ಪ್ರೀತಿಯ ಪುಸ್ತಕ : ಸಂಚಿಕೆ - 61
Friday, June 2, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 61
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ..... ಇದು ನಮಗೆ ಎಲ್ಲರಿಗೂ ಗೊತ್ತಿರುವ ಕಥೆ. ನಮ್ಮ ಅಜ್ಜಿಯಂದಿರ ಕಾಲದಿಂದ ಹೇಳುತ್ತಿದ್ದ ಕಥೆ. ಪಂಚತಂತ್ರ ಕಥೆಗಳಲ್ಲೂ ಇದೆ. ಇದರ ಕುರಿತು ಒಂದು ಹಾಡು ಕೂಡಾ ಇದೆ. “ಕಾಗೆಯೊಂದು ಹಾರಿ ಬಂದು, ಮರದ ಮೇಲೆ ಕುಳಿತುಕೊಂಡು, ಬಾಯೊಳಿದ್ದ ಮಾಂಸವನ್ನು ತಿನ್ನತೊಡಗಿತು.” ಆಗ ಅಲ್ಲಿಗೆ ಒಂದು ನರಿ ಬರುತ್ತದೆ. ಆಸೆಯಾಗುತ್ತದೆ. ಆಗ ಅದು ಒಂದು ಉಪಾಯ ಮಾಡುತ್ತದೆ. ಆಮೇಲೆ ನರಿ ಏನು ಮಾಡುತ್ತದೆ ಅಂತ ಪುಸ್ತಕದಲ್ಲಿ ನೋಡಿ. ಅಯ್ಯೋ ಪಾಪ ಕಾಗೆ ಅಂತ ಮಕ್ಕಳಿಗೆ ಅನಿಸುತ್ತದೆ. ಟಿ.ವಿಯಲ್ಲಿ ಬರುವ ಕಾರ್ಟೂನ್ ಚಿತ್ರಗಳ ತರಹದ ಚಿತ್ರಗಳು ಈ ಪುಸ್ತಕದಲ್ಲಿ ಇವೆ. ನರಿ ಕಾಗೆಯನ್ನು ಹೇಗೆ ಮೋಸ ಮಾಡಿತು, ನಾವು ಕೂಡಾ ಹಾಗೆ ಮೋಸ ಹೋಗುವುದು ಸಾಧ್ಯವೇ, ಯೋಚನೆ ಮಾಡಿ. ನೀವು ಈ ಕಥೆಯನ್ನು ಚಿಕ್ಕ ನಾಟಕವಾಗಿಯೂ ಮಾಡಬಹುದು.
ಪ್ರಕಾಶಕರು: ಪ್ರಿಸಮ್
ಬೆಲೆ: ರೂ.75/-
ಮೂರು ನಾಲ್ಕನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************