ಲೇಖನ : ಸಪ್ತಮಿ ಅಶೋಕ್ ದೇವಾಡಿಗ, 9ನೇ ತರಗತಿ
Sunday, June 4, 2023
Edit
ಲೇಖನ : ಸಪ್ತಮಿ ಅಶೋಕ್ ದೇವಾಡಿಗ
9ನೇ ತರಗತಿ
ಶುಭದ ಆಂಗ್ಲ ಮಧ್ಯಮ ಶಾಲೆ, ಕಿರಿಮಂಜೇಶ್ವರ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ನಾಗರಿಕತೆ, ಆಧುನಿಕತೆ ಬೆಳೆಯುತ್ತಿದ್ದಂತೆ ಮನುಜ ಸಾಮ್ರಾಜ್ಯ ತನ್ನ ಬದುಕಿನ ಐಷಾರಾಮಿ ಸುಖಕ್ಕೋಸ್ಕರ ಆಧುನಿಕ ಆಯುಧಗಳನ್ನು ಬಳಸಿಕೊಂಡು ತನ್ನ ತೃಪ್ತಿ, ಖುಷಿ ಆದ ಮೇಲೆ ಅವುಗಳನ್ನು ನಿಸರ್ಗದ ಮಡಿಲಿಗೆ ಅರ್ಪಿಸುತ್ತಾನೆ ಎಂದರೆ ತಪ್ಪಾಗಲಾರದು. ದುರಂತವೆಂದರೆ ತಾನೇ ಪರಿಸರ ಹಾಳು ಮಾಡುವುದರಿಂದ ವಾಪಾಸ್ ತನ್ನದೇ ಬದುಕಿಗೆ ಕಂಟಕ ಆಗುತ್ತದೆ ಎಂಬುದು ಅತೀ ಬುದ್ದಿವಂತಿಕೆಯ ಮನಜರಿಗೆ ತಿಳಿಯದೇ ಇರುವುದು.
ನಾನು ಪ್ರಕೃತಿ-ಪರಿಸರಕ್ಕೆ ವಾಪಸ್ ಕೊಡುವ ಚಟುವಟಿಕೆ ಏನೆಲ್ಲ ಮಾಡುತ್ತಿದ್ದೇನೆಂದರೆ.. ಮೊದಲನೆಯದಾಗಿ, ಪ್ಲಾಸ್ಟಿಕ್ ರಕ್ಕಸನನ್ನು ಪರಿಸರದಿಂದ ದೂರ ಮಾಡಬೇಕೆಂದುಕೊಂಡಿದ್ದೇನೆ. ನೀರಿನ ಒಡಲುಗಳಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಜಲಚರ ಜೀವಿಗಳನ್ನು ವಿಷಮಯ ಮಾಡಿದ ಮಾನವನೇ ಮೀನಿನ ಮಾರ್ಕೆಟ್ ಗಳಲ್ಲಿ ಫ್ರೆಶ್ ಮೀನು ಇದೆಯಾ ಎಂದು ಕೇಳುತ್ತಾನೆ. ಟೈಟಾನಿಯಂ ಡೈ ಆಕ್ಸೈಡ್ ಮತ್ತು ಕಡ್ಮಿಯಂ ಸತುವಿನಿಂದ ಕೂಡಿದ ರಾಸಾಯನಿಕಗಳನ್ನು ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ಪದೇ-ಪದೇ ಬಳಸುವುದರಿಂದ ಎಲುಬುಗಳು ಶಕ್ತಿ ಕಳೆದುಕೊಂಡು ಕ್ಯಾನ್ಸರ್ ಗೆ ಕಾರಣವಾಗಬಹುದು. ನಾವು ಕುಡಿಯುವ ನೀರು, ಇರುವ ನೆಲಕ್ಕೆ ಪೂರ್ತಿ ಪ್ಲಾಸ್ಟಿಕ್ ಎಸೆದು ನಮ್ಮ ಬದುಕಿಗೆ ಪೂರಕವಾದ ನೆಲ, ಜಲಕ್ಕೆ ವಿಷ ತುಂಬಿಸಿ ಮಾರಕ ಸನ್ನಿವೇಶ ನಿರ್ಮಿಸುವ ಮಾನವ ಸಾಮ್ರಾಜ್ಯಕ್ಕೆ ಬುದ್ದಿ ಬರುವುದು ಯಾವಾಗ ಎಂಬ ಪ್ರಶ್ನೆ... ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ. ಈ ಪ್ಲಾಸ್ಟಿಕ್ ರಕ್ಕಸನ ಬಗ್ಗೆ ಒಬ್ಬ ವಿದ್ಯಾರ್ಥಿನಿಯಾಗಿ ಯೋಚನೆ ಮಾಡುವುದೇನೆಂದರೆ.... ಮಕ್ಕಳಿಗೆ ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು, ಸರಿಯಾದ ಮಾಹಿತಿ ನೀಡಿ, ಅರಿವು ಜಾಗೃತಿ ಮೂಡಿಸಬೇಕು. ಗಾಳಿ, ನೀರು, ಮಣ್ಣು ಇವುಗಳ ಜೊತೆಯಲ್ಲಿ ನಾವು ಉಣ್ಣುವ ಆಹಾರವನ್ನು ಮತ್ತು ಕುಡಿಯುವ ನೀರನ್ನು ವಿಷವಾಗಿಸುವ ಪರಿಸರದ ಶತ್ರು ಪ್ಲಾಸ್ಟಿಕ್ ಸಾಮಗ್ರಿಗಳ ಉಪಯೋಗವನ್ನು ಮಿತಗಳಿಸೋಣ. ಇದು ನಮ್ಮ-ನಿಮ್ಮ ಮನೆಯಿಂದಲೇ, ನಮ್ಮ-ನಿಮ್ಮ ಮನಸ್ಸುಗಳಿಂದಲೇ ಆರಂಭಿಸೋಣ. ಸ್ವಚ್ಛ ಆರೋಗ್ಯಕರ ಪರಿಸರ ನಿರ್ಮಿಸೋಣ. ಪ್ಲಾಸ್ಟಿಕ್ ಮುಕ್ತ ಭಾರತವನ್ನು ಕಟ್ಟಲು ಹೋರಾಡೋಣ.
9ನೇ ತರಗತಿ
ಶುಭದ ಆಂಗ್ಲ ಮಧ್ಯಮ ಶಾಲೆ, ಕಿರಿಮಂಜೇಶ್ವರ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
******************************************