನೀಡುತ್ತಾ
ರಕ್ಷಕರಾದರು.........
ದಿನಾ ಶಿಕ್ಷಣ ನೀಡುತ್ತಾ
ಶಿಕ್ಷಕರಾದರು.........
ಜೇವನ ಎಂಬ ನಕ್ಷೆಯ
ಮಾರ್ಗದರ್ಶಕರಾದರು...
      ಶಿಕ್ಷಕ ಎಂದರೆ ವ್ಯಕ್ತಿಯಲ್ಲ
      ಅವನೇ ವಿದ್ಯಾರ್ಥಿಗಳ ಹಿಂದಿನ ಶಕ್ತಿ........
      ಚುರುಕುಗೊಳಿಸುತಿರುವ ನಮ್ಮ
      ನೆನಪಿನ ಶಕ್ತಿ......... 
      ಅವರಿಂದಲೇ ನಮಗೆ ಜ್ಞಾನ ಪ್ರಾಪ್ತಿ......... 
ಶಿಕ್ಷಕರು ವಿದ್ಯಾರ್ಥಿಯ 
ಬದುಕಿನ ದೀಪ.........
ನಮ್ಮ ಜ್ಞಾನಕ್ಕೆ ಕೊಡುತ್ತಾರೆ
ಒಂದು ರೂಪ.........
ಆ ರೂಪವೇ ವಿದ್ಯಾರ್ಥಿಯ 
ಜೀವನಕ್ಕೆ ದಾರಿದೀಪ.........
........................................ ಶರ್ಮಿಳಾ ಕೆ.ಎಸ್    
9ನೇ ತರಗತಿ                     
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************             
ಮುತ್ತಿನಂತಹ ಮಳೆ
ಮಳೆಯಿದ್ದರೆ ಬೆಳೆ
ಬೆಳೆಗಳೇ ಹೊಲಕ್ಕೆ ಕಳೆ
ಇದುವೇ ಸುಖದ ಹೊಳೆ 
     ಮಳೆ ಬಂದರೆ ಎಲ್ಲೆಲ್ಲೂ ನೀರು
     ನೀರಿದ್ದರೆ ಬೆಳೆ ಹಸಿರು
     ಬೆಳೆಗಳೇ ರೈತನ ಉಸಿರು
     ಬೆಳೆಯಿದ್ದರೆ ಸಿಹಿಯಾದ ಖೀರು 
ಹನಿ ಹನಿ ಮಳೆ ಅಂದ
ಮಳೆಯಿಂದ ಬೆಳೆಗಳು ಚೆಂದ
ಮಳೆ ನೋಡಲು ಕಣ್ಣಿಗೆ ಆನಂದ
ಮಳೆಯ ಜೊತೆಗಿದೆ ಮಾನವನ ಅನುಬಂಧ 
    ಮಳೆಯೆಂದರೆ ವರ್ಷ
    ಮಳೆ ಬಂದರೆ ಹರ್ಷ
    ಮಳೆ ಇಲ್ಲದಿರೆ ಬರಗಾಲದೊಂದಿಗೆ  
    ನಮ್ಮ ಸಂಘರ್ಷ 
    ಮಳೆ ಬಂದರೆ ಸುಖದ ಸ್ಪರ್ಶ
........................................ ಶರ್ಮಿಳಾ ಕೆ.ಎಸ್    
9ನೇ ತರಗತಿ                     
ವಿವೇಕ ಬಾಲಕಿಯರ ಪ್ರೌಢಶಾಲೆ
ಕೋಟ, ಉಡುಪಿ ಜಿಲ್ಲೆ.
********************************************    

Ads on article

Advertise in articles 1

advertising articles 2

Advertise under the article